Translate in your Language

Sunday, January 26, 2014

ಕನ್ನಡದ ಪ್ರೇಮಕವಿ K.S ನರಸಿಂಹಸ್ವಾಮಿ ಅವರ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

K.S ನರಸಿಂಹಸ್ವಾಮಿ
ಜನವರಿ ೨೬ ೧೯೧೫ - ಡಿಸೆಂಬರ್ ೨೮ ೨೦೦೩ 
ಶಾಲೆಯ ದಿನಗಳಿಂದಲೂ ನರಸಿಂಹಸ್ವಾಮಿ ತಮ್ಮ ಮೇಲೆ ಬೀರಿದ ಪ್ರಭಾವವನ್ನು ನಿಸಾರ್‌ ನೆನಪಿಸಿಕೊಂಡರು. 'ಬೇಂದ್ರೆ ಮತ್ತು ಅಡಿಗರನ್ನು ಬಿಟ್ಟರೆ ನರಸಿಂಹಸ್ವಾಮಿ ನನ್ನನ್ನು ಪ್ರಭಾವಗೊಳಿಸಿದ ಮೂರನೆಯ ಕವಿ. ಶಾಲೆಯಲ್ಲಿನ ನೀತಿಪಾಠದ ಪೀರಿಯೆಡ್‌ನಲ್ಲಿ ಮೈಸೂರು ಮಲ್ಲಿಗೆ ಹಾಗೂ ಅ.ನ.ಕೃಷ್ಣರಾಯರ ಸಂಧ್ಯಾರಾಗದ ಕುರಿತು ನಮ್ಮ ಮೇಷ್ಟ್ರು ಹೇಳುತ್ತಿದ್ದರು. ನಾನು ಆ ವೇಳೆಗಾಗಲೇ ಪದ್ಯ ಬರೆಯುತ್ತಿದ್ದೆ. 1959ರಲ್ಲಿ ನನ್ನ ಮೊದಲ ಕವನಸಂಕಲನಕ್ಕೆ ಮುನ್ನುಡಿ ಬರೆದುದು ನರಸಿಂಹಸ್ವಾಮಿ ಅವರೇ. ಮುನ್ನುಡಿ ಕೇಳಲು ಹೆದರಿದ್ದೆ. ಆದರೆ ವೈಎನ್‌ಕೆ ಧೈರ್ಯತುಂಬಿದರು. ನರಸಿಂಹಸ್ವಾಮಿ ಅವರ ಮುನ್ನುಡಿ ದೊರೆತದ್ದು ನನ್ನ ಬದುಕಿನ ದೊಡ್ಡ ಅದೃಷ್ಟ . 

ನಿತ್ಯೋತ್ಸವ ಸಂಕಲನದ ಬಿಡುಗಡೆಯ ಸಮಾರಂಭದಲ್ಲಿ ನರಸಿಂಹಸ್ವಾಮಿ ಅವರು ನನ್ನ ಬೆನ್ನುತಟ್ಟಿ ಮಾತನಾಡಿದ್ದನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ..." ಎಂದರು ನಿಸಾರ್‌. ನರಸಿಂಹಸ್ವಾಮಿ ಅವರ ಕವಿತೆಗಳನ್ನು ನಿಸಾರ್‌ ಎರಡು ನೆಲೆಯಲ್ಲಿ ಗುರ್ತಿಸಿದರು. ಭಾಷಾ ನೆಲೆಯಲ್ಲಿ ನರಸಿಂಹ ಸ್ವಾಮಿ ಅವರ ಕವಿತೆಗಳ ಅನನ್ಯತೆಯನ್ನು ನಿಸಾರ್‌ ಗುರ್ತಿಸಿದರು. ಹಳೆ ಮೈಸೂರಿನ ಸುಸಂಸ್ಕೃತ, ಗ್ರಾಮ್ಯ ಹಾಗೂ ಆಡುಭಾಷೆ ಕೆಎಸ್‌ನ ಕವಿತೆಗಳಲ್ಲಿ ಜೀವತಾಳಿದೆ. ಆದರೆ ಅವರ ಕವಿತೆಗಳಲ್ಲಿ ಅತಿ ರಂಜಿತ ಪ್ರೇಮ ಚಿತ್ರಿತವಾಗಿದೆ ಎಂದು ನಿಸಾರ್‌ ಹೇಳಿದರು. ತಮ್ಮ ಹಾಗೂ ನರಸಿಂಹಸ್ವಾಮಿ ಅವರ ನಡುವಣ ಬಾಂಧವ್ಯ ಭೌತಿಕವಾದುದಲ್ಲ , ಭಾವನಾತ್ಮಕವಾದುದು ಎಂದು ಬಣ್ಣಿಸಿದ ನಿಸಾರ್‌- ನರಸಿಂಹಸ್ವಾಮಿ ಅವರೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿನ ಕವಿಗೋಷ್ಠಿಗಳಿಗೆ ಹೋದ ಗಳಿಗೆಗಳನ್ನು ನೆನಪಿಸಿಕೊಂಡರು.

Tuesday, January 21, 2014

ವರಕವಿ ದ ರಾ ಬೇಂದ್ರೆ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ


Da Ra Bendre
ದ.ರಾ.ಬೇಂದ್ರೆ ( ದತ್ತಾತ್ರೇಯ ರಾಮಚಂದ್ರ ಬೇಂದ್ರೆ)
ಜನನ: ೧೮೯೬ ಜನವರಿ ೩೧ /DOB: 21st Jan,1896
ಬೇಂದ್ರೆಯವರಿಗೆ ಲೌಕಿಕ ಮತ್ತು ಪಾರಲೌಕಿಕ ಬೇರೆ-ಬೇರೆ ಇಲ್ಲ. ಅವರ ಕಾವ್ಯದಲ್ಲಿ ಲೌಕಿಕದಲ್ಲಿ ಪಾರಲೌಕಿಕ ಎಲ್ಲೆಲ್ಲಿಯೂ ಇದೆ. ಉದಾಹರಣೆಗೆ ಅವರ "ಬದುಕು ಮಾಯೆಯ ಮಾಟ",  "ನಾಕು ತಂತಿಬದುಕಿನ ಆದಿ-ಅಂತ್ಯಗಳ ಪರಿಚಯ ಏಕಕಾಲಕ್ಕೇ ಮಾಡಿಸುತ್ತದೆ. 
ನಾನು ಬಡವಿ-ಆತ ಬಡವ, ನೀ ಹೀಂಗ ನೋಡಬ್ಯಾಡ ನನ್ನ, ಮುಂದ ಮುಂದ...ಹಿಂದ ನೋಡದ, ಕವನಗಳು ಗಾಡ ಪ್ರೀತಿಯ ಆಳ-ಅಗಲಗಳ  ಅನುಭವವಾಗುತ್ತದೆ.
ಕುರಿಗಳು ಸಾರ್-ಕುರಿಗಳು ನಮ್ಮ ಸಮಾಜದ ಅಂಕು-ಡೊಕುಗಳ ಪರಿಚಯವಷ್ಟೇ ಅಲ್ಲದೆ ಸಾಮಾನ್ಯ ಜನರಅಸಹಾಯಕಥೆಯ ಭಾವಗಳನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಆದ್ದರಿಂದಲೇ ಅವರ ಸೃಜನಾ ಶಕ್ತಿ ಅದ್ಭುತವಾಗಿದೆ. 

ಕುವೆಂಪು ಹೇಳುವಂತೆ, "ಪಂಪ ತನ್ನ ಕಾವ್ಯ ಸೃಜನ ಶಕ್ತಿಯನ್ನು ಪ್ರಕಟಿಸಲು `ವಿಕ್ರಮಾರ್ಜುನ ವಿಜಯ' ಬರೆದು, ಭಕ್ತಿಯನ್ನು ಪ್ರಕಟಿಸಲು`ಪುರಾಣ' ಬರೆದದ್ದರಿಂದ ಅವನ ಸೃಜನ ಶಕ್ತಿ ವಿಭಜನವಾಯಿತು. ಆದರೆ, ಇವೆರಡೂ ಶಕ್ತಿ ಏಕೀಭವಿಸಿ ತನ್ನ ಭಗವದ್ಭಕ್ತಿಯನ್ನು ಕಾವ್ಯಶಕ್ತಿಯ ಮೂಲಕ ಪ್ರಕಟಪಡಿಸಿದ್ದರಿಂದ `ಕುಮಾರವ್ಯಾಸ' ಅದ್ಭುತ. ಅಂತೆಯೇ `ಅಂಬಿಕಾತನಯದತ್ತ' ಅವರ ಯಾವ ಪದ್ಯವನ್ನೇ ಓದಿ, ಲೌಕಿಕವೆಂದು ಹೊರದೃಷ್ಟಿಗೆ ತೋರಿದರೂ, ಹಿಂಜುತ್ತಾ ಹೋದಂತೆ, ಪಾರಲೌಕಿಕದ "ನಾದ" ಕೇಳಿಸುವದು. ಓಂಕಾರ ಕಿವಿಯಲ್ಲಿ ಗುಣಿಗುಣಿಸುವದು. ಆದ್ದರಿಂದ  ಬೇಂದ್ರೆಯ ಎಲ್ಲ ಕವನಗಳೂ ಅತ್ಯದ್ಭುತ. ಶಬ್ದಗಳಿಂದ ಬೇಂದ್ರೆ ಕಾವ್ಯ ವರ್ಣಿಸುವದು, ಅಂಗೈಯಲ್ಲಿ ಸಾಗರ ಹಿಡಿದಂತೆ. ಬೇಂದ್ರೆಯವರನ್ನು ಓದಿ, ತಿಳಿದು, ಆ ಬ್ರಹ್ಮಾನಂದವನ್ನು ಅನುಭವಿಸಬೇಕು.

Tuesday, January 14, 2014

ಹೊನ್ನಪ್ಪ ಭಾಗವತರ್ ಅವರ 99ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಹೊನ್ನಪ್ಪ ಭಾಗವತರ್, in ಮಹಾಕವಿ ಕಾಳಿದಾಸ ಚಿತ್ರದಲ್ಲಿ

ಜನನ: ಜನವರಿ 14, 1915, ನಿಧನ: ಅಕ್ಟೋಬರ್ 2, 1992.
ನೆಲಮಂಗಲ ತಾಲೂಕಿನ ಚೌಡಸಂದ್ರ ದಲ್ಲಿ ಚಿಕ್ಕಲಿಂಗಪ್ಪ ಮತ್ತು ಕಲ್ಲಮ್ಮ ನವರಿಗೆ ಜನಿಸಿ ಕನ್ನಡ ಚಿತ್ರರಂಗದಲ್ಲಿ ನಟರಾಗಿ, ಸಂಗೀತ/ಗಾಯಕರಾಗಿ, ನಿರ್ಮಾಪಕರಾಗಿ ನಿಷ್ಟೆಯಿಂದ ಸೇವೆ ಸಲ್ಲಿಸಿದ ಪ್ರತಿಭೆ ಹೊನ್ನಪ್ಪ ಭಾಗವತರ್, 
ಮಹಾಕವಿ ಕಾಳಿದಾಸ ಚಿತ್ರದಲ್ಲಿನ ಅಭಿನಯದಿಂದ ಗಾನಾಭಿನಯ ಚಂದ್ರ, ನಟಾಚಾರ್ಯ, ಗಾನ ಕಲಾಭೂಷಣ, ಗಾನ ಕಲಾ ಗಂಧರ್ವ, ಗಾನಾಭಿನಯ ಚಂದ್ರ, ನಟಾಚಾರ್ಯ ಎಂಬೆಲ್ಲಾ ಬಿರುದುಗಳನ್ನು ಪಡೆದು ಅಂದಿನ ಕನ್ನಡಿಗರ ಮನಸ್ಸಿನಲ್ಲಿಳಿದು ಇಂದಿಗೂ ಕನ್ನಡಿಗರ ನೆನಪಿನಲ್ಲಿರುವ ಅದ್ಭುತ ಪ್ರತಿಭೆ
ಅವರ ಮಗ ಭರತ್ ಭಾಗವತರ್ ಕಿರುತೆರೆ ಪ್ರತಿಭೆಯಾಗಿ ಇಂದಿಗೂ ಸೇವೆ ಸಲ್ಲಿಸುತಿದ್ದಾರೆ

Monday, January 6, 2014

Kannada Popular Folk Songs

Kannada Popular Folk Songs:(Janapada Geetegalu) 
  1. Adona banni Kannu Muchchaale...
  2. Adu betta idu bettavo...
  3. Alabeda magale alabeda
  4. Alabeda tangi alabeda
  5. Ambigaa naa ninna nambide
  6. Ashaada maasa banditavvaa..
  7. Atte magale
  8. Atte maavara paada.. tande taayiya paada..
  9. Appa maadappage
  10. Baagi baagi bangaara toogi belli moodi belagadavo...

Friday, January 3, 2014

ಬಿ ಎಂ ಶ್ರೀ ಅವರ ಹುಟ್ಟು ಹಬ್ಬದ ಸವಿ ಹಾರೈಕೆಗಳು

B M Srikanthaiah
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು.
ಉಪಯುಕ್ತ
ಬಿ. ಎಮ್. ಶ್ರೀಕಂಠಯ್ಯ ಅವರ ಭಾವಗೀತೆಗಳು


ಚಂದ್ರಶೇಖರ ಕಂಬಾರರಿಗೆ ಹುಟ್ಟು ಹಬ್ಬದ ಶುಭಾಶಯಗಳು

Dr. Chandrasekhara Kambaar
ಡಾ. ಚಂದ್ರಶೇಖರ ಕಂಬಾರ (ಜನನ- ೨ ಜನವರಿ ೧೯೩೭)ರಂದು ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. 

ಬೆಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ವೊದಲ ಕುಲಪತಿಯಾಗಿ ಡಾ. ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ.೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿ.ವಿ.ಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.