Translate in your Language

Saturday, October 17, 2015

ಅನಿಲ್ ಕುಂಬ್ಳೆ ಅವರ 45ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

Anil Kumble
ನಮ್ಮ,  ಕುಂಬ್ಳೆ ಅವರು ಹುಟ್ಟಿದ ದಿನ ಅಕ್ಟೋಬರ್ 17, 1970. ಕುಂಬ್ಳೆ ಎಂದರೆ ಅದೆಂತದ್ದೋ ರೋಮಾಂಚನ.  ಬಾಲ್ ಹಿಡಿದು ಜಿಂಕೆಯಂತೆ ಚಿಮ್ಮುವ ಅವರ ಬೌಲಿಂಗ್ ವೈಖರಿಯನ್ನು ನೋಡುವುದೇ ಒಂದು ಸೊಗಸು.  ಬ್ಯಾಟಿಂಗ್ನಲ್ಲಿ ಕೂಡ ಭಾರತದ ಏಳು ವಿಕೆಟ್ ಪತನವಾಗಿದ್ದರೂ, ಇನ್ನೂ ಕುಂಬ್ಳೆ ಇದ್ದಾರೆ ನೋಡೋಣ ಇರಿ, ಎಂಬಷ್ಟು ಭರವಸೆ ಹುಟ್ಟಿಸುತ್ತಿದ್ದ  ಆಟಗಾರ. ಒಂದೆರಡು ವರ್ಷದ ಹಿಂದೆ,  ಭಾರತ ವಿಶ್ವ  ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸ್ಥಾನದಲ್ಲಿ ಅಲಂಕೃತವಾಗಿತ್ತು ಎಂದರೆ, ಕುಂಬ್ಳೆ ಅಂತಹ ಬೌಲರ್ ಕಳೆದ ಎರಡು ದಶಕಗಳಲ್ಲಿ ನೀಡಿದ ಅಮೋಘ ಕೊಡುಗೆ ಕೂಡ ಅದಕ್ಕೆ ಉತ್ತಮ ಬುನಾದಿ ಹಾಕಿದೆ ಎಂಬುದು ಎಲ್ಲ ಕ್ರೀಡಾಭಿಮಾನಿಗಳೂ ಒಪ್ಪುವ ವಿಷಯ.  

ಇತ್ತೀಚಿನ ವರ್ಷದಲ್ಲಿ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ  ಸೋತು ಸುಣ್ಣವಾದ ಬಾರತ ತಂಡ, ಕುಂಬ್ಳೆ ಅಂಥಹ ಬೌಲರ್  ನಮ್ಮಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ನಿರೂಪಿಸಿದ ನೈಜ ಸ್ಥಿತಿ ಕೂಡಾ ಹೌದು. 

Saturday, October 10, 2015

ಶಿವರಾಮ ಕಾರಂತ ಅವರ 114 ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ


ಕಾರಂತರು ಹುಟ್ಟಿದ್ದು ೧೯೦೨ ರ ಅಕ್ಟೋಬರ್ ೧೦ನೇ ತಾರೀಖಿನಂದು ಸಾಲಿಗ್ರಾಮದಲ್ಲಿ ಜನಿಸಿದರು

ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗುಪಡುವಂತಾಗುತ್ತದೆ.  ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,.  “....ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ ಹೇಳಿದವನಲ್ಲ.  ಪ್ರತಿದಿನ ರಾತ್ರಿ ನಾನು ಒಂಭತ್ತು ತಾಸುಗಳ ನಿದ್ದೆ ಸಾಲದೆ ಹಗಲು ಸಹ ಒಂದು ತಾಸು ನಿದ್ದೆ ಮಾಡುತ್ತೇನೆ.  ಅಥವಾ ಮನಸ್ಸು ಬಂದರೆ ಇನ್ನೂ ತುಸು ಹೆಚ್ಚಾಗಿ ನಿದ್ದೆ ಮಾಡುವಷ್ಟು ಅವಕಾಶವಿದೆ ಎಂದು ತಿಳಿದಿದ್ದೇನೆ.  ಸಮಯ ಸಾಲದೆಯೆ ನನ್ನ ಯಾವ ಕೆಲಸವೂ ಈ ತನಕ ಕೆಟ್ಟದ್ದು ಕಾಣಿಸುವುದಿಲ್ಲ.  ನನಗಿರುವ ಕಷ್ಟ – ಕೈಯಲ್ಲಿ ಒಂದಲ್ಲ ಒಂದು ಕೆಲಸವಿಲ್ಲದಿದ್ದರೆ ಸಮಯ ಕಳೆಯುವುದು ಹೇಗೆ ಎಂಬ ಚಿಂತೆ!  ಇಂಥದೇ ನಿಶ್ಚಿತ ಕೆಲಸವನ್ನು ಮಾಡಬೇಕು ಎಂದು ಮನಸ್ಸಿಗೆ ಹೊಳೆಯದೆ ಹೋಯಿತಾದರೆ ಒಂದಲ್ಲ ಒಂದು ಪುಸ್ತಕವನ್ನು ತೆರೆದು ಓದಲು ಎತ್ತಿಕೊಳ್ಳುತ್ತೇನೆ.  ಅದಕ್ಕಾಗಿ ಆಗಾಗ ಒಳ್ಳೆಯ ಪುಸ್ತಕ ತರಿಸಿಕೊಳ್ಳುತ್ತೇನೆ.  ಅದಕ್ಕೆ ವಿಷಯಗಳ ಗೊತ್ತು ಗುರಿಯಿಲ್ಲ.  ಹಾಗೆ ತರಿಸಿಕೊಂಡು ಓದಿದ ಪುಸ್ತಕಗಳಲ್ಲಿ ಕೆಲವು ರುಚಿಸುತ್ತವೆ.  ಕೆಲವು ರುಚಿಸುವುದಿಲ್ಲ.  ಒಳ್ಳೆಯ ಪುಸ್ತಕಗಳು ಕೈಗೆ ಸಿಕ್ಕಿದರೆ – ಆಗ ಬೇರೊಂದೇ ಚಿಂತನೆ ಮೂಡುತ್ತದೆ.