Translate in your Language

Sunday, July 29, 2018

ಕನ್ನಡಕ್ಕೊಬ್ಬನೇ ಕೈಲಾಸಂ

‘ನಾಯಿಗ್ಹಾಕಿದ್ನಿನ್ಜನ್ಮದುಚ್ಚಿಷ್ಠಾನ್ನರೀಗ್ಹಾಕ”

‘ಸಾಬೋನ್ಹಾಕ್ತಿಕ್ಕೊಂಡ್ರೇನೆ ಸುಣ್ಣ ಬಳ್ದ್ಹಾಗೆ ಬೆಳ್ಗಾಗಾಗತ್ಮ್ಪೆ ಅಂತ ತಿಳ್ಕೊಂಡಿದೀರಾ?’

‘ನಾಟ್ಕದ್ವಿಚಾರನ್ನೇ ಮರತ್ಬಿಟ್ಟು ಧ್ವಜ ಸ್ತಂಬ್ಹ್ದಾಗೆ ನೆಟ್ಕೊಂಡಕ್ಷತ್ರಗಳ ಕೀಳ್ತಿದ್ದೀಯಾ?’

ಹೌದು ಈ ರೀತಿಯಿಂದ ವಾಕ್ಯ ರಚನೆ ಮಾಡ್ತಿದ್ದದು, ಮಾಡೊಕ್ಕಾಗಿದ್ದು ಕೈಲಾಸಂರಿಂದಲೇ...

“ಕನ್ನಡ ಕವಿ ತಿಲಕಂ ಗುಂಡಂ”

“ಕವಿ ಮಂಡಲಾಗ್ರೇಸರ ಚಂಡ, ಪ್ರಚಂಡ ಗುಂಡೂ”

‘ಕನ್ನಡ ಪ್ರಹಸನ ಪ್ರಪಿತಾಮಹ ಕೈಲಾಸಂ”

ಎಂದು ಸ್ವಯಂ ಘೋಷಿಸಿಕೊಂಡ ಕೈಲಾಸಂ ನಾಟಕಗಳ ಡೈಲಾಗೂ ತುಂಬಾ ಸ್ವೀಡೂ, ಪ್ರಾಸಬದ್ದವೂ ಆಗಿದ್ದವು.  ಭಾಷೆ ಬಹಳ ಕಠಿಣವಾಗಿರುತ್ತಿದ್ದವು.  ಕೈಲಾಸಂರ ನಿಜ ಬದುಕಿನ ಸಂಭಾಷಣೆಯೂ ಹೀಗೆಯೇ ಇರುತ್ತಿದ್ದವು.  ಇದಕ್ಕೆ ನಿದರ್ಶನವಾಗಿ ಬಿ.ಎಸ್.ಕೇಶವ್‌ರಾವ್‌ರವರು ಬರೆದಿರುವ ‘ಕನ್ನಡಕೊಬ್ಬನೇ ಕೈಲಾಸಂ’ನ ಒಂದು ಸನ್ನಿವೇಶ ಹೀಗಿದೆ.

1937-38ರ ಸಮಯ.  ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೈಲಾಸಂರ ಭಾಷಣವನ್ನು ಏರ್ಪಡಿಸಲಾಗಿತ್ತು.  ಸಭೆಯಲ್ಲಿ ಕೈಲಾಸಂ, ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣದ ಬದಲು, ರಾಮಾಯಣ ಮಹಾಭಾರತಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಲು ಹೇಳಿದರು.  

Monday, April 23, 2018

ಬೀchi (ರಾಯಸಂ ಭೀಮಸೇನ ರಾವ್)


ಬೀchi  ಯವರ 105ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !!
ಬೀchi (ರಾಯಸಂ ಭೀಮಸೇನ ರಾವ್
(Born: ಏಪ್ರಿಲ್ 23, 1913 - Died: ಡಿಸೆಂಬರ್ 7, 1980) 
ಬೀchi ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ".
                    (- ಅಂದನಾ ತಿಂಮ)

ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು.

Saturday, July 29, 2017

ಕನ್ನಡಕ್ಕೊಬ್ಬನೇ ಕೈಲಾಸಂ

ಟಿ ಪಿ ಕೈಲಾಸಂ (1884 - 1946) ರ 133ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

""ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ"" 
."ಕರ್ನಾಟಕ ಪ್ರಹಸನ ಪಿತಾಮಹ". ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇ‌ವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ಅವರದು.

ಬಾಲ್ಯ
ಕೈಲಾಸಂರವರು ತಮಿಳು ಮೂಲದ ಉನ್ನತ ಮಟ್ಟದ ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ.

Saturday, July 1, 2017

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ದಿನ

ಜುಲೈ 1ರ ದಿನ ‘ಚಾರ್ಟರ್ಡ್ ಅಕೌಂಟೆಂಟ್’ಗಳ ದಿನವೆಂದು ಪರಿಗಣಿತವಾಗಿದೆ. ಜುಲೈ 1, 1949ರಂದು ಸಂವಿಧಾನದಡಿಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಕಾಯಿದೆಯ ಪ್ರಕಾರ ‘ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆಯು ‘ಐಸಿಎಐ(ICAI)’ ಎಂಬ ಕಿರುರೂಪದಿಂದ ಪ್ರಖ್ಯಾತವಾಗಿದೆ. 

ಚಾರ್ಟರ್ಡ್ ಅಕೌಂಟೆಂಟ್ಗಳು ವೃತ್ತಿಪರ ಸಾಂಸ್ಥಿಕ ಲೆಖ್ಖಪತ್ರ ನಿರ್ವಹಣೆ ಮತ್ತು ಲೆಖ್ಖ ಪರಿಶೋಧಕರಾಗಿ ಈ ಸಂಸ್ಥೆಯ ಮೂಲಕ ಪರಿಣತಿಯನ್ನು ಸಾಧಿಸಿರುತ್ತಾರೆ. ಈ ರೀತಿ ಪರಿಣತಿ ಸಾಧಿಸಿರುವ ಅತೀ ಹೆಚ್ಚು ಸದಸ್ಯತ್ವ ಸಂಖ್ಯೆ ಹೊಂದಿರುವ ದೃಷ್ಟಿಯಿಂದ ಈ ಐಸಿಎಐ ಸಂಸ್ಥೆಯು ‘ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್‘ ನಂತರದಲ್ಲಿ ವಿಶ್ವದ ತನ್ನ ಇತರ ಸಮಾನೋದ್ದೇಶಿತ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 

Wednesday, June 21, 2017

ಬ್ಯುಟಿಫುಲ್ ಮನಸಿನ ನೀನಾಸಂ ಸತೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ನೀನಾಸಂ ಎಂಬ ಸೃಜನಶೀಲರ ಗೂಡು ಹಲವು ಹನ್ನೊಂದು ಪ್ರತಿಭೆಗಳನ್ನು ರಂಗಭೂಮಿಗೆ, ಕಿರುತೆರೆಗೆ ಮತ್ತು ಹಿರಿತೆರೆಗೆ ನೀಡಿದೆ. ನೀನಾಸಂ ಅಶ್ವತ್ಥ್‌ರವರು ಈಗಾಗಲೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಏಕಪ್ರಕಾರವಾಗಿ ತೊಡಗಿಸಿಕೊಂಡಿರುವುದು ನಿಮಗೆ ಗೊತ್ತೇ ಇದೆ. ಅವರ ಸಾಲಿಗೆ ಈಗ ಹೊಸದಾಗಿ ಸೇರುತ್ತಿದ್ದಾರೆ ನೀನಾಸಂ ಸತೀಶ್‌. 
ಇತ್ತೀಚಿನ ಅವರ ಚಿತ್ರ "ರಾಕೆಟ್" ಮಕಾಡೆ ಮಲಗಿದ ನಂತರ ಬೇಸರಗೊಂಡಿದ್ದ ಸತೀಶ್ ಅವರಿಗೆ ಮರಳಿ ಚೈತನ್ಯ ನೀಡಿದ್ದು "ಬ್ಯುಟಿಫುಲ್-ಮನಸುಗಳ" ಸಕ್ಸಸ್- ನಂತರ ಚೇತರಿಸಿಕೊಂಡ ಸತೀಶ್‌ "ಮಂಡ್ಯದ ಹುಡುಗರು" ಮತ್ತು ಸ್ವಮೇಕ್ ಚಿತ್ರವಾದ "ಟೈಗರ್ ಗಲ್ಲಿ" ಚಿತ್ರಗಳಲ್ಲಿ ನೀನಾಸಂ ಸತೀಶ್ ಚಿತ್ರದಲ್ಲಿ ಬಿಜಿಯಾಗಿರುವ ಅವರು ಈ ವರ್ಷದ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ನೀವು ಯೋಗರಾಜ ಭಟ್ಟರ 'ಪಂಚರಂಗಿ' ಚಿತ್ರವನ್ನು ನೋಡಿದ್ದೇ ಆದಲ್ಲಿ, ಕುರುಡ ತಂದೆಯ ಜೊತೆಗೆ ಕಿತ್ತಾಡುವ ಬಸ್‌ ಡ್ರೈವರ್ ಪಾತ್ರವನ್ನು ಗಮನಿಸಿರಬಹುದು. ಈ ಪಾತ್ರವನ್ನು ವಹಿಸಿದ್ದು ಇದೇ ನೀನಾಸಂ ಸತೀಶ್‌. 

Saturday, June 10, 2017

ಬ್ಯಾಡ್ಮಿಂಟನ್ ಸಾಧಕ ಪ್ರಕಾಶ್ ಪಡುಕೋಣೆ ಅವರ 63ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಭಾರತದ ಶ್ರೇಷ್ಠ ಕ್ರೀಡಾಪಟುಗಳ ಸಾಲಿನಲ್ಲಿ ಅತ್ಯಂತ ಪ್ರಮುಖ ಹೆಸರು ನಮ್ಮ ಕರ್ನಾಟಕದವರೇ ಆದ ಪ್ರಕಾಶ್ ಪಡುಕೋಣೆ. ಅವರು ಹುಟ್ಟಿದ್ದು ಜೂನ್ 10, 1955ರಲ್ಲಿ. ಆರು ವರ್ಷದ ಹುಡುಗನಾಗಿದ್ದಾಗಲೇ ಆಡಲು ಪ್ರಾರಂಭಿಸಿದ ಪ್ರಕಾಶ್ ತನ್ನ ಏಳನೇ ವಯಸ್ಸಿನಲ್ಲೇ ಕರ್ನಾಟಕ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್. 1971ರ ವೇಳೆಗೆ ತಮ್ಮ ಆಟದಲ್ಲಿ ತೀವ್ರ ಬಿರುಸು ಮತ್ತು ಚಾಣಾಕ್ಷತೆಯನ್ನು ಬೆಳೆಸಿಕೊಂಡ ಪ್ರಕಾಶ್ ಒಂದೇ ವರ್ಷದಲ್ಲಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಮತ್ತು ಸೀನಿಯರ್ ಚಾಂಪಿಯನ್ ಎರಡೂ ಆದರು. ಮುಂದೆ ಏಳು ವರ್ಷಗಳ ಕಾಲ ಪ್ರಕಾಶ್ ಪಡುಕೋಣೆ ಅವರೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್.
ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 1978ರ ವರ್ಷದಲ್ಲಿ ಕೆನಾಡದಲ್ಲಿ ನಡೆದ ಕಾಮನ್ ವೆಲ್ತ್ ಸ್ಪರ್ಧೆಗಳಲ್ಲಿ ಜಯಗಳಿಸಿದ ಪ್ರಕಾಶ್ ಪಡುಕೋಣೆ, 1979ರಲ್ಲಿ ಲಂಡನ್ನಿನ ಈವನಿಂಗ್ ಆಫ್ ರಾಯಲ್ ಚಾಂಪಿಯನ್ಸ್, 1980ರಲ್ಲಿ ಸ್ವೀಡಿಶ್ ಚಾಂಪಿಯನ್ ಮತ್ತು ಇವುಗಳಿಗೆಲ್ಲಾ ಕಳಶ ಪ್ರಾಯದಂತೆ ಬ್ಯಾಡ್ಮಿಂಟನ್ ಕ್ರೀಡೆಯ ಶ್ರೇಷ್ಠತೆಯ ಕುರುಹೆಂದು ಪರಿಗಣಿತವಾಗಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಈ ಆಟದಲ್ಲಿ ತಮ್ಮ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿದರು. ಇಂಥಹ ಶ್ರೇಷ್ಠ ಸ್ಪರ್ಧೆಗಳಲ್ಲಿ ಗೆದ್ದ ಪ್ರಥಮ ಭಾರತೀಯರೆಂಬುದು ಪ್ರಕಾಶ್ ಅವರಿಗೂ ನಮ್ಮ ಕನ್ನಡ ನಾಡಿಗೂ ಸಂದಿರುವ ಶ್ರೇಷ್ಠ ಗರಿಮೆಯಾಗಿದೆ.

Monday, April 24, 2017

ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬದ ಶುಭಾಶಯಗಳು !

ಈ ಮಹಾನ್ ನಟ ನಮ್ಮನ್ನಗಲಿ ಈ ಏಪ್ರಿಲ್ 12ಕ್ಕೆ  ಬರೊಬ್ಬರಿ 11 ವರ್ಷಗಳು ದಶಕವೇ ಕಳೆದು ಹೋಗಿವೆ
ರಾಜ್ ಅವರ ಬಂಗಾರದ ಮನುಷ್ಯದಿಂದ ಪ್ರಾರಂಭಗೊಂಡ ಬಹುದಿನಗಳ ಓಟದ ಯಶಸ್ಸಿನ ಸಂಭ್ರಮಗಳು ಮುಂದಿನ ಅವರ ಚಿತ್ರಜೀವನದ ಬಹುತೇಕ ಚಿತ್ರಗಳಿಗೆ ಕೂಡಾ ದೊರಕಿತು.

ಯಶಸ್ಸಿನ ಬರದಲ್ಲಿ ಅದುವರೆಗೆ ಶಿಸ್ತಿಗೆ ಹೆಸರಾಗಿದ್ದ ರಾಜ್ ಚಿತ್ರಗಳು ಅಲ್ಪ ಸ್ವಲ್ಪ ಆಚೆ ಈಚೆ ಹೋಗುವ ಲಕ್ಷಣಗಳನ್ನು ಕೂಡಾ ತೋರತೊಡಗಿತ್ತು.  ಬಹದ್ದೂರ್ ಗಂಡು, ರಾಜಾ ನನ್ನ ರಾಜಾ, ತ್ರಿಮೂರ್ತಿದಂತಹ ಚಿತ್ರಗಳ ಹಾಡುಗಳು ಮತ್ತು  ದೃಶ್ಯಾವಳಿಗಳನ್ನು ಕಂಡಿದ್ದವರಿಗೆ ಅದು ನೆನೆಪಿರುತ್ತದೆ.  ಮುಂದೆ  ಅವರ ಕುಟುಂಬವರ್ಗವೇ ಅವರ ಚಿತ್ರಗಳನ್ನು ನಿರ್ಮಿಸುವ, ಉತ್ತಮ ಕತೆಗಳನ್ನು ಆಯುವ ಮಹತ್ವದ ಕಾಯಕವನ್ನು ಸಹಾ ಮಾಡತೊಡಗಿತು.
1968 ರಲ್ಲಿ ಡಾ. ರಾಜ್ ಮನೆಗೆ ಬಂದ ಅತಿಥಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಪರಿಚಯಿಸುವ ಪರಿ ನೋಡಿ ಅವರ ಸರಳತೆಯನ್ನು ನಾವು ಗುರ್ತಿಸಬಹುದು(watch this below Video)