Translate in your Language

Tuesday, September 8, 2015

ಕೆ.ಪಿ.ಪೂರ್ಣಚಂದ್ರ ತೇಜಸ್ವಿಅವರ 77ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು 1938 ಸೆಪ್ಟೆಂಬರ್ 8 ರಂದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ಕೆ.ವಿ.ಪುಟ್ಟಪ್ಪ(ಕುವೆಂಪು), ತಾಯಿ ಹೇಮಾವತಿ. ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಇವರ ಪೂರ್ಣ ಹೆಸರು. ಶಿವಮೊಗ್ಗ ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಎ. (ಅನರ‍್ಸ) ಹಾಘೂ ಎಂ.ಎ. ಪದವಿಗಳನ್ನು ಪಡೆದರು. ೧೯೬೬ ನವೆಂಬರ್ ೨೭ ರಂದು ರಾಜೇಶ್ವರಿ ಎಂಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತೇಜಸ್ವಿಯವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿದ್ದರು. ಇವರು ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿಕೊಂಡು ಬಂದಿದ್ದರು. 




ಕುವೆಂಪುರವರ ಕಲಾತ್ಮಕ ಗುಣವೊಂದನ್ನು ಹೊರತುಪಡಿಸಿ ಇನ್ನಾವುದರ ಪ್ರಭಾವಕ್ಕೊಳಗಾಗದೆ ತಮ್ಮ ಸ್ವಂತಿಕೆಯನ್ನು ಸ್ಥಾಪಿಸಿಕೊಂಡರು. ಕೃಷಿ, ಸಾಹಿತ್ಯದ ಜೊತೆಗೆ ಫೋಟೋಗ್ರಫಿ, ಹಕ್ಕಿಗಳ ಚಿತ್ರಗ್ರಹಣ ಇವರ ವಿಶೇಷತೆ. ಇವರ ಕೆಲವು ಕೃತಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ. ಅಬಚೂರಿನ ಪೋಸ್ಟಾಪೀಸು, ತಬರನ ಕತೆ, ಕುಬಿ ಮತ್ತು ಇಯಾಲ ಇವು ಪ್ರಶಸ್ತಿ ಪಡೆದ ಚಲನಚಿತ್ರಗಳಾಗಿವೆ. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ತಬರನ ಕತೆ ಚಿತ್ರಕ್ಕೆ ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ದೊರೆತಿದೆ. 

ವಿಶಿಷ್ಟ ಚಿಂತನೆ ಹಾಗೂ ಹಾಸ್ಯ ಪ್ರಜ್ಞೆಯ ಬರಹಗಳಿಂದ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಚುರುಕಾದ ಕಥನ ಶೈಲಿ, ವೈಚಾರಿಕತೆ ಇವರ ಬರಹದ ಇನ್ನೊಂದು ಗುಣ. ವಿಜ್ಞಾನ ಸಾಹಿತ್ಯದ ಬಗ್ಗೆ ಕೆಲವು ಕೃತಿಗಳನ್ನು ರಚಿಸಿದ್ದಾರೆ. 
ಇವರ ಛಾಯಚಿತ್ರ ಸಂಪುಟದ ಶುಭಾಶಯ ಪತ್ರಗಳನ್ನು ಕೂಡಾ ಪ್ರಕಟಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಸುಶ್ಮಿತಾ ಮತ್ತು ಈಶಾನ್ಯ ಇವರು 2007 ರ ಏಪ್ರಿಲ್ 5 ರಂದು ಮೂಡಿಗೆರೆಯಲ್ಲಿ ನಿಧನರಾದರು. 

ಕೃತಿಗಳು
ಪ್ಲೈಯಿಂಗ್ ಸಾಸರ‍್ಸ್ ಭಾಗ-೧ ಮತ್ತು ೨ ವಿಸ್ಮಯ ಭಾಗ ೧,೨,೩ ಪರಿಸರದ ಕತೆ, ಸಹಜ ಕೃಷಿ, ಮಿಸ್ಸಿಂಗ್ ಲಿಂಕ್, ನಿಗೂಢ ಮನುಷ್ಯರು, ಬೃಹನ್ನಳೆ, ಯಮಳ ಪ್ರಶ್ನೆ, ನಡೆಯುವ ಕಡ್ಡಿ, ಹಾರುವ ಎಲೆ, ಅಣ್ಣನ ನೆನಪು, ಮಿಂಚುಳ್ಳಿ, ಕನ್ನಡ ನಾಡಿನ ಹಕ್ಕಿಗಳು ಭಾಗ-೧ ಹೆಜ್ಜೆ ಮೂಡದ ಹಾದಿ, ಹಕ್ಕಿ ಪುಕ್ಕ, ಕಾಡಿನ ಕತೆಗಳು, ೧,೨,೩,೪ ರುದ್ರ ಪ್ರಯಾಗದ ಭಯಾನಕ ನರಭಕ್ಷಕ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕರ್ವಾಲೊ, ಕಿರಗೂರಿನ ಗಯ್ಯಾಳಿಗಳು, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, ಮಿಲೆನಿಯಂ (ಭಾಗ ೧ ರಿಂದ ೧೬), ಮಾಯಾಲೋಕ, ಪ್ಯಾಪಿಲಾನ್ ಭಾಗ ೧ ಮತ್ತು ೨ ಅಬಚೂರಿನ ಪೋಸ್ಟಫೀಸು, ಪಾಕ ಕ್ರಾಂತಿ ಮತ್ತು ಇತರ ಕತೆಗಳು, ಹುಲಿಯೂರಿನ ಸರಹದ್ದು, ವ್ಯಕ್ತಿ ವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ, ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು ಮುಂತಾದವು. 

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೮೫ರಲ್ಲಿ "ಚಿದಂಬರ ರಹಸ್ಯ" ಕೃತಿಗೆ ವರ್ಷದ ಶ್ರೇಷ್ಠ ಕೃತಿ ಪ್ರಶಸ್ತಿ ಲಭಿಸಿದೆ.
೧೯೮೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೮ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
೧೯೮೯ ರಲ್ಲಿ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ
೧೯೯೩ ರಾಜ್ಯ ಪರಿಸರ ಪ್ರಶಸ್ತಿ
೨೦೦೧ ಪಂಪ ಪ್ರಶಸ್ತಿ ದೊರೆತಿವೆ.

No comments:

Post a Comment