Translate in your Language

Tuesday, June 9, 2015

ಜನರ ನೆನಪಿನ ಶಕ್ತಿ ತಾತ್ಕಾಲಿಕ ಎಂಬ ಅಸಡ್ಡೆಯೇ...?

ಇತ್ತೀಚೆಗೆ ಫಲದ ಎಂಬ ಎಂಬ ಕಂಪನಿಯ ಮೇಲೆ ಸಿ ಐ ಡಿ ಯ ಅಧಿಕಾರಿಗಳು ದಾಳಿ ನೆಡೆಸಿ ಅಮಾಯಕ ೩೪ ಮಕ್ಕಳನ್ನು ರಕ್ಷಿಸಿದ್ದರು, ಈ ಪ್ರಕರಣ ಈಗ ಬಹುತೇಕ ತಣ್ಣಗಾಗಿ ಹೋಗಿದೆ.
ಬಹಳ ನೋವಾಗುತ್ತದೆ, ಯಾವುದೋ ಅನಕ್ಷರಸ್ತ ಬಡ ಗ್ಯಾರೆಜ್ನವನು ಬಾಲ ಕಾರ್ಮಿಕರ ಕಾನೂನು ತಿಳಿಯದೇ ಬಾಲ ಕಾರ್ಮಿಕರ ಇಟ್ಟುಕೊಂಡಿದ್ದರೆ, ಆತನ ಇಡೀ ಸಂಸಾರವೇ ಬೀದಿಗೆ ಬರುವಂತೆ ಮಾಡುತ್ತದೆ ನಮ್ಮ ವ್ಯವಸ್ಥೆ, ಆದರೆ ಎಲ್ಲಾ ಕಾನೂನು ತಿಳಿದಿರುವ ಸೋ ಕಾಲ್ಡರ್ ಗಣ್ಯರು ಎನ್ನಿಸಿಕೊಂಡಿರುವವರು ಕಾನೂನಿಗೆ ಸವಾಲು ಎಸೆಯುವಂತೆ, ಬಾಲ ಕಾರ್ಮಿಕರ ನಿಯಮಿಸಿಕೊಂಡಿದ್ದರೆ , ಯಾವ ಸಂಘಟನೆಗಳಾಗಲಿ, ಮಕ್ಕಳ ಇಲಾಖೆಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಏಕೆ ಈ ತಾರತಮ್ಯ....? ಬಡಮಕ್ಖಳ ಜೀವನವೆಂದರೆ ಏಕೆ ಇಷ್ಟು ಅಸಡ್ಡೆ ..? ನ್ಯಾಯಕ್ಕಾಗಿ ಈ ಸಂಘಟನೆಗಳು ಹೋರಾಟ ಮಾಡಬೇಕೆಂದಿದ್ದರೆ ಮಾಧ್ಯಮಗಳಲ್ಲಿ "ಘಟನೆ" ವಿಜೃಂಭಿಸಲೇ ಬೇಕೆ...? ಇಲ್ಲದಿದ್ದರೆ ಇವರುಗಳ ಆತ್ಮ ,ಹೃದಯ ಕಲುಕುವುದೇ ಇಲ್ಲವೇ...?
ಪ್ರಾಯಶಃ ಈ ಕೇಸ್ ಮುಚ್ಚಿ ಹಾಕುವ ಹುನ್ನಾರ ನೆಡೆಯುತ್ತಿದೆ, ಬಲಿಷ್ಠರಿಗೆ ಕಾನೂನು ಅನ್ವಯವಾಗದು ಎಂಬ ಇರಾದೆ ಇರಬೇಕು, ಮೇಲಾಗಿ ಕೇಸ್ ಮುಚ್ಚಿಹಾಕಲು ಕೇಂದ್ರ ಸಚಿವರೊಬ್ವರ ಒತ್ತಡವಿದೆ ಎಂಬಂತಹ ಮಾತುಗಳು ತೆರೆಮರೆಯಲ್ಲಿ ಕಾಣಿಸಿಕೊಳ್ಳುತಿದೆ.
ಅದೇನೆ ಆಗಲಿ ,ಅದೆಂತಹ ವ್ಯಕ್ತಿಗಳ ಒತ್ತಡಗಳು ಜನ ಸಾಮಾನ್ಯರ ಹೋರಾಟದ ಇದಿರು ನಿಲ್ಲಲಾರದು, ಹಾಗಾಗಿ ಫೇಸ್ ಬುಕ್ ಅಂಗಳವನ್ನು "ಬಾಲ ಕಾರ್ಮಿಕರ " ರಕ್ಷಣೆಗಾಗಿ ಬಳಸೋಣ, ನಮ್ಮ ಕೂಗು ಕೇಂದ್ರದ ನಾಯಕರ ಕಿವಿ ಮುಟ್ಟಿಸೋಣ, ಇದಕ್ಕೆ ನಿಮ್ಮಲ್ಲರ ಸಹಾಕಾರ ಇದ್ದೆ ಇರುತ್ತದೆ ಎಂಬುದು ನನ್ನ ಅಚಲ ನಂಬಿಕೆ.
ಈ ಪ್ರಕರಣವನ್ನು ,ಮಾನ್ಯ ಪ್ರಧಾನಿಗಳ ಗಮನಕ್ಕೆ ತರುವುದಕ್ಕಾಗಿ, ನಮ್ಮ ಟೀಮ್ ಪಿಟಿಷನ್ ಒಂದನ್ನು ತಯಾರು ಮಾಡುತ್ತಿದ್ದಾರೆ , ಅದಕ್ಕೆ ತಾವೆಲ್ಲರೂ ಸಹಿ ಮಾಡುವ ಮೂಲಕ ಹಾಗೂ ಶೇರ್ ಮಾಡುವ ಮೂಲಕ ಬಾಲ ಕಾರ್ಮಿಕ ಮುಕ್ತ ಕರ್ನಾಟಕ್ಕೆ ಸಂಕಲ್ಪಿಸಿ.
ಇಂತಿ
ಪ್ರಶಾಂತ್ ಹೆಗಡೆ
ಆವಿನಹಳ್ಳಿ

No comments:

Post a Comment