Translate in your Language

Tuesday, December 6, 2016

ಟಿ ಎನ್ ಸೀತಾರಾಂ ಅವರಿಗೆ 69ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು !

ಟಿ ಎನ್ ಸೀತಾರಾಂ (ತಳಗವಾರ ನಾರಾಯಣರಾವ್  ಸೀತಾರಾಂ) (Born on 6th December 1948) ಇವರ ಟಿ ಎನ್ ಸೀತಾರಾಂ ಇವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ. ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡು ಅದರಂತೆ ನೆಡೆದುಕೊಳ್ಳುವ ಕೆಲವೇ ವ್ಯಕ್ತಿಗಳಲ್ಲೊಬ್ಬರು. ಇವರು ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು. ಇವರ ಗರಡಿಯಲ್ಲಿ ಪಳಗಿದ ಹಲವಾರು ಕಿರುತೆರೆ ಕಲಾವಿದರು ಚಲನಚಿತ್ರಗಳಲ್ಲಿ ಈಗಲೂ ಮಿಂಚುತಿದ್ದಾರೆ


ಇವರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ: ಮತದಾನ
ಚಲನಚಿತ್ರಗಳು

ಕ್ರೌರ್ಯ (ಕಥೆ, ಚಿತ್ರಕಥೆ)
ಆಸ್ಫೋಟ(ಕಥೆ, ಅಭಿನಯ)
ಧರಣಿಮಂಡಲ ಮಧ್ಯದೊಳಗೆ (ಅಭಿನಯ)
ಮತದಾನ (2001) (ನಿರ್ದೇಶನ)
ಮೀರಾ ಮಾಧವ ರಾಘವ (2007) (ನಿರ್ದೇಶನ)
ವಾಸ್ತು ಪ್ರಕಾರ (ಅಭಿನಯ)
ಕಾಫೀ ತೋಟ (2017) (ನಿರ್ದೇಶನ+ನಿರ್ಮಾಣ)


ಕಿರುತೆರೆ ಧಾರಾವಾಹಿಗಳು
ಮಾಯಾಮೃಗ
ಮನ್ವಂತರ
ಮುಕ್ತ
ಮಳೆಬಿಲ್ಲು
ಕಾಲೇಜು ರಂಗ
ಮುಖಾಮುಖಿ
ಮುಕ್ತ ಮುಕ್ತ
ಮಹಾಪರ್ವ
ನಾಟಕಗಳು

ನಮ್ಮೊಳಗೊಬ್ಬ ನಾಜೂಕಯ್ಯ
ಬದುಕ ಮನ್ನಿಸು ಪ್ರಭುವೇ
ಆಸ್ಫೋಟ

ಪ್ರಶಸ್ತಿಗಳು
48ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರ ನಿರ್ದೇಶನದ ಮತದಾನ ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ' ರಾಷ್ಟ್ರಪ್ರಶಸ್ತಿ ದೊರೆತಿದೆ.
2005ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ಮುಕ್ತ ಧಾರಾವಾಹಿಯ ನಿರ್ದೇಶನಕ್ಕಾಗಿ 'ಶ್ರೇಷ್ಠ ನಿರ್ದೇಶಕ' ಪ್ರಶಸ್ತಿ.



No comments:

Post a Comment