Translate in your Language

Thursday, August 25, 2016

ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಶ್ಲೋಕ

ಮಧುರ ಗೀತೆಗಳು: ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಶ್ಲೋಕ: ಕೃಷ್ನಯ ವಾಸುದೇವಾಯ ದೇವಕಿ ನಂದ  ನಾಯಚ ನಂದಗೋಪ  ಕುಮಾರಾಯ ಶ್ರೀ  ಗೋವಿಂದಯ ನಮೋ  ನಮಃ ಕೃಷ್ಣಯ ವಾಸುದೇವಾಯ  ಹರಯೇ  ಪರಮಾತ್ಮನೇ ಪ್ರಣತ ಕ್ಲೇಶ  ನಾಶಾಯ  ಗೋವಿಂದಾಯ...

ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ


ರಾಧಾ-ಕೃಷ್ಣರ ಪ್ರೇಮ ಕಥೆ


ಜಗದೇಕ ಒಡೆಯ ಶ್ರೀಕೃಷ್ಣ ಪರಮಾತ್ಮನ ಹುಟ್ಟುಹಬ್ಬವನ್ನು (Sri Krishna Born On 21-07-3227 BC, Died on 18-02-3102 BCಆಚರಿಸಲು, ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ.  
ಜನ್ಮಾಷ್ಟಮಿಯ (25th August 2016) ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ.  
 ಜಗನ್ನಾಟಕ ಸೂತ್ರಧಾರಿ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು ಇದ್ದರೇ?

Wednesday, August 24, 2016

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ಧಿಕ ಶುಭಾಶಯಗಳು

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭದಿನದಂದು ಎಲ್ಲರಿಗೂ ಹಾರ್ಧಿಕ ಶುಭಾಶಯಗಳು
ಜನ್ಮಾಷ್ಟಮಿ ವಿಶೇಷ: ಕಷ್ಟ ಕಾರ್ಪಣ್ಯಕ್ಕೆ ತ್ವರಿತ ಪರಿಹಾರ

ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ಪ್ರಾಮುಖ್ಯ ಹಬ್ಬ. ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ (Sri Krishna Born On 21-07-3227 BC, Died on 18-02-3102 BC ಸಂಭ್ರಮವನ್ನು ಆಚರಿಸುತ್ತಾರೆ. ಹಿಂದೂ ಪಂಚಾಂಗದ ಭಾದ್ರಪದ ತಿಂಗಳ ಕೃಷ್ಣ ಪಕ್ಷದಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ.

ಜನ್ಮಾಷ್ಟಮಿಯ ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ

Monday, August 22, 2016

ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ಮಹಾಭಾರತದಲ್ಲಿ, ಪಾ೦ಡವರಿಗೆ ಬೆನ್ನೆಲುಬಿನ೦ತಿದ್ದ ಭಗವಾನ್ ಶ್ರೀ ಕೃಷ್ಣನು ಭಾರತದ ಮಹಾಸ೦ಗ್ರಾಮದ ಬಳಿಕ ಸಾವನ್ನಪ್ಪುತ್ತಾನೆ. ಆತನ ಸಾವಿನ ಕುರಿತಾಗಿ ಅನೇಕ ವಾದವಿವಾದಗಳು ಪ್ರಚಲಿತದಲ್ಲಿವೆ. ಕೆಲವರು ಶ್ರೀ ಕೃಷ್ಣನು ತನ್ನ ನೂರಾ ಇಪ್ಪತ್ತೈದನೆಯ ವಯಸ್ಸಿನಲ್ಲಿ ಮರಣ ಹೊ೦ದಿದನು ಎ೦ದು ನ೦ಬಿದರೆ, ಮತ್ತಿತರರು ಶ್ರೀ ಕೃಷ್ಣನ ಜೀವನದ ಸ೦ಶೋಧನೆಯ ಆಧಾರದ ಮೇಲೆ ಆತನು ಮರಣವನ್ನು ಹೊ೦ದುವಾಗ ಆತನ ವಯಸ್ಸು ಎ೦ಬತ್ತೆ೦ಟಾಗಿತ್ತು ಎ೦ದು ನ೦ಬುತ್ತಾರೆ. ಶ್ರೀ ಕೃಷ್ಣನ ವಯಸ್ಸಿನ ವಿಚಾರವನ್ನು ಕುರಿತ ವಾಗ್ವಾದಗಳ ಹೊರತಾಗಿಯೂ ಕೂಡ, ಶ್ರೀ ಕೃಷ್ಣನ ಮರಣದ ಕುರಿತು ನಮ್ಮ ಸಮಾಜದಲ್ಲಿ ಹಲವಾರು ಊಹಾಪೋಹಗಳು ತೇಲಿ ಬರುತ್ತವೆ. ಆದಾಗ್ಯೂ, ಧಾರ್ಮಿಕ ಪುರಾಣಗಳ ಪ್ರಕಾರ, ಭಗವ೦ತನ ಮರಣದ ಕುರಿತು ಕೇವಲ ಒ೦ದೇ ಒ೦ದು ಕಥೆಯು ಉಲ್ಲೇಖಿಸಲ್ಪಟ್ಟಿದೆ.

ಶ್ರೀ ಕೃಷ್ಣಾವತಾರದ ಸಮಾಪ್ತಿ ಮಹರ್ಷಿಗಳಾದ ವಿಶ್ವಾಮಿತ್ರರು, ಕಣ್ವರು, ಹಾಗೂ ನಾರದರು ದ್ವಾರಕೆಗೆ ಭೇಟಿನೀಡಿದರು. ಆಗ ಅಲ್ಲಿನ ಕೆಲವು ಪು೦ಡ ಯುವಕರು ಓರ್ವ ಹುಡುಗನಿಗೆ ಸ್ತ್ರೀಯ ವೇಷವನ್ನು ತೊಡಿಸಿ, ಆತನನ್ನು ಮಹರ್ಷಿಗಳ ಬಳಿಗೆ ಕರೆದೊಯ್ದು "ಈಕೆಯೀಗ ಗರ್ಭಿಣಿಯು. ಈಕೆಯು ಹಡೆಯಬಹುದಾದ ಮಗುವು ಗ೦ಡೋ ಅಥವಾ ಹೆಣ್ಣೋ ?" ಎ೦ದು ಪ್ರಶ್ನಿಸುತ್ತಾರೆ.

Saturday, August 20, 2016

ಎಂ. ಪಿ. ಶಂಕರ್ ಅವರ 82ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ವನ್ನ್ಯ ಜೀವಿಗಳ ಮತ್ತು ಪರಿಸರದ  ಬಗ್ಗೆ  ಅಪ್ಪರ ಕಾಳಜಿ ಹೊಂದಿದ್ದ, ಅಗಾಧ ಮೈಕಟ್ಟಿನ ಅಜಾನುಬಾಹು ಎಂ. ಪಿ. ಶಂಕರ್ ಕನ್ನಡ ಚಿತ್ರರಂಗದ ಚಿರಸ್ಮರಣೀಯ ಕಲಾವಿದರಲ್ಲಿ ಒಬ್ಬರು.  ‘ನಾರದ ವಿಜಯ’ ಎಂಬ ಚಿತ್ರದಲ್ಲಿ ‘ಮಾಂಸಪರ್ವತ’ ಎಂದು ನಾರದ ಪಾತ್ರಧಾರಿಯಾದ ಅನಂತ್ ನಾಗ್ ಅವರಿಂದ ಕರೆಯಲ್ಪಟ್ಟ ಈ ಚಿತ್ರರಂಗದ ಅವಿಸ್ಮರಣೀಯ ಪಾತ್ರಧಾರಿ,  ಪ್ರತಿಭೆ ಮತ್ತು ಸಾಧನೆಗಳ ಪರ್ವತವೂ ಹೌದು. ಈ ಮೈಸೂರು ಪುಟ್ಟಲಿಂಗಪ್ಪ  ಶಂಕರ್ ಅವರು ಜನಿಸಿದ್ದು ಆಗಸ್ಟ್ 20, 1935ರಲ್ಲಿ. 
ಕುಸ್ತಿ ಪೈಲ್ವಾನರಂತಿದ್ದ ಎಂ. ಪಿ. ಶಂಕರ್ ಅವರು ನಿಜಕ್ಕೂ ಪೈಲ್ವಾನರಾಗಿ ಸಾಧನೆ ಮೆರೆದು ಮೈಸೂರು ದಸರಾ ಸ್ಪರ್ಧೆಗಳಲ್ಲಿ ಹಲವಾರು ಸ್ಪರ್ಧೆಗಳನ್ನು ಗೆದ್ದಿದ್ದವರು.  ‘ರತ್ನಮಂಜರಿ’ ಚಿತ್ರದಿಂದ ಪ್ರಾರಂಭಗೊಂಡ ಚಿತ್ರ ಜೀವನದಲ್ಲಿ ಎಂ. ಪಿ. ಶಂಕರ್ ಅವರು ಹೆಚ್ಚು ನಿರ್ವಹಿಸಿದ್ದು ಖಳನಾಯಕ ಪಾತ್ರಗಳನ್ನೇ.  ಎಂ. ಪಿ. ಶಂಕರ್ ಅವರ ಪ್ರತಿಭಾ ಸಾಮರ್ಥ್ಯವನ್ನೂ,  ಅವರಿಗೆ ಕುಸ್ತಿಯಲ್ಲಿದ್ದ ಹುರುಪುಗಳನ್ನೂ  ಅರಿತಿದ್ದ ಪುಟ್ಟಣ್ಣ ಕಣಗಾಲರು ಅವರಿಗೆ ತಮ್ಮ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ ‘ನಾಗರಹಾವು’ದಲ್ಲಿ  ಕುಸ್ತಿ ಗರಡಿಯ ಮುಖ್ಯಸ್ಥರ ಪಾತ್ರವನ್ನು ಕೊಟ್ಟಿದ್ದರು.  “ನಾಷ್ಟಾ ಮಾಡಿರುವ ಮುಖ ನೋಡು ಅಂತ ರಾಮಾಚಾರಿ ಪಾತ್ರಧಾರಿ ವಿಷ್ಣುವರ್ಧನ್ ಅವರಿಗೆ ಒಂದು ರಾಶಿ ದೋಸೆ ಮತ್ತು ಅದರ ಮೇಲೆ ದೊಡ್ಡ ಬೆಣ್ಣೆಯ ಗುಡ್ಡೆಯನ್ನು ಇಟ್ಟು ಚೆನ್ನಾಗಿ ತಿನ್ನು, ಕುಸ್ತಿ ಮಾಡೋನು ಚೆನ್ನಾಗಿ ತಿನ್ಬೇಕು” ಎಂದು ನುಡಿದ ಚಿತ್ರದುರ್ಗದ ನಾಯಕನೇ ತಾನಾಗಿ ಮೂರ್ತಿವೆತ್ತ ಆ ಪಾತ್ರವನ್ನು ಜನ ಹೇಗೆ ತಾನೇ ಮರೆತಾರು. 

Friday, August 19, 2016

ದ್ವಾರಕೀಶ್ ಅವರ 75ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ ಹಾಸ್ಯ ನಟನೆಯ ಜೊತೆ ಜೊತೆಗೇ  ನಿರ್ಮಾಪಕ, ನಿರ್ದೇಶಕ ನಾಗಿ ಸೇವೆ ಸಲ್ಲಿಸುತ್ತಿರುವ - ಇಂದಿಗೂ ವಿಷ್ಣುವರ್ಧನ-ಚಾರುಲತ ಮುಂತಾದ ಕನ್ನಡ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸುತ್ತಿರುವ ಕರ್ನಾಟಕದ ಮಹಾನ್ ಕುಳ್ಳ -ದ್ವಾರಕೀಶ್
  ನಟನಾಗಿ ಆತ ನಕ್ಕು ನಲಿಸಿದ ಹೃದಯಗಳು ಅಸಂಖ್ಯವಾದದ್ದು.  ನಿರ್ಮಾಪಕನಾಗಿ ಆತ ಕಂಡ ಸಾಹಸ, ಸೋಲು, ಗೆಲುವುಗಳು ಒಂದು ಸಾಮಾನ್ಯ ಜೀವ  ಮಾಡುವಂತದ್ದಲ್ಲ.  ನಿರ್ದೇಶಕನಾಗಿ ಕೂಡಾ ಆತ ಅಲ್ಲಲ್ಲಿ ಸುಂದರ ಕೆಲಸ ಮಾಡಿದವರು.
ದ್ವಾರಕೀಶ್ ಹುಟ್ಟಿದ್ದು ಆಗಸ್ಟ್ 19, 1942ರಲ್ಲಿ.  ಹುಟ್ಟಿದ ಊರು ಹುಣಸೂರು.  ಮೈಸೂರಿನಲ್ಲಿ ಬನುಮಯ್ಯ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆಗಳಲ್ಲಿ  ವಿದ್ಯಾಭ್ಯಾಸ ನಡೆಸಿದ ದ್ವಾರಕೀಶ್ ಅವರ ಮನದಲ್ಲಿ  ಯಾವಾಗಲೂ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು.  ಇವ ಸಿನಿಮಾಗೆ ಓಡಿ ಹೋಗದಿರಲಿ ಎಂದು ಅವರ ಅಣ್ಣ, ದ್ವಾರಕೀಶ್ ಓದುತ್ತಿದ್ದ ದಿನಗಳಲ್ಲೇ ಈಗಲೂ ಮೈಸೂರಿನ ಗಾಂಧೀ ಚೌಕದಲ್ಲಿ ಅಸ್ಥಿತ್ವದಲ್ಲಿರುವ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹಾಕಿಕೊಟ್ಟಿದ್ದರು.  ಆದರೆ ದ್ವಾರಕೀಶ್ ಅವರಿಗೆ ಸಿನಿಮ ಖಯಾಲಿ ಹೋಗಲಿಲ್ಲ.  ಅವರ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರು.  ಹುಣಸೂರು ಕೃಷ್ಣಮೂರ್ತಿ ಮೊದಲು ಡಿಪ್ಲೋಮಾ ಓದು ಮುಗಿಸು ಆಮೇಲೆ ಸಿನಿಮಾ ಮಾತು ಎಂದರು.  ಮುಂದೆ ಅವರು ಸಿ.ವಿ. ಶಂಕರ್ ನಿರ್ದೇಶನದಲ್ಲಿ  ‘ವೀರಸಂಕಲ್ಪ’ದಲ್ಲಿ  ದ್ವಾರಕೀಶ್ ಅವರಿಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.

ದ್ವಾರಕೀಶ್ ಅವರ 75ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ ಹಾಸ್ಯ ನಟನೆಯ ಜೊತೆ ಜೊತೆಗೇ  ನಿರ್ಮಾಪಕ, ನಿರ್ದೇಶಕ ನಾಗಿ ಸೇವೆ ಸಲ್ಲಿಸುತ್ತಿರುವ - ಇಂದಿಗೂ ವಿಷ್ಣುವರ್ಧನ-ಚಾರುಲತ ಮುಂತಾದ ಕನ್ನಡ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸುತ್ತಿರುವ ಕರ್ನಾಟಕದ ಮಹಾನ್ ಕುಳ್ಳ -ದ್ವಾರಕೀಶ್
  ನಟನಾಗಿ ಆತ ನಕ್ಕು ನಲಿಸಿದ ಹೃದಯಗಳು ಅಸಂಖ್ಯವಾದದ್ದು.  ನಿರ್ಮಾಪಕನಾಗಿ ಆತ ಕಂಡ ಸಾಹಸ, ಸೋಲು, ಗೆಲುವುಗಳು ಒಂದು ಸಾಮಾನ್ಯ ಜೀವ  ಮಾಡುವಂತದ್ದಲ್ಲ.  ನಿರ್ದೇಶಕನಾಗಿ ಕೂಡಾ ಆತ ಅಲ್ಲಲ್ಲಿ ಸುಂದರ ಕೆಲಸ ಮಾಡಿದವರು.
ದ್ವಾರಕೀಶ್ ಹುಟ್ಟಿದ್ದು ಆಗಸ್ಟ್ 19, 1942ರಲ್ಲಿ.  ಹುಟ್ಟಿದ ಊರು ಹುಣಸೂರು.  ಮೈಸೂರಿನಲ್ಲಿ ಬನುಮಯ್ಯ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆಗಳಲ್ಲಿ  ವಿದ್ಯಾಭ್ಯಾಸ ನಡೆಸಿದ ದ್ವಾರಕೀಶ್ ಅವರ ಮನದಲ್ಲಿ  ಯಾವಾಗಲೂ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು.  ಇವ ಸಿನಿಮಾಗೆ ಓಡಿ ಹೋಗದಿರಲಿ ಎಂದು ಅವರ ಅಣ್ಣ, ದ್ವಾರಕೀಶ್ ಓದುತ್ತಿದ್ದ ದಿನಗಳಲ್ಲೇ ಈಗಲೂ ಮೈಸೂರಿನ ಗಾಂಧೀ ಚೌಕದಲ್ಲಿ ಅಸ್ಥಿತ್ವದಲ್ಲಿರುವ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹಾಕಿಕೊಟ್ಟಿದ್ದರು.  ಆದರೆ ದ್ವಾರಕೀಶ್ ಅವರಿಗೆ ಸಿನಿಮ ಖಯಾಲಿ ಹೋಗಲಿಲ್ಲ.  ಅವರ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರು.  ಹುಣಸೂರು ಕೃಷ್ಣಮೂರ್ತಿ ಮೊದಲು ಡಿಪ್ಲೋಮಾ ಓದು ಮುಗಿಸು ಆಮೇಲೆ ಸಿನಿಮಾ ಮಾತು ಎಂದರು.  ಮುಂದೆ ಅವರು ಸಿ.ವಿ. ಶಂಕರ್ ನಿರ್ದೇಶನದಲ್ಲಿ  ‘ವೀರಸಂಕಲ್ಪ’ದಲ್ಲಿ  ದ್ವಾರಕೀಶ್ ಅವರಿಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.

Sunday, August 14, 2016

ಲೋಕನಾಥ್ ಅವರಿಗೆ 90ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ಚಲನಚಿತ್ರರಂಗದ ಇತ್ತೀಚಿನ ನಾಯಕ ನಟಿಯರಲ್ಲೊಬ್ಬರಾದ ಸಿಂಧು ಲೋಕನಾಥ್ ಅವರ ತಂದೆ ಲೋಕನಾಥರು ಜನಿಸಿದ್ದು ಆಗಸ್ಟ್ 14, 1927 ರಂದು.
ಭುತಯ್ಯನ ಮಗ ಅಯ್ಯು ಚಿತ್ರದಲ್ಲಿ ಉಪ್ಪಿನಕಾಯಿ ಜಾಡಿಯನ್ನು ಕದ್ದು ಉಪ್ಪಿನಕಾಯಿ ಚಪ್ಪರಿಸಿ ತಿನ್ನುವ ಪಾತ್ರದಲ್ಲಿ ಮೊದಲ ಬಾರಿಗೆ ಕನ್ನಡಿಗರ ಮನೆಮಾತಾದರು ಲೋಕನಾಥ್. ಕನ್ನಡ ಚಿತ್ರರಂಗದ ಕುರಿತು ಚಿಂತಿಸುವಾಗ ನಮ್ಮ ಕಣ್ಮುಂದೆ ಆತ್ಮೀಯವಾಗಿ ಮೂಡುವ ವ್ಯಕ್ತಿಗಳಲ್ಲಿ ಲೋಕನಾಥ್ ಅವರು ಪ್ರಮುಖರು.  

ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ; ಅದರಲ್ಲೂ ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಕನ್ನಡ ಚಲನಚಿತ್ರರಂಗ ಇರುವವರೆಗೂ ಅಜರಾಮರ.  ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಮುಂತಾದ ಕಲಾತ್ಮಕ  ಚಿತ್ರಗಳಲ್ಲಿನ ನಿರ್ವಹಣೆಗೆ, ಒಲವಿನ ಆಸರೆ, ಮನೆ ಮನೆ ಕಥೆ, ಬಂಗಾರದ ಪಂಜರ, ಹೌಸ್ ಫುಲ್ ಅಂತಹ ಅಸಂಖ್ಯಾತ ಪಾತ್ರಗಳಿಗಾಗಿ ಅವರ ಬಗೆಗಿನ ಪ್ರಶಂಸೆಗಳನ್ನು  ಪತ್ರಿಕೆಗಳಿಂದಲೂ ಜನಸಾಮಾನ್ಯರಿಂದಲೂ  ಕಾಣುತ್ತಲೇ ಇದ್ದೇವೆ. ಚಿತ್ರರಂಗವಲ್ಲದೆ ರಂಗಭೂಮಿಯ ಬಹಳಷ್ಟು ಉತ್ತಮ ಪ್ರಯೋಗಗಳಿಗೂ, ಕಿರುತೆರೆಯ ಉತ್ತಮ ಪಾತ್ರಗಳಿಗೂ  ಲೋಕನಾಥರು ಮೆರುಗು ತಂದಿದ್ದಾರೆ.

Friday, August 5, 2016

ವೆಂಕಟೇಶ್ ಪ್ರಸಾದ್ ಅವರಿಗೆ 48ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು


ನಮ್ಮ ನಾಡಿಗೆ ಹೆಸರು ತಂದ ಬೌಲಿಂಗ್ ನಿಪುಣ  ವೆಂಕಟೇಶ್ ಪ್ರಸಾದ್ ಅವರಿಗೆ ೪೮ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ಬಾಪು ಕೃಷ್ಣರಾವ್‌ ವೆಂಕಟೇಶ್ ಪ್ರಸಾದ್ (ಜನನ: ಆಗಸ್ಟ್ 5, 1969 ಬೆಂಗಳೂರು, ಕರ್ಣಾಟಕದಲ್ಲಿ) ಭಾರತ ಕ್ರಿಕೆಟ್ ತಂಡದ
ಮಾಜಿ ಆಟಗಾರ.ತಮ್ಮ ಮೊದಲ ಟೆಸ್ಟ್ ಪ೦ದ್ಯವನ್ನು 1996 ರಲ್ಲಿ ಆಡಿದ ಇವರು ಕರ್ಣಾಟಕದವರೇ ಆದ ಜಾವಗಲ್ ಶ್ರೀನಾಥ್ ಜೊತೆ ಭಾರತದ ಬೌಲಿಂಗ್ ಆರಂಭಿಸುತ್ತಿದ್ದರು.

ಭಾರತದ ರಾಷ್ಟ್ರೀಯ ತ೦ಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿ೦ದ ರಣಜಿ ಕ್ರಿಕೆಟ್ ತ೦ಡದ ಪರವಾಗಿ ಆಡಿದ್ದಾರೆ.