ರೆವರೆಂಡ್ ಫರ್ಡಿನೆಂಡ್ ಕಿಟೆಲರು 1832ರ ಏಪ್ರಿಲ್ 8 ರಂದು ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಿನಲ್ಲಿ ಜನಿಸಿದರು.
![]() |
| ರೆವರೆಂಡ್ ಫರ್ಡಿನೆಂಡ್ ಕಿಟೆಲ |
ತಂದೆ ಗಾಟಫ್ರೀಟ್ ಕ್ರಿಶ್ಚಿಯನ್ ಕಿಟೆಲ್. ತಾಯಿ ತೆಯಡೋವ್ ಹೆಲೆನ್ ಹಾರ್ಬಟ್ ಫರ್ಡಿನೆಂಡ್ ಕಿಟೆಲರ ಶಾಲಾ ಶಿಕ್ಷಣ ಅಜ್ಜನ ಊರಾದ ಆರಿಶ್‌ನಲ್ಲಿ ನಡೆಯಿತು. ಅನಂತರ ಸ್ವಟ್ಜರ್ಲೆಂಡಿನ ಬಾಸೆಲ್ ನಗರದ ೧೮೫೩ರಲ್ಲಿ ಮಿಷನ್ ಸ್ಕೂಲನ್ನು ಸೇರಿ ಅಲ್ಲಿಯ ಶಿಕ್ಷಣವನ್ನು ಮುಗಿಸಿ ಗುರುದೀಕ್ಷೆ ಪಡೆದುಕೊಂಡರು. ಮಿಷನ್ ಸಂಸ್ಥೆ ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿತು. ೧೮೫೪ರ ಅಕ್ಟೋಬರ್ ೨೦ ರಂದು ಮಂಗಳೂರಿಗೆ ಮೊದಲು ಬಂದರು. ಅನಂತರ ಧಾರವಾಡದಲ್ಲಿ ನೆಲೆಸಿದರು.
ಕಿಟೆಲರಿಗೆ ಗ್ರೀಕ್, ಲ್ಯಾಟಿನ್, ಹೀಬ್ರೂ, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಅದೇ ರೀತಿಯಲ್ಲಿ ಸ್ಥಳೀಯ ಭಾಷೆಯನ್ನು ಕಲಿಯರು ಆಸಕ್ತಿವಹಿಸಿದರು. ಆ ಕಾರಣಕ್ಕಾಗಿ ಕಿಟೆಲರು ಆ ಕಾಲಕ್ಕೆ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಮಂಗಳೂರಿಗೆ ಹೋದರು. ಅಲ್ಲಿ ಕನ್ನಡ ಭಾಷೆಯ ಅಧ್ಯಯನ ಮಾತ್ರವಲ್ಲದೆ ಜೊತೆಯಲ್ಲಿ ಸಂಸ್ಕೃತ, ತುಳು, ಮಲೆಯಾಳಂ ಭಾಷೆಗಳನ್ನು ಪರಿಚಯ ಮಾಡಿಕೊಂಡರು.






