Translate in your Language

Monday, March 17, 2014

ಡಿ.ವಿ.ಜಿ. ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

  1. ಡಿ.ವಿ.ಜಿ. -ಅಸಾಧಾರಣ ಪತ್ರಕರ್ತ, ಕವಿ  
  2. Born: March 17, 1887, Died: October 7, 1975
  3.  D.V.Gಕನ್ನಡ ಪತ್ರಿಕೋದ್ಯಮ ಇಂದು ಬೃಹದಾಕಾರವಾಗಿ ಬೆಳೆದಿದೆ. ಸುಮಾರು ಒಂದೂವರೆ ಶತಕದ ಸುದೀರ್ಘ ಇತಿಹಾಸದ ಪತ್ರಿಕೋದ್ಯಮ ಇಷ್ಟು ಹುಲುಸಾಗಿ ಬೆಳೆಯಲು ಹಲವರ ಶ್ರಮ ಸಾಧನೆಯೇ ಕಾರಣ. ಇಂಥ ಸಾಧಕರಲ್ಲಿ ಡಿವಿಜಿ ಅಗ್ರಗಣ್ಯರು.

    ಡಿವಿಜಿ ಎಂಬ ಉಪನಾಮದಿಂದಲೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (ಡಿ.ವಿ.ಗುಂಡಪ್ಪ) ಜನಮನದಲ್ಲಿ ಹಸಿರಾಗಿ ಉಳಿದಿರುವುದು ಅವರ ಅನುಪಮ ಹಾಗೂ ವಿಚಾರಪೂರ್ಣ ಲೇಖನ, ಬರಹಗಳಿಂದ. ಆದರೆ, ಡಿವಿಜಿ ಸಮಾಜಸೇವೆ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ವ್ಯವಸಾಯ ಅವರ ಸಾಹಿತ್ಯ ಸೇವೆಯಷ್ಟೇ ಮಿಗಿಲು.

    ಡಿ.ವಿ.ಜಿ. ಅವರನ್ನು ಅವರ ಸರೀಕರೊಬ್ಬರು ತಮ್ಮ ಮಿತ್ರರಿಗೆ ಪರಿಚಯಿಸುತ್ತಾ.. ಇವರು ಗುಂಡಪ್ಪ ದೊಡ್ಡ ಸಾಹಿತಿ ಎಂದಾಗ ಮಧ್ಯೆಯೇ ತಡೆದ ಡಿ.ವಿ.ಜಿ., ಕ್ಷಮಿಸಿ ನಾನು ಮೊದಲು ಪತ್ರಕರ್ತ, ಜನಕ್ಕೆ ಯಾವುದೋ ಸಂಗತಿಗಳನ್ನು ವಿಷದವಾಗಿ ತಿಳಿಸಬೇಕೆಂಬ ಮಾನಸಿಕ ಒತ್ತಡ ಉಂಟಾದಾಗ ಪದ್ಯಗಳೋ, ಪ್ರಬಂಧಗಳೋ ನಂದ ಹುಟ್ಟಿಕೊಂಡಿವೆ ಅಷ್ಟೇ. ನಾನು ಸಾಹಿತ್ಯ ಕ್ಷೇತ್ರಕ್ಕೆ ಒಬ್ಬ ಆಗಂತುಕ ಎಂದು ಹೇಳಿದರಂತೆ.



    ಡಿವಿಜಿ ಅವರಿಗೆ ತಾವು ಪತ್ರಕರ್ತ ಎಂಬ ಬಗ್ಗೆ ಹಮ್ಮೆಯಿತ್ತು. ಗೌರವವಿತ್ತು, ಅಭಿಮಾನವಿತ್ತು. ಡಿ.ವಿ.ಜಿ. ಒಬ್ಬ ಅಸಾಮಾನ್ಯ ಪತ್ರಕರ್ತ. ಅವರು ಅವಕಾಶ ಸಿಕ್ಕಾಗಲೆಲ್ಲಾ ತಮ್ಮನ್ನು ತಾವು ಒಬ್ಬ ಪತ್ರಕರ್ತ ಎಂದು ಹೇಳಿಕೊಂಡಿದ್ದಾರೆ. ತಮ್ಮ ಪತ್ರಿಕೋದ್ಯಮದ ಅನುಭವ ಹಾಗೂ ವೃತ್ತ ಪತ್ರಿಕಾ ಧರ್ಮವನ್ನು ಸಮೀಕರಿಸಿ ‘ವೃತ್ತಪತ್ರಿಕೆ’ಎಂಬ ಕೃತಿಯನ್ನೂ ಬರೆದಿದ್ದಾರೆ. ಇದು ಹೊಸದಾಗಿ ಪತ್ರಿಕೋದ್ಯಮ ಪ್ರವೇಶಿಸುವವರಿಗೆ ಜ್ಞಾನದೀವಿಗೆಯಾಗಿದೆ.


    ಡಿವಿಜಿ ಅವರಿಗೆ ಪತ್ರಿಕೋದ್ಯಮದ ಬಗ್ಗೆ ಒಲವು ಬಂದದ್ದು ಹೇಗೆ ಗೊತ್ತೆ? ಕೋಲಾರದಲ್ಲಿ ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದಾಗ ದೃಷ್ಟಿದೋಷವಿದ್ದ ಅಲ್ಲಿನ ಸಬ್ ರಿಜಿಸ್ಟ್ರಾರ್‌ರಿಗೆ ಪ್ರತಿದಿನ ಮದ್ರಾಸ್ ಮೇಲ್ ಪತ್ರಿಕೆ ಓದಿ ಹೇಳುವ ಕೆಲಸ ಡಿ.ವಿ.ಜಿ ಯವರದ್ದಾಗಿತ್ತು. ಆ ಸಂದರ್ಭದಲ್ಲಿ ಈ ಪತ್ರಿಕೆ ಓದಲು ದೊರೆತ ಅವಕಾಶವೇ ಮ್ಮನ್ನು ಪತ್ರಕರ್ತನನ್ನಾಗಿಸುತ್ತದೆ ಎಂಬ ಕಲ್ಪನೆಯೂ ಅವರಿಗಿರಲಿಲ್ಲ. ಆದರೆ, ಕನ್ನಡಮ್ಮನ ಸೌಭಾಗ್ಯ ಅವರನ್ನು ಈ ಕ್ಷೇತ್ರಕ್ಕ ಎಳೆದು ತಂದಿತು.

    ಓದಿಗೆ ಅಷ್ಟು ಮಹತ್ವ ಡದ ಡಿವಿಜಿ ಸಾಹಿತ್ಯ, ಪತ್ರಿಕೋದ್ಯಮದಲ್ಲಿ ಅಪ್ರತಿಮರಾಗಿ ಬೆಳೆದರು. ವೃತ್ತಿಗಾಗಿ ಬೆಂಗಳೂರಿನ ಎಲ್ಲಾ ರಸ್ತೆಗಳನ್ನೂ ಸುತ್ತಾಡಿದ ಗುಂಡಪ್ಪನವರು ನವರತ್ನ ಅನಂತ ರಾಮರಾಯರೂ, ಪ್ರಹ್ಲಾದ ರಾಯರೂ ತರುತ್ತಿದ್ದ ಸೂರ್ಯೋದಯ ಪ್ರಕಾಶಿಕಾ ವಾರಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಡಿವಿಜಿ ಅವರ ಪತ್ರಿಕಾ ವ್ಯವಸಾಯ ಆರಂಭವಾದದ್ದು ಇಲ್ಲಿಂದಲೇ. ಸೂರ್ಯೋದಯದಲ್ಲಿ ಕೆಲಸ ಮಾಡುತ್ತಿದ್ದಾಗಲೇ, ಅವರು, ಬೆಂಗಳೂರು ಕಂಟೋನ್‌ಮೆಂಟ್ ನಿಂದ ಪ್ರಕಟವಾಗುತ್ತಿದ್ದ ಈವ್ನಿಂಗ್ ಮೇಲ್‌ಗೂ ಲೇಖನ ಬರೆಯುತ್ತಿದ್ದರು. ಆನಂತರದ ದಿನಗಳಲ್ಲಿ ನಡೆಗನ್ನಡಿ, ಮೈಸೂರು ಸ್ಟಾಂಡರ್ಡ್‌ಗೂ ತಮ್ಮ ಲೇಖನ ಸೇವೆ ಸಲ್ಲಿಸಿದರು.

    ಕಾರಣಾಂತರಗಳಿಂದ ಸೂರ್ಯೋದಯ ಪ್ರಕಾಶಿಕ  ನಂತರ ಡಿವಿಜಿ ನವರತ್ನ ಕೃಷ್ಣ ಸ್ವಾಮಿಯವರೊಡಗೂಡಿ ಭಾರತಿ ಎಂಬ ಕನ್ನಡ ದಿನಪತ್ರಿಕೆ ಆರಂಭಿಸಿದರು. ೧೯೩೨ರಲ್ಲಿ ಮೈಸೂರು ಪತ್ರಿಕೋದ್ಯಮಿಗಳ ಸಂಘವನ್ನು ಸ್ಥಾಪಿಸಿ ೧೯೩೪ರವರೆಗೆ ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಇಂದು ಇದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂಬ ಹೆಸರಿಂದ ಜನಪ್ರಿಯವಾಗಿದೆ. ವೃತ್ತಿ ಸಂಘಟನೆಯಾಗಿ, ಕಾರ್ಮಿಕ ಸಂಘಟನೆಯಾಗಿ ಕರ್ತವ್ಯರತವಾಗಿದೆ.

    ೧೯೦೮ರಲ್ಲಿ ದಿವಾನ್ ವಿ.ಪಿ. ಮಾಧವರಾಯರ ಸರ್ಕಾರ ಪತ್ರಿಕಾ ರ್ಬಂಧ ಕಾನೂನು ಜಾರಿಗೆ ತಂದಾಗ ಹೆಚ್ಚೂ ಕಡಿಮೆ ಎಲ್ಲಾ ಪತ್ರಿಕೆಗಳೂ ಮುಚ್ಚುವುದು ಅವಾರ್ಯವಾಯಿತು. ಆಗ ಸ್ವಾತಂತ್ರ್ಯವೇ ಪತ್ರಿಕೆಯ ಪ್ರಾಣವಾಯು ಎಂದು ಪತ್ರಿಕಾ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಡಿವಿಜಿ ಮದರಾಸಿಗೆ ತೆರಳಿ ಮೈಸೂರು ಶಾಸನವನ್ನು ವಿರೋಧಿಸಿ ಬರೆದ ಲೇಖನಗಳ ಸಂಕಲನ ಸಿದ್ಧಪಡಿಸಿ ಪ್ರೇಸ್‌ಗ್ಯಾಗ್ ಇನ್ ಮೈಸೂರು ಎಂದು ಪ್ರಕಟಿಸಿದರು. ಡಿವಿಜಿ ಅವರು ಮದ್ರಾಸಿಗೆ ತೆರಳಿದ ಪರಿಣಾಮವಾಗಿ ಅಲ್ಲಿ ಹಿಂದೂ, ಇಂಡಿಯನ್ ಪೆಟ್ರಿಯಾಟ್ ಮೊದಲಾದ ಪತ್ರಿಕೆಗಳ ಸಂಪರ್ಕ ದೊರಕಿತು. ಹತ್ತಾರು ವರ್ಷಗಳ ಕಾಲ ಆ ಪತ್ರಿಕೆಗಳಲ್ಲೂ ಡಿವಿಜಿ ಸೇವೆ ಸಲ್ಲಿಸಿದರು.

    ಆನಂತರ ೧೯೦೯ರಲ್ಲಿ ಎನ್.ಎಸ್. ರಾಮಸ್ವಾಮಿ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ಮೈಸೂರು ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಗೆ ಡಿವಿಜಿ ಸಹಾಯಕ ಸಂಪಾದಕರಾದರು. ಆ ಪತ್ರಿಕೆಯಲ್ಲಿ ಬರೆದ ಷ್ಟುರ ವರದಿಯ ಬಗ್ಗೆ ಸಂಪಾದಕರು ಕ್ಷಮೆ ಕೋರುವಂತೆ ಒತ್ತಾಯಿಸಿದಾಗ ಸ್ವಾಭಿಮಾಯಾದ ಡಿವಿಜಿ ಅಲ್ಲಿ ಕೆಲಸ ಬಿಟ್ಟರು.

    ೧೯೨೮ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ಪ್ರಥಮ ಅಖಿಲ ಕರ್ನಾಟಕ ವೃತ್ತ ಪತ್ರಿಕಾಕರ್ತರ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಡಿವಿಜಿ ತಮ್ಮ ಭಾಷಣದಲ್ಲಿ ಪತ್ರಿಕೋದ್ಯಮಿಗೆ ಒಂದು ಜೀವನ ಸಿದ್ಧಾಂತವಿರಬೇಕು. ಆತಗೆ ಸ್ವಂತವಾದ ಒಂದು ಸ್ವಂತ ತತ್ವ ಕಾರುಬಾರು ಇದ್ದರೆ ಮಾತ್ರ ಆತನ ವಿಚಾರಧಾರೆ ಸಮಂಜಸ ಹೀಗಾಗಿ ಮೊದಲು ಆತ ಮಾನವ ಜೀವನ ರಹಸ್ಯವನ್ನು ಮೊದಲು ಸ್ವಲ್ಪವಾದರೂ ಅರಿತಿರಬೇಕು ಎಂದು ಪ್ರತಿಪಾದಿಸಿದರು. ಇದು ಅವರಿಗೆ ಪತ್ರಿಕೋದ್ಯಮದ ಬಗ್ಗೆ ಇದ್ದ ಪ್ರಾಮಾಣಿಕ ಸಂಬಂಧವನ್ನು ಪ್ರಚುರಪಡಿಸುತ್ತದೆ.

    ಮೈಸೂರು ಟೈಮ್ಸ್‌ನಲ್ಲಿ ಕೂಡ ಡಿವಿಜಿ ಅವರಿಗೆ ಸ್ವಾತಂತ್ರ್ಯ ದೊರಕದಾದಾಗ, ತಮ್ಮದೇ ಆದ ಸ್ವಂತ ಪತ್ರಿಕೆ ಹೊರತರಲು ರ್ಧರಿಸಿದರು. ಆಗ ಮೈಸೂರು ದಿವಾನರಾಗಿದ್ದ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರು ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಪತ್ರಿಕೆ ನಡೆಸಲು ಅವಕಾಶ ಮಾಡಿಕೊಟ್ಟದ್ದು ಡಿವಿಜಿ ಅವರಿಗೆ ಸ್ಫೂರ್ತಿ ನೀಡಿತ್ತು. ಇದು ಕರ್ನಾಟಕ ಪತ್ರಿಕೆಯ ಉದಯಕ್ಕೆ ಕಾರಣವಾಯಿತು.

    ಸ್ವಾತಂತ್ರ್ಯದ ಕಹಳೆ ಎಲ್ಲೆಲ್ಲೂ ಮೊಳಗುತ್ತಿದ್ದ ಆ ಕಾಲದಲ್ಲಿ ಬ್ರಿಟಿಷರ ವಿರುದ್ಧವೂ ಖಾರವಾಗಿಯೇ ಬರೆಯುತ್ತಿದ್ದ ಡಿವಿಜಿ ಅವರು ಸ್ವಾತಂತ್ರ್ಯ ಚಳವಳಿಗೆ ಪತ್ರಿಕಾ ಕ್ಷೇತ್ರದಿಂದ ಸಲ್ಲಿಸಿದ ಸೇವೆಯೂ ಅಪಾರ. ನಮ್ಮ ಪತ್ರಿಕೆಗಳೂ ಸ್ವಂತಿಕೆ ರೂಢಿಸಿಕೊಳ್ಳಬೇಕು. ನಮ್ಮ ಸಮಾಜ ಸಂದರ್ಭಗಳಿಗೆ ತಕ್ಕಂತೆ ಮತ್ತು ನಮ್ಮ ಜನದ ಮನಃಸ್ವಭಾವ ಸಂಪ್ರದಾಯ ಸಂಸ್ಕೃತಿಗೆ ಒಗ್ಗಿಕೊಂಡು ಪತ್ರಿಕೆ ನಡೆಯಬೇಕೇ ಹೊರತು ಅನ್ಯ ದೇಶದ ಅನುಕರಣೆಯಿಂದಲ್ಲ ಎಂಬ ಅಛಲ ನಿಲುವು ಡಿವಿಜಿ ಅವರದಾಗಿತ್ತು.

    ಕರ್ನಾಟಕ ಪತ್ರಿಕೆ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿಯಾಯಿತು. ಜೊತೆಗೆ ಗ್ರಾಮಾಂತರ ಪ್ರದೇಶದ ಸುದ್ದಿಗೂ ಪ್ರಾಮುಖ್ಯತೆ ಡುತ್ತಿತ್ತು. ಗುಬ್ಬಿ ನೋಟ್ಸ್, ಚನ್ನರಾಯಪಟ್ಟಣ ನೋಟ್ಸ್ ಹೀಗೆ ವಿವಿಧ ಪ್ರದೇಶಗಳ ಸುದ್ದಿಗೆ ಡಿವಿಜಿ ತಮ್ಮ ಪತ್ರಿಕೆಯಲ್ಲಿ ಪ್ರತ್ಯೇಕ ಜಾಗವನ್ನೇ ಮೀಸಲಿಟ್ಟಿದ್ದರು. ಇದು ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿತು. ಕಾರಣಾಂತರಗಳಿಂದ ಈ ಪತ್ರಿಕೆ ಕೂಡ ಅವಸಾನ ಕಂಡಿತು. ಆದರೆ, ಪತ್ರಕರ್ತನಾಗಿ ಹಲವು ವರ್ಷ ಸೇವೆ ಸಲ್ಲಿಸಿದ ಡಿವಿಜಿ ಅವರಿಗೆ ಬರವಣಿಗೆ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ಕಷ್ಟವಾದಾಗ ದಿ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್ ಎಂಬ ಹೊಸ ಪತ್ರಿಕೆ ಆರಂಭಿಸಿದರು. ಈ ಪತ್ರಿಕೆ ಸಾಮಾಜಿಕ, ಲೌಕಿಕ, ಪಾರಮಾರ್ಥಿಕ, ಧಾರ್ಮಿಕ ಆರ್ಥಿಕ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳ ಸುದ್ದಿಯ ಸಂಗಮವಾಗಿತ್ತು.

    ಈ ಮಧ್ಯೆ ಪತ್ನಿಯ ಸಾವು, ಮತ್ತಿತರ ಕಾರಣದಿಂದ ಡಿವಿಜಿ ಹಲವು ವರ್ಷ ಪತ್ರಿಕೋದ್ಯಮದಿಂದ ದೂರ ಉಳಿದರು. ಪುನಾ ೧೯೪೯ರಲ್ಲಿ ಡಿವಿಜಿ ಪತ್ರಿಕೋದ್ಯಮಕ್ಕೆ ಮರಳಿದರು. ತಮ್ಮ ಕೊನೆಯ ಉಸಿರಿರುವರೆಗೂ ದಿ ಪಬ್ಲಿಕ್ ಆಫೇರ್ಸ್ ಎಂಬ ಪತ್ರಿಕೆ ಸಂಪಾದಿಸಿದರು. ಈ ನಡುವೆ ೬೦ ವರ್ಷಗಳ ಕಾಲ ಸಾಹಿತ್ಯ ಕೃಷಿ ಮಾಡಿದ ಡಿವಿಜಿ ಜಗತ್ತಿನ ಸಂಕೀರ್ಣತೆಯ ಮರ್ಮಗಳ ಅರ್ಥವನ್ನು ಹುಡುಕಿ ವಿದ್ವತ್ತು -ರಸಿಕತೆಯ ಸಂಗಮವಾಗಿ ಪರಿಪೂರ್ಣ ಪುರುಷರೆಸಿಕೊಂಡು ಧನ್ಯರಾದರು.          ---ಟಿ.ಎಂ.ಸತೀಶ್

  4. ಉಪಯುಕ್ತ
    ಡಿ.ವಿ.ಜಿ ಅವರ ಭಾವಗೀತೆಗಳು
  5. ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ


No comments:

Post a Comment