ನೀನಾಸಂ ಎಂಬ ಸೃಜನಶೀಲರ ಗೂಡು ಹಲವು ಹನ್ನೊಂದು ಪ್ರತಿಭೆಗಳನ್ನು ರಂಗಭೂಮಿಗೆ, ಕಿರುತೆರೆಗೆ ಮತ್ತು ಹಿರಿತೆರೆಗೆ ನೀಡಿದೆ. ನೀನಾಸಂ ಅಶ್ವತ್ಥ್‌ರವರು ಈಗಾಗಲೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಏಕಪ್ರಕಾರವಾಗಿ ತೊಡಗಿಸಿಕೊಂಡಿರುವುದು ನಿಮಗೆ ಗೊತ್ತೇ ಇದೆ. ಅವರ ಸಾಲಿಗೆ ಈಗ ಹೊಸದಾಗಿ ಸೇರುತ್ತಿದ್ದಾರೆ ನೀನಾಸಂ ಸತೀಶ್.
ಇತ್ತೀಚಿನ ಅವರ ಚಿತ್ರ "ರಾಕೆಟ್" ಮಕಾಡೆ ಮಲಗಿದ ನಂತರ ಬೇಸರಗೊಂಡಿದ್ದ ಸತೀಶ್ ಅವರಿಗೆ ಮರಳಿ ಚೈತನ್ಯ ನೀಡಿದ್ದು "ಬ್ಯುಟಿಫುಲ್-ಮನಸುಗಳ" ಸಕ್ಸಸ್- ನಂತರ ಚೇತರಿಸಿಕೊಂಡ ಸತೀಶ್ "ಮಂಡ್ಯದ ಹುಡುಗರು" ಮತ್ತು ಸ್ವಮೇಕ್ ಚಿತ್ರವಾದ "ಟೈಗರ್ ಗಲ್ಲಿ" ಚಿತ್ರಗಳಲ್ಲಿ ನೀನಾಸಂ ಸತೀಶ್ ಚಿತ್ರದಲ್ಲಿ ಬಿಜಿಯಾಗಿರುವ ಅವರು ಈ ವರ್ಷದ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ನೀವು ಯೋಗರಾಜ ಭಟ್ಟರ 'ಪಂಚರಂಗಿ' ಚಿತ್ರವನ್ನು ನೋಡಿದ್ದೇ ಆದಲ್ಲಿ, ಕುರುಡ ತಂದೆಯ ಜೊತೆಗೆ ಕಿತ್ತಾಡುವ ಬಸ್ ಡ್ರೈವರ್ ಪಾತ್ರವನ್ನು ಗಮನಿಸಿರಬಹುದು. ಈ ಪಾತ್ರವನ್ನು ವಹಿಸಿದ್ದು ಇದೇ ನೀನಾಸಂ ಸತೀಶ್.
ಮಂಡ್ಯ ಜಿಲ್ಲೆಯ ಯಾಲದಹಳ್ಳಿ ಯಲ್ಲಿ ಜನಿಸಿದ ಸತೀಶ್(ಮೂಲ ಹೆಸರು: ಶಿವಾ) ಹೆಗ್ಗೋಡಿನ ನೀನಾಸಂನಲ್ಲಿ ನಾಲ್ಕು ವರ್ಷಗಳ ತರಬೇತಿಯನ್ನು ಪಡೆದಿದ್ದಾರೆ. ಹೀಗಾಗಿ ಅವರ ಹೆಸರಿನ ಜೊತೆಗೆ ನೀನಾಸಂ ಎಂಬ ಹೆಸರೂ ಅಂಟಿಕೊಂಡಿದೆ.
ನೀನಾಸಂನಲ್ಲಿನ ತರಬೇತಿಯ ನಂತರ 'ಸ್ಮಶಾನ ಕುರುಕ್ಷೇತ್ರ', 'ಮಹಾನಿರ್ವಾಣ' ಇವೇ ಮೊದಲಾದ ನಾಟಕಗಳಲ್ಲಿ ತೊಡಗಿಸಿಕೊಂಡ ಸತೀಶ್ 'ಮಾದೇಶ' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಕೇವಲ ನಟನೆ ಮಾತ್ರವೇ ಅಲ್ಲದೇ ಸಂಭಾಷಣೆ, ನಿರ್ದೇಶನ ಹೀಗೆ ಹಲವು ಕ್ಷೇತ್ರಗಳಲ್ಲಿ ಸತೀಶ್‌ಗೆ ಪರಿಣತಿಯಿದೆ ಎಂಬುದನ್ನು ಮನಗಂಡ ಚಿತ್ರರಂಗ ಇವರಿಗೆ ಒಂದರ ಹಿಂದೆ ಒಂದರಂತೆ ಅವಕಾಶಗಳನ್ನು ನೀಡುತ್ತಲೇ ಹೋಯಿತು.
ಇದರ ಪರಿಣಾಮವಾಗಿ 'ಮನಸಾರೆ', 'ಪಂಚರಂಗಿ', 'ಪರಿಚಯ', 'ಯೋಗಿ', 'ಲೈಫು ಇಷ್ಟೇನೇ', 'ರಂಗಪ್ಪ ಹೋಗ್ಬಿಟ್ನಾ', 'ಶಿಕಾರಿ', 'ಪರಮಾತ್ಮ', 'ಪುಟ್ಟಕ್ಕನ ಹೈವೇ' ಕ್ವಾಟ್ಲೆ ಸತೀಶ್, ಲವ್ ಇನ್ ಮಂಡ್ಯ, ಮೊದಲಾದ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುವಂತಾಯಿತು. ಲೂಸಿಯಾ ಚಿತ್ರದ ಸೂಪರ್ ಸಕ್ಸಸ್ ನಂತರ ಅವರು ಚಿತ್ರರಂಗದ ಆಸ್ತಿಯಾಗಿ ಪರಿಣಮಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಅಪ್ಪಟ ಪ್ರತಿಭಾವಂತರಾದ ನೀನಾಸಂ ಸತೀಶ್‌ಗೆ ಚಿತ್ರರಂಗವು ಕೇವಲ ಹಾಸ್ಯಪಾತ್ರಗಳನ್ನಷ್ಟೇ ನೀಡದೆ ಅವರ ಬಹುಮುಖ ಪ್ರತಿಭೆಯನ್ನು ಬಳಸಿಕೊಳ್ಳುವಂತಾಗಲಿ ಎಂದು ಆಶಿಸೋಣ.
No comments:
Post a Comment