Translate in your Language

Sunday, June 26, 2016

ಪ್ರತಿಯೊಬ್ಬ ಭಾರತೀಯರು ಓದಲೇಬೇಕಾದ

 ಎಸ್. ಎಲ್. ಭೈರಪ್ಪನವರ : ಮತಾಂತರ - ಸತ್ಯದ ಮೇಲೆ ಹಲ್ಲೆ -ಸಂಪಾದಕೀಯ: "ಭಾರತೀಯರ ಆತ್ಮಗಳನ್ನು
ಉದ್ಧರಿಸಲು ನೀವು ಬರಬೇಕಾದರೆ ಅಗತ್ಯವಿಲ್ಲ . ನೀವು ಮಾಡಬೇಕಾಗಿರುವುದು  ಬಡತನದಿಂದ  ಅವರನ್ನು ಉದ್ಧರಿಸಬೇಕಾಗಿರುವ  ಕಾರ್ಯ "- ಈ ...

ಮತಾಂತರ ದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮುಕ್ತವಾದ ಹಾಗೂ ಬಹಿರಂಗವಾದ ಚರ್ಚೆಗಳು   ನಡೆಯುವುದು ಸ್ವಾಗತಾರ್ಹ  ಭಾತರದಲ್ಲಿ  ಬರುತ್ತಿರುವ ಕೋಮುವಾದ ಹಾಗೂ ಮತಾಂತರದ ಕುರಿತ ಸಾಹಿತ್ಯವನ್ನು  ವಿಮರ್ಶಾತ್ಮಕವಾಗಿ ನೋಡಿದಾಗ  ನನಗೆ  ತೋಚಿದ ಕೆಲವು ವಿಚಾರಗಳನ್ನು  ಇಲ್ಲಿ ಹಂಚಿಕೊಂಡಿದ್ದೇನೆ.ಅಜಕ್ಕಳ  ಗಿರೀಶ ಭಟ್


ಕುಲ-ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು !

ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಮೊದಲು ಸಂಸಾರಿಯಾಗಿದ್ದ ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಕನಕದಾಸರು ಹದಿನೈದು – ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರಾಗಿದ್ದು  ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು.

ಕನಕದಾಸರು ಜನಿಸಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬಲ್ಲಿ.  ನಂತರ ಕಾಗಿನೆಲೆಯಲ್ಲಿ ನೆಲೆಸಿದಂತೆ ತೋರುತ್ತದೆ.  ಅದು ಈಗ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ.  ಕನಕದಾಸರ ಕೀರ್ತನೆಗಳೆಲ್ಲವೂ ಕಾಗಿನೆಲೆಯ ಆದಿಕೇಶವನ ಅಡಿದಾವಾರೆಗಳಿಗೇ ಅರ್ಪಿತ.  ಅವರು ತಮಗೆ ದೊರೆತ ನಿಧಿಯಿಂದ ಕಾಗಿನೆಲೆಯ ನರಸಿಂಹ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು.  ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಟಾಪನೆ ಮಾಡಿದರೆಂದು ತಿಳಿದು ಬರುತ್ತದೆ.  ಈ ರೀತಿ ತಿಮ್ಮಪ್ಪ ನಾಯಕನಾಗಿದ್ದವರು ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು.  ಕನಕರು  ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು.   ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರೂ ಹೌದು. 

Saturday, June 25, 2016

ಭ್ರಷ್ಟರಿಗೆ ದುಸ್ವಪ್ನವಾಗಿ ಕಾಡುವ ಅಣ್ಣಾ ಹಜಾರೆ !

ಇಡೀ ದೇಶವೆಲ್ಲಾ ಹಲವು ಭ್ರಷ್ಟತೆಗಳಿಂದ ನಾರುತ್ತಿರುವ ಸಮಯದಲ್ಲಿ ಅದರ ವಿರುದ್ಧ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಒಂದು ಅಪೂರ್ವ ಕಮಲ ಅಣ್ಣಾ ಹಜಾರೆ.  ಇಂದು ಅವರ ಹುಟ್ಟು ಹಬ್ಬ.  ಅವರು ಜನಿಸಿದ ದಿನ ಜೂನ್ 15, 1938. 

ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿ ಎಲ್ಲಾ ಸಿದ್ಧಿಗಳಿಂದ ವಂಚಿತವಾಗಿ ಬರಡುಭೂಮಿಯಾಗಿ ಕ್ಷಾಮರೋಗಗಳಿಗೆ ಸುಲಭದ ತುತ್ತಾಗಿ ಕುಡಿತ, ಕಡುಬಡತನ ಮತ್ತು ಪಟ್ಟಣಗಳಿಗೆ ವಲಸೆ ಹೋಗಲು ಕಾರಣೀಭೂತವಾದ ಆಗರವಾಗಿತ್ತು.  ಅಣ್ಣಾ ಹಜಾರೆಯವರ ಪ್ರೇರಣೆಗಳಿಂದ ಈ ಊರು ನೈಸರ್ಗಿಕವಾಗಿ ಜಲಸಂರಕ್ಷಣೆಯ ವಿಧಾನಗಳನ್ನು ಕಲಿತುಕೊಂಡು ಹಳ್ಳಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರ ಜೊತೆಗೆ ‘ರಾಲೆಗನ್ ಸಿದ್ಧಿ’ ಎಂಬ ಹೆಸರನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದೆ.  ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಅಂದರೆ ಏನು ಎಂಬುದಕ್ಕೆ ಅಣ್ಣಾ ಹಜಾರೆ, ನಮ್ಮ ಹೆಗ್ಗೋಡಿನ ಸುಬ್ಬಣ್ಣ, ಆನಂದವನದ ಬಾಬಾ ಅಮ್ಟೆ, ಬಿಳಿಗಿರಿರಂಗನ ಬೆಟ್ಟದ ಸುದರ್ಶನ್ ಅವರನ್ನು ನೋಡಿ ನಾವು ಅದರಲ್ಲೂ ನಮ್ಮ ರಾಜಕೀಯ, ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ತಜ್ಞರು ಕಲಿಯುವುದು ತುಂಬಾ ತುಂಬಾ ಇದೆ.  ‘ರಾಲೇಗನ್ ಸಿದ್ಧಿ’ಯ ಸಿದ್ಧಿ ಪ್ರವರಗಳನ್ನು ಮತ್ತು ಅದು ಸಾಧಿಸಿರುವ ಶ್ರೇಷ್ಠತೆಗಳನ್ನು ಇಡೀ ವಿಶ್ವವೇ ಕಂಡು ಬೆರಗುಗೊಂಡಿರುವುದು ಅಣ್ಣಾ ಹಜಾರೆ ಅವರ ಆತ್ಮವನ್ನು ಅರಿಯಬಲ್ಲವರಿಗೆ ಪ್ರಥಮ ಹೆಜ್ಜೆಯಾಗಬೇಕಾಗುತ್ತದೆ.

Friday, June 24, 2016

ಭಾರತೀಯ ತಂಡಕ್ಕೆ ಅನಿಲ್ ಕುಂಭ್ಳೆ ಕೋಚ್

ಭಾರತೀಯ ತಂಡಕ್ಕೆ ನಮ್ಮ  ಅನಿಲ್ ಕುಂಭ್ಳೆ ಕೋಚ್ ಆಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರ ಸಂತೋಷವನ್ನು ಹೆಚ್ಚಿಸಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಕನ್ನಡಿಗನೊಬ್ಬ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರು ಮೊದಲ ಕನ್ನಡಿಗ. ಸ್ಪಿನ್ನರ್ ಮಾಂತ್ರಿಕ ಅನಿಲ್ ಕುಂಭ್ಳೆ  ಭಾರತೀಯ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬುವ ಎಲ್ಲಾ ಗುಣಗಳನ್ನು ಹೊಂದಿರುವ ಶ್ರೇಷ್ಟ ವ್ಯಕ್ತಿ ಅವರಿಗೆ ನಮ್ಮ ಪರವಾಗಿ ಹಾರ್ಧಿಕ ಅಭಿನಂದನೆಗಳು .

ಸ್ವಾಮಿ ವಿವೇಕಾನಂದರ ಅಮರವಾಣಿ !!

ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ‘ಸ್ವಾಮಿ ವಿವೇಕಾನಂದರು ಜನವರಿ 12, 1863 ರಲ್ಲಿ, ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿ - ಭರತಭೂಮಿಯಲ್ಲಿ ಜನಿಸಿದರು.   ನಮ್ಮ ಭರತ ಭೂಮಿಯಲ್ಲಿ ಅಂತದ್ದೇನಿದೆ ಎಂಬುದನ್ನು  ಸ್ವಾಮಿ ವಿವೇಕಾನಂದರ ಮಾತುಗಳಲ್ಲೇ ಅರಿಯುವುದು ಶ್ರೇಷ್ಠವಾದುದು.  ಅವರು ನುಡಿಯುತ್ತಾರೆ “ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ, ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿಯೊಬ್ಬ ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರೈಸುವುದಕ್ಕೆ ಒಂದು ಕರ್ಮಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯ ಮಾಧುರ್ಯ, ಔದಾರ್ಯ, ಪಾವಿತ್ರ್ಯ, ಶಾಂತಿ – ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದ್ದರೆ ಅದು ಭರತಖಂಡವೇ ಆಗಿದೆ.”  ಇಂಥಹ ಅದಮ್ಯ ನಂಬಿಕೆಯನ್ನು ತಮ್ಮಲ್ಲಿ ತುಂಬಿಕೊಂಡಿದ್ದ ಸ್ವಾಮೀಜಿಯವರು ತಮ್ಮ ಬದುಕಿನ ಮೂಲಕ ಅದನ್ನು ವಿಶ್ವಕ್ಕೆಲ್ಲಾ ಸಾಬೀತು ಮಾಡಿಕೊಟ್ಟರು. 

Thursday, June 23, 2016

ಕನ್ನಡ ಚಿತ್ರಸಂಗೀತದ ಮೈಲಿಗಲ್ಲು:ಹಂಸಲೇಖ


‘ಹಂಸಲೇಖ’ರು ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ.  ಹಂಸಲೇಖ ಅವರು  ಜೂನ್ 23, 1951ರ ವರ್ಷದಲ್ಲಿ ಗೋವಿಂದರಾಜು ಗಂಗರಾಜುವಾಗಿ ಮೈಸೂರಿನಲ್ಲಿ  ಜನಿಸಿದರು. 

‘ತ್ರಿವೇಣಿ’ ಚಿತ್ರದಲ್ಲಿ ಬರವಣಿಗೆಯ ಮೂಲಕ ಚಿತ್ರರಂಗಕ್ಕೆ ಬಂದ ಹಂಸಲೇಖರು ಮುಂದೆ ಒಂದೆರಡು ಪುಟ್ಟ ಕೆಲಸಗಳನ್ನು ಅಲ್ಲಿ ಇಲ್ಲಿ ಮಾಡಿದ್ದರೂ ಅವರು ಪ್ರಖ್ಯಾತರಾದದ್ದು ‘ಪ್ರೇಮಲೋಕ’ ಚಿತ್ರದಲ್ಲಿ. 'ನೀನಾ ಭಗವಂತ, ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ' ಎಂಬಂತಹ ಸಾಹಿತ್ಯದಿಂದ ಅಲ್ಲಲ್ಲಿ ಮಿಂಚಿದ್ದವರು.  ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಎನ್. ವೀರಸ್ವಾಮಿಯವರ ಪುತ್ರ ಚಿನಕುರಳಿ ವ್ಯಕ್ತಿತ್ವದ ರವಿಚಂದ್ರನ್ ಆಗ ತಾನೇ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದರು.  ಇಂತಹ ಪ್ರಯತ್ನದಲ್ಲಿ ಅವರಿಗೆ ‘ಗ್ರೀಸ್ 2’ ಪ್ರೇರಣೆಯಿಂದ  ಕನ್ನಡದಲ್ಲೊಂದು ಹಾಡುಗಳ ಮೂಲಕ ನಡೆಯುವ ಪ್ರೇಮಕತೆಯನ್ನು ಹೇಳುವ ಆಶಯದಲ್ಲಿದ್ದಾಗ ‘ಹಂಸಲೇಖ’ರು ಅವರಿಗೆ ಜೊತೆಯಾದರು.  'ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೆ' ಎಂಬ ಹಾಡಿನ ಧ್ವನಿಮುದ್ರಣದ ಸಮಯದಲ್ಲಿ ಅಲ್ಲಿದ್ದ ಹಂಸಲೇಖರು ಆ ಹಾಡಿನ ವಿಸ್ತರಣೆಯಾದ 'ಯಾರೇ, ಯಾರೇ..' ಎಂಬ ಸಲಹೆ ಕೊಟ್ಟಾಗ ಅವರು ರವಿಚಂದ್ರನ್ ಅವರಿಗೆ ಪ್ರಿಯರಾಗಿಬಿಟ್ಟರು.

Thursday, June 16, 2016

ಎ.ಎನ್. ಮೂರ್ತಿರಾವ್ ಅವರ 117ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಎ.ಎನ್. ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹರಾವ್ ಮೂರ್ತಿರಾವ್ ಇವರ ಪೂರ್ಣ ಹೆಸರು. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಹೆಬ್ಬಾಳುವಿನಲ್ಲಿ 1900 ಜೂನ್ 16 ರಂದು ಜನಿಸಿದರು. ತಂದೆ ಸುಬ್ಬರಾಯ ತಾಯಿ ಪುಟ್ಟಮ್ಮ. ಮಾಧ್ಯಮಿಕ ಹಂತದವರೆಗೆ ಅಕ್ಕಿಹೆಬ್ಬಾಳುವಿನಲ್ಲಿ ಅಭ್ಯಾಸ ಮಾಡಿದರು. ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಎಸ್. ರಾಧಾಕೃಷ್ಣನ್ ಅವರು ಇವರಿಗೆ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಬಿ.ಎಂ. ಶ್ರೀಕಂಠಯ್ಯನವರು ಇವರ ಗುರುಗಳಾಗಿದ್ದರು. ೧೯೨೪ರಲ್ಲಿ ಮೂರ್ತಿರಾಯರು ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಟ್ಯೂಟರ್ ಆಗಿ ಕೆಲಕಾಲ ಸೇವೆ ಸಲ್ಲಿಸಿ ೧೯೨೫ರಲ್ಲಿ ಮೈಸೂರು ಮಹಾರಾಜ ಹೈಸ್ಕೂಲಿನ ಅಧ್ಯಾಪಕರಾದರು. ೧೯೨೭ರಲ್ಲಿ ಕಾಲೇಜು ಅಧ್ಯಾಪಕರಾಗಿದ್ದರು. ೧೯೪೦ರಲ್ಲಿ ಉಪ ಪ್ರಾಧ್ಯಾಪಕರಾದರು.

Monday, June 6, 2016

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 126ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶಂಕರ್ನಾಗ್ ಅವರ ಮೊದಲ ಕನ್ನಡ ಚಿತ್ರ ಒಂದಾನೊಂದು ಕಾಲದಲ್ಲಿಯ "ನೇಸರ ನೋಡು.. ನೇಸರ ನೋಡೂ.." ಹಾಗು
ಬಾ ಸವಿತಾ ...ಬಾ ಸವಿತಾ ...(ಭಾವಗೀತೆ)
ಒಂದು ದಿನ ಕರಿಹೈದ-(ಚಿತ್ರ: ಕಾಕನ ಕೋಟೆ)
ಬೆಟ್ಟದ ತುದಿಯಲ್ಲಿ.. ಕಾಡುಗಳ ಎದೆಯಲ್ಲಿ...(ಚಿತ್ರ: ಕಾಕನ ಕೋಟೆ)
ಎಂಥ ಸುಂದರ ಹಾಡುಗಳು ಈ ಹಾಡುಗಳನ್ನು ರಚಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶ್ರೀನಿವಾಸ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರರು 1891ರ ಜೂನ್ 6ರಂದು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಶಿವಾರಪಟ್ಟಣ, ಮಳವಳ್ಳಿ, ಕೃಷ್ಣರಾಜ ಪೇಟೆಗಳಲ್ಲೂ, ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿಯೂ ನಡೆಯಿತು. ಅನಂತರ ಮೈಸೂರಿನ ಮಹಾರಾಜ ಕಾಲೇಜು ಸೇರಿ ಎಫ್.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ತದನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ೧೯೧೨ರಲ್ಲಿ ಬಿ.ಎ. ಪದವಿ ಪಡೆದರು. ಅನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯವನ್ನು ಮುಖ್ಯ ವಿಷಯವನ್ನಾಗಿ ಅಭ್ಯಾಸ ಮಾಡಿ ಎಂ.ಎ. ಪದವಿ ಪಡೆದುಕೊಂಡರು. ೧೯೧೩ರಲ್ಲಿ ಮೈಸೂರಿನ ಸಿವಿಲ್ ಸರ್ವಿಸ್ ಪರೀಕ್ಷೆ ಉತ್ತೀರ್ಣರಾದರು. ಕೆಲಕಾಲ ಬೆಂಗಳೂರು ಮತ್ತು ಮದ್ರಾಸುಗಳಲ್ಲಿ ಉಪನ್ಯಾಸಕರಾಗಿ ದುಡಿದರು.

Thursday, June 2, 2016

ಸಂಗೀತ ಮಾಂತ್ರಿಕ ಇಳಯರಾಜಾ

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ ಮತ್ತು ಗೀತರಚನೆಗಳಲ್ಲೂ ಪ್ರಸಿದ್ಧರು.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.

ಇಳಯರಾಜಾ ಅವರಿಗೆ ೭೪ನೇ ಹುಟ್ಟುಹಬ್ಬದ ಶುಭಾಶಯಗಳು

ಇಳಯರಾಜಾ
ಕೇಳದೆ ನಿಮಗೀಗ ದೂರದಲ್ಲಿ ಯಾರೋ......(ಗೀತಾ)
ಯಾವ ಶಿಲ್ಪಿ ಕಂಡ ಕನಸು ನೀನು..(ಪಲ್ಲವಿ-ಅನು ಪಲ್ಲವಿ)
ನಮ್ಮೂರಮಂದಾರ ಹೂವೆ, 
ಸಿಹಿ ಗಾಳಿ..ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ
ಆ ದಿನಗಳು, ಜನ್ಮ ಜನ್ಮದ ಅನುಬಂಧ ......ಇಂಥಾ ಚಿತ್ರಗಳ ಹಾಡುಗಳನ್ನು ಕನ್ನಡಿಗರು ಮರೆಯಲಾದೀತೆ ?

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ ಮತ್ತು ಗೀತರಚನೆಗಳಲ್ಲೂ ಪ್ರಸಿದ್ಧರು.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.