ಬೆಟಗೇರಿ ಕೃಷ್ಣಶರ್ಮ |
ಬೆಟಗೇರಿ ಕೃಷ್ಣಶರ್ಮರವರು 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿಯಲ್ಲಿ ಜನಿಸಿದರು. ಆನಂದಕಂದ ಇವರ ಕಾವ್ಯನಾಮ ತಮ್ಮ ಹನ್ನರಡನೇ ಮಯಸ್ಸಿಗೆ ತಂದೆಯನ್ನು ಕಳೆದುಕೊಂಡು ಸಂಸಾರದ ಹೊರೆಯನ್ನು ಹೊರಲೇಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಅಲ್ಪ ಸ್ವಲ್ಪ ಓದು ಕಲಿತ ಕೃಷ್ಣಶರ್ಮರು ಮನೆಯಲ್ಲಿದ್ದರು. ೧೯೧೯ರಲ್ಲಿ ಧಾರವಾಡದಲ್ಲಿ ಜರುಗಿದ ಕರ್ನಾಟಕ ಏಕೀಕರಣ ಸಮ್ಮೇಳನ ಜರುಗಿದಾಗ ಕಾವ್ಯಾನಂದರ ನೇತೃತ್ವದಲ್ಲಿ ಸ್ವಯಂ ಸೇವಕರಾಗಿ ದುಡಿದರು. ಆಗ ಇವರಿಗೆ ಕೆರೂರು ವಾಸುದೇವಾಚಾರ್ಯ, ಹುಯಿಲಗೊಳ ನಾರಾಯಣರಾವ್ ಅವರಂತಹ ಸಂಪರ್ಕ ಅಲ್ಲದೇ ಕನ್ನಡಾಭಿಮಾನವೂ ಬೆಳೆಯಿತು.
ಬೆಟಗೇರಿಯವರು ಶಿಕ್ಷಕ ವೃತ್ತಿಗಿಂತ ಲೇಖಕ ಸಂಪಾದಕ ವೃತ್ತಿಯನ್ನೇ ಬಹುವಾಗಿ ಮೆಚ್ಚಿದರು. ಬೆಟಗೇರಿಯವರು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿ ಶಿಕ್ಷಕರಾಗಿ ಕೆಲಕಾಲ ಕೆಲಸ ಮಾಡಿದರು. ಅನಂತರ ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿಯೂ ಕೆಲಕಾಲ ದುಡಿದರು. ಬೆಳಗಾವಿಯಲ್ಲಿ ಮರಾಠಿ ವಾತಾವರಣ ಇದ್ದ ಕಾರಣ ಅಲ್ಲಿಯ ಜನರಲ್ಲಿ ಕನ್ನಡ ಪ್ರಜ್ಞೆ ಮೂಡಿಸಲು ಬಹುವಾಗಿ ಶ್ರಮಿಸಿದರು. ಆ ಸಂದರ್ಭದಲ್ಲಿಯೇ ಎನಿತು ಇನಿದು ಈ ಕನ್ನಡ ನುಡಿಯು ಎಂಬ ಸುಂದರ ಗೀತೆಯನ್ನು ರಚಿಸಿದರು. ೧೯೩೮ರಲ್ಲಿ ಜಯಂತಿ ಪತ್ರಿಕೆಯನ್ನು ಆರಂಭಿಸಿ ಸುಮಾರು ೨೫ ವರ್ಷಗಳ ಕಾಲ ನಡೆಸಿದರು. ಸ್ವಧರ್ಮ, ಜಯ ಕರ್ನಾಟಕ ಈ ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ಇವರು ೧೯೮೨ರಲ್ಲಿ ನಿಧನರದರು.
ಕೃತಿಗಳು
ರಾಜಯೋಗಿ, ಅಶಾಂತಿ ಪರ್ವ, ಮಲ್ಲಿಕಾರ್ಜುನ, ಮುದ್ದಣ ಮಾತು, ಕಾರ ಹುಣ್ಣಿಮೆ, ವಿರಹಿಣಿ, ಒಡನಾಡಿ, ಸಂಸಾರ ಚಿತ್ರಗಳು, ಕಳ್ಳರ ಗುರು, ಸಂಸ್ಕೃತಿ ಪರಂಪರೆ, ಕರ್ನಾಟಕ ಜನಜೀವನ ಇವು ಇವರ ಕೃತಿಗಳು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೩೭ರಲ್ಲಿ ಜಮಖಂಡಿಯಲ್ಲಿ ನಡೆದ ೨೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಗೋಷ್ಠಿಗೆ ಇವರು ಅಧ್ಯಕ್ಷರಾಗಿದ್ದರು.
೧೯೭೧ರಲ್ಲಿ ನಾಗಮಂಗಲದಲ್ಲಿ ನಡೆದ ಜಾನಪದ ಸಮ್ಮೇಳನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
೧೯೭೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
No comments:
Post a Comment