Translate in your Language

Monday, April 25, 2016

ಮಹಾ ಶರಣೆ ಅಕ್ಕಮಹಾದೇವಿ

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ-
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ ಭವಗಳನುಂಡೆನುಂಡೆ ಸುಖಾಸುಖಂಗಳ ಹಿಂದಣ ಜನ್ಮಂಗಳು 
ತಾನೇನಾದರಾಗಲಿ ಇಂದು ನೀ ಕರುಣಿಸು  ನ್ನಮಲ್ಲಿಕಾರ್ಜುನ ||

ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕನ್ನಡನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಅಕ್ಕಮಹಾದೇವಿ, ಅಂದು ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆಯಂತೆ ತೋರುತ್ತಾಳೆ. 
ಮಹಾದೇವಿ ಉಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೊರಟ ಹಾದಿಯಲ್ಲಿ, ಕಲ್ಯಾಣದ ಈ ಶರಣಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದವಳು.

Sunday, April 24, 2016

ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರ 88ನೇ ಹುಟ್ಟುಹಬ್ಬದ ಶುಭಾಶಯಗಳು !

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಪದ್ಮವಿಭೂಷಣ ಡಾ. ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬ ಬಂತು.  ನಮ್ಮ ಅಣ್ಣಾವ್ರಿದ್ದ ದಿನದಲ್ಲಿ ಅವರ ಅಭಿಮಾನಿಗಳಿಗೆ ಅದೊಂದು ಅದ್ಧೂರಿಯ ಹಬ್ಬ.  ಇಂದೂ ಅವರ ಕಾಲದಲ್ಲಿ ಬದುಕಿದ ಕನ್ನಡಿಗರೆಲ್ಲರಿಗೆ ಈ ಕ್ಷಣ ಒಂದು ರೀತಿಯಲ್ಲಿ ಮೈನವಿರೇಳಿಸುವ ಸಂದರ್ಭ.   ಅವರು ಹುಟ್ಟಿದ್ದು ಏಪ್ರಿಲ್ 24, 1929ರ ವರ್ಷದಲ್ಲಿ. 
ಈ ಮಹಾನ್ ನಟ ನಮ್ಮನ್ನಗಲಿ ಈ ಏಪ್ರಿಲ್ ೧೨ಕ್ಕೆ  ಬರೊಬ್ಬರಿ ಒಂದು ದಶಕವೇ ಕಳೆದು ಹೋಯಿತು !

ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಅವರು ತಮ್ಮ ತಂದೆ ಪುಟ್ಟಸ್ವಾಮಯ್ಯ ಅವರ ಜೊತೆ ಗುಬ್ಬೀ ಕಂಪೆನಿ, ಸುಬ್ಬಯ್ಯನಾಯ್ಡು ಅವರ ನಾಟಕ ಮಂಡಳಿಗಳಲ್ಲಿ ಕಷ್ಟಪಟ್ಟು ಬೆವರುಹರಿಸಿ ದುಡಿದು ಎಚ್.ಎಲ್.ಎನ್ ಸಿಂಹ ಅವರ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಿದಾಗ ಸುಮಾರು 26 ವರ್ಷ.

Friday, April 22, 2016

ಚೇತನ್ ಭಗತ್ ಅವರ 42ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

Chetan Bhagat
ಇಂದು ಭಾರತದ ಪ್ರಖ್ಯಾತ ಲೇಖಕರಾದ ಯುವಕ ಚೇತನ್ ಭಗತ್ ಅವರ ಹುಟ್ಟು ಹಬ್ಬ.  ಅವರು ಹುಟ್ಟಿದ್ದು ಏಪ್ರಿಲ್ 22, 1974ರಲ್ಲಿ. 

ಬಹಳಷ್ಟು ಉತ್ತಮ ಬರಹಗಾರರು ತಮ್ಮ ಹೃದಯವನ್ನು ತೆರೆದಿಡುವುದರಲ್ಲಿ ಮತ್ತು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸುವುದರಲ್ಲಿ ಕಲಾತ್ಮಕತೆಯನ್ನು ಹೊರಹೊಮ್ಮಿಸುತ್ತಾರೆ.  ಚೇತನ್ ಭಗತ್ ಇವೆರಡನ್ನೂ ಯಶಸ್ವಿಯಾಗಿ ಮಾಡುತ್ತಿದ್ದಾರೆ ಜೊತೆಗೆ  ಇವೆರಡಕ್ಕೂ ಮೀರಿದ ಇನ್ನೇನನ್ನೋ ಕೂಡಾ ಮಾಡುತ್ತಿದ್ದಾರೆ.   ಚಲನಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರವಾದ ‘ತ್ರೀ ಈಡಿಯಟ್ಸ್’  ಚಿತ್ರದ ಮೂಲ ಚಿಂತನೆಯ ಆಳ ಚೇತನ್ ಭಗತ್ ಅವರದ್ದು.

ಭಾರತದ ಪ್ರತಿಷ್ಠಿತ ಅಧ್ಯಯನ ಕೇಂದ್ರಗಳಾದ ಐಐಟಿ, ಐಐಮ್ ಗಳಲ್ಲಿ ವಿದ್ಯಾಭ್ಯಾಸದ ಸಾಧನೆ ಮಾಡಿರುವ ಚೇತನ್ ಭಗತ್ ಅವರ ಬುದ್ಧಿವಂತಿಕೆಗೆ ಪ್ರಮಾಣ ಪತ್ರ ಬೇರೇನೂ ಬೇಕಿಲ್ಲ.

Sunday, April 17, 2016

ಪುನೀತ್ ರಾಜ್ ಕುಮಾರ್ ಅವರ 41ನೇ ಹುಟ್ಟೂಹಬ್ಬದ ಹಾರ್ಧಿಕ ಶುಭಾಶಯಗಳು

ರಾಜ್ ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ. ಆ ರಾಜ್ ಕುಮಾರ್ ಅವರ ಮಗನಾಗಿ ಬಂದು ಇಂದು ಕನ್ನಡ ಚಿತ್ರರಂಗದಲ್ಲಿ ಅಪಾರ ಯಶಸ್ಸಿನಿಂದ ಮಿನುಗುತ್ತಿರುವ ಹುಡುಗ ಪುನೀತ್. ಇದೀಗ ಕನ್ನಡಿಗರ ಪವರ್ ಸ್ಟಾರ್, ಇವರ  ಹುಟ್ಟಿದ ದಿನ ದಿನಾಂಕ ಮಾರ್ಚ್ 17, 1975. ಪುನೀತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

ಪುನೀತ್ ಬಾಲ್ಯದಲ್ಲೇ ರಾಜ್ ಅವರೊಂದಿಗೆ ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಹುಡುಗ.

Saturday, April 16, 2016

ಬೆಟಗೇರಿ ಕೃಷ್ಣಶರ್ಮ ಅವರ 117ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಬೆಟಗೇರಿ ಕೃಷ್ಣಶರ್ಮ

ಬೆಟಗೇರಿ ಕೃಷ್ಣಶರ್ಮರವರು 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿಯಲ್ಲಿ ಜನಿಸಿದರು. ಆನಂದಕಂದ ಇವರ ಕಾವ್ಯನಾಮ ತಮ್ಮ ಹನ್ನರಡನೇ ಮಯಸ್ಸಿಗೆ ತಂದೆಯನ್ನು ಕಳೆದುಕೊಂಡು ಸಂಸಾರದ ಹೊರೆಯನ್ನು ಹೊರಲೇಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಅಲ್ಪ ಸ್ವಲ್ಪ ಓದು ಕಲಿತ ಕೃಷ್ಣಶರ್ಮರು ಮನೆಯಲ್ಲಿದ್ದರು. ೧೯೧೯ರಲ್ಲಿ ಧಾರವಾಡದಲ್ಲಿ ಜರುಗಿದ ಕರ್ನಾಟಕ ಏಕೀಕರಣ ಸಮ್ಮೇಳನ ಜರುಗಿದಾಗ ಕಾವ್ಯಾನಂದರ ನೇತೃತ್ವದಲ್ಲಿ ಸ್ವಯಂ ಸೇವಕರಾಗಿ ದುಡಿದರು. ಆಗ ಇವರಿಗೆ ಕೆರೂರು ವಾಸುದೇವಾಚಾರ್ಯ, ಹುಯಿಲಗೊಳ ನಾರಾಯಣರಾವ್ ಅವರಂತಹ ಸಂಪರ್ಕ ಅಲ್ಲದೇ ಕನ್ನಡಾಭಿಮಾನವೂ ಬೆಳೆಯಿತು. 

ಚಾರ್ಲಿ ಚಾಪ್ಲಿನ್ ಅವರ 127ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ !

Charlie Chaplin
ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನ ಏಪ್ರಿಲ್ 16,1889.  ಚಾಪ್ಲಿನ್ ಚಿತ್ರಗಳನ್ನು ಆಸ್ವಾದಿಸಿದ  ನಮಗೆ ಚಾಪ್ಲಿನ್ನನಷ್ಟು  ಆತ್ಮೀಯರು ಮತ್ತೊಬ್ಬರಿದ್ದಾರೆಯೇ ಎನಿಸುತ್ತದೆ.  ಇಡೀ ವಿಶ್ವಕ್ಕೆ ಸಂತೋಷ ಕೊಟ್ಟ ಅಪರೂಪದ ವ್ಯಕ್ತಿ ಆತ.  ಚಾಪ್ಲಿನ್ನನಿಗೆ ಹೇಳಬೇಕೆನಿಸುತ್ತಿದೆ  “ಚಾಪ್ಲಿನ್ ನೀನು ಯಾವ ಲೋಕದಲ್ಲಿದ್ದರೂ ಅಲ್ಲಿನ ಜನರನ್ನು ಸಂತೋಷವಾಗಿ ಇಟ್ಟಿರುವೆ!”

ಚಾರ್ಲಿ ಚಾಪ್ಲಿನ್ ಹುಟ್ಟಿದ್ದು  ವಾಲ್ ವರ್ತ್ ಎಂಬ ಲಂಡನ್ನಿನ ಸಮೀಪದ ಊರಿನಲ್ಲಿ.  ಎಂಬತ್ತೆಂಟು ವರ್ಷ ಬದುಕಿ 1977ರ ಕ್ರಿಸ್ಮಸ್ ದಿನದಂದು ಸ್ವಿಟ್ಸರ್ಲೆಂಡಿನಲ್ಲಿ ನಿಧನನಾದ. 

‘ದಿ ಟ್ರಂಪ್’, ‘ಮಾಡರ್ನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’, ’ದಿ ಸರ್ಕಸ್’, ‘ಗೋಲ್ಡ್  ರಷ್’ ಮುಂತಾದ ಚಿತ್ರಗಳಲ್ಲಿ ಆತ ನಡೆದದ್ದು, ಕುಣಿದದ್ದು, ಪ್ರೇಮಿಸಿದ್ದು, ಆಟ ಆಡಿದ್ದು, ಪೆಚ್ಚನಂತೆ ನಕ್ಕದ್ದು, ಹೀಗೆ ಆತ ಚಿತ್ರದಲ್ಲಿ  ಮಾಡಿದ್ದು ಮತ್ತು ಮಾಡದೆ ಸುಮ್ಮನಿದ್ದದು  ಎಲ್ಲವೂ ಪ್ರಿಯವೋ ಪ್ರಿಯ. 

Saturday, April 9, 2016

ಪ್ರತಿಮಾದೇವಿ ಅವರ 84ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ !

Pratima Devi 

ಪ್ರತಿಮಾದೇವಿ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿಯರಲ್ಲಿ ಒಬ್ಬರು.   ‘ಜಗನ್ಮೋಹಿನಿ’ ಚಿತ್ರದಲ್ಲಿ ಹರಿಣಿ ಅವರಿಗೆ ಸರಿಸಾಟಿಯಾದ ಸುಂದರಿಯಾಗಿ,  ‘ದಲ್ಲಾಳಿ’ಯಲ್ಲಿ ರಾಜ್ ಕುಮಾರ್  ಅವರ ಗಯ್ಯಾಳಿ ಪತ್ನಿಯಾಗಿ ಹೀಗೆ ಹಲವಾರು ಚಿತ್ರಗಳಲ್ಲಿ ಅವರು ಚಿತ್ರರಸಿಕರ ಮನಸ್ಸನ್ನು ಗೆದ್ದವರು.  ಪ್ರತಿಮಾದೆವಿಯವರು  ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ಮಾಪಕ ನಿರ್ದೇಶಕ ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರ ಪತ್ನಿ.  ಕನ್ನಡದ ಪ್ರಸಿದ್ಧ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್, ಪ್ರಸಿದ್ಧ ನಟಿ ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪ್ರತಿಮಾದೇವಿ ಅವರ ಮಕ್ಕಳು.  ಅವರ ಮೊಮ್ಮಕ್ಕಳು ಸಹಾ ಚಿತ್ರರಂಗದಲ್ಲಿ ಭಾಗವಹಿಸಿದ್ದಾರೆ.  ಹೀಗೆ ಅವರದ್ದು ಸಂಪೂರ್ಣವಾದ ಕಲಾ ಕುಟುಂಬ.

Friday, April 8, 2016

ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ 178ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ರೆವರೆಂಡ್ ಫರ್ಡಿನೆಂಡ್ ಕಿಟೆಲರು 1832ರ ಏಪ್ರಿಲ್ 8 ರಂದು ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಿನಲ್ಲಿ ಜನಿಸಿದರು.
ರೆವರೆಂಡ್ ಫರ್ಡಿನೆಂಡ್ ಕಿಟೆಲ
ತಂದೆ ಗಾಟಫ್ರೀಟ್ ಕ್ರಿಶ್ಚಿಯನ್ ಕಿಟೆಲ್. ತಾಯಿ ತೆಯಡೋವ್ ಹೆಲೆನ್ ಹಾರ್ಬಟ್ ಫರ್ಡಿನೆಂಡ್ ಕಿಟೆಲರ ಶಾಲಾ ಶಿಕ್ಷಣ ಅಜ್ಜನ ಊರಾದ ಆರಿಶ್‌ನಲ್ಲಿ ನಡೆಯಿತು. ಅನಂತರ ಸ್ವಟ್ಜರ್ಲೆಂಡಿನ ಬಾಸೆಲ್ ನಗರದ ೧೮೫೩ರಲ್ಲಿ ಮಿಷನ್ ಸ್ಕೂಲನ್ನು ಸೇರಿ ಅಲ್ಲಿಯ ಶಿಕ್ಷಣವನ್ನು ಮುಗಿಸಿ ಗುರುದೀಕ್ಷೆ ಪಡೆದುಕೊಂಡರು. ಮಿಷನ್ ಸಂಸ್ಥೆ ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿತು. ೧೮೫೪ರ ಅಕ್ಟೋಬರ್ ೨೦ ರಂದು ಮಂಗಳೂರಿಗೆ ಮೊದಲು ಬಂದರು. ಅನಂತರ ಧಾರವಾಡದಲ್ಲಿ ನೆಲೆಸಿದರು. 
ಕಿಟೆಲರಿಗೆ ಗ್ರೀಕ್, ಲ್ಯಾಟಿನ್, ಹೀಬ್ರೂ, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಅದೇ ರೀತಿಯಲ್ಲಿ ಸ್ಥಳೀಯ ಭಾಷೆಯನ್ನು ಕಲಿಯರು ಆಸಕ್ತಿವಹಿಸಿದರು. ಆ ಕಾರಣಕ್ಕಾಗಿ ಕಿಟೆಲರು ಆ ಕಾಲಕ್ಕೆ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಮಂಗಳೂರಿಗೆ ಹೋದರು. ಅಲ್ಲಿ ಕನ್ನಡ ಭಾಷೆಯ ಅಧ್ಯಯನ ಮಾತ್ರವಲ್ಲದೆ ಜೊತೆಯಲ್ಲಿ ಸಂಸ್ಕೃತ, ತುಳು, ಮಲೆಯಾಳಂ ಭಾಷೆಗಳನ್ನು ಪರಿಚಯ ಮಾಡಿಕೊಂಡರು.

Sunday, April 3, 2016

ಪ್ರಭುದೇವ ಅವರ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ

Dancing Miracle Prabhudeva 
ಭಾರತೀಯ ಚಿತ್ರರಂಗ ಕಂಡ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ಪ್ರಭುದೇವ ಏಪ್ರಿಲ್ 3, 1973 ರಲ್ಲಿ ಮೈಸೂರಿನಲ್ಲಿ ಜನಿಸಿದರು.  ನಾಟ್ಯದಲ್ಲಂತೂ ಆತ ಮಾಡದಂತಹ ನಾಟ್ಯವೇ ಇಲ್ಲ.  ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆತ ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ.   ಸಾಮಾನ್ಯವಾಗಿ ಒಬ್ಬ ನಟ ಜನಪ್ರಿಯನಾದಾಗ ಅದಕ್ಕೆ ಹೋಲಿಕೆಗಳೂ ಹುಟ್ಟಿಕೊಳ್ಳುತ್ತವೆ.  ಪ್ರಭುದೇವನನ್ನು ಕುರಿತು ಹೇಳುವಾಗ ಮೈಖೆಲ್ ಜಾಕ್ಸನ್ ಹೆಸರನ್ನು ಭಾರತೀಯರು ಯೋಚಿಸುವುದು ಅಘೋಷಿತ ವಾಡಿಕೆಯೇ ಆಗಿದೆ.  ಅದೇನೇ ಇರಲಿ ಪ್ರಭುದೇವ ಭಾರತೀಯ ಚಿತ್ರರಸಿಕರ ಮನದಲ್ಲಿ ಮೂಡಿಸಿರುವ ನಾಟ್ಯದ ಕ್ರೇಜ್ ಅನ್ನಲಂತೂ ಅಲ್ಲಗೆಳೆಯುವಂತಿಲ್ಲ. ಸಾಮಾನ್ಯವಾಗಿ ಇಂಥಹ ಕ್ರೇಜ್ ಎಂಬುದು ಕೆಲವೊಂದು ಕಲಾವಿದರ ಬಗ್ಗೆ ಕೆಲವೊಂದು ಸೀಮಿತ ಅವಧಿಗೆ ಕೇಳಿ ಬರುವಂತಹ ಮಾತಾಗಿರುತ್ತದೆ.  ಆದರೆ ಪ್ರಭುದೇವ 1988ರ ವರ್ಷದಲ್ಲಿ ಚಿತ್ರರಂಗಕ್ಕೆ ಬಂದಾಗಲಿಂದ ಸುದೀರ್ಘ ಅವಧಿಯವರೆಗೆ ತಮ್ಮ ಪ್ರತಿಭೆ ಮತ್ತು ಜನಪ್ರಿಯತೆಗಳೆರಡನ್ನೂ ಅಪೂರ್ವವೆಂಬಂತೆ ಕಾಯ್ದುಕೊಂಡಿದ್ದಾರೆಂಬುದು ಅವರ ಹೆಗ್ಗಳಿಕೆ.