Translate in your Language

Saturday, August 15, 2015

ಸುಹಾಸಿನಿ ಅವರ 54ನೇ ಹುಟ್ಟುಹಬ್ಬದ ಶುಭಾಶಯಗಳು

Suhasini
ಸುಹಾಸಿನಿ ಅವರ ಹುಟ್ಟಿದ್ದು  ಆಗಸ್ಟ್ 15,1961 ರಂದು.  ಸುಹಾಸಿನಿ ಎಂದರೆ ಅಲ್ಲೊಂದು ಮಂದಹಾಸ.  ಸುಹಾಸಿನಿ ಎಂದರೆ  ಸಹಜತೆ.  ಸರಳತೆ.  ಚಿತ್ರರಂಗದಂತಹ ತಳುಕಿನ ಲೋಕದಲ್ಲಿ ಪೂರ್ಣ ವಿಭಿನ್ನವಾಗಿದ್ದೂ ವಿಶಿಷ್ಟರೆಂದರೆ ಸುಹಾಸಿನಿ.  ಅವರು ಸಿನಿಮಾ ಕ್ಷೇತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಅಂತ ಬಂದರೆ ಸಿನಿಮಾದ ಜನ ಅವರನ್ನು ಕ್ಯಾಮರಾ ಮುಂದೆ ತಂದು ನಿಲ್ಲಿಸಿದರು.  ಅಂದು ‘ನೆಂಜತ್ತೆ ಕಿಳ್ಳಾದೆ’ ಚಿತ್ರದಲ್ಲಿ ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಬಂದ ಸುಹಾಸಿನಿ ಇಂದು ಮಹಾನ್ ತಾರೆಯಾಗಿ, ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲೂ ಜನಸಾಗರಗಳ  ಮನವನ್ನು ಗೆದ್ದು, ನಟನೆ, ನಿರ್ದೇಶನ, ನಿರ್ಮಾಣ, ಹೀಗೆ ಹೋದಲ್ಲೆಲ್ಲಾ ತಮ್ಮ ಪ್ರತಿಭೆಯ ಸುಗಂಧವನ್ನು ಪಸರಿಸಿದವರು.

Thursday, August 13, 2015

ಶ್ರೀದೇವಿ ಅವರ ೫೨ನೇ ಹುಟ್ಟು ಹಬ್ಬದ ಶುಭಾಶಯಗಳು

Sridevi

ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲೊಬ್ಬರು.  ಅವರು ಆಗಸ್ಟ್ 13, 1963ರ ವರ್ಷದಲ್ಲಿ ಜನಿಸಿದರು.  ಇನ್ನೂ ನಾಲ್ಕು ವರ್ಷವಿದ್ದಾಗಲೇ ಅವರು ಚಿತ್ರರಂಗದಲ್ಲಿ ಬಾಲನಟಿಯಾಗಿ ಹೊರಹೊಮ್ಮಿದ್ದರು.  1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದೀ ಚಲನಚಿತ್ರ ‘ಜೂಲಿ’ಯಲ್ಲಿಯೂ ಅವರು ಬಾಲನಟಿಯಾಗಿ ಅಭಿನಯಿಸಿದ್ದರು.  ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು.  ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ  ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.

Monday, August 3, 2015

ಯಶವಂತ ಚಿತ್ತಾಲ ಅವರ 87ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

Yashvanth Chittaala
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿ ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲ.  ಅವರು ಹುಟ್ಟಿದ ದಿನ ಆಗಸ್ಟ್ 3, 1928. ಯಶವಂತ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲ. ಅಣ್ಣ ಕವಿಯಾದರೆ ತಮ್ಮ ಯಶವಂತ ನಮ್ಮ ಒಬ್ಬ ಶ್ರೇಷ್ಠ ಕಥೆಗಾರ, ಕಾದಂಬರಿಕಾರ.