Translate in your Language

Thursday, October 23, 2014

ಶೋಭಾ ಕರಂದ್ಲಾಜೆ ಅವರಿಗೆ 48ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ನಾಡಿನ ದಿಟ್ಟ. ಸಹೃದಯ, ಸೇವಾ ಮನೋಭಾವದ ಮಹಿಳಾ ರಾಜಕಾರಿಣಿ ಶೋಭಾ ಕರಂದ್ಲಾಜೆ ಅವರಿಗೆ ೪೮ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
Date of Birth: October 23, 1966

ಅವರ ಪರಿಚಯ ಅವರದೇ ಮಾತಿನಲ್ಲಿ
ನಾನು ಶೋಭಾ ಕರಂದ್ಲಾಜೆ, ನೀವೆಲ್ಲರೂ ನನ್ನನ್ನು ಶೋಭ ಅಂತ ಕರೆಯಬಹುದು. ನನ್ನನ್ನು ನನ್ನ ಮನೆಯಲ್ಲಿ ಮತ್ತು ಊರಿನಲ್ಲಿ ‘ಬೇಬಿ’ ಅಂತ ಕರೆಯುತ್ತಾರೆ. ಆ ಊರಿಗೆ ನಾನು ‘ಬೇಬಿ’ ಯಾಗಿರುವುದೇ ನನಗೆ ಇಷ್ಟ. ಅಷ್ಟು ಮುಗ್ದ ಜನ ನನ್ನ ಊರಿನವರು ಮತ್ತು ಮನೆಯವರು. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಾರ್ವಾಕ ಅನ್ನುವ ಪುಟ್ಟ ಗ್ರಾಮ. ಕಾಡು, ಬೆಟ್ಟ, ಗುಡ್ಡದ ಪ್ರದೇಶ. ಕೃಷಿಯೇ ನಮ್ಮೂರಿನ ಜೀವನಾಧಾರ. ಅಡಿಕೆ, ತೆಂಗು, ಗೇರು, ಕರಿಮೆಣಸು, ಪ್ರಮುಖ ಬೆಳೆಗಳು. ನಾನು ಹುಟ್ಟುವ ಕಾಲಕ್ಕೇನೇ ನಾವು ಅಡಿಕೆ, ತೆಂಗು ಬೆಳೆಯುತ್ತಿದ್ದೆವು. ನಮ್ಮದು ಮಧ್ಯಮ ವರ್ಗದ ಕುಟುಂಬ, ನನ್ನ ಹಿರಿಯರು ಕೃಷಿಕ ಕುಟುಂಬದವರು.

Wednesday, October 8, 2014

ಯೋಗರಾಜ್ ಭಟ್ ಅವರಿಗೆ 43ನೇ ಹುಟ್ಟು ಹಬ್ಬದ ಶುಭ ಹಾರೈಕೆಗಳು

  ಪತ್ನಿ ಮತ್ತು ಮಕ್ಕಳೊಂದಿಗೆ ಯೋಗರಾಜ್ ಭಟ್ 
(Born 8th Oct, 1972)

ತಮ್ಮ ವಿಚಿತ್ರ ಶೈಲಿಯಿಂದ ಸಧ್ಯ ಪ್ರಚಲಿತ ಚಿತ್ರ ನಿರ್ದೇಶಕರು ಮತ್ತು ಚಿತ್ರ ಸಾಹಿತಿಯಾಗಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ
 ಯೋಗರಾಜ್ ಭಟ್ 
ಅವರಿಗೆ ೪೩ ನೇ ಹುಟ್ಟುಹಬ್ಬದ ಶುಭಾಶಯಗಳು, 
ಅವರ ಮುಂದಿನ ಎಲ್ಲ ಕಾರ್ಯಗಳು ಅದ್ದೂರಿ ಯಶಸ್ವಿಯಾಗಲೆಂದು ಹರಸುವ ಅವರ ಅಭಿಮಾನಿ ಬಳಗದಿಂದ ಹಾರೈಕೆಗಳು

ಚೆಂದುಟಿಯ ಪಕ್ಕದಲಿ ..ಹಾಡಿಗೆ ಮುಂಚೆ ಬರುವ ಭಟ್ಟರ ಡೈಲಾಗ್ ನ ಸ್ಯಾಂಪಲ್ ಈ ಸಂದರ್ಭದಲ್ಲಿ.
ಚಿತ್ರ: ಡ್ರಾಮಾ (2012), ಸಂಗೀತ: ವೀ ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ್ಟ್
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ.. , ಬರಿ ಪೋಲಿ ಕನಸ..
ಮಾಮೂಲಿಕತೆಯ ತಾರುಣ್ಯ ಗೀತೆಯಲಿ ಉತ್ತರ ಕಮ್ಮಿ, ಪ್ರಶ್ನೆಯೇ.. ಜಾಸ್ತಿ..
ದಾರೀಲಿ ಕೈ-ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ ..
ಮುಂಗುರುಳ ಸ್ಪ್ರಿಂಗ್ಅಲ್ಲಿ ಜೋತಾಡಲೇ.. ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ..
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲ ಹೇಳಿದರು ಇನ್ನೇನು ಉಳಿದಿದೆ..
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…
ಎಲ್ಲಿಯೂ ಹೋಗದ ನಿಂತ ಬಸ್ಸಲ್ಲಿ ಸಿಟೊಂದ ಹಿಡಿದವನು ನಾನು..
ಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನಿ ಸಿಕ್ಕರೂ… ಸಿಗದಿದ್ದರೂ… , ಎದೆತುಂಬ ಹಾಡುವೆನು….
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…


ಉಪಯುಕ್ತ ಕೊಂಡಿಗಳು
ಯೋಗರಾಜ್ ಭಟ್  ಅವರ ಜನಪ್ರಿಯ ಚಿತ್ರಗೀತೆಗಳು
ದುನಿಯ ಸೂರಿ ಮತ್ತು ಯೋಗರಾಜ್ ಭಟ್ ಇತ್ತೀಚಿನ ಜನಪ್ರಿಯ ನಿರ್ದೇಶಕರು 
Most Peculiar & also Popular Film Director Yogaraj Bhat



Tuesday, October 7, 2014

ಇಂದು ಡಿ.ವಿ.ಗುಂಡಪ್ಪನವರು ದೈಹಿಕವಾಗಿ ನಮ್ಮನ್ನಗಲಿದ ದಿನ

ಜನನ : ಮಾರ್ಚ್ 17, 1887 - ನಿಧನ: ಅಕ್ಟೋಬರ್ 7, 1975
ಡಿವಿಜಿ ಎಂಬ ಉಪನಾಮದಿಂದಲೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (ಡಿ.ವಿ.ಗುಂಡಪ್ಪ) ಜನಮನದಲ್ಲಿ ಹಸಿರಾಗಿ ಉಳಿದಿರುವುದು ಅವರ ಅನುಪಮ ಹಾಗೂ ವಿಚಾರಪೂರ್ಣ ಲೇಖನ, ಬರಹಗಳಿಂದ. ಆದರೆ, ಡಿವಿಜಿ ಸಮಾಜಸೇವೆ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ವ್ಯವಸಾಯ ಅವರ ಸಾಹಿತ್ಯ ಸೇವೆಯಷ್ಟೇ ಮಿಗಿಲು. Read More

ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ ಭಾವಾರ್ಥ ಸಹಿತ

ಸಂಗೀತ ಕಟ್ಟಿ ಅವರಿಗೆ 45ನೇ ಹುಟ್ಟು ಹಬ್ಬದ ಶುಭಾಶಯಗಳು

(Born on 7th Oct, 1970)
ಸಂಗೀತಾ ಕಟ್ಟಿಯವರು ಕರ್ನಾಟಕದ ಧಾರವಾಡದಲ್ಲಿ ಅಕ್ಟೋಬರ್ ೭, ೧೯೭೦ರಂದು ಹುಟ್ಟಿದರು. ಇವರು ಡಾ. ಎಚ್. ಎ. ಕಟ್ಟಿ ಮತ್ತು ಶ್ರೀಮತಿ ಭಾರತಿ ಇವರ ಮಗಳು.

ಇವರು ದಸರೆಯ ಸರಸ್ವತೀಪೂಜೆಯ ದಿನ ಹುಟ್ಟಿದ್ದು.

ಈ ಅದ್ಬುತ ಗಾನ ಕೋಗಿಲೆ ಸದಾ ಅರೋಗ್ಯವಂತರಾಗಿ ಸುಖ-ಸಂತೋಷದಿಂದ ನೂರು ಕಾಲ ಹಾಡುತ್ತಾ ಕನ್ನಡ ಸಂಗೀತ ರಸಿಕರ ಮನ ತಣಿಸಲಿ ಎಂದು ಹಾರೈಸೋಣ

ಸಂಗೀತ ಕಟ್ಟಿ  ಹಾಡಿದ ಗೀತೆಗಳು

Saturday, October 4, 2014

ಹುಯಿಲಗೋಳ ನಾರಾಯಣರಾಯರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

(Born on 4th Oct, 1884,)
ಹುಯಿಲಗೋಳ ನಾರಾಯಣರಾಯರು (೧೮೮೪-೧೯೭೧) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.

೧೮೮೪ ಅಕ್ಟೋಬರ್ ೪ ರಂದು ಜನಿಸಿದರು. ಇವರ ತಂದೆ ಕೃಷ್ಣರಾವ್, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ , ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.

ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ನಾರಾಯಣ ರಾಯರು ಮೂಡಲು ಹರಿಯಿತು ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬಂದಿದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ.

ನಾಟಕಗಳು
ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದ್ದಾರೆ. ಅವುಗಳ ಪಟ್ಟಿ ಕೆಳಕಂಡಂತಿವೆ.

ವಜ್ರಮುಕುಟ (೧೯೧೦)
ಕನಕವಿಲಾಸ (೧೯೧೩)
ಪ್ರೇಮಾರ್ಜುನ(೧೯೧೨)
ಮೋಹಹರಿ(೧೯೧೪)
ಅಜ್ಞಾತವಾಸ(೧೯೧೫)
ಪ್ರೇಮವಿಜಯ(೧೯೧೬)
ಸಂಗೀತ ಕುಮಾರರಾಮ ಚರಿತ(೧೯೧೭)
ವಿದ್ಯಾರಣ್ಯ(೧೯೨೧)
ಭಾರತಸಂಧಾನ(೧೯೧೮)
ಉತ್ತರ ಗೋಗ್ರಹಣ(೧೯೨೨)
ಸ್ತ್ರೀಧರ್ಮರಹಸ್ಯ(೧೯೧೯)
ಶಿಕ್ಷಣಸಂಭ್ರಮ(೧೯೨೦)
ಪತಿತೋದ್ಧಾರ(೧೯೫೨)

ಮುಂಬಯಿ ಸರಕಾರವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು.

೧೯೫೪ರಲ್ಲಿ ಇವರ “ ಪತಿತೋದ್ಧಾರ” ನಾಟಕಕ್ಕೆ ಮುಂಬಯಿ ಸರಕಾರದ ಬಹುಮಾನ ದೊರೆಯಿತು. ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆ ಗದಗಿನಲ್ಲಿ ವಿಧ್ಯಾದಾನ ಸಮಿತಿ ಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು.

ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹುಯಿಲಗೋಳ ನಾರಾಯಣರು ರಚಿಸಿದ ಗೀತೆ ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ, ೧೯೨೪ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತುಮಹಾತ್ಮ ಗಾಂಧಿಯವರುಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು ೧೯೨೪ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು.