Translate in your Language

Saturday, May 17, 2014

ಡಾ.ಅನುಪಮಾ ನಿರಂಜನ ಅವರ ಹುಟ್ಟು ಹಬ್ಬದ ನೆನಪಿನಲ್ಲಿ

Dr. Anupama Niranjan
ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದ ಡಾ. ಅನುಪಮಾ ನಿರಂಜನ ಅವರು  1934ರ ಮೇ 17ರಂದು ತೀರ್ಥಹಳ್ಳಿಯಲ್ಲಿ  ಜನಿಸಿದರು.  ಆನುಪಮಾ ಅವರ ಮೊದಲಿನ ಹೆಸರು ವೆಂಕಟಲಕ್ಷ್ಮಿ. 

ವೃತ್ತಿಯಲ್ಲಿ ವೈದ್ಯರಾದ ಅನುಪಮಾ ಅವರು,
 ಕನ್ನಡ ಕಾದಂಬರಿ ಕ್ಷೇತ್ರವು ತನ್ನ ಆಳ ಅಗಲಗಳನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತಿರುವ ಸಂಧರ್ಭದಲ್ಲಿ ಆ ಕ್ಷೇತ್ರಕ್ಕೆ ಕಾಲಿಟ್ಟರು. ಒಬ್ಬ ಒಳ್ಳೆಯ ವೈದ್ಯರಾಗುವುದರ ಜೊತೆಗೆ ಗಟ್ಟಿ ಸಾಹಿತಿಯಾಗಿ ಬೆಳೆದುನಿಂತರು. ಕುಳಕುಂದ ಶಿವರಾಯರೆಂದೇ ಚಿರಪರಿಚಿತರಾಗಿದ್ದ ನಿರಂಜನ ಅವರೊಂದಿಗೆ ನಡೆದ ವಿವಾಹ,  ಅವರಿಗೆ ಲೇಖಕಿಯಾಗಿ ತಮ್ಮ  ಗುರಿಯನ್ನು ಸಾದಿಸುವಲ್ಲಿ ಮತ್ತಷ್ಟು ಸಹಕಾರಿಯಾಯಿತು.  ಡಾ.ಅನುಪಮಾ ನಿರಂಜನ ಅವರು ಬುದ್ದಿವಿಕಾಸಕ್ಕೆ ಪ್ರೇರಕವಾಗಬಲ್ಲ ವಿಚಾರ ಸಾಹಿತ್ಯದ ಜೊತೆಗೆ ವೈದ್ಯಕೀಯ ಗ್ರಂಥಗಳನ್ನು ಸಹ ರಚಿಸಿದರು.

Thursday, April 24, 2014

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು.

೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.

Monday, April 21, 2014

ತ.ರಾ.ಸು ಅವರ ಹುಟ್ಟು ಹಬ್ಬದ ನೆನಪಿನಲ್ಲಿ

Ta Ra Subbarao
ಕನ್ನಡದ ಮೇರು ಲೇಖಕರಾದ ತ.ರಾ.ಸು  ಅವರು ಏಪ್ರಿಲ್ 21, 1920ರಲ್ಲಿ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿದ್ದು ಇಂದು ದಾವಣಗೆರೆ ತಾಲ್ಲೂಕಿನಲ್ಲಿರುವ ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು.

ಪ್ರತಿ ಕಲ್ಲೂ ಇತಿಹಾಸದ ವೀರರ ಕಥೆಯನ್ನೂ ಇತಿಹಾಸದ ದುರಂತ ಕಥೆಯನ್ನೂ ಸಾರಿ ಹೇಳುವ ಅಂದಿನ  ಚಿತ್ರದುರ್ಗದಲ್ಲಿ ಹುಟ್ಟಿದ ಸುಬ್ಬರಾಯರು ಆ ಸ್ಥಳದೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನೂ ಬೆಳೆಸಿಕೊಂಡರು.  ತಮ್ಮ ಕೊನೆಯ ಕಾದಂಬರಿ ‘ದುರ್ಗಾಸ್ತಮಾನ’ದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು:  “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ,  ತಮ್ಮ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು.”  ಚಿತ್ರದುರ್ಗದ ಉತ್ಸಾಹೀ ಇತಿಹಾಸಕಾರರಾದ ಹುಲ್ಲೂರು ಶ್ರೀನಿವಾಸ ಜೋಯಿಸರು ಹುಡುಗನ ಚಿತ್ರದುರ್ಗದ ಅಭಿಮಾನಕ್ಕೆ ನೀರೆರೆದರು.  ಮುಂದೆ ತ.ರಾ.ಸು ಐತಿಹಾಸಿಕ ಕಾದಂಬರಿಗಳನ್ನು ಒಂದು ವಿಶಿಷ್ಟ ಮಾಧ್ಯಮ ಮಾಡಿಕೊಳ್ಳಲು ಇದು ಕಾರಣವಾದದ್ದಷ್ಟೇ ಅಲ್ಲ ಸಾಮಾನ್ಯ ಜನರನ್ನು ಮೀರಿ ನಿಂತ, ಸಿಡಿಲಿನ ಚೈತನ್ಯವನ್ನು ತುಂಬಿಕೊಂಡ, ಅಸಾಧಾರಣ ಭಾವಗಳ-ರಾಗಗಳ ದೈತ್ಯವ್ಯಕ್ತಿಗಳು ಇದರಿಂದ ತ.ರಾ.ಸು ಗೆ ವಾಸ್ತವಿಕ ಸ್ತ್ರೀ ಪುರುಷರಾದರು.  ಅವರ ಕಾದಂಬರಿಗಳ ಪಾತ್ರಗಳ ಸೃಷ್ಟಿಯ ಮೇಲೆ ಇದು ಪ್ರಭಾವವನ್ನು ಬೀರಿತು.

Wednesday, April 16, 2014

ಆನಂದಕಂದ - ಡಾ.ಬೆಟಗೇರಿ ಕೃಷ್ಣಶರ್ಮ

Anandakanda
"ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು" ಎಂದು ಹಾಡಿದವರು ನಮ್ಮ ಆನಂದಕಂದರು.  ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದರು.  ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು.

"ಆನಂದಕಂದ" ಕನ್ನಡ ನಾಡಿನ ಸಾಹಿತಿಗಳಲ್ಲಿ ಅಗ್ರಗಣ್ಯರು.    ಬೆಟಗೇರಿ ಕೃಷ್ಣಶರ್ಮ ನಾಮಧೇಯ.  "ಆನಂದಕಂದ" ಇವರ ಕಾವ್ಯನಾಮ.  ಅವರು 1900ನೆಯ ಏಪ್ರಿಲ್ ತಿಂಗಳ 16ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದರು.  ತಂದೆ ಶ್ರೀನಿವಾಸರಾವ್.  ತಾಯಿ ರಾಧಾಬಾಯಿ.  ಬೆಳೆಯುವ  ವಯಸ್ಸಿನಲ್ಲೇ ಮಾತಾಪಿತೃ ವಿಯೋಗ.  ಹಲವಾರು ಬಾರಿ ವಿಷಮಶೀತಜ್ವರ, ಪ್ಲೇಗ್ ರೋಗಗಳಿಗೆ ಸ್ವಯಂ ತುತ್ತಾಗಿ ನಮ್ಮ ನಾಡಿನ ಪುಣ್ಯದಫಲವಾಗಿ ಪವಾಡವೆಂಬಂತೆ ಬದುಕುಳಿದರು. ಪ್ಲೇಗಿನ ಪರಿಣಾಮದಿಂದ ಅವರ ಕೈಕಾಲುಗಳ ಮೇಲೆ ಶಾಶ್ವತ ಪರಿಣಾಮ ಬೀರಿ ನಡೆಯುವಿಕೆಗೆ ಮತ್ತು ಬರೆಯುವಿಕೆಗೆ ತೀವ್ರ ಅಡಚಣೆಗಳನ್ನು ಒಡ್ಡಿದ್ದವು.  ಆದರೆ ಅವರ ಚೈತನ್ಯ, ದುಡಿಮೆಯ ಹಾದಿಯಲ್ಲಿ ಇವ್ಯಾವುವನ್ನೂ ಲೆಖ್ಖಿಸದೆ ನಿರಂತರವಾಗಿ ಮುಂದುವರೆದಿರುವುದನ್ನು ಅವರ ಅಸಂಖ್ಯಾತ ಸಾಧನೆಗಳ ರೂಪದಲ್ಲಿ ಕಾಣಬಹುದಾಗಿದೆ.

Monday, March 17, 2014

ಡಿ.ವಿ.ಜಿ. ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

  1. ಡಿ.ವಿ.ಜಿ. -ಅಸಾಧಾರಣ ಪತ್ರಕರ್ತ, ಕವಿ  
  2. Born: March 17, 1887, Died: October 7, 1975
  3.  D.V.Gಕನ್ನಡ ಪತ್ರಿಕೋದ್ಯಮ ಇಂದು ಬೃಹದಾಕಾರವಾಗಿ ಬೆಳೆದಿದೆ. ಸುಮಾರು ಒಂದೂವರೆ ಶತಕದ ಸುದೀರ್ಘ ಇತಿಹಾಸದ ಪತ್ರಿಕೋದ್ಯಮ ಇಷ್ಟು ಹುಲುಸಾಗಿ ಬೆಳೆಯಲು ಹಲವರ ಶ್ರಮ ಸಾಧನೆಯೇ ಕಾರಣ. ಇಂಥ ಸಾಧಕರಲ್ಲಿ ಡಿವಿಜಿ ಅಗ್ರಗಣ್ಯರು.

    ಡಿವಿಜಿ ಎಂಬ ಉಪನಾಮದಿಂದಲೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (ಡಿ.ವಿ.ಗುಂಡಪ್ಪ) ಜನಮನದಲ್ಲಿ ಹಸಿರಾಗಿ ಉಳಿದಿರುವುದು ಅವರ ಅನುಪಮ ಹಾಗೂ ವಿಚಾರಪೂರ್ಣ ಲೇಖನ, ಬರಹಗಳಿಂದ. ಆದರೆ, ಡಿವಿಜಿ ಸಮಾಜಸೇವೆ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ವ್ಯವಸಾಯ ಅವರ ಸಾಹಿತ್ಯ ಸೇವೆಯಷ್ಟೇ ಮಿಗಿಲು.

    ಡಿ.ವಿ.ಜಿ. ಅವರನ್ನು ಅವರ ಸರೀಕರೊಬ್ಬರು ತಮ್ಮ ಮಿತ್ರರಿಗೆ ಪರಿಚಯಿಸುತ್ತಾ.. ಇವರು ಗುಂಡಪ್ಪ ದೊಡ್ಡ ಸಾಹಿತಿ ಎಂದಾಗ ಮಧ್ಯೆಯೇ ತಡೆದ ಡಿ.ವಿ.ಜಿ., ಕ್ಷಮಿಸಿ ನಾನು ಮೊದಲು ಪತ್ರಕರ್ತ, ಜನಕ್ಕೆ ಯಾವುದೋ ಸಂಗತಿಗಳನ್ನು ವಿಷದವಾಗಿ ತಿಳಿಸಬೇಕೆಂಬ ಮಾನಸಿಕ ಒತ್ತಡ ಉಂಟಾದಾಗ ಪದ್ಯಗಳೋ, ಪ್ರಬಂಧಗಳೋ ನಂದ ಹುಟ್ಟಿಕೊಂಡಿವೆ ಅಷ್ಟೇ. ನಾನು ಸಾಹಿತ್ಯ ಕ್ಷೇತ್ರಕ್ಕೆ ಒಬ್ಬ ಆಗಂತುಕ ಎಂದು ಹೇಳಿದರಂತೆ.

Sunday, March 16, 2014

ಕಲಾ ಕೇಸರಿ ಉದಯಕುಮಾರ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

"ಕಲಾ ಕೇಸರಿ" ಮತ್ತು "ನಟ ಸಾಮ್ರಾಟ್" ಎಂದು ಪ್ರಸಿದ್ಧರಾಗಿದ್ದ ಉದಯ್ ಕುಮಾರ್ (ಜನನ: ಮಾರ್ಚ್ 16, 1935) ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ. ರಾಜಕುಮಾರ್, ಕಲ್ಯಾಣಕುಮಾರ್ ಮತ್ತು ಉದಯಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು.

ಜೀವನ

ಕನ್ನಡ ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರಾಗಿದ್ದ ಕಲಾಕೇಸರಿ ಉದಯ್ ಕುಮಾರ್ ಅವರು ಮಾರ್ಚ್ ೧೬, ೧೯೩೫ರಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್ಲಿನಲ್ಲಿ ಶಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಈ ಚಿತ್ರದ ನಿರ್ಮಾಪಕರಾದ ಭಕ್ತವತ್ಸಲ ಮತ್ತು ಎ.ಸಿ.ನರಸಿಂಹಮೂರ್ತಿಯವರು ತಮ್ಮ ಉದಯ ಪ್ರೊಡಕ್ಷನ್ಸ್ ಲಾಂಛನಕ್ಕೆ ಹೊಂದುವಂತೆ ಇವರಿಗೆ ಉದಯಕುಮಾರ್ ಎಂದು ನಾಮಕರಣವನ್ನು ಮಾಡಿದರು
ಚಿತ್ರಂಗದಲ್ಲಿ ಜನಪ್ರಿಯತೆ

Monday, March 3, 2014

ಪುಟ್ಟರಾಜ ಗವಾಯಿ ಅವರ ೧೦೧ ನೆ ಹುಟ್ಟು. ಹಬ್ಬದ ಸವಿ ನೆನಪಿನಲ್ಲಿ

Pandit Puttaraja Gavaayi
ಡಾ. ಪಂ. ಪುಟ್ಟರಾಜ ಗವಾಯಿ 
(3 March 1914 – 17 September 2010) 
ಅವರ 101 ನೆ ಹುಟ್ಟು. ಹಬ್ಬದ ಸವಿ ನೆನಪಿನಲ್ಲಿ
ಡಾ.ಪಂ.ಪುಟ್ಟಾರಾಜ ಕವಿ ಗವಾಯಿಗಳಾವರು ಹುಟ್ಟಿದ್ದು ತಮ್ಮ ತಾಯಿಯ ತವರೂರಾದ 'ದೇವಗಿರಿಯಲ್ಲಿ ದಿನಾಂಕ ೧೯೧೪ ಮಾರ್ಚ ೩.ರಂದು ಇವರ ಮೂಲಊರುವೆಂಕಟಾಪುರ.ವೆಂಕಟಾಪುರದಲ್ಲಿ ಇವರು ಹಿರೇಮಠದವರು.ವೆಂಕಟಾಪುರದ ಹಿರೇಮಠದ ಶಾಖಾ ಮಠ ಹಾನಗಲ್ಲ ತಾಲೂಕಿನ ದೇವರ ಹೊಸಪೇಟಿಯಲ್ಲಿ ಇತ್ತು.ಇವರ ಪೂರ್ವಿಕರು ಈ ಹೊಸಪೇಟೆಗೆ ಹೋಗಿ ಬಂದು ಅಲ್ಲಿನ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಪಂಚಾಕ್ಷರಿ ಗವಾಯಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತವಾದ್ಯಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವುಗಲನ್ನೂ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು.