Translate in your Language

Sunday, December 1, 2013

ಪುಟ್ಟಣ್ಣ ಕಣಗಾಲ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ


Puttanna Kanagaal
ಎಸ್.ಆರ್.ಪುಟ್ಟಣ್ಣ ಕಣಗಾಲ್ (ಡಿಸೆಂಬರ್ ೧, ೧೯೩೩ - ಜೂನ್ ೫, ೧೯೮೫) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.

ಆರಂಭದ ದಿನಗಳು
ಕರ್ನಾಟಕದ ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ.ಇವರ ಮೊದಲ ಹೆಸರು "ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. . ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರ ಸಹೋದರರು.

ಚಿತ್ರರಂಗ
ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರು ಪುಟ್ಟಣ್ಣ ರವಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದಿದ್ದರು. ನಾಟಕ ಕಂಪೆನಿ,ಡ್ರೈವರ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕರಲ್ಲೊಬ್ಬರಾದ ಬಿ.ಆರ್.ಪಂತುಲು ಅವರ ಬಳಿ ೧೯೫೪ರಲ್ಲಿ ಡೈಲಾಗ್ ಕೋಚ್ ಆಗಿ ಸೇರಿದ ಪುಟ್ಟಣ್ಣ ನಂತರದ ದಿನಗಳಲ್ಲಿ " ಪದ್ಮಿನಿ ಪಿಕ್ಚರ್ಸ್"ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದರು. ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ'ಸ್ಕೂಲ್‍ಮಾಸ್ಟರ್' (೧೯೬೪). ಪುಟ್ಟಣ್ಣನವರು ರಷ್ಯಾ ಪ್ರವಾಸ ಮಾಡಿ ಸಾಕಷ್ಟು ದೇಶಗಳನ್ನು ಸುತ್ತಿ ಕೋಶಗಳನ್ನು ಓದಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ,ಪ್ರಸಿದ್ಧರಾದ ಚಿತ್ರಕಲಾವಿದರು ಅನೇಕ. ಆ ಪೈಕಿ ನಾಯಕಿ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಪ್ರಮುಖರು. ನಾಯಕ ನಟರಲ್ಲಿ ವಿಷ್ಣುವರ್ಧನ್, ರಾಮಕೃಷ್ಣ, ಜೈಜಗದೀಶ್, ಅಂಬರೀಶ್, ಶ್ರೀನಾಥ್ ಶ್ರೀಧರ್ ಮೊದಲಾದವರು ಇದ್ದಾರೆ.

ನಿಧನ
ಮಸಣದ ಹೂವು ಚಿತ್ರವು ತಯಾರಿಕೆ ಹಂತದಲ್ಲಿದ್ದಾಗ ಜೂನ್ ೫, ೧೯೮೫ ರಂದು ಚೆನ್ನೈ ನಲ್ಲಿ ನಿಧನರಾದರು. ಅರ್ಧ ಚಿತ್ರೀಕರಣಗೊಂಡಿದ್ದ ಮಸಣದ ಹೂವು ಚಿತ್ರದ ಉಳಿದ ಭಾಗವನ್ನು ಪುಟ್ಟಣ್ಣನವರ ಶಿಷ್ಯರಾದ ಕೆ.ಎಸ್.ಎಲ್.ಸ್ವಾಮಿಯವರು ಪೂರ್ತಿಗೊಳಿಸಿದರು.ಎಪ್ಪತ್ತರ ದಶಕದಲ್ಲಿ ಅವರು ತೊಡಗಿಸಿಕೊಂಡಿದ್ದ "ಸಾವಿರ ಮೆಟ್ಟಿಲು"ಚಿತ್ರವನ್ನು ಅದರ ನಿರ್ಮಾಪಕರಾದ ಡಿ.ಬಿ. ಬಸವೇಗೌಡರು ಪೂರ್ಣಗೊಳಿಸಿ ಬಿಡುಗಡೆ ಮಾಡಿದರು.ಒಬ್ಬ ನಿರ್ದೇಶಕನ ಎರಡು ಅಪೂರ್ಣ ಚಿತ್ರಗಳು ಅವರ ನಿಧನಾ ನಂತರ ಪೂರ್ಣಗೊಂಡಿದ್ದು ಒಂದು ದಾಖಲೆಯೇ. ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಜಯನಗರದಲ್ಲಿ ಸ್ಥಾಪಿಸಲಾಗಿದ್ದ ಪುಟ್ಟಣ್ಣ ಥಿಯೇಟರ್ ಇಂದು ಅವಸಾನದ ಅಂಚಿನಲ್ಲಿದೆ.ನವೀಕರಣದ ಹೆಸರಿನಲ್ಲಿ ೨೦೦೪ ರಿಂದ ಈ ಥಿಯೇಟರ್ ಬಾಗಿಲು ಮುಚ್ಚಿದೆ.ಪುಟ್ಟಣ್ಣ ಪುತ್ರ ರಾಮು ಕಣಗಾಲ್ ರವರು ಕಳೆದ ೨೦ ವರ್ಷಗಳಿಂದ "ಕಣಗಾಲ್ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದಾರೆ.ಕರ್ನಾಟಕ ಸರಕಾರವು ಪ್ರತಿ ವರ್ಷವೂ ಚಿತ್ರ ರಂಗದಲ್ಲಿ ಹೆಸರು ಮಾಡಿದವರಿಗೆ ಪುಟ್ಟಣ್ಣರ ಹೆಸರಿನಲ್ಲಿ "ಪುಟ್ಟಣ್ಣ ಕಣಗಾಲ್" ಪ್ರಶಸ್ತಿ ನೀಡಲಾಗುತ್ತಿದೆ.ಪುಟ್ಟಣ್ಣನವರ ಜೀವನ ಚರಿತ್ರೆಯ ‘ಬೆಳ್ಳಿ ತೆರೆ ಭಾವಶಿಲ್ಪಿಯಲ್ಲಿ’ಎಂಬ ಪುಸ್ತಕವನ್ನು ಡಿ.ಬಿ.ಬಸವೇಗೌಡ ಬರೆದಿದ್ದಾರೆ. ಕನ್ನಡದ ಖ್ಯಾತ ಕಾದಂಬರಿಕಾರ್ತಿ ದಿ. ಎಂ.ಕೆ. ಇಂದಿರಾ ರವರು " ನಾ ಕಂಡ ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್" ಎಂಬ ಪುಸ್ತಕ ಬರೆದಿದ್ದಾರೆ.

ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಚಿತ್ರಗಳ ಪಟ್ಟಿ 


ಕನ್ನಡ
  1. ಬೆಳ್ಳಿ ಮೋಡ (1966)
  2. ಮಲ್ಲಮ್ಮನ ಪವಾಡ (1969)
  3. ಕಪ್ಪು ಬಿಳುಪು (1969)
  4. ಗೆಜ್ಜೆ ಪೂಜೆ (1969)
  5. ಕರುಳಿನ ಕರೆ (1970)
  6. ಶರಪಂಜರ (1971)
  7. ಸಾಕ್ಷಾತ್ಕಾರ (1971)
  8. ನಾಗರ ಹಾವು (1972)
  9. ಎಡಕಲ್ಲು ಗುಡ್ಡ ಮೇಲೆ (1973)
  10. ಉಪಾಸನೆ (1974)
  11. ಶುಭಮಂಗಳ (1975)
  12. ಕಥಾ ಸಂಗಮ (1975)
  13. ಬಿಳಿ ಹೆಂಡ್ತಿ (1975)
  14. ಫಲಿತಾಂಶ (1976)
  15. ಕಾಲೇಜು ರಂಗ (1976)
  16. ಪಡುವಾರಹಳ್ಳಿ ಪಾಂಡವರು (1978)
  17. ಧರ್ಮಸೆರೆ (1979)
  18. ರಂಗನಾಯಕಿ (1981)
  19. ಮಾನಸ ಸರೋವರ (1982)
  20. ಧರಣಿ ಮಂಡಲ ಮಧ್ಯದೊಳಗೆ (1983)
  21. ಋಣ ಮುಕ್ತಳು (1984)
  22. ಅಮೃತ ಘಳಿಗೆ (1984)
  23. ಮಸಣದ ಹೂವು (1984)
  24. ಸಾವಿರ ಮೆಟ್ಟಿಲು (2006) 
ಹಿಂದಿ
  1. ಹಮ್ ಪಾಂಚ್ (೧೯೮೧)
  2. ಜಹ್ರೀಲಾ ಇನ್ಸಾನ್ (೧೯೭೪)
ಮಲಯಾಳಂ
  1. ಸ್ಕೂಲ್‍ಮಾಸ್ಟರ್ ೧೯೬೪
  2. ಕಳಜ್ಞು ಕಿಟ್ಟಿಯ ತಂಗಂ ೧೯೬೪
  3. ಮೇಯರ್ ನಾಯರ್ ೧೯೬೬
  4. ಪೂಚಕಣ್ಣಿ ೧೯೬೬
  5. ಸ್ವಪ್ನ ಭೂಮಿ.೧೯೬೮



No comments:

Post a Comment