Translate in your Language

Sunday, December 29, 2013

ಕುವೆಂಪು-ಅವರ 111ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ
Kuvempu
ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. 



ರಸಋಷಿ ಕುವೆಂಪು 
ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದಂತ ಕುವೆಂಪುರವರು ತಾವೆ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪುರವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು,ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ "ಪರ್ವತಾರಣ್ಯ ಪ್ರಪಂಚ"ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ ,ಕಾದಂಬರಿ,ನಾಟಕ,ಕವಿತೆ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ ಎಲ್ಲ ಪಾತ್ರಗಳು ಈ ಅರಣ್ಯ ಸಂಸ್ಕೃತಿಯ ಪ್ರತೀಕಗಳೇ. ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನಪ್ರೀತಿಯ ವಿಸ್ತರಣೆ. ಈ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ,ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ ಆಗಿದೆ. ಮಲೆನಾಡಿನ ನಿಸರ್ಗದ ಚೆಲುವಿನ ಜೊತೆಗೆ ಅದರ ಒಡಲಿನ ಸಾಮಾಜಿಕ ಬದುಕನ್ನು,ಅದರ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಕಲಿಸುತ್ತ ಬಂದಿದ್ದಾರೆ. ಈ ಅರಣ್ಯ ಕೇಂದ್ರಿತ ಸಾಮಾಜಿಕ ಬದುಕಿನ ಮೂಲಕ ಇಡೀ ಭಾರತೀಯ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನದ ಪಲ್ಲಟಗಳನ್ನು ತಲ್ಲಣಗಳನ್ನೂ ಅವರ ಗ್ರಹನಾ ಶಕ್ತಿಯಿಂದ ವ್ಯಕ್ತವಾಗಿದೆ. 

Saturday, December 21, 2013

ಯು.ಆರ್.ಅನಂತಮೂರ್ತಿ ಅವರಿಗೆ 82 ನೇ ಹುಟ್ಟು ಹಬ್ಬದ ಶುಭಾಶಯಗಳು

ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ತಮ್ಮ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.

ಜನನ
ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಹಳ್ಳಿಯಲ್ಲಿ, ೧೯೩೨ರ ಡಿಸೆಂಬರ್ ೨೧ ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ).

ವಿದ್ಯಾಭ್ಯಾಸ
'ದೂರ್ವಾಸಪುರ'ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು.

ವೃತ್ತಿ ಜೀವನ

ಹಾಸನ, ಶಿವಮೊಗ್ಗ , ಮೈಸೂರುಗಳಲ್ಲಿ ಇಂಗ್ಲೀಷ್ ಉಪನ್ಯಾಸಕ
ಮೈಸೂರು ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ರೀಡರ್, ೧೯೫೬-೧೯೭೦
ಮೈಸೂರು ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರಾಧ್ಯಾಪಕ, ೧೯೭೦-೮೭
ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ, ೧೯೮೭-೯೧
ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, ೧೯೯೨
ಸಂದರ್ಶಕ ಪ್ರಾಧ್ಯಾಪಕ,ಶಿವಾಜಿ ವಿಶ್ವವಿದ್ಯಾಲಯ ಕೊಲ್ಲಾಪುರ (೧೯೮೨),
ಜವಾಹರಲಾಲ್ ವಿಶ್ವವಿದ್ಯಾಲಯ, ದೆಹಲಿ (೧೯೮೫)
ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ (ದೆಹಲಿ), ೧೯೯೩
ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, ೨೦೦೦
ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷ, ೧೯೯೨
ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿಶ್ವವಿದ್ಯಾಲಯ (೧೯೭೫,೧೯೮೫),
ಟೆಕ್ಸಾಸ್ ವಿಶ್ವವಿದ್ಯಾಲಯ (೧೯೭೮, ೧೯೯೭)
ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ (೨೦೧೨)
ಇಂದಿರಾಗಾಂಧಿ ಮುಕ್ತ ವಿ.ವಿ. ಟ್ಯಾಗೋರ್ ಪೀಠದ ಅಧ್ಯಕ್ಷ
ಅಧ್ಯಕ್ಷ, ಆಡಳಿತ ಮಂಡಳಿ, ಫಿಲಂ ಮತ್ತು ಟೆಲಿವಿಶನ್ ಸಂಸ್ಥೆ, ಪುಣೆ (೨೦೦೦-೨೦೦೪)

ಕೃತಿಗಳು
ಕಥಾ ಸಂಕಲನ
ಎಂದೆಂದೂ ಮುಗಿಯದ ಕತೆ (೧೯೫೫)
ಪ್ರಶ್ನೆ (೧೯೬೩)
ಮೌನಿ (೧೯೭೨)
ಆಕಾಶ ಮತ್ತು ಬೆಕ್ಕು (೨೦೦೧)
ಕ್ಲಿಪ್ ಜಾಯಿಂಟ್
ಘಟಶ್ರಾದ್ಧ
ಸೂರ್ಯನ ಕುದುರೆ (೧೯೮೧)
ಪಚ್ಚೆ ರೆಸಾರ್ಟ್ (೨೦೧೧)
ಬೇಟೆ, ಬಳೆ ಮತ್ತು ಓತಿಕೇತ
ಎರಡು ದಶಕದ ಕತೆಗಳು
ಮೂರು ದಶಕದ ಕಥೆಗಳು (೧೯೮೯)
ಐದು ದಶಕದ ಕತೆಗಳು (೨೦೦೨)
ಕಾದಂಬರಿಗಳು[ಬದಲಾಯಿಸಿ]
ಸಂಸ್ಕಾರ (೧೯೬೫)
ಭಾರತೀಪುರ (೧೯೭೩)
ಅವಸ್ಥೆ (೧೯೭೮)
ಭವ (೧೯೯೪)
ದಿವ್ಯ (೨೦೦೧)
ಪ್ರೀತಿ ಮೃತ್ಯು ಮತ್ತು ಭಯ (೨೦೧೨)

ವಿಮರ್ಶೆ ಮತ್ತು ಪ್ರಬಂಧ ಸಂಕಲನ
ಪ್ರಜ್ಞೆ ಮತ್ತು ಪರಿಸರ (೧೯೭೧)
ಪೂರ್ವಾಪರ (೧೯೮೦)
ಸಮಕ್ಷಮ (೧೯೮೦)
ಸನ್ನಿವೇಶ (೧೯೭೪)
ಯುಗಪಲ್ಲಟ (೨೦೦೧)
ವಾಲ್ಮೀಕಿಯ ನೆವದಲ್ಲಿ (೨೦೦೬)
ಮಾತು ಸೋತ ಭಾರತ (೨೦೦೭)
ಸದ್ಯ ಮತ್ತು ಶಾಶ್ವತ (೨೦೦೮)
ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
ಋಜುವಾತು (೨೦೦೭)
ಶತಮಾನದ ಕವಿ ಯೇಟ್ಸ್ (೨೦೦೮)
ಕಾಲಮಾನ (೨೦೦೯)
ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
ಶತಮಾನದ ಕವಿ ರಿಲ್ಕೆ (೨೦೦೯)
ರುಚಿಕರ ಕಹಿಸತ್ಯಗಳ ಕಾಲ (೨೦೧೧)
ಆಚೀಚೆ (೨೦೧೧)

ನಾಟಕ
ಆವಾಹನೆ (೧೯೬೮)

ಕವನ ಸಂಕಲನ
ಹದಿನೈದು ಪದ್ಯಗಳು (೧೯೬೭)
ಮಿಥುನ (೧೯೯೨)
ಅಜ್ಜನ ಹೆಗಲ ಸುಕ್ಕುಗಳು (೧೯೮೯)
ಅಭಾವ (೨೦೦೯)
ಸಮಸ್ತ ಕಾವ್ಯ (೨೦೧೨)

ಆತ್ಮಕತೆ
ಸುರಗಿ (೨೦೧೨)

ಚಲನಚಿತ್ರವಾದ ಕೃತಿಗಳು
ಸಂಸ್ಕಾರ
ಬರ
ಅವಸ್ಥೆ
ಮೌನಿ (ಸಣ್ಣಕಥೆ)
ದೀಕ್ಷಾ (ಹಿಂದಿ ಚಿತ್ರ)
ಪ್ರಕೃತಿ (ಸಣ್ಣಕಥೆ)

ಪ್ರಮುಖ ಉಪನ್ಯಾಸಗಳು
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ತುಮಕೂರು, 2002
ಫ್ರೆಂಚ್ ಸಾಹಿತ್ಯ ಉತ್ಸವ, 2002
ಬರ್ಲಿನ್ ಸಾಹಿತ್ಯ ಉತ್ಸವ, 2002
ಕರ್ನಾಟಕವನ್ನು ಕುರಿತ ವಿಚಾರ ಸಂಕಿರಣ, ಅಯೋವಾ ವಿವಿ, 1997
ಭಾರತವನ್ನು ಕುರಿತ ವಿಚಾರ ಸಂಕಿರಣ, ಬರ್ಲಿನ್, ಜರ್ಮನಿ, 1997
'ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್' ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997
'ಟ್ರಾನ್ಸ್‌ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್' ವಿಚಾರ ಸಂಕಿರಣ, ಲಂಡನ್, 1993
ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993
ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್, ವಾರಣಾಸಿ, 1989
'ಮಾರ್ಕ್ಸಿಸಂ ಅಂಡ್ ಲಿಟರೇಚರ್', ಅಂಗನ್‌ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1976

ಪ್ರಶಸ್ತಿ ಮತ್ತು ಪುರಸ್ಕಾರಗಳು
ಕೃಷ್ಣರಾವ್ ಚಿನ್ನದ ಪದಕ (೧೯೫೮)
ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ (ಕ್ರಮವಾಗಿ ೧೯೭೦, ೧೯೭೮, ೧೯೮೯)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೩)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೪)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಾಸ್ತಿ ಪ್ರಶಸ್ತಿ (೧೯೯೪)
ಜ್ಞಾನಪೀಠ ಪ್ರಶಸ್ತಿ (೧೯೯೪)
ಬಷೀರ್ ಪುರಸ್ಕಾರ, ಕೇರಳ ಸರ್ಕಾರ (೨೦೧೨)
ರವೀಂದ್ರ ಟ್ಯಾಗೋರ್ ಸ್ಮಾರಕ ಪದಕ (೨೦೧೨)
ಗಣಕ ಸೃಷ್ಟಿ ಪ್ರಶಸ್ತಿ, ಕೋಲ್ಕತ (೨೦೦೨)
ಪದ್ಮಭೂಷಣ (೧೯೯೮)
ಶಿಖರ್ ಸಮ್ಮಾನ್ (ಹಿಮಾಚಲ ಪ್ರದೇಶ ಸರ್ಕಾರ) (೧೯೯೫)
೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (ತುಮಕೂರು)

ನಿಧನ
ಡಾ.ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಜೊತೆಗೆ ಸಕ್ಕರೆ ಕಾಯಿಲೆ ಕಾಡುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ 'ಮಣಿಪಾಲ್ ಆಸ್ಪತ್ರೆ'ಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಹೊಂದದೆ ಮೂತ್ರಪಿಂಡ ವೈಫ಼ಲ್ಯ ಹಾಗು ಲಘು ಹೃದಯಾಘಾತದಿಂದ ೨೦೧೪ರ ಆಗಸ್ಟ್ ೨೨ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿ ವಾಸಿಸುತ್ತಿದ್ದ ಮೂರ್ತಿಯವರ ಅಂತಿಮ ಸಂಸ್ಕಾರ, ಬೆಂಗಳೂರಿನ 'ಜ್ಞಾನಭಾರತಿ ಕಲಾಗ್ರಾಮ'ದಲ್ಲಿ ೨೦೧೪ರ ಆಗಸ್ಟ್ ೨೩ ನೆಯ ತಾರೀಖಿನ ಮಧ್ಯಾಹ್ನ ಸುಮಾರು ೪ ಗಂಟೆಗೆ ಜರುಗಿತು. ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ.

ಒಂದಿಷ್ಟು ಹೆಚ್ಚಿನ ಮಾಹಿತಿಗಳು
೧೯೫೫ರಲ್ಲಿ ಎಂದೆಂದೂ ಮುಗಿಯದ ಕತೆ ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು.
೧೯೬೫ರಲ್ಲಿ ಮೊದಲ ಕಾದಂಬರಿ ಸಂಸ್ಕಾರ ಪ್ರಕಟವಾಯಿತು. ಇದು ವ್ಯಾಪಕ ಚರ್ಚೆಗೆ ಒಳಗಾದ ಕಾದಂಬರಿ. ಈ ಕಾದಂಬರಿ ಭಾರತದ ಹಲವು ಭಾಷೆಗಳಲ್ಲದೆ, ಇಂಗ್ಲಿಷ್, ರಷ್ಯನ್, ಫ್ರೆಂಚ್, ಜರ್ಮನ್, ಹಂಗೇರಿಯನ್ ಮತ್ತಿತರ ಭಾಷೆಗಳಿಗೆ ಅನುವಾದವಾಗಿದೆ.

ಯು.ಆರ್.ಅನಂತಮೂರ್ತಿಯವರ ಮೊದಲ ಕಾದಂಬರಿ ಸಂಸ್ಕಾರ ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೂ ಮೊದಲೇ ಅನಂತಮೂರ್ತಿ ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ ಪ್ರೀತಿ-ಮೃತ್ಯು-ಭಯ ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.

ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ.

೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು ಋಜುವಾತು ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು.

ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.
ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.

ಘಟಶ್ರಾದ್ಧ ಕತೆಯನ್ನು ಆಧರಿಸಿ ದೀಕ್ಷಾ ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ.
ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ, ಉಪನ್ಯಾಸ ನೀಡಿದ್ದಾರೆ.

೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ಬಹಳ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು.

ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶ ವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.

ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ .ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ.

ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ.

ವಿನಾಯಕ ಕೃಷ್ಣ ಗೋಕಾಕರ ಅನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ.
ಮ್ಯಾನ್ ಬುಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ೧೦ ಸಾಹಿತಿಗಳಲ್ಲಿ ಒಬ್ಬರು.

೧೯೮೦ರ ಗೋಕಾಕ್ ಚಳುವಳಿಯನ್ನು ವಿರೋಧಿಸಿದ ಅನಂತಮೂರ್ತಿ, ಅದನ್ನು ದಂಗೆ ಎಂದು ಕರೆದರು.
೧೯೯೭ರಲ್ಲಿ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮನೆ ನೀಡಲಾಯ್ತು. ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲರಿಗೆ ಅನಂತಮೂರ್ತಿಯವರು ಆಪ್ತರಾದುದರಿಂದ ಅದು ವಿವಾದಕ್ಕೆ ಕಾರಣವಾಯಿತು. ಕವಿಗಳಿಗೆ ಸರ್ಕಾರ ನೀಡುವ ನಿವೇಶನವನ್ನು ಹಿಂದಿರುಗಿಸಿದ ನಂತರ ಮನೆ ಪಡೆದದ್ದು ಎಂದು ತಮ್ಮ ಆತ್ಮ ಚರಿತ್ರೆ ಸುರಗಿಯಲ್ಲಿ ಅನಂತಮೂರ್ತಿ ವಿವರಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು


  1. ಕುವೆಂಪು
  2. ದ.ರಾ.ಬೇಂದ್ರೆ
  3. ವಿ.ಕೃ.ಗೋಕಾಕ
  4. ಶಿವರಾಮ ಕಾರಂತ
  5. ಮಾಸ್ತಿ ವೆಂಕಟೇಶ ಅಯ್ಯಂಗಾರ್
  6. ಯು.ಆರ್.ಅನಂತಮೂರ್ತಿ
  7. ಗಿರೀಶ್ ಕಾರ್ನಾಡ್ 
  8. ಚಂದ್ರಶೇಖರ ಕಂಬಾರ


Thursday, December 12, 2013

ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ನಿಮಗಿದು ತಿಳಿದಿರಲಿ !


ಸೂಪರ್ ಸ್ಟಾರ್ ರಜನಿಕಾಂತ್ 

ಅವರ 64ನೇ ಜನ್ಮದಿನದ ಹಾರ್ಧಿಕ ಶುಭಾಶಯಗಳು

ರಜನಿಕಾಂತ್  ಸಂಭಾವನೆ ಎಷ್ಟು ?
ರಜನಿಕಾಂತ್ ಸಂಭಾವನೆ, ಎಷ್ಟೆಂಬ ನಿಖರ ಮಾಹಿತಿ ಇಲ್ಲ, ‘ಶಿವಾಜಿ’ ಚಿತ್ರದ ಯಶಸ್ಸಿನ ಬಳಿಕ ಅವರ ಸಂಭಾವನೆ ೨೬ ಕೋಟಿಗೆ ಏರಿತು. ರೋಬೋಟ್ ಚಿತ್ರಕ್ಕೆ ೧೦೦ ಕೋಟಿ ಸಂಭಾವನೆ ನೀಡಲಾಗಿದೆ ಎಂದು ಕೆಲ ವರದಿಗಳು ಹೇಳುತ್ತವೆ. ಏಷ್ಯಾದಲ್ಲಿ ಜಾಕಿಚಾನ್ ಹೊರತುಪಡಿಸಿದರೆ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿ.

ದೇಶಾದ್ಯಂತ ಫೇಮಸ್ ಆಯ್ತು ಲುಂಗಿ!
ಚಿತ್ರಗಳಲ್ಲಿ ಸೂಟು, ಬೂಟು, ವಿಭಿನ್ನ ಪ್ರಕಾರದ ಡ್ರೆಸಿಂಗ್ ಇಂದ ಗಮನ ಸೆಳೆಯುವ, ಸ್ಟೈಲ್ ಕಿಂಗ್ ಎಂದೇ ಹೆಸರಾದ ರಜನಿ ನಿಜಜೀವನದಲ್ಲಿ ಮಾತ್ರ ತುಂಬಾನೇ ಸಿಂಪಲೆ! ಬಿಳಿ ಲುಂಗಿ, ಸಾದಾ ಶರ್ಟ್, ಹವಾಯಿ ಚಪ್ಪಲಿ ಧರಿಸಿ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೂ ಉಂಟು. ‘ಲುಂಗಿ ನನಗೆ ತುಂಬಾ ಕಂಫರ್ಟ್’ ಎಂದು ಹೇಳಿಕೊಳ್ಳುವ ಅವರು ಲುಂಗಿಯನ್ನೂ ಸ್ಟೈಲಾಗಿ ಉಡುವುದು ವಿಶೇಷ! ಈ ಲುಂಗಿ ಎಷ್ಟು ಮೋಡಿ ಮಾಡಿದೆಯೆಂದರೆ ಕ್ಲಿಕ್ಕಿಸಿಕೊಂಡು ‘ರಜನಿ ಸ್ಟೈಲ್’ ಎಂಬ ಕ್ಯಾಪ್ಷನ್ ನೊಂದಿಗೆ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ಹೆಚ್ಚು ‘ಲೈಕ್’ಗಳಿಗಾಗಿ ಪೈಪೋಟಿ ನಡೆಸುತ್ತಾರೆ. ರಜನಿ ಎಷ್ಟೋ ಬಾರಿ ವೇಷ ಮರೆಸಿಕೊಂಡು ರಸ್ತೆಬದಿಯ ಪುಟ್ಟ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಾರೆ, ಕಾಫಿ ಹೀರುತ್ತಾರೆ. ಯಾವುದೋ ದೇವಸ್ಥಾನಕ್ಕೊ, ಊರ ಹೊರಗಿನ ನೀರವ ತಾಣಕ್ಕೋ ಏಕಾಏಕಿ ಭೇಟಿನೀಡುತ್ತಾರೆ. ಅಂದಹಾಗೆ ರಜನಿ ಎಂದೂ ಚಿನ್ನದ ಆಭರಣಗಳನ್ನು ತೊಡುವುದಿಲ್ಲ.


ರಸ್ತೆಯಲ್ಲೇ ವಾಕಿಂಗು

ರಜನಿಕಾಂತ್ ೬೫ರ ವಯಸ್ಸಲ್ಲೂ ಇಷ್ಟು ಫಿಟ್ ಆಗಿರಲು ಕಾರಣ ಏನು ಎಂದು ಬಾಲಿವುಡ್ ಸೆಲೆಬ್ರಿಟಿಗಳಿಂದಹಿಡಿದು ಜನಸಾಮನ್ಯರವರೆಗೂ ತಲೆಕೆಡಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ರಜನಿಯ ಸರಳ ಹಾಗೂ ಆರೋಗ್ಯಯುತ ಜೀವನಶೈಲಿ. ಎಷ್ಟೇ ಬ್ಯುಸಿಯಾಗಿದ್ದರೂ ರಜನಿ ಬೆಳಗ್ಗೆ ದಿನಚರಿ ಆರಂಭಿಸುವುದು ವಾಕಿಂಗ್ ಮೂಲಕವೇ . ಈ ವಾಕಿಂಗ್ ಕೂಡ ರಜನಿ ಸ್ಟೈಲ್ ಒಳಗೊಂಡಿದೆ! ಅದೇನು ಅಂತೀರಾ? ಬೆಳ್ಳಂಬೆಳ್ಳಿಗೆ ಟ್ರಾಫಿಕ್ ಪಿರಿಪಿರಿ ಶುರುವಾಗುವ ಮುನ್ನವೇ ಖಾಲಿರಸ್ತೆಗಳಲ್ಲಿ ವಾಕಿಂಗ್ ಮುಗಿಸಿ ಮನೆಸೇರಿದ ಬಳಿಕ ಕಡ್ಡಾಯವಾಗಿ ಯೋಗ ಹಾಗು ಪ್ರಾಣಾಯಾಮ ಮಾಡುತ್ತಾರೆ. ಶೂಟಿಂಗ್ನಲ್ಲಿದ್ದರು ಯೋದ ತಪ್ಪಿಸುವುದಿಲ್ಲ ಎಂದು ಅವರ ನಿಕವರ್ತಿಗಳು ಹೇಳುತ್ತಾರೆ.

ಯಥಾರಾಜ, ತಥಾ ಕಳ್ಳ: ಪರಕ್ಕಾಸ್!
ಸಾಧಾರಣ ಕಥೆ, ಇಷ್ಟವಾಗುತ್ತದೆ. ಒಳ್ಳೆಯ ನಿರೂಪಣೆ, ಬಿಗಿಯಾಗಿದೆ. ಮಾಮೂಲಿ ಸಂಭಾಷಣೆ ನಗಿಸುತ್ತೆ; ಚಪ್ಪಾಳೆಯನ್ನೂ ಗಿಟ್ಟಿಸುತ್ತೆ. ಸುಮ್ಮನೆ ನೋಡಿಸಿಕೊಂಡ ಕೇಳಿಸಿಕೊಳ್ಳುವಂತಿರುವ ಹಾಡುಗಳು, ಖುಷಿಕೊಡುತ್ತವೆ. ಮೈನವಿರೇಳಿಸದಂತಿದ್ದರೂ ‘ವಾವ್’ ಅಂತೆನಿಸುವ ಸಾಹಸ , ಆಕರ್ಷಕವಾಗಿದೆ. ಅದ್ಭುತ ಗ್ರಾಫಿಕ್ಸ್, ಕಣ್ಮನ ತುಂಬುತ್ತೆ - ಬಿಕಾಸ್ ಆಫ್ ರಜನಿಕಾಂತ್!


Wednesday, December 4, 2013

ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ನವರಿಗೆ 75 ನೇ ಹುಟ್ಟು ಹಬ್ಬದ ಶುಭಾಶಯಗಳು

Shimogga Subbanna
ಶಿವಮೊಗ್ಗ ಸುಬ್ಬಣ್ಣ - ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾಗಿದ್ದಾರೆ.ಸುಬ್ಬಣ್ಣ ಅವರ ನಿಜ ನಾಮಧೇಯ "ಜಿ.ಸುಬ್ರಹ್ಮಣ್ಯಂ ".ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮುದ್ದಿನ ಮಗನಾದ ಸುಬ್ಬಣ್ಣ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ ೧೯೩೮ರಲ್ಲಿ ಜನಿಸಿದವರು. ಮನೆಯಲ್ಲಿ ಪ್ರತಿದಿನ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಝೇಂಕಾರ ಕೇಳಿ ಬೆಳೆದವರು. ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು.

ಅವರ ಬಳಿಯಲ್ಲಿಯೇ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದರು. ಇವರೊಂದಿಗೆ ಹೆಸರಾಂತ ಗಾಯಕಿ ಕರ್ನಾಟಕದ ಕೋಗಿಲೆ ಬಿ.ಕೆ. ಸುಮಿತ್ರಾ ಅವರೂ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ನಂತರ ತಮ್ಮ ವ್ಯಾಸಂಗದ ಕಡೆ ಗಮನ ಹರಿಸಿದ ಸುಬ್ಬಣ್ಣ ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು.ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತದ ಕಡೆ ಮುಖ ಮಾಡದಿದ್ದರೂ, ರಕ್ತಗತವಾಗಿದ್ದ ಸಂಗೀತ ಆಗಾಗ ಇವರನ್ನು ಎಚ್ಚರಿಸಿ ಶಾಲಾ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು. ಇದರಿಂದಾಗಿ ಶಾಲಾ ದಿನಗಳಲ್ಲಿ ಹಲವಾರು ಪ್ರಶಸ್ತಿ ಪಡೆದು, ಹಾಡಿನ ಸುಬ್ಬಣ್ಣ ಎಂದೆನಿಸಿಕೊಂಡರು.ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ ೧೯೬೩ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು.

Tuesday, December 3, 2013

ಗಿರೀಶ್ ಕಾಸರವಳ್ಳಿ ಅವರಿಗೆ ಹುಟ್ಟು ಹಬ್ಬದ ಸಿಹಿ ಹಾರೈಕೆಗಳು

Born:3rd December 1950
Girish Kaasaravalli
ಭಾರತದ ಅತ್ಯಂತ ಪ್ರತಿಭಾನಿತ್ವ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕಾಸರವಳ್ಳಿಯಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೨ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅ೦ತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ.

Sunday, December 1, 2013

ಪುಟ್ಟಣ್ಣ ಕಣಗಾಲ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ


Puttanna Kanagaal
ಎಸ್.ಆರ್.ಪುಟ್ಟಣ್ಣ ಕಣಗಾಲ್ (ಡಿಸೆಂಬರ್ ೧, ೧೯೩೩ - ಜೂನ್ ೫, ೧೯೮೫) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.

ಆರಂಭದ ದಿನಗಳು
ಕರ್ನಾಟಕದ ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ.ಇವರ ಮೊದಲ ಹೆಸರು "ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. . ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರ ಸಹೋದರರು.

ಚಿತ್ರರಂಗ
ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರು ಪುಟ್ಟಣ್ಣ ರವಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದಿದ್ದರು. ನಾಟಕ ಕಂಪೆನಿ,ಡ್ರೈವರ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕರಲ್ಲೊಬ್ಬರಾದ ಬಿ.ಆರ್.ಪಂತುಲು ಅವರ ಬಳಿ ೧೯೫೪ರಲ್ಲಿ ಡೈಲಾಗ್ ಕೋಚ್ ಆಗಿ ಸೇರಿದ ಪುಟ್ಟಣ್ಣ ನಂತರದ ದಿನಗಳಲ್ಲಿ " ಪದ್ಮಿನಿ ಪಿಕ್ಚರ್ಸ್"ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದರು. ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ'ಸ್ಕೂಲ್‍ಮಾಸ್ಟರ್' (೧೯೬೪). ಪುಟ್ಟಣ್ಣನವರು ರಷ್ಯಾ ಪ್ರವಾಸ ಮಾಡಿ ಸಾಕಷ್ಟು ದೇಶಗಳನ್ನು ಸುತ್ತಿ ಕೋಶಗಳನ್ನು ಓದಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ,ಪ್ರಸಿದ್ಧರಾದ ಚಿತ್ರಕಲಾವಿದರು ಅನೇಕ. ಆ ಪೈಕಿ ನಾಯಕಿ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಪ್ರಮುಖರು. ನಾಯಕ ನಟರಲ್ಲಿ ವಿಷ್ಣುವರ್ಧನ್, ರಾಮಕೃಷ್ಣ, ಜೈಜಗದೀಶ್, ಅಂಬರೀಶ್, ಶ್ರೀನಾಥ್ ಶ್ರೀಧರ್ ಮೊದಲಾದವರು ಇದ್ದಾರೆ.