ಕನ್ನಡದ ಜನಪ್ರಿಯ ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ಅವರಿಗೆ 2010ನೇ ಸಾಲಿನ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಪ್ರಥಮ ಬಾರಿಗೆ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ದೊರೆಕಿಸಿಕೊಟ್ಟ ಕೀರ್ತಿ ಈ ಮೇರು ಲೇಖಕರಿಗೆ ಸಲ್ಲುತ್ತದೆ.
ಭೈರಪ್ಪ ಅವರು 2002ರಲ್ಲಿ ಬರೆದ 'ಮಂದ್ರ' ಕಾದಂಬರಿಯನ್ನು ಸುಪ್ರೀಂಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಜಿಬಿ ಪಟ್ನಾಯಕ್ ನೇತೃತ್ವದ ಸಮಿತಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಿ ಕೆಕೆ ಬಿರ್ಲಾ ಫೌಂಡೇಶನ್ ಗೆ ಶಿಫಾರಸ್ಸು ಮಾಡಲಾಗಿತ್ತು.
ರಾಜ್ಯಸಭೆ ಸದಸ್ಯ ಕರಣ್ ಸಿಂಗ್ ಮತ್ತು ಕೆ.ಕೆ.ಬಿರ್ಲಾ ಪ್ರತಿಷ್ಠಾನದ ಅಧ್ಯಕ್ಷೆ ಶೋಭನಾ ಭಾರ್ತಿಯಾ ಅವರು ಭೈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.