Translate in your Language

Thursday, January 8, 2015

ರಾಕಿಂಗ್ ಸ್ಟಾರ್ "ಯಶ್" 29ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಮಂಡ್ಯ ಮೂಲದ ಯಶ್ (ಜನನ: 8ನೇ ಜನವರಿ, 1986) ಅವರ ಮೂಲ ಹೆಸರು ನವೀನ್  ಕುಮಾರ್ ಗೌಡ, ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್-ವುಡ್ ಗೆ ನಾಯಕನಟನಾಗಿ ಪಾದಾರ್ಪಣೆ ಮಾಡಿದ ರಾಕಿಂಗ್ ಸ್ಟಾರ್ "ಯಶ್" ಅವರಿಗೆ 29ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್-ವುಡ್ ಗೆ ನಾಯಕನಟನಾಗಿ ಪಾದಾರ್ಪಣೆ ಮಾಡಿದ ರಾಕಿಂಗ್ ಸ್ಟಾರ್ "ಯಶ್" ಅವರಿಗೆ ೨೯ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ಅವರ ಎಲ್ಲಾ ಚಿತ್ರಗಳೂ ಸತತವಾಗಿ ಭರ್ಜರಿ ಜಯಭೇರಿಸುವ ಮೂಲಕ ಕನ್ನಡ ಚಿತ್ರರಸಿಕರಿಗೆ ಮನರಂಜನೆ ನೀಡುತ್ತಿರುವ ಯಶ್ ಅವರು ಇತ್ತೀಚಿನ ಜನಮಾನಸದಲ್ಲಿ ಅಚ್ಚೊತ್ತಿರುವ ಬಹು ಬೇಡಿಕೆ ಹುಟ್ಟಿಸಿರುವ ನಾಯಕ ನಟ
ಜನನ: 8ನೇ ಜನವರಿ, 1986

ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ'
ಒಂದ್ಕಾಲ ಇತ್ತು....ಬಾಲಿವುಡ್ ನ ಬಿಗ್ ಸ್ಟಾರ್ ಸಿನಿಮಾ ತೆರೆಗೆ ಬರ್ತಿದೆ ಅಂದ್ರೆ, ಇನ್ಯಾವ ಚಿತ್ರಗಳೂ ಅದರ ಪೈಪೋಟಿಗೆ ನಿಲ್ಲುತ್ತಿರಲಿಲ್ಲ. ಅಸಲಿಗೆ ಬೇರೆ ಯಾವ ಚಿತ್ರಗಳಿಗೂ ಭಾರತದಾದ್ಯಂತ ಥಿಯೇಟರ್ ಗಳೇ ಸಿಗುತ್ತಿರಲಿಲ್ಲ. ಕನ್ನಡ ಚಿತ್ರರಂಗವೂ ಅಷ್ಟೇ, ಪರಭಾಷಾ ಹಾವಳಿಯಿಂದ ಬಳಲಿ ಬೆಂಡಾಗಿದೆ. ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ತೆರೆಗೆ ಬರ್ತಿದ್ದಾರೆ ಅಂದ್ರೆ, ಸಣ್ಣ ಪುಟ್ಟ ಹೀರೋಗಳ ಸಿನಿಮಾಗಳು ರಿಲೀಸ್ ಆಗ್ತಿತ್ತೇ ಹೊರತು, ಸ್ಟಾರ್ ಗಳ ಚಿತ್ರ ಬಿಡುಗಡೆಯಾಗುತ್ತಿರಲಿಲ್ಲ.

ಆದ್ರೆ, ಈ ಕ್ರಿಸ್ಮಸ್ ಸಂದರ್ಭದಲ್ಲಿ ಆಗಿದ್ದೇ ಬೇರೆ...ಯಾರು ಏನೇ ಹೇಳಿದರೂ, ''ನಮಗೆ ನಾವೇ ಹೀರೋ ಆಗಬೇಕು'' ಅಂತ ಡೈಲಾಗ್ ಹೊಡೆದಿದ್ದ ಯಶ್, ತಮ್ಮ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮೂಲಕ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರಕ್ಕೆ ಚಾಲೆಂಜ್ ಹಾಕೇ ಬಿಟ್ಟರು. ಹಾಗೆ, ಹಾಕಿದ್ದ ಸವಾಲಿನಲ್ಲಿ ಇಂದು ಗೆದ್ದು ಬೀಗ್ತಿದ್ದಾರೆ ಯಶ್. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನ ಚಿಂದಿ ಉಡಾಯಿಸುತ್ತಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಕರ್ನಾಟಕದ ಮಾರುಕಟ್ಟೆಯಲ್ಲಿ ಆಮೀರ್ 'ಪಿಕೆ'ಯನ್ನ ಮಕಾಡೆ ಮಲಗಿಸಿಬಿಟ್ಟಿದೆ. 

ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..

ಸ್ಯಾಂಡಲ್ ವುಡ್ ನ ಅಚ್ಚರಿ ಅಂದ್ರೆ ಇದೆ, ಡಿಸೆಂಬರ್ 19 ರಂದು ತೆರೆಗೆ ಬಂದ 'ಪಿ.ಕೆ' ಚಿತ್ರ ಕೇವಲ ನಾಲ್ಕು ದಿನಗಳಲ್ಲಿ 6.30 ಕೋಟಿ ರೂಪಾಯಿಯನ್ನ ಬಾಚಿ ದಾಖಲೆ ಮಾಡಿತ್ತು. ಮೊದಲ ವಾರ ಕರ್ನಾಟಕದ ಬಾಕ್ಸ್ ಆಫೀಸ್ ನಲ್ಲಿ ಜೋರು ಕಲೆಕ್ಷನ್ ಮಾಡಿದ್ದ ಪಿಕೆ, ಎರಡನೇ ವಾರದ ಹೊತ್ತಿಗೆ ಡಲ್ ಆಗ್ಬಿಟ್ಟಿದೆ. ಇದಕ್ಕೆ ಕಾರಣ ಡಿಸೆಂಬರ್ 25 ರಂದು ತೆರೆಗೆ ಬಂದ ಕನ್ನಡ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. 

ಸಪ್ತ ಸಾಗರದಾಚೆಗೆ ಹಾರಿದ 'Mr & Mrs. ರಾಮಾಚಾರಿ'

ನಾಲ್ಕು ದಿನಗಳ ಕಲೆಕ್ಷನ್ ಪ್ರಕಾರ, ಅಂದಾಜಿನಲ್ಲಿ ಲೆಕ್ಕ ಹಾಕಿದ್ರೆ. ಎರಡು ವಾರಗಳಲ್ಲಿ 'ಪಿಕೆ' 20 ಕ್ಕೂ ಹೆಚ್ಚು ಕೋಟಿ ಬಾಚಬೇಕಿತ್ತು. ಆದ್ರೆ 10 ದಿನಗಳಲ್ಲಿ 'ಪಿಕೆ' ಕಲೆಕ್ಟ್ ಮಾಡಿರುವುದು ಎಷ್ಟು ಗೊತ್ತಾ, ಬರೀ 16.04 ಕೋಟಿ.

No comments:

Post a Comment