Translate in your Language

Thursday, April 30, 2015

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ 54ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು:


ಕ್ರೇಜಿಸ್ಟಾರ್‌ ರವಿಚಂದ್ರನ್‌ (ಜನನ: ಮೇ 30, 1961)

"ಪ್ರೇಮಲೋಕ"ದ ಮೂಲಕ ಕನ್ನಡ ಚಿತ್ರರಂಗದಲ್ಲಿಯೇ ಹೊಸತನದ ಸೃಷ್ಟಿಸಿ ಭಾರತೀಯ ಚಿತ್ರರಂಗವೇ ಕನ್ನಡದತ್ತ ಹುಭ್ಭೇರಿಸಿ ನೋಡುವಂತೆ ಮಾಡಿದ ಕೀರ್ತಿ  ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರದು.ಇದಕ್ಕೂ ಮುನ್ನವೇ ನಾಯಕ ನಟನಾಗಿ ಫ್ರಳಯಾಂತಕ, ನಾನೆ ರಾಜ, ನಾನು ನನ್ನ ಹೆಂಡತಿ ಮುಂತಾದ ಚಿತ್ರಗಳಲ್ಲಿ ಮಿಂಚಿ ಕನ್ನಡ ಚಿತ್ರರಸಿಕರ ಮನದಲ್ಲಿ ನೆಲೆಯೂರಿದ ಕ್ರೇಜಿಸ್ಟಾರ್‌ ರವಿಚಂದ್ರನ್‌  ಅವರಿಗೆ ೫೪ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಎಲ್ಲಾ ಚಿತ್ರಗಳಲ್ಲಿ ಇಷ್ಟ್ವಾಗೋ ಗೀತೆಗಳು, ಝಗಮಗಿಸುವ ಅದ್ದೂರಿ ಸೆಟ್ಗಳಲ್ಲಿಯ ದೃಶ್ಯಗಳು ಸದಾ ಪ್ರೇಕ್ಷಕರ ಮನದಲ್ಲಿ ನೆಲೆಯೂರಿಬಿಡುತ್ತಿದ್ದವು.  ಪ್ರಳಯಾಂತಕ ಚಿತ್ರದ "ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..." ಆ ಕಾಲದ ಪಡ್ಡೆ ಹುಡುಗರೆಲ್ಲರ ಬಾಯಲ್ಲಿ ನಲಿದಾಡುತಿತ್ತು

ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಇದೊಂದು ಹಬ್ಬ. "ಪ್ರೇಮಲೋಕ'ದ ದೊರೆಗೆ ಶುಭಕೋರಲು ಅವರ ಮನೆಮುಂದೆ ಅಭಿಮಾನಿಗಳು ಸೇರುವುದೇನು ಹೊಸದಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರವಿಚಂದ್ರನ್‌, ತಮ್ಮ ಸಿನಿಮಾ ಕೆಲಸಗಳಲ್ಲೇ ಬಿಝಿಯಾಗುತ್ತಾರೆ. ಅದೇನೇ ಆದರೂ ಅವರ ಅಭಿಮಾನಿಗಳು ಮಾತ್ರ ಕೇಕ್‌ ಹಿಡಿದು ಕ್ರೇಜಿಸ್ಟಾರ್‌ ಮನೆಗೆ ಹೋಗಿ ವಿಶ್‌ ಮಾಡದೇ ಬರುವುದಿಲ್ಲ.

Friday, April 24, 2015

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 86 ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ 24, 1929 - ಮರಣ: ಏಪ್ರಿಲ್ 12, 2006
ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. Read more

Thursday, April 16, 2015

ಜಗತ್ತಿನ ಹಾಸ್ಯ ಚಕ್ರವರ್ತಿ ಚಾಪ್ಲಿನ್ ಅವರ 126ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ !

ನಮ್ಮ ದೇಶದ ಖ್ಯಾತ ನಟರಾದ ರಾಜಕಪೂರ್, ಕಮಲಹಾಸನ್, ರಜನಿಕಾಂತ, ಆಮಿರಖಾನ್,  ಅಷ್ಟೇ ಏಕೆ  ಜಗತ್ತಿನ ಅದ್ವಿತೀಯ ನಟರಿಗೆಲ್ಲಾ ಮೆಚ್ಚುವ ಜಗತ್ತಿನ ಏಕೈಕ ನಟ/ನಿರ್ದೇಶಕ/ನಿರ್ಮಾಪಕ  "ಚಾರ್ಲಿ ಚಾಪ್ಲಿನ್" ಈ ಶತಮಾನ ಕಂಡ ಜಗತ್ತಿನ  ಅತ್ಯಂತ ಶ್ರೇಷ್ಟ ಹಾಸ್ಯ ಚಕ್ರವರ್ತಿ. 

ಅದ್ಭುತ ನಟನೆ, ವಿಚಿತ್ರ ಮ್ಯಾನರಿಸಂ ಮತ್ತು ಹಾವಭಾವಗಳಿಂದ ಇಡೀ ಜಗತ್ತನ್ನು ನಕ್ಕು ನಲಿಸಿದ ಹಾಸ್ಯ ಚಕ್ರವರ್ತಿ (ಸರ್ ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್) ಚಾರ್ಲಿ ಚಾಂಪ್ಲಿನ್ ಹುಟ್ಟಿ ಏಪ್ರಿಲ್ 16ಕ್ಕೆ ಭರ್ತಿ 126 ವರ್ಷ. ಚಾಪ್ಲಿನ್ ಜನಿಸಿದ್ದು 1889ರ ಏಪ್ರಿಲ್ 16ರಂದು ಲಂಡನ್ ನಲ್ಲಿ. ಚಾಪ್ಲಿನ್ ಇಂದಿಗೂ ಜೀವಂತ. ಎಂದಿಗೂ ನಕ್ಕುನಗಿಸುತ್ತಲೇ ಇರುತ್ತಾರೆ ಅವರ ಚಿತ್ರಗಳ ಮುಖಾಂತರ.  ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೂ ಹಾಸ್ಯ ನಟ ಮತ್ತು ಚಿತ್ರ ನಿರ್ದೇಶಕನಾಗಿ ಬೆಳೆದ ಪರಿ ಅಮೋಘ. ಅವನು ಸಂಗೀತ ನಿರ್ದೇಶಕ ಕೂಡ ಆಗಿದ್ದ. ಮನದೊಳಗೆ ನೋವಿನ ಸಾವಿರ ಕಂತೆಗಳನ್ನಿಟ್ಟುಕೊಂಡರೂ ಜನಮಾನಸದಲ್ಲಿ ನಗುವಿನ ಹಣತೆಯನ್ನು ಮೂಡಿಸಿದ ಅವನಿಗೆ ಇಡೀ ಜಗತ್ತೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದೆ. ಸೀರಿಯಸ್ ಟ್ರಾಂಪ್ ಚಾರ್ಲಿಗೆ ಶುಭಾಶಯ ಹೇಳುತ್ತಿರುವ ನಮ್ಮ ಜತೆ ನೀವೂ ಸೇರಿಕೊಳ್ಳಿರಿ. ಪುಟ್ಟಮಕ್ಕಳಿಂದ ಹಿಡಿದು ಮುದುಕರವರೆಗೂ ಚಾಪ್ಲಿನ್ ನನ್ನು ಇಷ್ಟಪಡದವರು ಇರಲಿಕ್ಕಿಲ್ಲ. ಸಮಾಜದ ಅಂಕುಡೊಂಕುಗಳನ್ನು, ಯಾಂತ್ರಿಕ ಬದುಕನ್ನು, ಮುಖವಾಡಗಳನ್ನು ಬೆತ್ತಲೆಗೊಳಿಸುವುದರಲ್ಲಿ ಚಾರ್ಲಿ ನಿಸ್ಸೀಮ. ದಿ ಸರ್ಕಸ್ ಎಂಬ ಸಿನಿಮಾದಲ್ಲಿ ಸಿಂಹದ ಬೋನಿನೊಳಗೆ ಸಿಕ್ಕಿ ಅನುಭವಿಸಿದ ಪರಿಪಾಟಲು, ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ ಹಿಟ್ಲರ್ ನ ಬಗ್ಗೆ ಒಂದು ಬಲೂನ್ ಮೂಲಕ ಮಾಡಿದ ವಿಡಂಬನೆ, ಸರ್ಕಸ್ ಸಿನಿಮಾದಲ್ಲಿನ ಅತ್ಯದ್ಬುತ ನಟನೆ ನಾವಂತೂ ಮರೆಯುವುದಿಲ್ಲ. ಚಾಪ್ಲಿನ್ ಪ್ರಮುಖ ಚಿತ್ರಗಳೆಂದರೆ ದಿ ಕಿಡ್(1920), ಗೋಲ್ಡ್ ರಷ್(1924), ದಿ ಸರ್ಕಸ್(1928), ಸಿಟಿ ಲೈಟ್ಸ್(1931), ಮಾಡರ್ನ್ ಟೈಮ್ಸ್(1936), ದಿ ಗ್ರೇಟ್ ಡೈರೆಕ್ಟರ್(1940) ಲಥಮ್ ಲೈಟ್(1952). ಇವರು 1940ರವರೆಗೆ ಕೇವಲ ಮೂಕಿ ಚಿತ್ರದಲ್ಲೇ ಜಗತ್ತನ್ನು ನಗಿಸಿದರು. "ನಮ್ಮ ಸಮಸ್ಯೆಯಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ", "ಬದುಕಿನಲ್ಲಿ ನಗದ ದಿನ ವ್ಯರ್ಥ" ಮತ್ತು "ನನಗೆ ಮಳೆಯಲ್ಲಿ ನಡೆಯಲು ಇಷ್ಟ, ಯಾಕೆಂದರೆ ನಾನು ಅಳುವುದು ಯಾರಿಗೂ ಕಾಣದು" ಎಂಬುದು ಆತ ಉದುರಿಸಿದ ಕೆಲವು ಅಣಿಮುತ್ತುಗಳು.