Translate in your Language

Saturday, December 5, 2015

ಜಿ.ಪಿ.ರಾಜರತ್ನಂ ಅವರ 108ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ

ಜಿ.ಪಿ.ರಾಜರತ್ನಂ
ಜಿ.ಪಿ.ರಾಜರತ್ನಂರವರು 1908ರ ಡಿಸೆಂಬರ್ 5 ರಂದು ರಾಮನಗರದಲ್ಲಿ ಜನಿಸಿದರು. ತಂದೆ ಜಿ.ಕೆ. ಗೋಪಾಲಕೃಷ್ಣ ಅಯ್ಯಂಗಾರ್. ೧೯೨೮ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ; ೧೯೩೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ ಪಡೆದರು. ಮಹಾರಾಜ ಕಾಲೇಜಿನಲ್ಲಿ ಕೆಲವು ಕಾಲ ಅಧ್ಯಾಪಕರಾಗಿದ್ದರು. ಆರಂಭದಲ್ಲಿ ಇವರು ಶಿಶುವಿಹಾರ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡಿದರು. ಅನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಇಲಾಖೆಯಲ್ಲಿ ಇವರಿಗೊಂದು ಪಂಡಿತ ಹುದ್ದೆ ದೊರೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ಮುಂದೆ ಕನ್ನಡ ಉಪಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ೧೯೬೪ರಲ್ಲಿ ನಿವೃತ್ತರಾದರು.
ಮೈಸೂರು, ಶಿವಮೊಗ್ಗ, ತುಮಕೂರುಗಳಲ್ಲಿ ಇವರು ಸೇವೆ ಸಲ್ಲಿಸಿದರು. ಅನಂತರ ಮೂರು ವರ್ಷಗಳಲ ಕಾಲ ಯು.ಜಿ.ಸಿ. ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ರಾಜರತ್ನಂರವರ ಪಾಂಡಿತ್ಯ ಬಹುಮುಖವಾದುದು. ಸಂಸ್ಕೃತ, ಕನ್ನಡ, ಇಂಗ್ಲಿಷ್, ಪಾಳಿ, ಪ್ರಾಕೃತ, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಇವರಿಗೆ ಒಳ್ಳೆಯ ಪರಿಶ್ರಮವಿತ್ತು. ಇವರು ಮಾಡಿರುವ ಸಾಹಿತ್ಯ ಸೇವೆ ಕನ್ನಡ ಸಾಹಿತ್ಯ ಲೋಕಕ್ಕೆ ಗಣನೀಯ ಕೊಡುಗೆ. (ಇವರು ೧೯೭೯ ರ ಮಾಚ್ ೧೩ರಂದು ನಿಧನರಾದರು.)

ಕೃತಿಗಳು
ಚೀನಾ ದೇಶದ ಬೌದ್ಧ ಯಾತ್ರಿಕರು, ಧರ್ಮಧಾನಿ ಬುದ್ಧ, ಬುದ್ಧ ವಚನ ಪರಿಚಯ, ಪಾಲಿಪಜ್ಯ, ಧಮ್ಮಪದ, ಭಗವಾನ್ ಬುದ್ಧ, ಶ್ರೀ ಗೊಮ್ಮಟೇಶ್ವರ, ಭಗವಾನ್ ಮಹಾವೀರ, ಶ್ರೀ ಪಾರ್ಶ್ವನಾಥ ಚಂಪೂ, ರತ್ನನ ಪದಗಳು, ನಾಗನ ಪದಗಳು, ಶಾಂತಿ, ನೂರು ಪುಟಾಣಿ, ಗಂಡುಗೊಡಲಿ, ನರಕದ ನ್ಯಾಯ, ಕಂಬಳಿ ಸೇವೆ, ಸಂಭವಾಮಿ ಯುಗೇ ಯುಗೇ, ಶಕಾರನ ಸಾರೋಟು, ಬಾಹುಬಲಿ ವಿಜಯ, ಗೊಮ್ಮಟಶಿಲ್ಪ, ಪುರುಷ ಸರಸ್ವತಿ, ತರಂಗ, ಕಿರಣಾನುಭವ, ಸಭಾವಿನಯ, ಸ್ನೇಹದೀಪ, ರನ್ನನ ರಸಘಟ್ಟ, ಹೊಸಗನ್ನಡ ಯಶೋಧರ ಚರಿತ್ರೆ, ಶ್ರೀ ಕವಿರತ್ನ, ಚಿಕ್ಕದೇವ ರಾಜ ಬಿನ್ನಪ, ಶ್ರೀ ಕವಿಪಂಪ, ವಿಗಡ, ವಿಕ್ರಮರಾಯ, ಚಿತ್ರಾಂಗದ ಚಿತ್ರಕೂಟ, ಗಾಂಧಿ, ಜಯಂತಿಯ ಕಾಣಿಕೆ, ದೇವರ ಸಾಕ್ಷಿ, ಗಾಂಧಿ ಜ್ಞಾಪಕ ದೀಪ, ಗಾಂಧೀಜಿ ಅವರ ಕತೆ, ಗಿಳಿಮರಿಗಳ ಗಾಂಧಿ, ಮಕ್ಕಳ ಗಾಂಧಿ ವಂದೇ ಗಾಂಧೀಜಿ, ತುತ್ತೂರಿ, ಕಡಲೆಪುರಿ, ಚುಟಿಕ, ಕೆನೆಹಾಲು, ಕಲ್ಲುಸಕ್ಕರೆ, ರಸಕವಳ, ಗುಲಗಂಜಿ, ಕೋಳಿಕ್ಳ್ಲ, ಗೂಳೂರಿನ ಗಾಯಕರು, ಬಾ ಕರೂಬಾ, ಬೆಳೆಯುವ ಪಯಿರು, ಧ್ವಜವಂದನೆ, ತುಂಟ ಗಣಪತಿ, ಮುದ್ದುಕೃಷ್ಣ, ಪೋಲಿ ಸುಬ್ಬಣ್ಣ, ಪಂಚತಂತ್ರದ ಕಥೆಗಳು, ಅಣ್ಣ ತಮ್ಮ ಬೆಪ್ಪು ತಕ್ಕಡಿ ಐವಾನ್, ಕಂದನ ಕಾವ್ಯಮಾಲಿ, ಪುಟಾಣಿ ಪ್ರಾರ್ಥನೆ, ಸ್ವಾರಸ್ಯ, ವಿಚಾರ ತಂರಗ ಭಾಗ ೧ ಮತ್ತು ೨ ಶ್ರೀ ಸಾಯಿಚಿಂತನ, ತಾರೆ, ಧ್ವಜವಂದನೆ, ವಿಚಾರರಶ್ಮಿ ಮೊದಲಾದವು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೪೪ ರಲ್ಲಿ ರಬಕವಿಯಲ್ಲಿ ನಡೆದ ೨೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಠಿಗೆ ಇವರು ಅಧ್ಯಕ್ಷರಾಗಿದ್ದರು.
೧೯೬೯ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ
೧೯೭೨ರಲ್ಲಿ ಇವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತು. 
೧೯೭೦ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬುದ್ಧ ವಚನ ಪರಿಚಯ, ರತ್ನನ ಪದಗಳು ಕೃತಿಗಳಿಗೆ "ದೇವರಾಜ ಬಹದ್ದೂರ್" ಪ್ರಶಸ್ತಿ ಲಭಿಸಿದೆ.
೧೯೭೮ರಲ್ಲಿ ಹೊಸ ದೆಹಲಿಯಲ್ಲಿ ನಡೆದ ೫೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. 
೧೯೭೯ ರಲ್ಲಿ ಧರ್ಮಸ್ಥಳದಲ್ಲಿ ನಡೆದ ೫೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಸಾಹಿತ್ಯ ಗೋಷ್ಠಿಗೆ ಇವರು ಅಧ್ಯಕ್ಷರಾಗಿದ್ದರು.
೧೯೭೯ರಲ್ಲಿ "ಜೀವರತ್ನ ಮತ್ತು ಸಾಹಿತ್ಯ ಪರಿಚಾರಕ" ಎಂಬ ಸಂಸ್ಕರಣ ಗ್ರಂಥಗಳನ್ನು ಪ್ರಕಟಿಸಲಾಗಿದೆ. 

No comments:

Post a Comment