Translate in your Language

Wednesday, March 30, 2016

ದೇವಿಕಾರಾಣಿ ಅವರ 108ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ !

Beautiful :Devika Rani 
ಭಾರತೀಯ ಚಿತ್ರರಂಗದ ಪ್ರಥಮ ಸಾಲಿನ ಮಹಿಳಾಮಣಿಗಳಲ್ಲಿ ದೇವಿಕಾ ರಾಣಿಯವರ ಹೆಸರು ಶಾಶ್ವತವಾಗಿರುವಂತದ್ದು.  ದೇವಿಕಾ ರಾಣಿಯವರು ಮಾರ್ಚ್ 30, 1908 ರಲ್ಲಿ ವಿಶಾಕಪಟ್ಟಣದ ಬಳಿಯ ವಾಲ್ಟೈರ್ ಎಂಬಲ್ಲಿ ಜನಿಸಿದರು.  ದೇವಿಕಾರಾಣಿಯವರು ರಬೀಂದ್ರನಾಥ ಠಾಗೂರರ ವಂಶದವರು.   ಅವರ ತಂದೆ ಎಂ. ಎನ್. ಚೌಧುರಿಯವರು ಮದ್ರಾಸ್ ರಾಜ್ಯದ ಪ್ರಥಮ ಸರ್ಜನ್ ಜನರಲ್ ಎಂದು ಪ್ರಖ್ಯಾತರಾದವರು.  ಅವರ ತಾಯಿ ಲೀಲಾ.

Thursday, March 17, 2016

ಜಗ್ಗೇಶ್ ಅವರ 53ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

Jaggesh
ನವರಸ ನಾಯಕ ಜಗ್ಗೇಶ್ ಅವರು ಹುಟ್ಟಿದ್ದು 17ನೆ ಮಾರ್ಚ್ 1963 ರಲ್ಲಿ.   ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ.  ಎಂಥಹ ಪ್ರಲೋಭನೆಗಳು ಬಂದರೂ ಕನ್ನಡ ಚಿತ್ರರಂಗ ಬಿಟ್ಟು ಹೊರಗಿನ ಭಾಷಾ ಚಿತ್ರರಂಗದತ್ತ ಕಣ್ಣು ಹಾಯಿಸದ ವ್ಯಕ್ತಿ.

ನಮಗೆ ಹಲವು ಕಲಾವಿದರು ಹಲವು ಕಾರಣಕ್ಕಾಗಿ ಇಷ್ಟ ಆಗುತ್ತಾರೆ. ಹಲವು ಕಾರಣಕ್ಕಾಗಿ ಹಲವು ಸಿನಿಮಾಗಳು ಇಷ್ಟ ಆಗುತ್ತವೆ.

Monday, March 7, 2016

ರಾಧಿಕಾ ಪಂಡಿತ್ ಅವರ 32ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ರಾಧಿಕಾ ಪಂಡಿತ್  ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿ.  ಮೊದಲಿಗೆ ಆಕೆ ಕನ್ನಡದ ಮಣ್ಣಿನ ಪ್ರತಿಭೆ.  ಕನ್ನಡ ಬಲ್ಲ ಪ್ರತಿಭೆ.  ಸುಂದರವಾಗಿ ಕನ್ನಡವನ್ನು ಸಂಭಾಷಿಸುವ ಹುಡುಗಿ.  ಇಂತಹ ವಿಷಯಗಳೆಲ್ಲ ಇಂದಿನ ನಮ್ಮ ಚಿತ್ರರಂಗದಲ್ಲಿ ಅಚ್ಚರಿಯ ಸಂಗತಿ ಎನ್ನುವಂತಾಗಿಬಿಟ್ಟಿದೆ.  ಮಾರ್ಚ್ 7, 1984 ರಾಧಿಕಾ ಪಂಡಿತ್ ಹುಟ್ಟುಹಬ್ಬ.  ಉತ್ತರ ಕನ್ನಡ ಜಿಲ್ಲೆಯಿಂದ  ಮೂಡಿಬಂದ ಈ ಪ್ರತಿಭೆ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸಿದವರು.

ರಾಧಿಕಾ ಪಂಡಿತ್ ಫಿಲ್ಮ್ ಫೇರ್ ಪ್ರಶಸ್ತಿಗಳಿಕೆಯಲ್ಲಿ ಹ್ಯಾಟ್ರಿಕ್ ಮಾಡಿರುವ ಸಾಧನೆ ಮತ್ತು ರಾಜ್ಯಪ್ರಶಸ್ತಿಯೂ ಸೇರಿದಂತೆ ಪಡೆದ ಹಲವಾರು ಗೌರವಗಳಿಂದ ಎಲ್ಲರ ಗಮನ ಸೆಳೆದವರು.

ಸಂತ ಶಿಶುನಾಳ ಶರೀಫ ಅವರ 197ನೇ ಹುಟ್ಟು ಹಬ್ಬದ ಸವಿ-ನೆನಪಿನಲ್ಲಿ

ಗುರುಗೋವಿಂದರ ಜೊತೆ ಶರೀಫಜ್ಜ !
ಶಿಶುನಾಳ ಶರೀಫರು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳ ಗ್ರಾಮದ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಮತ್ತು ಹಜ್ಜೂಮ ಇವರ ಮಗನಾಗಿ ಮಾರ್ಚ್ 7, 1819 ರಂದು ಜನಿಸಿದರು.  ಅವರ ಮೂಲ ಹೆಸರು ಮಹಮ್ಮದ ಶರೀಫ.

ಕೂಲಿಮಠದಲ್ಲಿದ್ದು ಮುಲ್ಕೀ ಪರೀಕ್ಷೆಯನ್ನು ಪಾಸುಮಾಡಿದ ನಂತರದಲ್ಲಿ ಶರೀಫರು ಮೋಡಿ ಭಾಷೆಯನ್ನು ಓದಿ ಬರೆಯುವುದಕ್ಕೂ ಕಲಿತುಕೊಂಡರು.

Friday, March 4, 2016

ತಾರಾ ಅವರ 45ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4, 1971.  ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು  ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ  ಮತ್ತೊಮ್ಮೆ ತಂದರು.  
‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’  ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ತಾರಾ ಕನ್ನಡ ನಾಡು ಕಂಡ ಅಮೂಲ್ಯ ಪ್ರತಿಭೆ.  ಅವರ ಮತದಾನ,  ಸಯನೈಡ್, ಭಾಗೀರಥಿ  ಅಂತ ಚಿತ್ರಗಳೂ ಅಷ್ಟೇ ಪ್ರಸಿದ್ಧ. 

Tuesday, February 16, 2016

ದರ್ಶನ್ ಅವರ 40ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ನಿಮ್ಮೆಲ್ಲರ ಅಚ್ಚು-ಮೆಚ್ಚಿನ , ಗಜ, ಸಾರಥಿ, ಜಗ್ಗು-ದಾದ, ಐರಾವತ,  ಚಾಲೆಂಜಿಂಗ್ ಸ್ಟಾರ್ದರ್ಶನ್
ನಮ್ಮ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ನಿಟ್ಟಿನಲ್ಲಿ ಚಿರಪರಿಚಿತ ಹೆಸರು.   ಅಂದು ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಶ್ರೀನಿವಾಸ್ ಪ್ರಸಿದ್ಧ ಖಳನಟರು.  ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಕೂಡ ಅದ್ಭುತವಾಗಿ ನಟಿಸಿದವರು.  ತೂಗುದೀಪ ಶ್ರೀನಿವಾಸರ ಪುತ್ರರಾದ ದರ್ಶನ್  ಚಿತ್ರರಂಗದಲ್ಲಿ ಪ್ರಾರಂಭದಲ್ಲಿ ‘ದರ್ಶನ್ ತೂಗುದೀಪ’ ಎಂದೇ ಪರಿಚಿತರಾದವರು.  ದರ್ಶನ್ ಜನಿಸಿದ್ದು ಫೆಬ್ರುವರಿ 16, 1977 ರಲ್ಲಿ.

ತೂಗುದೀಪ ಶ್ರೀನಿವಾಸರು ಅಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರಾದರೂ ಅವರ ಬದುಕು ಹೂವಿನ ಹಾಸಿಗೆಯದಾಗಿರಲಿಲ್ಲ.

Monday, February 15, 2016

ನಾಟಕದ ಮೂಲಕ ‘ಭ್ರಷ್ಟರನ್ನು ಬೆಂಡೆತ್ತಿದ’ ಮಾಸ್ಟರ್ ಹಿರಣ್ಣಯ್ಯ ಬರ್ತ್ ಡೇ

… ಹಿರಣ್ಣಯ್ಯ ಅವರ ಕುರಿತು ಒಂದಷ್ಟು…

ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಜನಿಸಿದರು. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. 1953ರಲ್ಲಿ ತಂದೆಯವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು.
ಮಾಸ್ಟರ್ ಹಿರಣ್ಣಯ್ಯನವರು ನಾಟಕಗಳಲ್ಲಿ ಪ್ರಖ್ಯಾತರಾಗಿ, ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, ಸಮಾಜದ ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ ಮೂಡಿಸಿದವರು. ಅದಕ್ಕೂ ಮಿಗಿಲಾಗಿ ಅವರ ವಿರುದ್ಧ ಕಿರುಕುಳ ನೀಡಲು ನಿಂತವರ ಮುಂದೆ ಸೊಪ್ಪು ಹಾಕದೆ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿದವರು. ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧೀ ಜೊತೆಗೆ ಅನೇಕ ರಾಜಕೀಯ ನಾಯಕರು, ವಿವಿಧ ಹಂತಗಳ ಪುಡಾರಿಗಳು ಇವರ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾರದೆ ಅವರ ಚಟುವಟಿಕೆಗಳನ್ನು ಮಟ್ಟ ಹಾಕಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಧೈರ್ಯವಾಗಿ ಮೆಟ್ಟು ನಿಂತ ಧೀರರಾಗಿ ಅವರು ತಮ್ಮ ಕಲೆಯನ್ನು ಬೆಳಗಿದ ರೀತಿ ಅನನ್ಯ. ಅದೆಷ್ಟು ಬಾರಿ ಕೋರ್ಟ್ ಹತ್ತಿದರೋ ಈ ಪುಣ್ಯಾತ್ಮ. ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯ ಪಡೆದರು. ಆದರೆ ಅನ್ಯಾಯವಂತರೆದುರು ಎಂದೂ ತಲೆತಗ್ಗಿಸಲಿಲ್ಲ. ಅವರ ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಅಂತೆಯೇ ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನತೆಗೆ ಅವರು ತೋರುತ್ತ ಬಂದಿರುವ ಪ್ರೀತಿ, ಸರಳ ಸಜ್ಜನಿಕೆ, ಇವೆಲ್ಲಾ ಅನುಪಮವಾದದ್ದು.