Translate in your Language

Friday, September 4, 2015

ಅನಂತನಾಗ್ ಅವರಿಗೆ 68ನೇ ಹುಟ್ಟು ಹಬ್ಬದ ಶುಭಾಶಯಗಳು

ಸ್ಪುರದ್ರೂಪಿ ಸದಾ ಹಸನ್ಮುಖಿಯಾಗಿರುವ ಅನಂತನಾಗ್ ಅವರ 68ನೇ (ಜನನ: 4ನೇ ಸೆಪ್ಟೆಂಬರ್ 1948) ಹುಟ್ಟು ಹಬ್ಬದ ಶುಭಾಶಯಗಳು
ಈಗಿನ ಪೈಪೋಟಿ ಯುಗದಲ್ಲಿಯೂ ಯಾವ ಪಾತ್ರವಾದರೂ ಲೀಲಾಜಾಲವಾಗಿ ನಿಭಾಯಿಸುತ್ತ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಲ್ಲುವ ಸುಂದರ ನಟ ಅನಂತನಾಗರಕಟ್ಟೆ,  

ಕೆಲವು ಪಾತ್ರಗಳನ್ನು ಅನಂತ್ ನಾಗ್ ಬಿಟ್ಟರೆ ಬೇರೊಬ್ಬರು ಮಾಡಲು ಸಾಧ್ಯವೇ ಇಲ್ಲ. ದೇಶ ಹಾಗೂ ಭಾಷೆಗಳನ್ನು ಮೀರಿದ ಕಲಾವಿದ ಎಂಬ ಹೊಗಳಿಕೆಯ ಮಾತುಗಳು ಕನ್ನಡದ ಸ್ಫುರದ್ರೂಪಿ ನಟ ಅನಂತ್ ನಾಗ್ ಅವರ ಬಗ್ಗೆ ಕೇಳಿ ಬರುತ್ತದೆ. ಚಿರಯುವಕ, ಎವರ್ ಗ್ರೀನ್ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳ ಸಾಲಿಗೆ ಆನಂತ್ ಪೈಪೋಟಿ ಇಲ್ಲದ್ದಂತೆ ಸೇರಿಬಿಡುತ್ತಾರೆ. ಅನಂತ್ ಅವರ ನಟನೆ ಜೊತೆಗೆ ಆ ನಗೆ ಸದಾ ಕಾಲ ಅವರನ್ನು ಸಿನಿರಸಿಕರಲ್ಲಿ ಸ್ಥಿರವಾಗಿರುತ್ತದೆ. ಅವರ ಸುಂದರ ನಗೆ ಅವರ ಬದುಕಲ್ಲೂ ಸ್ಥಿರವಾಗಲಿ ಹ್ಯಾಪಿ ಬರ್ಥ್ ಡೇ ಅನಂತ್ ನಾಗ್. ಕರಾವಳಿಯ ವಿಶಾಲವಾದ ಪರಿಸರದಲ್ಲಿ ತಮ್ಮ ಶಂಕರನ ಜೊತೆ ಆಡಿ ಬೆಳೆದ, ಅನಂತ್ ಅವರಿಗೆ ಮುಂಬೈ ಕೂಡಾ ಚಿರಪರಿಚಿತ. ಆದರೆ, ಶಂಕರ್ ನಾಗ್ ಗೆ ಮುಂಬೈನ ಸಂಕುಚಿತ ಗಲ್ಲಿಗಳಲ್ಲಿ ಇಕ್ಕಟ್ಟಿನ ಚಾಳಿಯಲ್ಲಿ ವಾಸ ಮಾಡುವ ಅನುಭವಗಳು ಅಷ್ಟಾಗಿ ಹಿಡಿಸಿರಲಿಲ್ಲವಂತೆ. ಕೊಂಕಣಿ, ಮರಾಠಿ, ಹಿಂದಿ ಹೀಗೆ ಅನೇಕ ಭಾಷೆಗಳ, ಸಂಸ್ಕೃತಿಯ ಪರಿಚಯದ ಲಾಭ ಮುಂದೆ ಅಣ್ಣ ತಮ್ಮ ಇಬ್ಬರ ಜೀವನದ ಪ್ರತಿ ಹೆಜ್ಜೆಯಲ್ಲೂ ಪ್ರತಿಬಿಂಬಿತವಾಗಿದೆ.

ಶಂಕರ್ ಹಾಗೂ ಅನಂತ್‌ರ ಒಡನಾಟದ ಬಗ್ಗೆ ಸುವಿಸ್ತಾರವಾಗಿರುವ ಕಥನದಲ್ಲಿ ಕಾಣಬರುವ ಅಂಶವೆಂದರೆ, ಭಾವನಾಜೀವಿಯಾದ ಅನಂತ್ ತಾವು ಕಲಿತ ಸದ್ವಿದ್ಯೆಗಳನ್ನೆಲ್ಲಾ ತನ್ನ ಪ್ರೀತಿಯ ತಮ್ಮನಿಗೆ ಒಂದೊಂದಾಗಿ ಧಾರೆಯೆರೆದಿದ್ದು. ಅಣ್ಣ ತಮ್ಮನ ಪ್ರೀತಿಯ ಒಡನಾಟ ಎಲ್ಲವನ್ನು ನನ್ನ ತಮ್ಮ ಶಂಕರ ಪುಸ್ತಕದಲ್ಲಿ ತೆರೆದಿಟ್ಟಿರುವ ಅನಂತ್ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರಲ್ಲಿ ಅಚ್ಚರಿಯೇನಿಲ್ಲ. ನಟನಾಗಿ ಅಷ್ಟೇ ಅಲ್ಲ, ರಾಜಕಾರಣಿ, ಸಾಮಾಜಿಕ ಕಳಕಳಿಯುಳ್ಳ ನಾಗರಿಕ, ಸಾಹಿತ್ಯ ಪ್ರೇಮಿಯಾಗಿ ಕೂಡಾ ಅನಂತ್ ನಮ್ಮೆ ಹೆಮ್ಮೆ.



No comments:

Post a Comment