Translate in your Language

Wednesday, June 21, 2017

ಬ್ಯುಟಿಫುಲ್ ಮನಸಿನ ನೀನಾಸಂ ಸತೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ನೀನಾಸಂ ಎಂಬ ಸೃಜನಶೀಲರ ಗೂಡು ಹಲವು ಹನ್ನೊಂದು ಪ್ರತಿಭೆಗಳನ್ನು ರಂಗಭೂಮಿಗೆ, ಕಿರುತೆರೆಗೆ ಮತ್ತು ಹಿರಿತೆರೆಗೆ ನೀಡಿದೆ. ನೀನಾಸಂ ಅಶ್ವತ್ಥ್‌ರವರು ಈಗಾಗಲೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಏಕಪ್ರಕಾರವಾಗಿ ತೊಡಗಿಸಿಕೊಂಡಿರುವುದು ನಿಮಗೆ ಗೊತ್ತೇ ಇದೆ. ಅವರ ಸಾಲಿಗೆ ಈಗ ಹೊಸದಾಗಿ ಸೇರುತ್ತಿದ್ದಾರೆ ನೀನಾಸಂ ಸತೀಶ್‌. 
ಇತ್ತೀಚಿನ ಅವರ ಚಿತ್ರ "ರಾಕೆಟ್" ಮಕಾಡೆ ಮಲಗಿದ ನಂತರ ಬೇಸರಗೊಂಡಿದ್ದ ಸತೀಶ್ ಅವರಿಗೆ ಮರಳಿ ಚೈತನ್ಯ ನೀಡಿದ್ದು "ಬ್ಯುಟಿಫುಲ್-ಮನಸುಗಳ" ಸಕ್ಸಸ್- ನಂತರ ಚೇತರಿಸಿಕೊಂಡ ಸತೀಶ್‌ "ಮಂಡ್ಯದ ಹುಡುಗರು" ಮತ್ತು ಸ್ವಮೇಕ್ ಚಿತ್ರವಾದ "ಟೈಗರ್ ಗಲ್ಲಿ" ಚಿತ್ರಗಳಲ್ಲಿ ನೀನಾಸಂ ಸತೀಶ್ ಚಿತ್ರದಲ್ಲಿ ಬಿಜಿಯಾಗಿರುವ ಅವರು ಈ ವರ್ಷದ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ನೀವು ಯೋಗರಾಜ ಭಟ್ಟರ 'ಪಂಚರಂಗಿ' ಚಿತ್ರವನ್ನು ನೋಡಿದ್ದೇ ಆದಲ್ಲಿ, ಕುರುಡ ತಂದೆಯ ಜೊತೆಗೆ ಕಿತ್ತಾಡುವ ಬಸ್‌ ಡ್ರೈವರ್ ಪಾತ್ರವನ್ನು ಗಮನಿಸಿರಬಹುದು. ಈ ಪಾತ್ರವನ್ನು ವಹಿಸಿದ್ದು ಇದೇ ನೀನಾಸಂ ಸತೀಶ್‌. 

Saturday, June 10, 2017

ಬ್ಯಾಡ್ಮಿಂಟನ್ ಸಾಧಕ ಪ್ರಕಾಶ್ ಪಡುಕೋಣೆ ಅವರ 63ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಭಾರತದ ಶ್ರೇಷ್ಠ ಕ್ರೀಡಾಪಟುಗಳ ಸಾಲಿನಲ್ಲಿ ಅತ್ಯಂತ ಪ್ರಮುಖ ಹೆಸರು ನಮ್ಮ ಕರ್ನಾಟಕದವರೇ ಆದ ಪ್ರಕಾಶ್ ಪಡುಕೋಣೆ. ಅವರು ಹುಟ್ಟಿದ್ದು ಜೂನ್ 10, 1955ರಲ್ಲಿ. ಆರು ವರ್ಷದ ಹುಡುಗನಾಗಿದ್ದಾಗಲೇ ಆಡಲು ಪ್ರಾರಂಭಿಸಿದ ಪ್ರಕಾಶ್ ತನ್ನ ಏಳನೇ ವಯಸ್ಸಿನಲ್ಲೇ ಕರ್ನಾಟಕ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್. 1971ರ ವೇಳೆಗೆ ತಮ್ಮ ಆಟದಲ್ಲಿ ತೀವ್ರ ಬಿರುಸು ಮತ್ತು ಚಾಣಾಕ್ಷತೆಯನ್ನು ಬೆಳೆಸಿಕೊಂಡ ಪ್ರಕಾಶ್ ಒಂದೇ ವರ್ಷದಲ್ಲಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಮತ್ತು ಸೀನಿಯರ್ ಚಾಂಪಿಯನ್ ಎರಡೂ ಆದರು. ಮುಂದೆ ಏಳು ವರ್ಷಗಳ ಕಾಲ ಪ್ರಕಾಶ್ ಪಡುಕೋಣೆ ಅವರೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್.
ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 1978ರ ವರ್ಷದಲ್ಲಿ ಕೆನಾಡದಲ್ಲಿ ನಡೆದ ಕಾಮನ್ ವೆಲ್ತ್ ಸ್ಪರ್ಧೆಗಳಲ್ಲಿ ಜಯಗಳಿಸಿದ ಪ್ರಕಾಶ್ ಪಡುಕೋಣೆ, 1979ರಲ್ಲಿ ಲಂಡನ್ನಿನ ಈವನಿಂಗ್ ಆಫ್ ರಾಯಲ್ ಚಾಂಪಿಯನ್ಸ್, 1980ರಲ್ಲಿ ಸ್ವೀಡಿಶ್ ಚಾಂಪಿಯನ್ ಮತ್ತು ಇವುಗಳಿಗೆಲ್ಲಾ ಕಳಶ ಪ್ರಾಯದಂತೆ ಬ್ಯಾಡ್ಮಿಂಟನ್ ಕ್ರೀಡೆಯ ಶ್ರೇಷ್ಠತೆಯ ಕುರುಹೆಂದು ಪರಿಗಣಿತವಾಗಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಈ ಆಟದಲ್ಲಿ ತಮ್ಮ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿದರು. ಇಂಥಹ ಶ್ರೇಷ್ಠ ಸ್ಪರ್ಧೆಗಳಲ್ಲಿ ಗೆದ್ದ ಪ್ರಥಮ ಭಾರತೀಯರೆಂಬುದು ಪ್ರಕಾಶ್ ಅವರಿಗೂ ನಮ್ಮ ಕನ್ನಡ ನಾಡಿಗೂ ಸಂದಿರುವ ಶ್ರೇಷ್ಠ ಗರಿಮೆಯಾಗಿದೆ.