ಬಿಜೆಪಿಯ ಸೌಮ್ಯವಾದಿ ನಾಯಕ, ಅಜಾತಶತ್ರು ಮತ್ತು ವಾಗ್ಮಿಯಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸ್ವಾತಂತ್ರ್ಯ ಸೇನಾನಿ, ಶಿಕ್ಷಣತಜ್ಞ ದಿವಂಗತ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರನ್ನು ಈ ಬಾರಿಯ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತರತ್ನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಾಜಪೇಯಿ 1998ರಿಂದ 2004ರ ಅವಧಿಯಲ್ಲಿ ಸರಕಾರ ನಡೆಸಿದವರು. ಬಿಜೆಪಿಯ 'ಜಾತ್ಯತೀತ ಮುಖ'ವಾಗಿ ಗಮನ ಸೆಳೆದ ಅವರು, ಅಜಾತ ಶತ್ರುವೆಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ. 23 ರಾಜಕೀಯ ಪಕ್ಷಗಳ ಮೈತ್ರಿಕೂಟದ ಸರಕಾರವನ್ನು ನಿಭಾಯಿಸಿದ ಅವರು, ಮೈತ್ರಿಧರ್ಮದ ಅನುಪಾಲನೆಯಲ್ಲಿ ಆದರ್ಶ ಮಾದರಿ ಎಂದೆನಿಸಿಕೊಂಡಿದ್ದರು. 1957ರಿಂದ 2009ರವರೆಗೆ ಅವರು ಲೋಕಸಭಾ ಸದಸ್ಯರಾಗಿದ್ದರು.
ಪ್ರಧಾನಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ, ತಮ್ಮ ಮಾತುಗಾರಿಕೆ ಮತ್ತು ವಿವೇಕದಿಂದ ಇಡೀ ದೇಶದ ಗಮನ ಸೆಳೆದಿದ್ದರು. 89 ವರ್ಷದ ರಾಜಕೀಯ ಮುತ್ಸದ್ಧಿ ವಾಜಪೇಯಿ ಅವರು ಅನಾರೋಗ್ಯದ ಕಾರಣ, ಸಾರ್ವಜನಿಕ ಜೀವನದಿಂದ ಈಗ ದೂರ ಉಳಿದಿದ್ದಾರೆ.
ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಾಜಪೇಯಿ 1998ರಿಂದ 2004ರ ಅವಧಿಯಲ್ಲಿ ಸರಕಾರ ನಡೆಸಿದವರು. ಬಿಜೆಪಿಯ 'ಜಾತ್ಯತೀತ ಮುಖ'ವಾಗಿ ಗಮನ ಸೆಳೆದ ಅವರು, ಅಜಾತ ಶತ್ರುವೆಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ. 23 ರಾಜಕೀಯ ಪಕ್ಷಗಳ ಮೈತ್ರಿಕೂಟದ ಸರಕಾರವನ್ನು ನಿಭಾಯಿಸಿದ ಅವರು, ಮೈತ್ರಿಧರ್ಮದ ಅನುಪಾಲನೆಯಲ್ಲಿ ಆದರ್ಶ ಮಾದರಿ ಎಂದೆನಿಸಿಕೊಂಡಿದ್ದರು. 1957ರಿಂದ 2009ರವರೆಗೆ ಅವರು ಲೋಕಸಭಾ ಸದಸ್ಯರಾಗಿದ್ದರು.
ಪ್ರಧಾನಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ, ತಮ್ಮ ಮಾತುಗಾರಿಕೆ ಮತ್ತು ವಿವೇಕದಿಂದ ಇಡೀ ದೇಶದ ಗಮನ ಸೆಳೆದಿದ್ದರು. 89 ವರ್ಷದ ರಾಜಕೀಯ ಮುತ್ಸದ್ಧಿ ವಾಜಪೇಯಿ ಅವರು ಅನಾರೋಗ್ಯದ ಕಾರಣ, ಸಾರ್ವಜನಿಕ ಜೀವನದಿಂದ ಈಗ ದೂರ ಉಳಿದಿದ್ದಾರೆ.
ಪಾಕ್‌ನೊಂದಿಗೆ ನಡೆಸಿದ ಶಾಂತಿ ಮಾತುಕತೆ, ಸುವರ್ಣ ಚತುಷ್ಪಥ ಯೋಜನೆಗಳು ವಾಜಪೇಯಿ ಸರಕಾರದ ಪ್ರಮುಖ ಅಂಶಗಳು. ಅವರು ಕಾಂಗ್ರೆಸ್ ಹೊರತಾಗಿ ಸುದೀರ್ಘ ಕಾಲ ದೇಶ ಆಳಿದ ಪ್ರಧಾನಿಯೂ ಹೌದು.
ಭಾರತ ಯಾವತ್ತೂ ಕಂಡರಿಯದ ದೊಡ್ಡ ವಾಗ್ಮಿ ಎಂದು ವಾಜಪೇಯಿ ಅವರನ್ನು ಬಣ್ಣಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಆಗ್ನೇಯ ಏಷ್ಯಾದಲ್ಲಿ ಶಾಂತಿ ನೆಲೆಗೊಳಿಸುವುದಕ್ಕೆ ಅವರ ಕೊಡುಗೆ ಅನನ್ಯ ಎಂದು ಹೇಳಿದ್ದಾರೆ.
ಎಲ್ಲರಿಗೂ ಅಚ್ಚುಮೆಚ್ಚು
ವಾಜಪೇಯಿ ಅವರಿಗೆ ಭಾರತರತ್ನ ದೊರೆತಿರುವ ಸಂದರ್ಭದಲ್ಲಿ ಪಕ್ಷಾತೀತವಾಗಿ ಅಭಿನಂದನೆಗಳು ಹರಿದು ಬಂದಿವೆ. ವಾಜಪೇಯಿ ಆಯ್ಕೆಯನ್ನು ಪ್ರತಿಪಕ್ಷವಾದ ಕಾಂಗ್ರೆಸ್ ಸ್ವಾಗತಿಸಿದೆ. ಹಿಂದೆ ವಾಜಪೇಯಿ ಸಂಪುಟದಲ್ಲಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ವಾಜಪೇಯಿ ಅವರಿಗೆ ಪ್ರಶಸ್ತಿ ಸಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
---
ನೆಹರು ಮೆಚ್ಚುಗೆ
1957ರಲ್ಲಿ ಉತ್ತರಪ್ರದೇಶದ ಬಲರಾಂಪುರದ ಲೋಕಸಭೆ ಕ್ಷೇತ್ರದಿಂದ ಅಯ್ಕೆಯಾದ ವಾಜಪೇಯಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. ಆಗ ಅವರಿಗೆ 29 ವರ್ಷ ವಯಸ್ಸು. ಲೋಕಸಭೆಯಲ್ಲಿ ಅಟೆಲ್ ಮಾಡಿದ ಮೊದಲ ಭಾಷಣ ಹಿರಿ-ಕಿರಿಯ ರಾಜಕಾರಣಿಗಳ ಮನಸ್ಸನ್ನು ಗೆದ್ದಿತು. ಒಮ್ಮೆ ವಿದೇಶಿ ರಾಜತಾಂತ್ರಿಕರು ಭಾರತಕ್ಕೆ ಬಂದಿದ್ದಾಗ '' ಈ ಹುಡುಗ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾನೆ'' ಎಂದು ನೆಹರು, ವಾಜಪೇಯಿ ಅವರನ್ನು ಪರಿಚಯಿಸಿದ್ದರು.
ಅದು 1977 ಮೂವತ್ತು ವರ್ಷಗಳ ಬಳಿಕ ಕಾಂಗ್ರೆಸ್ ಆಡಳಿತ ಮುಗಿದಿತ್ತು. ಜನತಾ ಸರಕಾರದ ವಿದೇಶಾಂಗ ಕಾರ‌್ಯದರ್ಶಿಯಾಗಿ ಅಧಿಕಾರವಹಿಸಿಕೊಂಡಿದ್ದರು ವಾಜಪೇಯಿ. ಸಂಸದರಾಗಿ ಹಲವು ಬಾರಿ ಈ ಕಾರ‌್ಯಾಲಯಕ್ಕೆ ಭೇಟಿ ನೀಡಿದ್ದ ವಾಜಪೇಯಿ ಅವರಿಗೆ ಎಲ್ಲೆಲ್ಲಿ ಏನಿತ್ತು ಎಂಬುದರ ಪರಿಚಯವಿತ್ತು. ಸಚಿವರಾಗಿ ಅಧಿಕಾರವಹಿಸಿಕೊಂಡ ವಾಜಪೇಯಿ ತಮ್ಮ ಕಚೇರಿಗೆ ಬಂದಾಗ ಅಲ್ಲೇನೋ ಬದಲಾಗಿರುವ ಭಾವ ಕಾಡುತ್ತಿತ್ತು. ತೀಕ್ಷ್ಣವಾಗಿ ನಿರುಕಿಸಿದಾಗ ಅಲ್ಲಿದ್ದ ನೆಹರು ಅವರ ಭಾವಚಿತ್ರ ನಾಪತ್ತೆಯಾಗಿತ್ತು. ಹೊಸ ಸಚಿವರಿಗೆ ನೆಹರು ಅವರ ಭಾವಚಿತ್ರ ತಮ್ಮ ಕಚೇರಿಯಲ್ಲಿರುವುದು ಪಥ್ಯವಾಗಲಿಕ್ಕಿಲ್ಲ ಎಂದು ಭಾವಿಸಿದ ಅಧಿಕಾರಿಗಳು ಅದನ್ನು ತೆಗೆದು ಹಾಕಿದ್ದರು. ಅಧಿಕಾರಿಗಳನ್ನು ಕರೆಸಿದ ವಾಜಪೇಯಿ ತಕ್ಷಣವೇ ಅದನ್ನು ವಾಪಸ್ ತರಿಸಿ ಅದಿದ್ದ ಸ್ಥಳದಲ್ಲೇ ತೂಗು ಹಾಕಿಸಿದರು. ಕಿರಿಯನನ್ನು ಹೊಗಳಲು ಹಿಂಜರಿಯದ ನೆಹರು, ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ದೇಶಕ್ಕೆ ಕೊಟ್ಟ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸುವ ಮೂಲಕ ವಾಜಪೇಯಿ ಇಬ್ಬರೂ ಹಿರಿತನ ಮೆರೆದರು.
---
ಗಾಂಧಿಗೆ ಅಚ್ಚುಮೆಚ್ಚು
ಮಹಾತ್ಮ ಗಾಂಧಿ ಅವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್‌ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್‌ಫರ್ಡ್, ಕೇಂಬ್ರಿಜ್‌ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್‌ನ ರಾಜಕಾರಣಿಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್‌ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು. ಅವರನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಗುರುತಿಸಿದರೂ ಸಂಪ್ರದಾಯಸ್ಥ ಹಿಂದು ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದುಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು. ಅಸ್ಪಶ್ಯತೆ ನಿವಾರಣೆಗೂ ಶ್ರಮಿಸಿದರು. ಇತರ ಧರ್ಮೀಯರ ಜತೆಗೂಡಿ ಹೋರಾಡಿದರೆ ಮಾತ್ರ ಸ್ವಾತಂತ್ರ ಸಿದ್ಧಿಸಲಿದೆ ಎನ್ನುವ ನಂಬಿಕೆ ಹೊಂದಿದ್ದರು.
---
'ಅಜಾತ ಶತ್ರು' ಖ್ಯಾತಿಯ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ದಿವಂಗತ ಶಿಕ್ಷಣ ತಜ್ಞ ಮತ್ತು ಸ್ವಾತಂತ್ರ್ಯ ಸೇನಾನಿ ಮದನ್ ಮೋಹನ್ ಮಾಳವೀಯ ಅವರಿಗೆ 'ಭಾರತ ರತ್ನ' ನೀಡುತ್ತಿರುವುದು ಸಮರ್ಥ ಆಯ್ಕೆ. ಈ ಇಬ್ಬರು ಧೀಮಂತರು ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ ಎನಿಸಿಕೊಂಡಿದ್ದು, ಪುರಸ್ಕಾರದ ಗೌರವವನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
- ನರೇಂದ್ರ ಮೋದಿ ಪ್ರಧಾನಿ
ವಾಜಪೇಯಿ ಮತ್ತು ಮಾಳವೀಯ ಅವರಿಗೆ ಭಾರತ ರತ್ನ ನೀಡುವ ಎನ್‌ಡಿಎ ಸರಕಾರದ ನಿರ್ಧಾರ ಸ್ವಾಗತಾರ್ಹ. ಉಭಯ ನಾಯಕರು ತೋರಿದ ರಾಜಧರ್ಮ ಮತ್ತು ಜಾತ್ಯತೀತ ತತ್ತ್ವಗಳನ್ನು ಎನ್‌ಡಿಎ ಸರಕಾರ ಸಹ ಅನುಸರಿಸುತ್ತದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ
-ಅಜಯ್ ಮಾಕನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ವಾಜಪೇಯಿ ಅವರಿಗೆ ಈ ಮೊದಲೇ ಈ ಗೌರವ ಸಲ್ಲಬೇಕಿತ್ತು. ತಡವಾಗಿಯಾದರೂ ಸರಕಾರ ಅವರನ್ನು ಪುರಸ್ಕರಿಸಿರುವುದು ಸಹಜವಾಗಿಯೇ ಸಂತೋಷವಾಗಿದೆ. ವಾಜಪೇಯಿ ಹಾಗೂ ಮಾಳವೀಯ ಅವರು ದೇಶದ ಒಳಿತಿಗೆ ಸಲ್ಲಿಸಿದ ಕೊಡುಗೆ ಅನನ್ಯ. ಇದು ಭಾರತಕ್ಕೆ ಸಂದ ಗೌರವ, ದೇಶವಾಸಿಗಳಿಗೆ ಸಂದ ಪುರಸ್ಕಾರ.
- ಅನೂಪ್ ಮಿಶ್ರಾ ವಾಜಪೇಯಿ ಸೋದರ ಸಂಬಂಧಿ
ವಾಜಪೇಯಿ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿರುವುದು ಸರಿಯಾದ ವಿಚಾರ. ಆದರೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡುವುದು ತರವಲ್ಲ. ಮಾಳವೀಯ ಅವರನ್ನು ಆಯ್ಕೆ ಮಾಡಿದ್ದು ತಪ್ಪು ನಿರ್ಧಾರ. ಅವರಿಗೆ ನೀಡುವುದಾದರೆ, ರವೀಂದ್ರ ನಾಥ್ ಟ್ಯಾಗೋರ್, ವಿವೇಕಾನಂದ, ಅಕ್ಬರ್ ದೊರೆ, ಶಿವಾಜಿ ಮಹಾರಾಜ್, ಗುರುನಾನಕ್, ಕಬೀರ್, ಅಶೋಕ ಚಕ್ರವರ್ತಿ ಅವರೇಕೆ ಈ ಗೌರವ ಇಲ್ಲ?
- ರಾಮಚಂದ್ರ ಗುಹಾ ಇತಿಹಾಸ ತಜ್ಞರು
ವಾಜಪೇಯಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಬಹಳ ಹಿಂದೆಯೇ ಅವರಿಗೆ ಈ ಪುರಸ್ಕಾರ ಬರಬೇಕಿತ್ತು. ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ ಮೊದಲ ಪ್ರಧಾನಿ ವಾಜಪೇಯಿ ಜನರ ಮನ ಗೆದ್ದ ಹೃದಯವಂತ ಮನುಷ್ಯ. ತಮ್ಮ ತತ್ವ, ಆದರ್ಶ ಪ್ರಾಮಾಣಿಕತೆಗಳಿಗೆ ಹೆಸರಾದವರು.
- ಲಾರ್ಡ್ ಸ್ವರಾಜ್‌ಪಾಲ್ ಅನಿವಾಸಿ ಉದ್ಯಮಿ
ವಾಜಪೇಯಿ ಹಾಗೂ ಮಾಳವೀಯ ಅವರಿಗೆ 'ಭಾರತ ರತ್ನ' ಸಲ್ಲುತ್ತಿರುವುದು ನನಗೆ ಅತೀವ ಸಂತೋಷವಾಗಿದೆ. ವೈಯಕ್ತಿಕವಾಗಿ ಇದೊಂದು ಭಾವನಾತ್ಮಕ ಸನ್ನಿವೇಶ. ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟವಾಗಿದೆ.
- ರವಿಶಂಕರ್ ಪ್ರಸಾದ್ ಕೇಂದ್ರ ಸಚಿವ
No comments:
Post a Comment