Translate in your Language

Thursday, August 25, 2016

ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ


ರಾಧಾ-ಕೃಷ್ಣರ ಪ್ರೇಮ ಕಥೆ


ಜಗದೇಕ ಒಡೆಯ ಶ್ರೀಕೃಷ್ಣ ಪರಮಾತ್ಮನ ಹುಟ್ಟುಹಬ್ಬವನ್ನು (Sri Krishna Born On 21-07-3227 BC, Died on 18-02-3102 BCಆಚರಿಸಲು, ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ.  
ಜನ್ಮಾಷ್ಟಮಿಯ (25th August 2016) ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ.  
 ಜಗನ್ನಾಟಕ ಸೂತ್ರಧಾರಿ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು ಇದ್ದರೇ?
ಜನ್ಮಾಷ್ಟಮಿ ಬಗ್ಗೆ ಹಲವಾರು ಕಥೆಗಳಿವೆ. ಕಂಸನ ಬಂಧನದಲ್ಲಿದ್ದ ವಾಸುದೇವ ಮತ್ತು ದೇವಕಿಯ ಪುತ್ರನೇ ಕೃಷ್ಣ. ಶ್ರೀಕೃಷ್ಣನ ಲೀಲೆಗಳನ್ನು ವಿವರಿಸುವುದು ಅಸಾಧ್ಯ. ಇಂತಹ ಲೀಲೆಗಳಲ್ಲಿ ಒಂದಾಗಿರುವುದು ರಾಧಾ-ಕೃಷ್ಣರ ಪ್ರೇಮಕಥೆ. ರಾಧಾ-ಕೃಷ್ಣರ ಪ್ರೀತಿಯು ಇಂದಿಗೂ ನಿಷ್ಕಾಮ ಪ್ರೀತಿಗೆ ಒಂದು ಅದ್ಭುತ ಉದಾಹಣೆಯಾಗಿದೆ. ಈಗಲೂ ಪ್ರೀತಿಸುವವರಿಗೆ ರಾಧಾ-ಕೃಷ್ಣನ ಪ್ರೀತಿಯು ಪ್ರೇರಣೆಯಾಗಿದೆ. ರಾಧಾ-ಕೃಷ್ಣ ಪ್ರೇಮಕಥೆ ಬಗ್ಗೆ ಇರುವ ಪುರಾಣಗಳ ಬಗ್ಗೆ ತಿಳಿದುಕೊಳ್ಳಿ....
ಲಕ್ಷ್ಮಿ ದೇವಿಯ ಅವತಾರ-ರಾಧೆ
ಮಹಾಭಾರತದ ಕಾಲದಲ್ಲೂ ಜಾತಿ ಎನ್ನುವುದು ತಿಳಿದುಬರುತ್ತದೆ. ಯಾಕೆಂದರೆ ಕೃಷ್ಣನು ರಾಜವಂಶಸ್ಥನಾದರೆ ಅದೇ ರಾಧೆಯು ದನಕಾಯುವ ಸಮುದಾಯಕ್ಕೆ ಸೇರಿದಾಕೆ. ಲಕ್ಷ್ಮಿ ದೇವಿಯವರಿಂದ ವರವನ್ನು ಪಡೆದು ಆಕೆಯ ಪುತ್ರಿಯಾಗಿ ಜನಿಸಿದ ರಾಧೆ ವೃಷಭಾನು ಗುರ್ಜರ್ ಸಮುದಾಯಕ್ಕೆ ಸೇರಿದಾಕೆ. ಆದರೆ ಕೃಷ್ಣ ಗೋಕುಲದ ರಾಜನಾಗಿದ್ದವ. ಇದರಿಂದ ರಾಧೆಯನ್ನು ಲಕ್ಷ್ಮಿ ದೇವಿಯ ಅವತಾರವೆಂದು ಕರೆಯಬಹುದಾಗಿದೆ.  
ಕೃಷ್ಣ ಮತ್ತು ರಾಧೆ ಬಾಲ್ಯದಲ್ಲಿ ಸ್ನೇಹಿತರು
ಕೃಷ್ಣ ಮತ್ತು ರಾಧೆ ಬಾಲ್ಯದಲ್ಲಿ ಸ್ನೇಹಿತರಾಗಿದ್ದರು. ವೃಂದಾವನದಲ್ಲಿ ರಾಸಲೀಲೆ ಮಾಡಿದ ಗೋಪಿಕೆಯರಲ್ಲಿ ರಾಧೆಯು ಒಬ್ಬಳಾಗಿದ್ದಳು. ಗೋಪಿಕೆಯರೆಲ್ಲರೂ ಕೃಷ್ಣನಿಗೆ ಹತ್ತಿರವಾಗಿದ್ದರೂ ರಾಧೆಯನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದ. ಕೃಷ್ಣ ಕೊಳಲನ್ನು ನುಡಿಸುವಾಗ ರಾಧೆ ಹಾಡುತ್ತಾ ನೃತ್ಯ ಮಾಡುತ್ತಿದ್ದಳು.
ಆದರೆ ಈ ಪ್ರೀತಿಯು ಪ್ರೌಢತೆಗೆ ಹೋಗಲೇ ಇಲ್ಲ. ಯಾಕೆಂದರೆ 12ನೇ ವಯಸ್ಸಿನಲ್ಲಿ ಕೃಷ್ಣನು ವೃಂದಾವನವನ್ನು ಬಿಟ್ಟು ಗುರುಕುಲ ಸೇರಲು ಹೋದ ಮತ್ತು ಮಥುರಾದಲ್ಲಿದ್ದ ತನ್ನ ಮಾವ ಕಂಸನ ವಧಿಸಲು ಹೋದ.ಕೆಲವೊಂದು ಪುರಾಣಗಳಲ್ಲಿ ಇರುವಂತೆ ರಾಧೆಯ ಮದುವೆಯು ಅತ್ಯಂತ ಶ್ರೀಮಂತ ವ್ಯಕ್ತಿ ಅಭಿಮನ್ಯು ಜತೆ ನಡೆದಿದೆ ಎಂದು ಹೇಳಲಾಗಿದೆ.

ಪುರಾಣಗಳ ಪ್ರಕಾರ
ಕೆಲವು ಪುರಾಣಗಳಲ್ಲಿ ರಾಧೆಯ ಪತಿಯ ಹೆಸರು ಚಂದ್ರಹಾಸ ಎಂದು ತಿಳಿದುಬರುತ್ತದೆ. ವೃಂದಾವನದಲ್ಲಿ ರಾಧಾ-ಕೃಷ್ಣನ ಮದುವೆಯು ತುಂಬಾ ಗೌಪ್ಯವಾಗಿ ನಡೆದಿತ್ತು ಮತ್ತು ಬ್ರಹ್ಮನು ಪೌರೋಹಿತ್ಯವನ್ನು ವಹಿಸಿದ್ದ ಎಂದು ಕೆಲವೊಂದು ಪುರಾಣಗಳು ಹೇಳುತ್ತವೆ. ಆದರೆ ಇದು ಪುರಾಣಗಳಲ್ಲಿ ಹೆಚ್ಚಿನ ಮಹತ್ವನ್ನು ಪಡೆದುಕೊಂಡಿಲ್ಲ.


ರಾಧೆ ಮತ್ತು ಕೃಷ್ಣನ ಪವಿತ್ರ ಪ್ರೀತಿ


ರಾಧೆ ಮತ್ತು ಕೃಷ್ಣನ ಪ್ರೀತಿಯು ದೈಹಿಕ ಸಂಬಂಧವನ್ನು ಮೀರಿದಾಗಿತ್ತು ಎನ್ನುವ ಸಂದೇಶವನ್ನು ಸಾರುತ್ತದೆ. ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ. ಆದರೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅವರಿಬ್ಬರ ಪ್ರೀತಿಯಲ್ಲಿ ಯಾವುದೇ ದೈಹಿಕ ಆಕರ್ಷಣೆ ಇಲ್ಲದೆ ಇದ್ದ ಕಾರಣದಿಂದಾಗಿ ಪ್ರೀತಿಯು ತುಂಬಾ ಪವಿತ್ರವಾಗಿತ್ತು.
ಇದು ನಿಷ್ಕಾಮ ಮಟ್ಟದ ಪ್ರೀತಿಯಾಗಿತ್ತು. ಕೃಷ್ಣನಿಗೆ ರಾಧೆಯ ಭಕ್ತಭಾವವೂ ಅಭೂತಪೂರ್ವಾಗಿತ್ತು. ಇದರಿಂದಾಗಿಯೇ 16008 ಮಂದಿ ಪತ್ನಿಯರಿದ್ದರೂ ಕೃಷ್ಣನಿಗೆ ಅತೀ ಮೆಚ್ಚಿನ ಸಖಿಯಾಗಿದ್ದವಳು ರಾಧೆ. ಮನೆಯಲ್ಲಿ ಪತ್ನಿಯಾಗಿ ಬರದಿದ್ದರೂ ರಾಧೆ ಮಾತ್ರ ಕೃಷ್ಣನ ಆತ್ಮ ಸಂಗಾತಿಯಾಗಿದ್ದಳು.
ಇವರ ಪ್ರೀತಿ ಎಂದೆಂದಿಗೂ ಅಜರಾಮರ ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ನಾವು ರಾಧಾ-ಕೃಷ್ಣರನ್ನು ಪೂಜಿಸುತ್ತೇವೆ. ರಾಧಾ-ಕೃಷ್ಣರ ಹೆಸರು ಜಗತ್ತು ಇರುವ ತನಕ ಅಜರಾಮರವಾಗಿರುತ್ತದೆ. ಇದರಿಂದಾಗಿಯೇ ರಾಧಾ-ಕೃಷ್ಣರ ಪ್ರೀತಿಯು ಯಾವತ್ತೂ ಪವಿತ್ರವೆಂದು ಭಾವಿಸಲಾಗುತ್ತಿದೆ.

No comments:

Post a Comment