Translate in your Language

Tuesday, March 28, 2017

Dr. ವೈ ಜಿ ಪರಮೇಶ್ವರ-ಅವರು ಭಾರತೀಯ ಮೊದಲ ಅಂಧ ವೈದ್ಯ !

ವೈ ಜಿ ಪರಮೇಶ್ವರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆಯಲ್ಲಿ ಜನಿಸಿದರು . ಅವರು ಭಾರತೀಯ ಮೊದಲ ಅಂಧ ವೈದ್ಯರಾಗಿದ್ದುದು ವಿಶೇಷ.  ಮತ್ತು ವಿಶ್ವದ ಶ್ರೇಷ್ಟ ಅಂಧ ವೈದ್ಯರಲ್ಲಿ ಒಬ್ಬರಾಗಿದ್ದರು, ಅಂಧರಾಗಿದ್ದುಕೊಂಡೂ ವೈದ್ಯ ವೃತ್ತಿಯಲ್ಲಿ ನಿರಂತರ ಸೇವೆ ಮಾಡಿದ   ಸಾಧಕರು ವೈ ಜಿ ಪರಮೇಶ್ವರ 

ಆರಂಭಿಕ ಜೀವನ :
ಡಾ Y.G.Parameshwar ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆ ಯಲ್ಲಿ ಜನಿಸಿದರು. ಅವರು ಕರ್ನಾಟಕ ವಿಶ್ವವಿದ್ಯಾಲಯ ರಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು ಆದರೆ ಎಂಬಿಬಿಎಸ್ ನ ಅಂತಿಮ ವರ್ಷದಲ್ಲಿ ಇರುವಾಗ ದುರದ್ಷ್ಟವಶಾತ್ ಅವರು ರೆಟಿನಾದ ರಕ್ತಸ್ರಾವದಿಂದಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡರು.
ಈ ನಿಮಿತ್ತ ಅವರು ಹಲವಾರು ಬಾರಿ ತಮ್ಮ ವೈದ್ಯ ವ್ಯಾಸಂಗವನ್ನು ನಿಲ್ಲಿಸಬೇಕಾಯಿತು. ಆದರೆ ತಮ್ಮ ಮನೋಸ್ಥೈರ್ಯದಿಂದ ತಮ್ಮ ಕಣ್ಣಿನ ದೃಷ್ಟಿ ದುರ್ಬಲಗೊಂಡರೂ  ಸಹ ವೈದ್ಯಕೀಯ ಪದವಿ ಹೇಗಾದರು ಮಾಡಿ ಪೂರ್ಣಗೊಳಿಸಲು ನಿರ್ಧರಿಸಿದರು. ಈ ಅದ್ಭುತ ಸಾಹಸದಲ್ಲಿ ಗೆದ್ದರು ಕೂಡ !! ವೈ ಜಿ ಪರಮೇಶ್ವರ 1977 ರಲ್ಲಿ  ಎಂಬಿಬಿಎಸ್ ಪದವಿಯನ್ನು ಪಡೆದ ಅವರು, ವಿಶ್ವದಲ್ಲೇ ಅಂಧ ವೈದ್ಯರ ಮೊದಲ ಭಾರತೀಯರಾದರು. ವಿಶ್ವದ ಮೊದಲನೆಯ ಅಂಧ ವೈದ್ಯ ಎಂಬ ಹೆಗ್ಗಳಿಕೆಗೆ ಅಮೇರಿಕ ಸಂಯುಕ್ತ ಸಂಸ್ಥಾನದ ಡಾ ಡೇವಿಡ್ ಹಾರ್ಟ್ಮನ್. ನಂತರ ವೈಯಕ್ತಿಕ ಬದುಕಿನಲ್ಲಿ ಅವರು ಪ್ರೇಮಾ ಎಂಬುವರನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳು ತಂದೆಯಾದರು. ಜಾಕೋಬ್ ಬೊಲೊಟಿನ್ (ಜನವರಿ 3, 1888 - ಏಪ್ರಿಲ್ 1, 1924) ಸಂಪೂರ್ಣವಾಗಿ ವೈದ್ಯಕೀಯ ವೃತ್ತಿಯ ಪರವಾನಗಿ ವಿಶ್ವದ ಮೊದಲ ಸಂಪೂರ್ಣವಾಗಿ ಕುರುಡು ವೈದ್ಯನಾಗಿದ್ದ.

ವೃತ್ತಿ :
  ವೈ ಜಿ ಪರಮೇಶ್ವರ ಅವರಿಗೆ ತಮ್ಮ ಮನೋಬಲದೆದುರು ಅಂಧತ್ವ ತೊಡಕಾಗಲೇ ಇಲ್ಲ,  ತಮ್ಮ ಎಂಬಿಬಿಎಸ್ ಮುಗಿಸಿದ ನಂತರ,ಅವರು ವೈದ್ಯಕೀಯ ವೃತ್ತಿಯನ್ನು ಆರಂಭಿಸಿದರು. 1979 ರಲ್ಲಿ ಕರ್ನಾಟಕ ಸರ್ಕಾರದ ಕುಟುಂಬ ಕಲ್ಯಾಣ ಽ ಆರೋಗ್ಯ ಇಲಾಖೆ ವೈ ಜಿ ಪರಮೇಶ್ವರ ಅವರನ್ನು ಆರೋಗ್ಯ ಅಧಿಕಾರಿ ಮತ್ತು ಸಹಾಯಕ ಸರ್ಜನ್ ರಾಗಿ  ನೇಮಿಕ ಮಾಡಿತು. ಅವರು ಬೆಂಗಳೂರಿನಲ್ಲಿನ ಪೆಥಾಲಜಿ ಮ್ಯೂಸಿಯಂನ ಮೇಲ್ವಿಚಾರಕ ರಾಗಿಯೂ ವೈ ಜಿ ಪರಮೇಶ್ವರ  ಅವರು ಕೆಲಸ ನಿರ್ವಹಿಸಿದರು .  1980ರ ನಂತರ ಅವರು ತಮ್ಮ ಉಳಿದ ಜೀವಿತಾವಧಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜ್ ಫಾರ್ಮಕಾಲಜಿ ವಿಭಾಗದಲ್ಲಿ ಬೋಧನೆ ವೃತ್ತಿಯನ್ನಾಗಿ ಸ್ವೀಕರಿಸಿ  ಉಪನ್ಯಾಸಕನಾಗಿ ತಮ್ಮ ಕೊನೆಯುಸಿರಿರುವರೆಗೂ ನಿರ್ವಹಿಸಿದರು.

ಪ್ರಶಸ್ತಿಗಳು ಮತ್ತು ಮಾನ್ಯತೆ
1984ರಲ್ಲಿ ಭಾರತ ಸರ್ಕಾರದ ಸಮಾಜ ಕಲ್ಯಾಣ ಸಚಿವಾಲಯಪ್ರಶಸ್ತಿ ದೃಷ್ಟಿಹೀನರಾಗಿದ್ದುಕೊಂಡೇ ಸಾರ್ವಜನಿಕರಿಗೆ ಅತ್ಯಂತ ಸಮರ್ಥ ಮತ್ತು ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಶ್ರೇಷ್ಟ ವೈದ್ಯ ಎಂಬ ಪ್ರಶಸ್ತಿ ಗೆ  ವೈ ಜಿ ಪರಮೇಶ್ವರ ಅವರು ಭಾಜನರಾದರು . ನಂತರ  ಈ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಗಳಾದ  ಗ್ಯಾನಿ ಜೈಲ್ ಸಿಂಗ್ ಅವರಿಂದ  ವೈ ಜಿ ಪರಮೇಶ್ವರ ಅವರಿಗೆ ನೀಡಲಾಯಿತು. ಅವರು  ಸಾಗರದ ಚಿಣ್ಣರ ಕೂಟದ ಸಂಸ್ಥೆಯ ಮೊದಲ ವಾರ್ಷಿಕೋತ್ಸವದ ಸಮಾರಂಭದಲ್ಲಿ  ವೈ ಜಿ ಪರಮೇಶ್ವರ ಅವರು  ಸಮಾಜಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ  ಅವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ  ಮಾತನಾಡಿದ ಡಾ ಪರಮೇಶ್ವರ್ ಅವರು ಸರ್ಕಾರ ಮತ್ತು ಇತರ ಸರ್ಕಾರೇತರ ಸಂಸ್ಥೆಗಳ ಆರ್ಥಿಕ ಬೆಂಬಲದೊಂದಿಗೆ ಬೆಂಗಳೂರಿನಲ್ಲಿ ನೋವೆಲ್ ವೃದ್ಧಾಶೃಮ(novel old-age home)  ಸ್ಥಾಪನೆ ಮಾಡುವ  ಕನಸನ್ನು ಪ್ರಕಟಿಸಿದರು. ದುರದೃಷ್ಟವಶಾತ್  ಈ ಪ್ರಶಸ್ತಿ ಸ್ವೀಕರಿಸಿದ ಒಂದು ವಾರದೊಳಗೆ ಡಾ ಪರಮೇಶ್ವರ್ ಅವರು ಮಾರಣಾಂತಿಕ ಹೃದಯ ಸ್ತಂಭನದ  ಕಾರಣ ತಮ್ಮ ಈ  ವೃದ್ಧಾಶೃಮದ ಕನಸು ಕನಸಾಗಿಯೇ ಉಳಿಯಿತು. ನಂತರ ಚಿಣ್ಣರ ಕೂಟದ ಸದಸ್ಯರು ಪರಮೇಶ್ವರ್ ಅವರ ಗಮನಾರ್ಹವಾದ ಸಾಧನೆಯನ್ನು ಉತ್ತೇಜಿಸುವ ಸಲುವಾಗಿ, ವೈದ್ಯರ ಜೀವನ ಮತ್ತು ಅವರು ತಮ್ಮ ಅಂಧತ್ವದಿಂದ ಜೀವನದಲ್ಲಿ  ಎದುರಿಸಿದ ಸವಾಲುಗಳು  ಎಂಬ  ಪಾಠವನ್ನು ಪಿ.ಯು. ಶಿಕ್ಷಣ ಪಠ್ಯಪುಸ್ತಕ ಒಂದರಲ್ಲಿ ಸೇರಿಸಲು ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಲಿಯನ್ನು ಒತ್ತಾಯಿಸಿತು.  ಆ ಸಮಯದಲ್ಲಿ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದ  ಬಿ.ಆರ್ ವಿಜಯಕುಮಾರ್ (ಸಾಗರದ ಸರ್ಕಾರಿ ಪಿಯು ವುಮೆನ್ಸ್ ಕಾಲೇಜ್ ನ ಪ್ರಾಂಶುಪಾಲರೂ ಆಗಿದ್ದ ಬಿ.ಆರ್ ವಿಜಯಕುಮಾರ್ ಅವರ ಸಹಕಾರದಿಂದ ವೈ ಜಿ ಪರಮೇಶ್ವರ ಅವರ ಜೀವನ ಚರಿತ್ರೆಯನ್ನು ಮೊದಲ ವರ್ಷದ ಪದವಿಪೂರ್ವ ಇಂಗ್ಲೀಷ್ ಪಠ್ಯ ಪುಸ್ತಕದಲ್ಲಿ ಸೇರಿಸಲಾಯಿತು. 

No comments:

Post a Comment