Translate in your Language

Friday, April 8, 2016

ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ 178ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ರೆವರೆಂಡ್ ಫರ್ಡಿನೆಂಡ್ ಕಿಟೆಲರು 1832ರ ಏಪ್ರಿಲ್ 8 ರಂದು ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಿನಲ್ಲಿ ಜನಿಸಿದರು.
ರೆವರೆಂಡ್ ಫರ್ಡಿನೆಂಡ್ ಕಿಟೆಲ
ತಂದೆ ಗಾಟಫ್ರೀಟ್ ಕ್ರಿಶ್ಚಿಯನ್ ಕಿಟೆಲ್. ತಾಯಿ ತೆಯಡೋವ್ ಹೆಲೆನ್ ಹಾರ್ಬಟ್ ಫರ್ಡಿನೆಂಡ್ ಕಿಟೆಲರ ಶಾಲಾ ಶಿಕ್ಷಣ ಅಜ್ಜನ ಊರಾದ ಆರಿಶ್‌ನಲ್ಲಿ ನಡೆಯಿತು. ಅನಂತರ ಸ್ವಟ್ಜರ್ಲೆಂಡಿನ ಬಾಸೆಲ್ ನಗರದ ೧೮೫೩ರಲ್ಲಿ ಮಿಷನ್ ಸ್ಕೂಲನ್ನು ಸೇರಿ ಅಲ್ಲಿಯ ಶಿಕ್ಷಣವನ್ನು ಮುಗಿಸಿ ಗುರುದೀಕ್ಷೆ ಪಡೆದುಕೊಂಡರು. ಮಿಷನ್ ಸಂಸ್ಥೆ ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿತು. ೧೮೫೪ರ ಅಕ್ಟೋಬರ್ ೨೦ ರಂದು ಮಂಗಳೂರಿಗೆ ಮೊದಲು ಬಂದರು. ಅನಂತರ ಧಾರವಾಡದಲ್ಲಿ ನೆಲೆಸಿದರು. 
ಕಿಟೆಲರಿಗೆ ಗ್ರೀಕ್, ಲ್ಯಾಟಿನ್, ಹೀಬ್ರೂ, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಅದೇ ರೀತಿಯಲ್ಲಿ ಸ್ಥಳೀಯ ಭಾಷೆಯನ್ನು ಕಲಿಯರು ಆಸಕ್ತಿವಹಿಸಿದರು. ಆ ಕಾರಣಕ್ಕಾಗಿ ಕಿಟೆಲರು ಆ ಕಾಲಕ್ಕೆ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಮಂಗಳೂರಿಗೆ ಹೋದರು. ಅಲ್ಲಿ ಕನ್ನಡ ಭಾಷೆಯ ಅಧ್ಯಯನ ಮಾತ್ರವಲ್ಲದೆ ಜೊತೆಯಲ್ಲಿ ಸಂಸ್ಕೃತ, ತುಳು, ಮಲೆಯಾಳಂ ಭಾಷೆಗಳನ್ನು ಪರಿಚಯ ಮಾಡಿಕೊಂಡರು.
೧೮೬೦ರ ನವೆಂಬರ್‌ನಲ್ಲಿ ಪೌಲಿನ್ ಈತ ಎಂಬ ಜರ್ಮನ್ ಮಹಿಳೆಯೊಡನೆ ವಿವಾಹವಾದರು. ವಿವಾಹವಾದ ನಾಲ್ಕು ವರ್ಷಗಳಲ್ಲಿ ಪತ್ನಿಯನ್ನು ಕಳೆದುಕೊಳ್ಳಬೇಕಾಯಿತು. ಪಾಲಿರಾಐತ್ ತೀರಿಕೊಂಡ ಮೇಲೆ ಜರ್ಮನಿಗೆ ಹೋದರು. ೧೮೬೬ ರಲ್ಲಿ ಆಕೆಯ ತಂಗಿ ಜಾಲಿಯನ್ನು ಮದುವೆಯಾಗಿ ೧೮೬೭ರಲ್ಲಿ ಭಾರತಕ್ಕೆ ಬಂದರು. ೧೮೮೩-೮೪ರವರೆಗೆ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನ ಪ್ರಾಂಶುಪಾಲರಾಗಿ ಕಿಟೆಲರು ಕಾರ್ಯ ನಿರ್ವಹಿಸಿದರು. ೧೮೭೨ ರಿಂದ ೧೮೯೪ರ ವರೆಗೆ ನಿಘಂಟು ರಚನೆಯಲ್ಲಿ ತೊಡಗಿದ್ದರು. ಈ ಮಹಾನ್ ಕಾರ್ಯಕ್ಕಾಗಿ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಇದು ಕನ್ನಡ ಕಾರ್ಯಕ್ಕೆ ಸಂದ ಪ್ರಪಥಮ ಗೌರವ ಡಾಕ್ಟರೇಟ್ ಪದವಿಯಿದು. ೧೯೦೩ ರ ಅಕ್ಟೋಬರ್ ೧೯ ರಂದು ಟ್ಯುಬಿಂಗನ್ ನಗರದಲ್ಲಿ ನಿಧನ ಹೊಂದಿದರು.

ಕೃತಿಗಳು
ಹಳಗನ್ನಡದ ಸಂಕ್ಷಿಪ್ತ ವ್ಯಾಕರಣ ಸೂತ್ರಗಳು, ಸಣ್ಣ ಕರ್ನಾಟಕ ಕಾವ್ಯಮಾಲೆ, ಕಾವ್ಯಮಂಜರಿ, ಕೇಶಿರಾಜನ ಶಬ್ದಮಣಿ ದರ್ಪಣ, ಕರ್ನಾಟಕ ಕಾವ್ಯಮಾಲೆ, ಪಂಚತಂತ್ರ ನಾಗವರ್ಮನ ಛಂದೋಂಬುಧಿ, ಕನ್ನಡ ಇಂಗ್ಲಿಷ್ ನಿಘಂಟು, ಕ್ರಿಸ್ತ ಚರಿತೆ, ಇಂಗ್ಲಿಷ್‌ನಲ್ಲಿ ’ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೮೯೬ರ ಜೂನ್ ೬ ರಂದು ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

No comments:

Post a Comment