ಪತ್ನಿ ಮತ್ತು ಮಕ್ಕಳೊಂದಿಗೆ ಯೋಗರಾಜ್ ಭಟ್ |
ತಮ್ಮ ವಿಚಿತ್ರ ಶೈಲಿಯಿಂದ ಸಧ್ಯ ಪ್ರಚಲಿತ ಚಿತ್ರ ನಿರ್ದೇಶಕರು ಮತ್ತು ಚಿತ್ರ ಸಾಹಿತಿಯಾಗಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ
ಯೋಗರಾಜ್ ಭಟ್
ಅವರಿಗೆ ೪೩ ನೇ ಹುಟ್ಟುಹಬ್ಬದ ಶುಭಾಶಯಗಳು,
ಅವರ ಮುಂದಿನ ಎಲ್ಲ ಕಾರ್ಯಗಳು ಅದ್ದೂರಿ ಯಶಸ್ವಿಯಾಗಲೆಂದು ಹರಸುವ ಅವರ ಅಭಿಮಾನಿ ಬಳಗದಿಂದ ಹಾರೈಕೆಗಳು
ಚೆಂದುಟಿಯ ಪಕ್ಕದಲಿ ..ಹಾಡಿಗೆ ಮುಂಚೆ ಬರುವ ಭಟ್ಟರ ಡೈಲಾಗ್ ನ ಸ್ಯಾಂಪಲ್ ಈ ಸಂದರ್ಭದಲ್ಲಿ.
ಚಿತ್ರ: ಡ್ರಾಮಾ (2012), ಸಂಗೀತ: ವೀ ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ್ಟ್
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ.. , ಬರಿ ಪೋಲಿ ಕನಸ..
ಮಾಮೂಲಿಕತೆಯ ತಾರುಣ್ಯ ಗೀತೆಯಲಿ ಉತ್ತರ ಕಮ್ಮಿ, ಪ್ರಶ್ನೆಯೇ.. ಜಾಸ್ತಿ..
ದಾರೀಲಿ ಕೈ-ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ ..
ಮುಂಗುರುಳ ಸ್ಪ್ರಿಂಗ್ಅಲ್ಲಿ ಜೋತಾಡಲೇ.. ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ..
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲ ಹೇಳಿದರು ಇನ್ನೇನು ಉಳಿದಿದೆ..
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…
ಎಲ್ಲಿಯೂ ಹೋಗದ ನಿಂತ ಬಸ್ಸಲ್ಲಿ ಸಿಟೊಂದ ಹಿಡಿದವನು ನಾನು..
ಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನಿ ಸಿಕ್ಕರೂ… ಸಿಗದಿದ್ದರೂ… , ಎದೆತುಂಬ ಹಾಡುವೆನು….
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…
ಉಪಯುಕ್ತ ಕೊಂಡಿಗಳು
ಯೋಗರಾಜ್ ಭಟ್ ಅವರ ಜನಪ್ರಿಯ ಚಿತ್ರಗೀತೆಗಳುದುನಿಯ ಸೂರಿ ಮತ್ತು ಯೋಗರಾಜ್ ಭಟ್ ಇತ್ತೀಚಿನ ಜನಪ್ರಿಯ ನಿರ್ದೇಶಕರು
Most Peculiar & also Popular Film Director Yogaraj Bhat
No comments:
Post a Comment