Translate in your Language

Tuesday, September 30, 2014

ಸೆಪ್ಟೆಂಬರ್ 30, 1990: ಶಂಕರ್ ನಾಗ್ ಅವರ ಜೀವವನ್ನು ಆ ವಿಧಿ ಬಲಿ ತೆಗೆದು ಕೊಂಡ ದಿನವಿದು

ಕನ್ನಡದ ಕಣ್ಮಣಿ, ಆಟೋರಾಜ ಶಂಕರ್ ನಾಗ್ ನಿಧನರಾಗಿ ಇಂದಿಗೆ ೨೪ ವರ್ಷಗಳು 
ಸೆಪ್ಟೆಂಬರ್ 30 ಕನ್ನಡಿಗರು ಎಂದೂ ನಿರೀಕ್ಷಿಸಿರದ ದುರಂತವೊಂದು ನಡೆದು ಹೋದ ದಿನ, 30-9-1990ರ ಭಾನುವಾರ ಮುಂಜಾನೆ ಬೆಂಗಳೂರಿನಿಂದ ಧಾರವಾಡದ ಲೋಕಪುರಕ್ಕೆ ಬೆಳಗಿನ ಜಾವ 5ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ದಾವಣಗೆರೆಯ ಆನೆಗೋಡು ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಮಡಿದರು, ಕಾಲನ ತೆಕ್ಕೆಗೆ ಶಂಕರ್‌ನಾಗ್‌ ತೆರಳಿ 23 ವರ್ಷಗಳೇ ಸಂದವು. ಶಂಕರ್‌ನಾಗ್‌ ಅವರ ಸಾಧನೆ, ಛಲ, ಗುರಿ ಇವುಗಳು ಇಂದಿನ ತರುಣ ಪೀಳಿಗೆಗೆ ಮಾದರಿಯಾಗಿದೆ. ಅದಕ್ಕಾಗಿಯೇ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಂಕರ್‌ನಾಗ್‌ ನೆಲೆಸಿದ್ದಾರೆ. 
ಮತ್ತೆ ಹುಟ್ಟಿ ಬಾ ಶಂಕರ್.....

ಶಂಕರ್ ನಾಗ್ ಅವರ ಜೀವನ ಚರಿತ್ರೆ ಮತ್ತು ಇತರ ಲೇಖನಗಳು




Saturday, September 20, 2014

ದೇವರಾಜ ಅವರಿಗೆ 55 ನೇ ಹುಟ್ಟು ಹಬ್ಬದ ಸಿಹಿ ಹಾರೈಕೆಗಳು

Born: 20 September 1960
ಖಳನಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ಕ್ರಮೇಣವಾಗಿ ನಾಯಕಪಾತ್ರಗಳ ಕಡೆಗೂ ವಾಲಿಕೊಂಡ ದೇವರಾಜ್‌ ಅಪ್ಪಟ ರಂಗಭೂಮಿಯ ಪ್ರಾಡಕ್ಟು. ನಟರಾದ ಅವಿನಾಶ್‌, ದೇವರಾಜ್‌ ಮತ್ತು ಶಂಕರ್‌ನಾಗ್‌ರವರ ಸಂಕೇತ್‌ ಸ್ಟುಡಿಯೋದಲ್ಲಿ ಸೇವೆ ಸಲ್ಲಿಸಿದ ಜಗದೀಶ್‌ ಮಲ್ನಾಡ್‌ ಈ ಮ‌ೂವರೂ ಹೆಚ್ಚೂಕಮ್ಮಿ ಒಂದೇ ಕಾಲಘಟ್ಟದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದರು. 'ತ್ರಿಶೂಲ' ಎಂಬ ಚಿತ್ರದಲ್ಲಿ ಈ ಮ‌ೂವರೂ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾಯಕನಿಂದ ಒದೆ ತಿನ್ನುವ ಖಳನಾಯಕನ ಪಾತ್ರದಲ್ಲಿಯೇ ಆರಂಭಿಕ ವರ್ಷಗಳಲ್ಲಿ ಕಾಣಿಸಿಕೊಂಡ ದೇವರಾಜ್‌ 'ತರ್ಕ', 'ಉತ್ಕರ್ಷ', 'ಆಗಂತುಕ', 'ಹೆಂಡ್ತಿಗ್ಹೇಳ್ಬೇಡಿ' ಮೊದಲಾದ ಚಿತ್ರಗಳಲ್ಲಿ ಜನಮನವನ್ನು ಸೂರೆಗೊಂಡರು. ಅವರ ಅಭಿನಯಕ್ಕೆ ಒಂದು ಹೊಸ ಆಯಾಮ ಸಿಕ್ಕಿದ್ದು 'ಹುಲಿಯಾ' ಚಿತ್ರದಲ್ಲಿನ ಅವರ ಪಾತ್ರನಿರ್ವಹಣೆಯಿಂದ ಎನ್ನಬಹುದು.

Friday, September 19, 2014

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 47ನೇ ಹುಟ್ಟುಹಬ್ಬದ ಶುಭಾಶಯಗಳು

ಜನನ: ಸೆಪ್ಟೆಂಬರ್ 19, 1968

ವಿಶಿಷ್ಟ ಮ್ಯಾನರಿಸಂನಿಂದ ವಿಭಿನ್ನ ಸಿನಿಮಾಗಳ ಟ್ರೆಂಡ್‌ಅನ್ನೇ ಹುಟ್ಟುಹಾಕಿದ ಉಪೇಂದ್ರ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ನಾಳೆ (ಸೆ.19) ಇವರ ಅಭಿನಯದ ಸೂಪರ್ ರಂಗ್ ಚಿತ್ರ ಬಿಡುಗಡೆ ಆಗುತ್ತಿರುವುದು ಇವರ ಅಭಿಮಾನಿಗಳಿಗೆ ಖುಷಿ ಹೆಚ್ಚಾಗಲು ಮತ್ತೊಂದು ಕಾರಣ.

ಈ ಚಿತ್ರದ ಕುರಿತು ಇವರಿಗೆ ತುಂಬ ನಿರೀಕ್ಷೆಗಳಿವೆ. ಚಿತ್ರದಿಂದ ಚಿತ್ರಕ್ಕೆ ಪ್ರೇಕ್ಷಕ ತಮ್ಮನ್ನು ಬೆಳೆಸುತ್ತಲೇ ಬಂದಿದ್ದರಿಂದ, ಸೂಪರ್ ರಂಗನೂ ಸೂಪರ್ ಆಗಿಯೇ ತೆರೆಯ ಮೇಲೆ ಮಿಂಚುತ್ತಾನೆ ಎಂದು ಈ ಉಪ್ಪಿ ಬಲವಾಗಿ ನಂಬಿದ್ದಾರೆ.

ಇಂಥ ವಿಶೇಷ ಸಂದರ್ಭದಲ್ಲಿ ಉಪ್ಪಿ, ಮತ್ತಷ್ಟು ವಿಭಿನ್ನ ಸಿನಿಮಾಗಳನ್ನು ನೀಡಲಿ ಎಂದು ಇವರ ಅಭಿಮಾನಿಗಳು ನಿರೀಕ್ಷಿಸುವುದೂ ಸಹಜವೆ. ಅದನ್ನು ಸಾಕಾರಗೊಳಿಸುವತ್ತ ಉಪ್ಪಿ ಮುಂದೆ ಮುಂದೆ ಸಾಗಲಿ.

ವೀಕ್ಸಿಸಿ ಉಪೇಂದ್ರ ರವರು ವೀಕ್ ಎಂಡ್ ವಿಥ್ ರಮೇಶ್ ದಲ್ಲಿ (Part-1)


Thursday, September 18, 2014

ಇವತ್ತು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಇಬ್ಬರು ಕನ್ನಡ ದಿಗ್ಗಜರ ಹುಟ್ಟು ಹಬ್ಬದ ಶುಭಾಶಯಗಳು

ಅವರ 65ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ
(ಜನನ: ಸೆಪ್ಟೆಂಬರ್ 18,1950, 
ನಿಧನ: ಡಿಸೆಂಬರ್ 30,  2009)

ಅವರಿಗೆ 47ನೇ ಹುಟ್ಟುಹಬ್ಬದ ಶುಭಾಶಯಗಳು
(ಜನನ: ಸೆಪ್ಟೆಂಬರ್ 18,1968)

ನೂರೊಂದು ನೆನಪು ಎದೆಯಾಳದಿಂದ... ಎಂದು ತೆರೆಯ ಮೇಲೆ ಹಾಡುತ್ತ ಪ್ರೇಕ್ಷಕರನ್ನು ಭಾವುಕಗೊಳಿಸಿದ ನಟ ವಿಷ್ಣುವರ್ಧನ್ ಮತ್ತೆ ನೆನಪಾಗುತ್ತಿದ್ದಾರೆ.

ಹೌದು, ಇಂದು (ಸೆ.18) ಅವರ ಜನ್ಮದಿನ. ಅವರ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬದಂಥ ಸಂತೋಷ ತಂದರೆ, ಒಳಗೊಳಗೇ ಮತ್ತೆಲ್ಲೋ ತಮ್ಮ ನಾಯಕನನ್ನು ಕಳೆದುಕೊಂಡ ಸಂಕಟವೂ ಸುಳಿದಾಡುತ್ತದೆ.

ಇನ್ನೂರು ಚಿತ್ರಗಳಲ್ಲಿ ನಟಿಸಿ, ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ಈ ನಟ ಇಂದು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನೊಂದಿಷ್ಟು ಚೆಂದನೆಯ ಚಿತ್ರಗಳು ಬರುತ್ತಿದ್ದವೊ ಏನೊ. ಅವರು ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿ ನಿಲ್ಲಲು ಮತ್ತೊಂದು ಕಾರಣ ಅವರ ಮೇರು ವ್ಯಕ್ತಿತ್ವ.

Wednesday, September 17, 2014

ಪಂಡಿತ್ ಪುಟ್ಟರಾಜ ಗವಾಯಿ ಯವರು ನಮ್ಮನ್ನಗಲಿ ಇಂದಿಗೆ ೪ ವರ್ಷಗಳು ಕಳೆದವು,

ಪಂಡಿತ್ ಪುಟ್ಟರಾಜ ಗವಾಯಿ ಯವರು ನಮ್ಮನ್ನಗಲಿ ಇಂದಿಗೆ ೪ ವರ್ಷಗಳು ಕಳೆದವು, ಆದರೆ ಅವರ ಸಾಧನೆ ಮಾತ್ರ ಎಲ್ಲಾ ಕಾಲಕ್ಕೂ ಅಮರ, ಅದಮ್ಯ ಚೇತನಕ್ಕೆ ನಮ್ಮ ನಮನ 
 ಪಂಡಿತ್ ಪುಟ್ಟರಾಜ ಗವಾಯಿ (3 March 1914 – 17 September 2010) ಅವರ ಸಾಧನೆಗಳ ಒಂದು ಕಿರು ಪರಿಚಯ

ಡಾ.ಪಂ.ಪುಟ್ಟಾರಾಜ ಕವಿ ಗವಾಯಿಗಳಾವರು ಹುಟ್ಟಿದ್ದು ತಮ್ಮ ತಾಯಿಯ ತವರೂರಾದ 'ದೇವಗಿರಿಯಲ್ಲಿ ದಿನಾಂಕ ೧೯೧೪ ಮಾರ್ಚ ೩.ರಂದು ಇವರ ಮೂಲಊರುವೆಂಕಟಾಪುರ.ವೆಂಕಟಾಪುರದಲ್ಲಿ ಇವರು ಹಿರೇಮಠದವರು.ವೆಂಕಟಾಪುರದ ಹಿರೇಮಠದ ಶಾಖಾ ಮಠ ಹಾನಗಲ್ಲ ತಾಲೂಕಿನ ದೇವರ ಹೊಸಪೇಟಿಯಲ್ಲಿ ಇತ್ತು.ಇವರ ಪೂರ್ವಿಕರು ಈ ಹೊಸಪೇಟೆಗೆ ಹೋಗಿ ಬಂದು ಅಲ್ಲಿನ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಪಂಚಾಕ್ಷರಿ ಗವಾಯಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು?

ನರೇಂದ್ರ ಮೋದಿ ಅವರಿಗೆ 64 ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ದೇಶದ ಹೊಸ ಆಶಾಕಿರಣ, ಯುವ ಶಕ್ತಿಯ ಉತ್ತೇಜಕ, ಕನಸುಗಾರ
ಸಾಮಾನ್ಯ ಭಾರತೀಯನ ಆಶಾಜ್ಯೋತಿ ನಮ್ಮ ಪ್ರಧಾನಿ
ಶ್ರೀಯುತ ನರೇಂದ್ರ ಮೋದಿ 
ಅವರಿಗೆ 64 ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ನಿಮ್ಮ ನಿಸ್ವಾರ್ಥ ಸೇವೆಯಿಂದ ನಮ್ಮ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಕೆಲವು ದುಷ್ಟ ಶಕ್ತಿಗಳು ನಿಮ್ಮ ಹೆಸರಿಗೆ ಕಳಂಕ ತರುವ ಪ್ರಯತ್ನಗಳನ್ನು ಸದಾ ಮಾಡುತ್ತಲೇ ಬಂದಿವೆ. ಆದರೆ ಅದಾವುದನ್ನು ಲೆಕ್ಕಿಸದೆ ನಿಮ್ಮ ಗುರಿಯತ್ತ ಮುಂದೆ ಸಾಗಲು ಭಾರತೀಯರಾದ ನಾವೆಲ್ಲರೂ ನಿಮ್ಮ ಒತ್ತಾಸೆಯಾಗಿ ಬೆಂಬಲಕ್ಕಿದ್ದೇವೆ 

ಕಲಾವಿದನೊಬ್ಬನ ಕುಂಚದಿಂದ ಅರಳಿದ ನ.ಮೋ ಮತ್ತವರ ತಾಯಿ



ನಿಮಗೆ ಸದಾ ಆ ದೇವರು ಆಯಸ್ಸು, ಆರೋಗ್ಯ ಮತ್ತಷ್ಟು ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ !
ನರೇಂದ್ರ ಮೋದಿ  ಅವರು ತಮ್ಮ ೬೪ನೇ ಹುಟ್ಟುಹಬ್ಬದ ಶುಭದಿನದಂದು ತಮ್ಮ ತಾಯಿಯ ಆಶೀರ್ವಾದ ಪಡೆಯುತ್ತಿರುವುದು

Tuesday, September 16, 2014

ಸರ್ ಎಮ್. ವಿಶ್ವೇಶ್ವರಯ್ಯ ಅವರ 155 ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ

(ಜನನ: 15th Sept, 1860, ನಿಧನ:12th April 1962)

 ದೇಶ-ಕಾಲಗಳನ್ನು ಮೀರಿದ ಅವರ ಸಾಧನೆ ಸಾರ್ವತ್ರಿಕವಾಗಿ ಸ್ತುಥ್ಯಾರ್ಹ, ಕನ್ನಡ ನಾಡಿನ ಜನತೆ ಅವರ ಜನಪರ ಕಾಳಜಿಯಿಂದ ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ


ಸರ್ ಎಮ್. ವಿಶ್ವೇಶ್ವರಯ್ಯ ಅವರು ಮತ್ತೆ ಕನ್ನಡನಾಡಿನಲ್ಲಿ ಹುಟ್ಟಿಬರಲಿ ಎಂದು ಪ್ರಾರ್ಥಿಸೋಣ
ಸರ್ ಎಮ್. ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಮತ್ತು ಇತರ ಲೇಖನಗಳಿಗಾಗಿ

Wednesday, September 10, 2014

ರಮೇಶ್ ಅರವಿಂದ್ ಅವರಿಗೆ ೫೦ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ಕನ್ನಡದ ತ್ಯಾಗರಾಜ, ಪ್ರತಿಭಾವಂತ ನಟ
ರಮೇಶ್ ಅರವಿಂದ್ 
ಅವರಿಗೆ ೫೦ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ಅವರ ಚೊಚ್ಚಲ ಕನ್ನಡ ಸಿನಿಮಾ ಸುಂದರ ಸ್ವಪ್ನಗಳು ಚಿತ್ರದಲ್ಲಿನ ಅಭಿನಯ ಕನ್ನಡ ಜನತೆಗೆ ಪರಿಚಯಸಿತು.
ಹೂಮಳೆ, ಓ ಮಲ್ಲಿಗೆ ಮತ್ತು ಅಮೃತ ವರ್ಷಣಿ ಚಿತ್ರದ ಅದ್ಭುತ ನಟನೆ ಎಂಥವರನ್ನು ಮಂತ್ರ ಮುಗ್ದ ರನ್ನಾಗಿಸುತ್ತದೆ
ಅವರಿಗೆ ಕನ್ನಡ ಚಿತ್ರರಂಗ ಹೆಚ್ಚಿನ ಅವಕಾಶಗಳನ್ನು ಕೊಟ್ಟು ಅವರ ಮಾರ್ದವ ಸೂಸುವ ನಟನೆ ಕನ್ನಡ ಜನತೆಗೆ ನೀಡಲಿ 

Monday, September 8, 2014

ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

(September 8, 1938 – April 5, 2007)
ಕನ್ನಡ ಸಾಹಿತ್ಯ ಹಾಗೂ ಆಡಿಯೋ ಮಾರುಕಟ್ಟೆ ಕ್ಷೇತ್ರದಲ್ಲೇ ವಿನೂತನ ಪ್ರಯೋಗವಾದ 'ಕೇಳಿ ಕಥೆಯ' ಆಡಿಯೋ ಪುಸ್ತಕವು ಜನಮನಗೆದ್ದ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಮುನ್ನಾ ದಿನ ಲೋಕಾರ್ಪಣೆಗೊಳ್ಳುತ್ತಿದೆ. ಅಂದು ಸಂಜೆ ಅವಿರತ ಪ್ರತಿಷ್ಠಾನ ವಿಶಿಷ್ಟವಾಗಿ ತೇಜಸ್ವಿ ಅವರ ಹುಟ್ಟುಹಬ್ಬ ಆಚರಿಸುತ್ತಿದೆ. ಕೇಳಿಕಥೆಯ ಇನ್ನೂ ಬಿಡುಗಡೆ ಏಕೆ ಆಗಿಲ್ಲ ಎಂದು ಜನ ಕೇಳುವ ಪ್ರಶ್ನೆಗೆ ವಿಡಿಯೋ ರೂಪದಲ್ಲಿ ಕೇಳಿಕಥೆಯ ತಂಡ ಉತ್ತರ ನೀಡಿದೆ ಇದೇ ಸೆಪ್ಟೆಂಬರ್ 07 ರಂದು ಗಡಿನಾಡ ಕನ್ನಡ ಮಕ್ಕಳ ಪುಟಾಣಿ ಕೈಗಳಿಂದ ಹೊರಬರಲಿದೆ "ಕೇಳಿ ಕಥೆಯ" ಜೊತೆಗೆ, ಕನ್ನಡದ ಮೌಖಿಕ ಕಥನ ಪರಂಪರೆಯ ನೇರ ಪ್ರಾತ್ಯಕ್ಷಿಕೆ ಹರಿಕಥೆ, ಕಂಸಾಲೆ ಮತ್ತು ನೀಲಗಾರರ ಪದಗಳ ಪಲುಕುಗಳು. 

ನಮ್ಮೆಲ್ಲರ ಪ್ರೀತಿಯ ತೇಜಸ್ವಿಯಿಂದ, ಯುವ ಲೇಖಕ ವಿಕ್ರಮ್ ಹತ್ವಾರ್ ನ ಕತೆಯೂ ಸೇರಿದಂತೆ ಇದರಲ್ಲಿ ಆರು ಕತೆಗಳಿವೆ. ಹಿರಿಯ ನಿರ್ದೇಶಕ ನಾಗಾಭರಣ ರಿಂದ ರಕ್ಷಿತ್ ಶೆಟ್ಟಿಯ ತನಕ ಆರು ವಿಶಿಷ್ಠ ದನಿಗಳು ಈ ಕತೆಗಳನ್ನ ಓದಿವೆ.ಈ ಆಡಿಯೋ ಸಿಡಿ ಯಿಂದ ಬರುವ ಸಂಪೂರ್ಣ ಲಾಭ ಅವಿರತ ಪ್ರತಿಷ್ಠಾನದ ಮೂಲಕ ಗಡಿನಾಡ ಕನ್ನಡ ಮಕ್ಕಳ ಶಿಕ್ಷಣಕ್ಕೆ ಮೀಸಲು. 

Thursday, September 4, 2014

ಅನಂತನಾಗ್ ಅವರಿಗೆ 66ನೇ ಹುಟ್ಟು ಹಬ್ಬದ ಶುಭಾಶಯಗಳು

(Born: 4th September 1948)  

ಸ್ಪುರದ್ರೂಪಿ, ಪ್ರತಿಭಾವಂತ ನಟ  ಅನಂತನಾಗ್ 
ಅವರಿಗೆ ೬೬ನೇ ಹುಟ್ಟು ಹಬ್ಬದ ಶುಭಾಶಯಗಳು
ನಮ್ಮ ಚಿತ್ರರಂಗದಲ್ಲಿನ ಅತ್ಯದ್ಬುತ ಚತುರ ನಟ ನೆಂದರೆ ತಪ್ಪಾಗಲಾರದು, ಎಲ್ಲಾ ಚಿತ್ರಗಳಿಗೂ ಇವರು ಬೇಕು ಯಾಕೆಂದರೆ ಇವರಿದ್ದರೆ ಪ್ರೇಕ್ಷಕರಿಗೆ ಅವರ ನಟನೆ-ಮಾತಿನ ವೈಖರಿ ನೋಡುವುದೇ ಒಂದು ಆನಂದ ಹಾಗೆಯೇ ಚಿತ್ರದ ಗಲ್ಲಾ-ಪೆಟ್ಟಿಗೆಯ ಯಶಸ್ಸಿಗೂ ಇವರು ಕಾರಣರಾಗುತ್ತಾರೆ
]

ಬೆಳದಿಂಗಳ ಬಾಲೆ ಚಿತ್ರದಲ್ಲಿನ ಅವರ  ಅತ್ಯದ್ಬುತ ಅಭಿನಯ ಕನ್ನಡ ಪ್ರೇಕ್ಷಕ ಎಂದಿಗೂ ಮರೆಯಲಾರ.
ಉಂಡು ಹೋದ-ಕೊಂಡು ಹೋದ, ಬರ, ನಾ ನಿನ್ನ ಮರೆಯಾರೆ, ಬಯಲು ದಾರಿ, ಬೆಂಕಿಯ ಬಲೆ, ನಾರದ ವಿಜಯ, ಇತ್ಯಾದಿ ಚಿತ್ರಗಳ ಅಭಿನಯ ನಮ್ಮ ನೆನಪಿನಾಳದಲ್ಲಿ ಅಚ್ಚಳಿಯದೇ ಉಳಿಯುತ್ತವೆ

ಅವರು ಆರೋಗ್ಯದಿಂದ ಇನ್ನೂ ನೂರು ಕಾಲ ಕನ್ನಡ ಜನತೆಯನ್ನು 
ತಮ್ಮ ಅಭಿನಯದಿಂದ ರಂಜಿಸಲಿ

Tuesday, September 2, 2014

ನಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರಿಗೆ ೪೧ನೇ ಹುಟ್ಟುಹಬ್ಬದ ಶುಭಾಶಯಗಳು


ಬಿಗ್-ಭಾಸ್ ಕಿಚ್ಚ  ಸುದೀಪ್ ಅವರು ಸದಾ ಚಿಲುಮೆಯ ಬುಗ್ಗೆಯಂತೆ ಚಿಮ್ಮುತ್ತಾ   & ಅವರ ಸ್ಟಾರ್-ಗಿರಿ ಸದಾ ದೇಶಾದ್ಯಂತ ಮಿನುಗುತ್ತಿರಲಿ ಎಂದು ಹಾರೈಸೋಣ




ಕಿಚ್ಚ ಸುದೀಪ್ ಕುರಿತ ಕೆಲವು ಕುತೂಹಲಕರ ಸಂಗತಿಗಳು
ಕನ್ನಡದ ಕಿಚ್ಚ-ಹುಚ್ಚ-ಪಾರ್ಥ-ಚಂದು-ವಾಲಿ-ವೀರಮದಕರಿ-ಕೆಂಪೇಗೌಡ-ವಿಷ್ಣುವರ್ಧನ
ಕನ್ನಡದ ಮೋಸ್ಟ್ ಸೇಲಬಲ್ ಸ್ಟಾರ್ ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೈಕಟ್ಟನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿರುವ ಸುದೀಪ್ ಅವರಿಗೆ 41 ಎಂದರೆ ಯಾರೂ ನಂಬಲ್ಲ. ಅವರ ಜೀವನೋತ್ಸಾಹ, ನೇರ ಮಾತುಗಳು ಎಂತಹವರನ್ನು ಬೆರಗಾಗಿಸುತ್ತವೆ.

ನಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರಿಗೆ ೪೧ನೇ ಹುಟ್ಟುಹಬ್ಬದ ಶುಭಾಶಯಗಳು


ಬಿಗ್-ಭಾಸ್ ಕಿಚ್ಚ  ಸುದೀಪ್ ಅವರು ಸದಾ ಚಿಲುಮೆಯ ಬುಗ್ಗೆಯಂತೆ ಚಿಮ್ಮುತ್ತಾ   & ಅವರ ಸ್ಟಾರ್-ಗಿರಿ ಸದಾ ದೇಶಾದ್ಯಂತ ಮಿನುಗುತ್ತಿರಲಿ ಎಂದು ಹಾರೈಸೋಣ




ಕಿಚ್ಚ ಸುದೀಪ್ ಕುರಿತ ಕೆಲವು ಕುತೂಹಲಕರ ಸಂಗತಿಗಳು
ಕನ್ನಡದ ಕಿಚ್ಚ-ಹುಚ್ಚ-ಪಾರ್ಥ-ಚಂದು-ವಾಲಿ-ವೀರಮದಕರಿ-ಕೆಂಪೇಗೌಡ-ವಿಷ್ಣುವರ್ಧನ
ಕನ್ನಡದ ಮೋಸ್ಟ್ ಸೇಲಬಲ್ ಸ್ಟಾರ್ ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೈಕಟ್ಟನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿರುವ ಸುದೀಪ್ ಅವರಿಗೆ 41 ಎಂದರೆ ಯಾರೂ ನಂಬಲ್ಲ. ಅವರ ಜೀವನೋತ್ಸಾಹ, ನೇರ ಮಾತುಗಳು ಎಂತಹವರನ್ನು ಬೆರಗಾಗಿಸುತ್ತವೆ.