Translate in your Language

Sunday, September 11, 2016

ಟಿ ಎನ್ ಸೀತಾರಾಮ್ ಮೊಬೈಲ್ ಕಳ್ಕೊಂಡ ಅವಾಂತರ !

ಮನ್ವ೦ತರ ಧಾರಾವಾಹಿ ಮಾಡುತ್ತಿದ್ದಾಗ ನಡೆದ ಘಟನೆ….ನಾನು ೧೦ ಸಾವಿರ ರೂಪಾಯಿನ ಮೊಬೈಲ್ ಒಮ್ಮೆ ಕಳೆದು ಕೊ೦ಡೆ … ಕಳ್ಳತನವಾಗಿದೆ ಎ೦ದು ಪೋಲೀಸ್ ಕ೦ಪ್ಲೆ೦ಟ್ ಕೊಟ್ಟಿದ್ದೆ…

ಸುಮಾರು 15 ವರ್ಷದ ಹಿ೦ದೆ..ಆಗ ಈ ಪತ್ತೆ ಮಾಡುವ ನ೦ಬರ್ ಎಲ್ಲಾ ಇರಲಿಲ್ಲ…3 ದಿನವಾದರೂ ಪತ್ತೆ ಆಗದಿದ್ದಾಗ ಎಸಿಪಿ ಕಡೆಯಿ೦ದ ಒತ್ತಡ ಹಾಕಿಸಿದೆ…
ಎರಡು ದಿನದ ನ೦ತರ ಇಬ್ಬರು ಪೋಲಿಸ್ ನವರು ಮೊಬೈಲ್ ತ೦ದರು…ಅದು ನನ್ನ ಮೊಬೈಲ್ ಅಲ್ಲ…ಯಾವುದೊ ರಿಪೇರಿಗೆ ಬ೦ದಿದ್ದ ಸುಮಾರು ಒ೦ದು 500 ರೂಪಾಯಿಯ ಬೇರೆ ಮೊಬೈಲ್…

’ ಇದು ನನ್ನದಲ್ಲ…ಬೇಡ….” ಎ೦ದೆ..

“ಇಟ್ಕೊಳ್ಳಿ ಸಾರ್….ಹೈಕ್ಲಾಸ್ ಆಗಿದೆ…ಬೆಳಿಗ್ಗೆ ಯಿ೦ದ ಇಬ್ಬರೂ ಸಿಮ್ ಹಾಕ್ಕೊ೦ಡು ಮಾತಾಡಿದ್ದೀವಿ..”

Sunday, September 4, 2016

ಅನಂತನಾಗ್ ಅವರಿಗೆ 69ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು


ಇತ್ತೀಚಿನ "ಗೋಧಿ ಬಣ್ಣ-ಸಾಧಾರಣ ಮೈಕಟ್ಟು" ಚಿತ್ರ ದಲ್ಲಿನ ಅನಂತ್-ನಾಗ್ ಅವರ ನಟನೆ ದೇಶದಾದ್ಯಂತ ಹೆಸರು ಮಾಡಿತು, ಅವರು ನಟಿಸಿದ ಈ ಚಿತ್ರ ಹಿಂದಿಯಲ್ಲಿ ದಿ ಗ್ರೇಟ್ ಅಮಿತಾಬ್ ಬಚ್ಚನ್ ಅವರು ನಟಿಸಲು ಮುಂದಾಗಿರುವುದು ವೀಶೇಷ.
ಅನಂತನಾಗ್ ಅನಂತಸಾಧ್ಯತೆಗಳ ಮೇರು ಕಲಾವಿದ.  ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ 4, 1948ರಲ್ಲಿ.  ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ.  ಪ್ರಾರಂಭಿಕ ಓದು ದಕ್ಷಿಣ ಕನ್ನಡದ  ಆನಂದ ಆಶ್ರಮದಲ್ಲಿ.  ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು.  ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್,  ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.

Saturday, September 3, 2016

ಜಿ. ವಿ. ಅಯ್ಯರ್ ಅವರ 100ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ


ಕನ್ನಡದ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ  ಜಿ. ವಿ. ಅಯ್ಯರ್ ಅವರು ಜನಿಸಿದ್ದು ಅಂದಿನ ಮೈಸೂರು ರಾಜ್ಯದ ನಂಜನಗೂಡಿನನ್ನಲ್ಲಿ 3ನೇ ಸೆಪ್ಟೆಂಬರ್ 1917 ರಂದು.
ಇನ್ನೂ ಚೆನ್ನಾಗಿ ನೆನಪಿದೆ.  ಅದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣಾ ಸಮಾರಂಭ.  ಆ ವರ್ಷ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದವರು ಅಖಿಲ ಭಾರತ ಮಟ್ಟದಲ್ಲಿ ಪ್ರಖ್ಯಾತರಾದ  ಕೆ. ಬಾಲಚಂದರ್.  ಕೆ. ಬಾಲಚಂದರ್ ಅವರು ಆ ವರ್ಷದ ಶ್ರೇಷ್ಠ ಚಲನಚಿತ್ರವಾದ ‘ಆದಿ ಶಂಕರಚಾರ್ಯ’ ಚಿತ್ರದ ಹೆಸರು ಹೇಳುತ್ತಾ, ಈ ಚಿತ್ರಕ್ಕೆ  ‘ಸ್ವರ್ಣಕಮಲ’ಕ್ಕಿಂತ ದೊಡ್ಡ ಪ್ರಶಸ್ತಿ ನೀಡಲು ಸಾಧ್ಯವಿದ್ದಿದ್ದರೆ ಚೆನ್ನಿತ್ತು ಎನಿಸುತ್ತಿದೆ ಎಂದರು.  ಆ ಚಿತ್ರದ ನಿರ್ದೇಶಕರು ನಮ್ಮ  ಜಿ. ವಿ. ಅಯ್ಯರ್.   ಜಿ. ವಿ. ಅಯ್ಯರ್ ಅವರು ಇಡೀ ಚಲನಚಿತ್ರರಂಗದಲ್ಲಿ ಮಾಡಿದ ಸಾಧನೆ ಅಂತಿಂತದ್ದಲ್ಲ.  ಇಡೀ ಭಾರತದ ಶ್ರೇಷ್ಠತೆಯನ್ನೇ ಚಲನಚಿತ್ರರಂಗದಲ್ಲಿ ಮೂಡಿಸಲು ಪ್ರಯತ್ನಿಸಿದ ಅದ್ವಿತೀಯರವರು.  ಎಲ್ಲ ರೀತಿಯಲ್ಲೂ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ ಆಚಾರ್ಯರವರು.

Friday, September 2, 2016

ಕಿಚ್ಚ ಸುದೀಪ ಅವರಿಗೆ 43ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ಬಡಾ ಹೈಟಿನ ಬಚ್ಚನ್, ಸಿಸಿಎಲ್ ನಲ್ಲಿ ರನ್ ಸುರಿಮಳೆಗೈಯುವ ರನ್ನ, ಕನ್ನಡಿಗರ ಕೋಟಿಗೊಬ್ಬ, ಕಷ್ಟದಲ್ಲಿರುವವರಿಗೆ ವರದನಾಯಕ, ಕನ್ನಡಿಗರೆಲ್ಲರಿಗೂ ಆಟೋಗ್ರಾಫ್ ಕಾಣಿಕೆ ನೀಡಿದ ಅಭಿನಯ ಚಕ್ರವರ್ತಿ 
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ನಾವೆಲ್ಲರೂ ತುಂಬು ಹೃದಯದ ಅಭಿಮಾನದಿಂದ ಶುಭಹಾರೈಸೋಣ

ಇಂದು ಎಲ್ಲೆಡೆ ಇರುವ ಸುದೀಪ್ ಅಭಿಮಾನಿಗಳು ವಿಶೇಷವಾಗಿ ಹುಟ್ಟುಹಬ್ಬ ಆಚರಿಸಲಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಕೇವಲ ಒಬ್ಬ ನಟರಾಗಲೂ ಭಾರಿ ಕಷ್ಟಪಟ್ಟಿದ್ದ ಸುದೀಪ್ ಇಂದು ದೇಶದಾದ್ಯಂತ ಪ್ರಸಿದ್ಧರಾಗಿರುವ ಹೊಸ ಸೌತ್ ಇಂಡಿಯಾ ಸ್ಟಾರ್. ಅಂದು ಕೆಲವೇ ಗೆಳೆಯರು ಹಾಗೂ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸುದೀಪ್, ಇಂದು ಬೆಳೆದ ಪರಿ ಅಚ್ಚರಿ ಹುಟ್ಟಿಸುವಂತಾದ್ದು. ಇದೀಗ ಅವರ ಹುಟ್ಟುಹಬ್ಬವನ್ನು ಇಡೀ ಭಾರತವೇ ಸಂತೋಷದಿಂದ ಆಚರಿಸುವಂತಾಗಿದೆ. ಅವರ ಕೋಟಿಗೊಬ್ಬ-೨ ನಾಡಿನಾದ್ಯಂತ ಹೌಸ್-ಫುಲ್ ಪ್ರದರ್ಶನವಾಗುತ್ತಿದ್ದು ನಮ್ಮ ಕಿಚ್ಚ ಸ್ಟಾರ್ ಹುಟ್ಟುಹಬ್ಬದಂದು ಅಭಿಮಾನಿಗಳ ದಂಡೇ ಅವರ ಬಳಿ ಧಾವಿಸುತ್ತಿದೆ.