Translate in your Language

Monday, March 17, 2014

ಡಿ.ವಿ.ಜಿ. ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

  1. ಡಿ.ವಿ.ಜಿ. -ಅಸಾಧಾರಣ ಪತ್ರಕರ್ತ, ಕವಿ  
  2. Born: March 17, 1887, Died: October 7, 1975
  3.  D.V.Gಕನ್ನಡ ಪತ್ರಿಕೋದ್ಯಮ ಇಂದು ಬೃಹದಾಕಾರವಾಗಿ ಬೆಳೆದಿದೆ. ಸುಮಾರು ಒಂದೂವರೆ ಶತಕದ ಸುದೀರ್ಘ ಇತಿಹಾಸದ ಪತ್ರಿಕೋದ್ಯಮ ಇಷ್ಟು ಹುಲುಸಾಗಿ ಬೆಳೆಯಲು ಹಲವರ ಶ್ರಮ ಸಾಧನೆಯೇ ಕಾರಣ. ಇಂಥ ಸಾಧಕರಲ್ಲಿ ಡಿವಿಜಿ ಅಗ್ರಗಣ್ಯರು.

    ಡಿವಿಜಿ ಎಂಬ ಉಪನಾಮದಿಂದಲೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (ಡಿ.ವಿ.ಗುಂಡಪ್ಪ) ಜನಮನದಲ್ಲಿ ಹಸಿರಾಗಿ ಉಳಿದಿರುವುದು ಅವರ ಅನುಪಮ ಹಾಗೂ ವಿಚಾರಪೂರ್ಣ ಲೇಖನ, ಬರಹಗಳಿಂದ. ಆದರೆ, ಡಿವಿಜಿ ಸಮಾಜಸೇವೆ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ವ್ಯವಸಾಯ ಅವರ ಸಾಹಿತ್ಯ ಸೇವೆಯಷ್ಟೇ ಮಿಗಿಲು.

    ಡಿ.ವಿ.ಜಿ. ಅವರನ್ನು ಅವರ ಸರೀಕರೊಬ್ಬರು ತಮ್ಮ ಮಿತ್ರರಿಗೆ ಪರಿಚಯಿಸುತ್ತಾ.. ಇವರು ಗುಂಡಪ್ಪ ದೊಡ್ಡ ಸಾಹಿತಿ ಎಂದಾಗ ಮಧ್ಯೆಯೇ ತಡೆದ ಡಿ.ವಿ.ಜಿ., ಕ್ಷಮಿಸಿ ನಾನು ಮೊದಲು ಪತ್ರಕರ್ತ, ಜನಕ್ಕೆ ಯಾವುದೋ ಸಂಗತಿಗಳನ್ನು ವಿಷದವಾಗಿ ತಿಳಿಸಬೇಕೆಂಬ ಮಾನಸಿಕ ಒತ್ತಡ ಉಂಟಾದಾಗ ಪದ್ಯಗಳೋ, ಪ್ರಬಂಧಗಳೋ ನಂದ ಹುಟ್ಟಿಕೊಂಡಿವೆ ಅಷ್ಟೇ. ನಾನು ಸಾಹಿತ್ಯ ಕ್ಷೇತ್ರಕ್ಕೆ ಒಬ್ಬ ಆಗಂತುಕ ಎಂದು ಹೇಳಿದರಂತೆ.

Sunday, March 16, 2014

ಕಲಾ ಕೇಸರಿ ಉದಯಕುಮಾರ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

"ಕಲಾ ಕೇಸರಿ" ಮತ್ತು "ನಟ ಸಾಮ್ರಾಟ್" ಎಂದು ಪ್ರಸಿದ್ಧರಾಗಿದ್ದ ಉದಯ್ ಕುಮಾರ್ (ಜನನ: ಮಾರ್ಚ್ 16, 1935) ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ. ರಾಜಕುಮಾರ್, ಕಲ್ಯಾಣಕುಮಾರ್ ಮತ್ತು ಉದಯಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು.

ಜೀವನ

ಕನ್ನಡ ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರಾಗಿದ್ದ ಕಲಾಕೇಸರಿ ಉದಯ್ ಕುಮಾರ್ ಅವರು ಮಾರ್ಚ್ ೧೬, ೧೯೩೫ರಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್ಲಿನಲ್ಲಿ ಶಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಈ ಚಿತ್ರದ ನಿರ್ಮಾಪಕರಾದ ಭಕ್ತವತ್ಸಲ ಮತ್ತು ಎ.ಸಿ.ನರಸಿಂಹಮೂರ್ತಿಯವರು ತಮ್ಮ ಉದಯ ಪ್ರೊಡಕ್ಷನ್ಸ್ ಲಾಂಛನಕ್ಕೆ ಹೊಂದುವಂತೆ ಇವರಿಗೆ ಉದಯಕುಮಾರ್ ಎಂದು ನಾಮಕರಣವನ್ನು ಮಾಡಿದರು
ಚಿತ್ರಂಗದಲ್ಲಿ ಜನಪ್ರಿಯತೆ

Monday, March 3, 2014

ಪುಟ್ಟರಾಜ ಗವಾಯಿ ಅವರ ೧೦೧ ನೆ ಹುಟ್ಟು. ಹಬ್ಬದ ಸವಿ ನೆನಪಿನಲ್ಲಿ

Pandit Puttaraja Gavaayi
ಡಾ. ಪಂ. ಪುಟ್ಟರಾಜ ಗವಾಯಿ 
(3 March 1914 – 17 September 2010) 
ಅವರ 101 ನೆ ಹುಟ್ಟು. ಹಬ್ಬದ ಸವಿ ನೆನಪಿನಲ್ಲಿ
ಡಾ.ಪಂ.ಪುಟ್ಟಾರಾಜ ಕವಿ ಗವಾಯಿಗಳಾವರು ಹುಟ್ಟಿದ್ದು ತಮ್ಮ ತಾಯಿಯ ತವರೂರಾದ 'ದೇವಗಿರಿಯಲ್ಲಿ ದಿನಾಂಕ ೧೯೧೪ ಮಾರ್ಚ ೩.ರಂದು ಇವರ ಮೂಲಊರುವೆಂಕಟಾಪುರ.ವೆಂಕಟಾಪುರದಲ್ಲಿ ಇವರು ಹಿರೇಮಠದವರು.ವೆಂಕಟಾಪುರದ ಹಿರೇಮಠದ ಶಾಖಾ ಮಠ ಹಾನಗಲ್ಲ ತಾಲೂಕಿನ ದೇವರ ಹೊಸಪೇಟಿಯಲ್ಲಿ ಇತ್ತು.ಇವರ ಪೂರ್ವಿಕರು ಈ ಹೊಸಪೇಟೆಗೆ ಹೋಗಿ ಬಂದು ಅಲ್ಲಿನ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಪಂಚಾಕ್ಷರಿ ಗವಾಯಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತವಾದ್ಯಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವುಗಲನ್ನೂ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು.