Translate in your Language

Tuesday, December 3, 2013

ಗಿರೀಶ್ ಕಾಸರವಳ್ಳಿ ಅವರಿಗೆ ಹುಟ್ಟು ಹಬ್ಬದ ಸಿಹಿ ಹಾರೈಕೆಗಳು

Born:3rd December 1950
Girish Kaasaravalli
ಭಾರತದ ಅತ್ಯಂತ ಪ್ರತಿಭಾನಿತ್ವ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕಾಸರವಳ್ಳಿಯಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೨ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅ೦ತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ.

ಹೆಸರು                    ವರ್ಷ              ಪ್ರಶಸ್ತಿ
ಘಟಶ್ರಾದ್ಧ              ೧೯೭೭             ಸ್ವರ್ಣ ಕಮಲ ಪ್ರಶಸ್ತಿ           


ಆಕ್ರಮಣ              ೧೯೭೯ 

ಮೂರು ದಾರಿಗಳು    ೧೯೮೧ 

ತಬರನ ಕಥೆ            ೧೯೮೭             ಸ್ವರ್ಣ ಕಮಲ ಪ್ರಶಸ್ತಿ 

ಬಣ್ಣದ ವೇಷ             ೧೯೮೯ 

ಮನೆ                      ೧೯೮೯ 

ಕ್ರೌರ್ಯ                  ೧೯೯೬ 

ತಾಯಿ ಸಾಹೇಬ       ೧೯೯೮               ಸ್ವರ್ಣ ಕಮಲ ಪ್ರಶಸ್ತಿ 

ದ್ವೀಪ                     ೨೦೦೨               ಸ್ವರ್ಣ ಕಮಲ ಪ್ರಶಸ್ತಿ 

ಹಸೀನಾ                 ೨೦೦೫               ಉತ್ತಮ ಕುಟುಂಬ ಕಲ್ಯಾಣ ಚಿತ್ರ 

ನಾಯಿ ನೆರಳು         ೨೦೦೬             ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿ 

ಗುಲಾಬಿ ಟಾಕೀಸ್    ೨೦೦೮

ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು, ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ೧೯೭೭ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ ೩ ಸ್ವರ್ಣಕಮಲಗಳನ್ನು (ಒಟ್ಟಾರೆ ೪) ಪಡೆದು ಸತ್ಯಜಿತ್ ರೇ( ೬ ಸ್ವರ್ಣ ಕಮಲಗಳು)(ಮೃಣಾಲ್ ಸೇನ್ ಮತ್ತು ಕಾಸರವಳ್ಳಿ) ನಂತರ ನಾಲ್ಕು ಸ್ವರ್ಣ ಕಮಲಗಳನ್ನು ಪಡೆದವರಲ್ಲಿ ಒಬ್ಬರಾಗಿದ್ದಾರೆ.

ಗಿರೀಶ್ ಕಾಸರವಳ್ಳಿಯವರ ಪತ್ನಿ ವೈಶಾಲಿ ಕಾಸರವಳ್ಳಿ ಕನ್ನಡ ಚಲನಚಿತ್ರ ನಟಿ ಹಾಗು ದೂರದರ್ಶನ ಧಾರಾವಾಹಿಗಳ ನಿರ್ದೇಶಕಿ. 'ನೀನಾಸಂ-ರಂಗಶಾಲೆ'ಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಗಿರೀಶ್ ಕಾಸರವಳ್ಳಿಯವರ ಹತ್ತಿರದ ಸಂಬಂಧಿ.

ಇವರು "ಘಟಶ್ರಾದ್ಧ" ನಿರ್ದೇಶಿಸಿದಾಗ ಇವರ ವಯಸ್ಸು ಕೇವಲ ೨೭.ಸ್ವರ್ಣ ಕಮಲ ಪುರಸ್ಕಾರ ಪಡೆದ ಕಿರಿಯ ನಿರ್ದೇಶಕರೆಂದು ಹೆಸರು ಪಡೆದರು."ಘಟಶ್ರಾದ್ಧ"ಕತೆಯನ್ನು ಆಧರಿಸಿ ಅರುಣ್ ಕೌಲ್ ನಿರ್ದೇಶನದಲ್ಲಿ "ದೀಕ್ಷಾ " ಎಂಬ ಹೆಸರಿನಲ್ಲಿ ಹಿಂದಿ ಚಿತ್ರವೊಂದು ತಯಾರಾಗಿದೆ."ನಮನ" ಪದ್ಮಶ್ರೀ ಗಿರೀಶ್ ಕಾಸರವಳ್ಳಿ - "ಸಾಹಿತ್ಯ ಮತ್ತು ಚಲನಚಿತ್ರ ಕುರಿತು ಮಾತನಾಡುತ್ತಾರೆ" 'ಸುಚಿತ್ರ' ಸಂಸ್ಥೆಯ ಧರ್ಮದರ್ಶಿಗಳಲ್ಲೋಬ್ಬರಾದ ಗಿರೀಶ್ ನಮ್ಮ ಹೆಮ್ಮೆಯ ನಿರ್ದೇಶಕರು ಕಾಸರವಳ್ಳಿಯವರು ವಿಜ್ಞಾನದ ವಿದ್ಯಾರ್ಥಿ. ಒಲವು ದೃಶ್ಯ ಮಾಧ್ಯಮದತ್ತ . ಪುಣೆಯ ಫಿಲಂ ಇನ್ಸ್ಟಿಟ್ಯೂಟ್ನನಲ್ಲಿ ಚಲನಚಿತ್ರ ನಿರ್ದೇಶನದತರಬೇತಿ ಪಡೆದರು. "ಅವಶೇಶ್ " ಕಿರುಚಿತ್ರ ಅವರ ವಿದ್ಯಾರ್ಥಿಯಾಗಿ ನಿರ್ದೇಶಿಸಿದ ಚಿತ್ರ. "ಘಟಶ್ರಾದ್ಧ" ಚಿತ್ರದಿಂದ ಆರಂಬಿಸಿ ಅನೇಕ ಅತ್ಯುತ್ತಮ ಚಿತ್ರಗಳನ್ನು ತೆರೆಗಿತ್ತಿದ್ದಿದ್ದಾರೆ. ಒಂದೊಂದು ಚಿತ್ರವೂ ಚಿತ್ರ ಭಾಷೆಯನ್ನೂ ವಿಸ್ತರಿಸುತ್ತಾ, ಹೊಸ ನೋಟಗಳನ್ನು ಕೊಡುತ್ತಾ ಬಂದಿದೆ ಎನ್ನುವುದೇ ಅವುಗಳ ವಿಶೇಷ ಅವರ ಇತರ ಚಿತ್ರಗಳು, ರಾಜ್ಯ, ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿವೆ. ಅಕ್ಷರ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ತರುವಾಗ ಅದೊಂದು ಪ್ರತಿಕೃತಿಯಾಗದೆ ಅವು ಹೇಗೆ ಪ್ರತ್ಯೇಕ ಭಾಷೆ ಮತ್ತು ಅವುಗಳಿಗೆ ಅವುಗಳದೇ ಆದ ಅಸ್ಮಿತೆಗಳನ್ನೂ ಪಡೆದುಕೊಳ್ಳುತ್ತವೆ ಎಂಬುದನ್ನು ಪ್ರತಿಪಾದಿಸುತ್ತ ಅವೆರಡು ಮಾಧ್ಯಮಗಳಿಗೂ ಗೌರವ ತರುವಂತೆ ದುಡಿಸಿಕೊಂಡು ಬಂದಿದ್ದಾರೆ. ಗಿರಿಶರಿಗೆ ಪ್ರಶಸ್ತಿಗಳ ಸುರಿಮಳೆ, 

೨೦೦೯ ನೇ ಸಾಲಿನ, 'ದಕ್ಷಿಣ ಏಷ್ಯಾ ಫೆಡರೇಷನ್ ನ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ', 'ಗಿರೀಶ್ ಕಾಸರವಳ್ಳಿ'ಯವರಿಗೆ, ದೊರೆತಿದೆ

ಭಾರತದ ಹೈಕಮೀಶನರ್ ಆದ, 'ನಳಿನ್ ಸೂರಿ',ಯವರು, 'ಲಂಡ'ನ್ ನಲ್ಲಿ ಈ ಪ್ರಶಸ್ತಿಯನ್ನುಗಿರೀಶ್ ಕಾಸರವಳ್ಳಿರವರಿಗೆ ಪ್ರದಾನಮಾಡಿದರು. ಸ್ವಾತಂತ್ರ್ಯಾನಂತರದ ಕಳೆದ ೬ ದಶಕಗಳಲ್ಲಿ "ಘಟಶ್ರಾದ್ಧ'ದಿಂದ, ಗುಲಾಬಿ ಟಾಕೀಸ್" ವರೆಗಿನ 'ಗಿರೀಶ್ ಕಾಸರವಳ್ಳಿ'ಯವರು ನಿರ್ದೇಶಿಸಿದ ಕನ್ನಡ ಚಿತ್ರಗಳು ಸಾಮಾಜಿಕ ಜೀವನದ ಸಂಘರ್ಷಗಳನ್ನು ಪ್ರತಿಬಿಂಬಿಸಿವೆ. 

"ದಕ್ಷಿಣ ಏಷ್ಯ ಸಿನಿಮಾ ಪ್ರತಿಷ್ಠಾನದ ಕ್ರಿಶ್ಟಲ್ ಗ್ಲೋಬ್ ಪ್ರಶಸ್ತಿ" ಯನ್ನು ಪಡೆದ ಚಿತ್ರನಿರ್ದೇಶಕರು,

"ಟೀವಿ ಮತ್ತು "ಜನಪ್ರಿಯ ಸಿನೆಮಾ"ಗಳ ಮೂಲಕ, "ಪ್ರಾಚೀನ ಭಾರತದ ಸಾಂಸ್ಕೃತಿ" ಮತ್ತು "ಇತಿಹಾಸ"ವನ್ನು ಬಿಂಬಿಸುವ ಮೂಲಕ ನಡೆಸಿದ ಅನ್ವೇಷಣಾತ್ಮಕ ಕೆಲಸಗಳನ್ನು ಗೌರವಿಸಿ "ಚಂದ್ರಪ್ರಕಾಶ್ ದ್ವಿವೇದಿ"ಯವರಿಗೆ "ಸಾಂಸ್ಕೃತಿಕ ಬದಲಾವಣೆಯ ಪ್ರಶಸ್ತಿ," ಯನ್ನು ನೀಡಲಾಗಿದೆ.

No comments:

Post a Comment