Suhasini |
ಸುಹಾಸಿನಿ ಅವರ ಹುಟ್ಟಿದ್ದು ಆಗಸ್ಟ್ 15,1961 ರಂದು. ಸುಹಾಸಿನಿ ಎಂದರೆ ಅಲ್ಲೊಂದು ಮಂದಹಾಸ. ಸುಹಾಸಿನಿ ಎಂದರೆ ಸಹಜತೆ. ಸರಳತೆ. ಚಿತ್ರರಂಗದಂತಹ ತಳುಕಿನ ಲೋಕದಲ್ಲಿ ಪೂರ್ಣ ವಿಭಿನ್ನವಾಗಿದ್ದೂ ವಿಶಿಷ್ಟರೆಂದರೆ ಸುಹಾಸಿನಿ. ಅವರು ಸಿನಿಮಾ ಕ್ಷೇತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಅಂತ ಬಂದರೆ ಸಿನಿಮಾದ ಜನ ಅವರನ್ನು ಕ್ಯಾಮರಾ ಮುಂದೆ ತಂದು ನಿಲ್ಲಿಸಿದರು. ಅಂದು ‘ನೆಂಜತ್ತೆ ಕಿಳ್ಳಾದೆ’ ಚಿತ್ರದಲ್ಲಿ ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಬಂದ ಸುಹಾಸಿನಿ ಇಂದು ಮಹಾನ್ ತಾರೆಯಾಗಿ, ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲೂ ಜನಸಾಗರಗಳ ಮನವನ್ನು ಗೆದ್ದು, ನಟನೆ, ನಿರ್ದೇಶನ, ನಿರ್ಮಾಣ, ಹೀಗೆ ಹೋದಲ್ಲೆಲ್ಲಾ ತಮ್ಮ ಪ್ರತಿಭೆಯ ಸುಗಂಧವನ್ನು ಪಸರಿಸಿದವರು.