ಶ್ರೀಮತಿ.ಕಸ್ತೂರಿ ಶಂಕರ್ |
ಕನ್ನಡದ ಕಸ್ತೂರಿ ಶಂಕರ್ ಹುಟ್ಟಿದ್ದು ಕನ್ನಡ ರಾಜ್ಯೋತ್ಸವ ದಿನ ನವೆಂಬರ್ 1 ರಂದು, ಹುಟ್ಟಿದ ದಿನ, ಇಟ್ಟ ಹೆಸರು ಮತ್ತು ಅವರು ಹಾಡಿರುವ ಹಾಡುಗಳು ಎಲ್ಲವೂ ಕನ್ನಡ ಕಸ್ತೂರಿಗೆ ಅನ್ವರ್ಥಕವೇ,
ಕನ್ನಡದ ಸುಪ್ರಸಿದ್ಧ ಗಾಯಕಿ ಕಸ್ತೂರಿ ಶಂಕರ್ ಅವರು 1950ರ ನವೆಂಬರ್ 1ರ ದಿನದಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಉತ್ತಮ ಬರಹಗಾರರೂ ಆದ ಜಿ.ಸಿ. ಶಂಕರಪ್ಪನವರು. ತಾಯಿ ಗಿರಿಜಾ ಶಂಕರ್. ಅಪ್ಪಟ ಗಾಂಧೀವಾದಿಯಾಗಿದ್ದ ಶಂಕರಪ್ಪನವರು ಕಸ್ತೂರಿಬಾ ಗಾಂಧಿ ಅವರ ನೆನಪಿನಲ್ಲಿ ಅವರಿಗೆ ಕಸ್ತೂರಿ ಎಂದು ಹೆಸರಿಟ್ಟರಂತೆ. ಕಸ್ತೂರಿ ಅವರು ಚಿಕ್ಕಂದಿನಿಂದಲೇ ಭಕ್ತಿಗೀತೆಗಳನ್ನೂ, ತಂದೆಯವರು ರಚಿಸಿದ್ದ ಭಕ್ತಿಗೀತೆಗಳನ್ನೂ ಹಾಡುತ್ತಿದ್ದರು.