ಭಾರತದ ಮಹಾನ್ ಮೇಧಾವಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಜನಿಸಿದ ದಿನ ಡಿಸೆಂಬರ್ 22, 1887. ಈ ಮಹಾನ್ ಗಣಿತಜ್ಞರು ಜನಿಸಿದ ದಿನವನ್ನು ಭಾರತದ ರಾಷ್ಟ್ರೀಯ ಗಣಿತದ ದಿನವನ್ನಾಗಿ ಆಚರಿಸಲಾಗುತ್ತಿದೆ.
ಒಮ್ಮೆ ಆಸ್ಪತ್ರೆಯಲ್ಲಿದ್ದ ಒಬ್ಬ ಗೆಳೆಯನನ್ನು ನೋಡಲು ಒಬ್ಬ ಆಗಂತುಕ ಆಗಮಿಸಿದ. “ನೀನು ಹೇಗಿದ್ದೀಯ?” ಎಂದು ಆಗಂತುಕ ಆತುರ ಮತ್ತು ಒಲವಿನ ದನಿಯಲ್ಲಿ ಕೇಳಿದ.
“ಪರವಾಗಿಲ್ಲ, ನಿಮಗೆ ಧನ್ಯವಾದ” ಹಾಸಿಗೆಯಲ್ಲಿ ಮಲಗಿದ್ದ ರೋಗಿ ಉತ್ತರಿಸಿದ.
ಆದರೆ ಆತನಿಗೆ ಇದರಿಂದ ತೃಪ್ತಿಯಾಗಲಿಲ್ಲ. ರೋಗಿಯ ಮುಖ ಮಾರಕ ವ್ಯಾಧಿಯ ವಿರುದ್ಧ ಆತನ ಬಲವಾದ ಹೋರಾಟವನ್ನು ಸೂಚಿಸುತ್ತಿತ್ತು. ಕೆಲವು ಕ್ಷಣಗಳ ಬಳಿಕ ಆತ ಮತ್ತೆ ಮುಂದುವರೆಸಿದ: