Translate in your Language

Tuesday, December 22, 2015

ಶ್ರೀನಿವಾಸ ರಾಮಾನುಜನ್ ಅವರ 129ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ


ಭಾರತದ ಮಹಾನ್ ಮೇಧಾವಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಜನಿಸಿದ ದಿನ ಡಿಸೆಂಬರ್ 22, 1887.   ಈ ಮಹಾನ್ ಗಣಿತಜ್ಞರು ಜನಿಸಿದ ದಿನವನ್ನು ಭಾರತದ ರಾಷ್ಟ್ರೀಯ ಗಣಿತದ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಒಮ್ಮೆ ಆಸ್ಪತ್ರೆಯಲ್ಲಿದ್ದ ಒಬ್ಬ ಗೆಳೆಯನನ್ನು ನೋಡಲು ಒಬ್ಬ ಆಗಂತುಕ ಆಗಮಿಸಿದ.  “ನೀನು ಹೇಗಿದ್ದೀಯ?”  ಎಂದು ಆಗಂತುಕ ಆತುರ ಮತ್ತು ಒಲವಿನ ದನಿಯಲ್ಲಿ ಕೇಳಿದ.

“ಪರವಾಗಿಲ್ಲ, ನಿಮಗೆ ಧನ್ಯವಾದ”  ಹಾಸಿಗೆಯಲ್ಲಿ ಮಲಗಿದ್ದ ರೋಗಿ ಉತ್ತರಿಸಿದ. 

ಆದರೆ ಆತನಿಗೆ ಇದರಿಂದ ತೃಪ್ತಿಯಾಗಲಿಲ್ಲ.  ರೋಗಿಯ ಮುಖ ಮಾರಕ ವ್ಯಾಧಿಯ ವಿರುದ್ಧ ಆತನ ಬಲವಾದ ಹೋರಾಟವನ್ನು ಸೂಚಿಸುತ್ತಿತ್ತು.  ಕೆಲವು ಕ್ಷಣಗಳ ಬಳಿಕ ಆತ ಮತ್ತೆ ಮುಂದುವರೆಸಿದ:

Saturday, December 19, 2015

ರಾಜಕೀಯದಲ್ಲೊಬ್ಬ ಮಹಾಸಾಧಕ ನಜೀರ್ ಸಾಬ್-ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ

ನೀರ್ ಸಾಬ್ ಎಂದೆ ಕನ್ನಡ ಜನಮನಕ್ಕೆ ಪರಿಚಿತರಾದ ಅಬ್ದುಲ್ನಜೀರ್ ಸಾಬ್ ಹುಟ್ಟಿದ್ದು (ದಿನಾಂಕ 19ನೇ ಡಿಸೆಂಬರ್ 1934) ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ 
 25 ವರುಷಗಳ ಹಿಂದೆ ಅಂದರೆ ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು.  ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳಲು ಬಂದಿದ್ದರು.  ಪುಪ್ಪುಸ ಕ್ಯಾನ್ಸರಿನ ಉಲ್ಬಣಾವಸ್ಥೆಯಲ್ಲಿ ಬಾಯಿಗೆ ಆಕ್ಸಿಜನ್ ಮಾಸ್ ಧರಿಸಿ ಉಸಿರಾಡುವುದಕ್ಕೂ ಅಪಾರ ಯಾತನೆ ಅನುಭವಿಸುತ್ತ ಕುರ್ಚಿಯ ಮೇಲೆ ಕೂತಿದ್ದ ಆ ಗಣ್ಯ ರೋಗಿ ಇನ್ನಾರೂ ಅಲ್ಲ. ಇಡೀ ದೇಶಕ್ಕೇ ಮಾದರಿಯಾದ ಕರ್ನಾಟಕದ ಪಂಚಾಯತ್‌ರಾಜ್ ವ್ಯವಸ್ಥೆಯ ರೂವಾರಿಯೆನಿಸಿದ್ದ ನೀರ್ ಸಾಬ್ ಎಂದೇ ಸಾರ್ವಜನಿಕರ ಮನೆಮತಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್...

Saturday, December 12, 2015

ರಜನೀಕಾಂತ್ ಅವರಿಗೆ 68ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಡಿಸೆಂಬರ್ 12, 1949 ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು.  ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು.  ಮಗು ಐದನೆಯ ವಯಸ್ಸಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತವಾಯಿತು.  ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿ ಹುಡುಗ ಒಂದಷ್ಟು ಕೂಲಿ ಕೆಲಸ ಮಾಡಿ ಬದುಕನ್ನು ಬಂದಷ್ಟೇ ಭಾಗ್ಯ ಎಂದುಕೊಂಡು ನಡೆಸತೊಡಗಿದ. 1968ರಿಂದ 1973ರ ಅವಧಿಯಲ್ಲಿ  ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಒಂದು ನೆಲೆ ಸಿಕ್ಕಿತು ಅಂದುಕೊಂಡ.  ಸಿನಿಮಾ ಹುಚ್ಚು.  ಈತನ ವರಸೆಗಳನ್ನು ನೋಡಿದ ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಹುರುದುಂಬಿಸಿ ಆತನಿಗೆ ಎರಡು ವರ್ಷ ಬೆಂಗಾವಲಾಗಿ ನಿಂತ.  ಮುಂದೆ ನಡೆದದ್ದು ಇತಿಹಾಸ ಎನ್ನುತ್ತೀರ.  ಉಹುಂ!

Saturday, December 5, 2015

ಜಿ.ಪಿ.ರಾಜರತ್ನಂ ಅವರ 108ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ

ಜಿ.ಪಿ.ರಾಜರತ್ನಂ
ಜಿ.ಪಿ.ರಾಜರತ್ನಂರವರು 1908ರ ಡಿಸೆಂಬರ್ 5 ರಂದು ರಾಮನಗರದಲ್ಲಿ ಜನಿಸಿದರು. ತಂದೆ ಜಿ.ಕೆ. ಗೋಪಾಲಕೃಷ್ಣ ಅಯ್ಯಂಗಾರ್. ೧೯೨೮ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ; ೧೯೩೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ ಪಡೆದರು. ಮಹಾರಾಜ ಕಾಲೇಜಿನಲ್ಲಿ ಕೆಲವು ಕಾಲ ಅಧ್ಯಾಪಕರಾಗಿದ್ದರು. ಆರಂಭದಲ್ಲಿ ಇವರು ಶಿಶುವಿಹಾರ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡಿದರು. ಅನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಇಲಾಖೆಯಲ್ಲಿ ಇವರಿಗೊಂದು ಪಂಡಿತ ಹುದ್ದೆ ದೊರೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ಮುಂದೆ ಕನ್ನಡ ಉಪಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ೧೯೬೪ರಲ್ಲಿ ನಿವೃತ್ತರಾದರು.