ವೈ ಜಿ ಪರಮೇಶ್ವರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆಯಲ್ಲಿ ಜನಿಸಿದರು . ಅವರು ಭಾರತೀಯ ಮೊದಲ ಅಂಧ ವೈದ್ಯರಾಗಿದ್ದುದು ವಿಶೇಷ. ಮತ್ತು ವಿಶ್ವದ ಶ್ರೇಷ್ಟ ಅಂಧ ವೈದ್ಯರಲ್ಲಿ ಒಬ್ಬರಾಗಿದ್ದರು, ಅಂಧರಾಗಿದ್ದುಕೊಂಡೂ ವೈದ್ಯ ವೃತ್ತಿಯಲ್ಲಿ ನಿರಂತರ ಸೇವೆ ಮಾಡಿದ ಸಾಧಕರು ವೈ ಜಿ ಪರಮೇಶ್ವರ
ಆರಂಭಿಕ ಜೀವನ :
ಡಾ Y.G.Parameshwar ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆ ಯಲ್ಲಿ ಜನಿಸಿದರು. ಅವರು ಕರ್ನಾಟಕ ವಿಶ್ವವಿದ್ಯಾಲಯ ರಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು ಆದರೆ ಎಂಬಿಬಿಎಸ್ ನ ಅಂತಿಮ ವರ್ಷದಲ್ಲಿ ಇರುವಾಗ ದುರದ್ಷ್ಟವಶಾತ್ ಅವರು ರೆಟಿನಾದ ರಕ್ತಸ್ರಾವದಿಂದಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡರು.