Translate in your Language

Friday, July 24, 2015

ನರಸಿಂಹರಾಜು ಅವರ 93ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !

T R Narashimaraju
ಕನ್ನಡ ಚಿತ್ರರಂಗದ ಚಾರ್ಲಿ ಚಾಪ್ಲಿನ್ ಎಂದೇ ಹೆಸರಾದ ಟಿ ಆರ್ ನರಸಿಂಹರಾಜು (ಜನನ ಜುಲೈ 24, 1923, ನಿಧನ:ಜುಲಯ್ 11, 1979) ಅವರ 93ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ 
ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರು ನಲ್ಲಿ. ತಂದೆ  ರಾಮರಾಜು ತಾಯಿ ವೆಂಕಟಲಕ್ಸ್ಮಿ. ಅವರ ಮೊಟ್ಟ ಮೊದಲ ಚಿತ್ರವೇ ಬೇಡರ ಕಣ್ಣಪ್ಪ (೧೯೫೪ರಲ್ಲಿ)್, ಸುಮಾರು ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಲಿದಿರುವ ಶ್ರೇಷ್ಟ ಹಾಸ್ಯ ನಟ ನರಸಿಂಹರಾಜು

Tuesday, June 23, 2015

ಚಿತ್ರಸಂಗೀತದ ಮೈಲಿಗಲ್ಲು ಹಂಸಲೇಖ

‘ಹಂಸಲೇಖ’ರು ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ.  ಹಂಸಲೇಖ ಅವರು  ಜೂನ್ 23, 1951ರ ವರ್ಷದಲ್ಲಿ ಗೋವಿಂದರಾಜು ಗಂಗರಾಜುವಾಗಿ ಮೈಸೂರಿನಲ್ಲಿ  ಜನಿಸಿದರು. 

‘ತ್ರಿವೇಣಿ’ ಚಿತ್ರದಲ್ಲಿ ಬರವಣಿಗೆಯ ಮೂಲಕ ಚಿತ್ರರಂಗಕ್ಕೆ ಬಂದ ಹಂಸಲೇಖರು ಮುಂದೆ ಒಂದೆರಡು ಪುಟ್ಟ ಕೆಲಸಗಳನ್ನು ಅಲ್ಲಿ ಇಲ್ಲಿ ಮಾಡಿದ್ದರೂ ಅವರು ಪ್ರಖ್ಯಾತರಾದದ್ದು ‘ಪ್ರೇಮಲೋಕ’ ಚಿತ್ರದಲ್ಲಿ. 'ನೀನಾ ಭಗವಂತ, ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ' ಎಂಬಂತಹ ಸಾಹಿತ್ಯದಿಂದ ಅಲ್ಲಲ್ಲಿ ಮಿಂಚಿದ್ದವರು.  ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಎನ್. ವೀರಸ್ವಾಮಿಯವರ ಪುತ್ರ ಚಿನಕುರಳಿ ವ್ಯಕ್ತಿತ್ವದ ರವಿಚಂದ್ರನ್ ಆಗ ತಾನೇ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದರು.  ಇಂತಹ ಪ್ರಯತ್ನದಲ್ಲಿ ಅವರಿಗೆ ‘ಗ್ರೀಸ್ 2’ ಪ್ರೇರಣೆಯಿಂದ  ಕನ್ನಡದಲ್ಲೊಂದು ಹಾಡುಗಳ ಮೂಲಕ ನಡೆಯುವ ಪ್ರೇಮಕತೆಯನ್ನು ಹೇಳುವ ಆಶಯದಲ್ಲಿದ್ದಾಗ ‘ಹಂಸಲೇಖ’ರು ಅವರಿಗೆ ಜೊತೆಯಾದರು.  'ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೆ' ಎಂಬ ಹಾಡಿನ ಧ್ವನಿಮುದ್ರಣದ ಸಮಯದಲ್ಲಿ ಅಲ್ಲಿದ್ದ ಹಂಸಲೇಖರು ಆ ಹಾಡಿನ ವಿಸ್ತರಣೆಯಾದ 'ಯಾರೇ, ಯಾರೇ..' ಎಂಬ ಸಲಹೆ ಕೊಟ್ಟಾಗ ಅವರು ರವಿಚಂದ್ರನ್ ಅವರಿಗೆ ಪ್ರಿಯರಾಗಿಬಿಟ್ಟರು.

Thursday, June 18, 2015

ಸಿದ್ಧಯ್ಯ ಪುರಾಣಿಕ ಅವರ 98ನೇ ಹುಟ್ಟಿದ ಹಬ್ಬದ ಸವಿ ನೆನಪಿನಲ್ಲಿ


  • ಹೊತ್ತಿತೋ ಹೊತ್ತಿತೋ ಕನ್ನಡದ ದೀಪ...
  • ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ...
  • ಪ್ರಕೃತಿಯೇ ಗುರು ಗಗನ ಲಿಂಗವು...
  • ಓದಿ ಬ್ರಾಹ್ಮಣನಾಗು ಕಾದು ಕ್ಷತ್ರಿಯಾನಾಗು...   
               ಇವು ಸಿದ್ಧಯ್ಯ ಪುರಾಣಿಕ ಅವರ ಜನಪ್ರಿಯ ರಚನೆಗಳು
ಸಿದ್ಧಯ್ಯ ಪುರಾಣಿಕರು ಜನಿಸಿದ್ದು 18ನೇ ಜೂನ್ 1918 ರಲ್ಲಿ.  ಕೊಪ್ಪಳ  ಜಿಲ್ಲೆಯ ಯಲಬುರುಗಿ ತಾಲ್ಲೂಕಿನ ದ್ಯಾಂಪುರ ಪುರಾಣಿಕರು ಹುಟ್ಟಿದ ಊರು.  ಶ್ರೀ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಹಾಗೂ ಶ್ರೀಮತಿ ದಾನಮ್ಮ ಪುರಾಣಿಕರಿಗೆ ಜನಿಸಿದ ಐದು ಮಕ್ಕಳಲ್ಲಿ ಹಿರಿಯವರು ಡಾ. ಸಿದ್ಧಯ್ಯ ಪುರಾಣಿಕರು.

Tuesday, June 16, 2015

ಡಾ. ಹೆಚ್.ನರಸಿಂಹಯ್ಯಅವರ 95ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

H. Narasimhaiah (ಡಾ. ಹೆಚ್.ನರಸಿಂಹಯ್ಯ) physicist, educator, freedom fighter and rationalist
Born in Hossur on 6th June 1921 (೬ನೆ ಜೂನ್ ೧೯೨೧ ) , a village near Gauribidanur in Karnataka, India. His parents were poor, illiterate and belonged to a disadvantaged caste. Upon completion of elementary education, he left for Bangalore where he joined the National High School, Basavanagudi, in 1935. He received his B.Sc.(Honors) and Master's degree in Physics with first class from Central College of Bangalore (1946). The same year Narasimhaiah started his academic career as a lecturer in National College, Bangalore.

He taught from 1946 until 1957 when he proceeded to Columbus, Ohio to get his PhD degree in Nuclear physics from Ohio State University(1960).  ನರಸಿಂಹಯ್ಯ ,ಅಮೇರಿಕಾದಲ್ಲಿ ಇದ್ದ ನಾಲ್ಕೂ ವರ್ಷಗಳು ಪ್ರತಿನಿತ್ಯ ಬೆಳಗ್ಗೆ, ಮಧ್ಯಾನ ತಿಂದದ್ದು ಬರಿ ಉಪ್ಪಿಟ್ಟು. ಒಂದೆಡೆ  ಆವರೆ  ಹೇಳುವಂತೆ ಪ್ರಪಂಚದಲ್ಲಿಯೇ ವಿಶ್ವ ದಾಖಲೆ ಮಾಡಿದ್ದೇನೆ ಎಂದು ಆವರೆ ಹೇಳುತ್ತಾರೆ .

Wednesday, June 10, 2015

ಡಿ ಕೆ ರವಿ ಅವರ ಮೂವತ್ತಾರನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !

Sri D K Ravi with his Pet
ಡಿ. ಕೆ. ರವಿ (ಜನನ: ಜೂನ್ 10, 1979 - ನಿಧನ: ಮಾರ್ಚ್ 16 2015) ಕರ್ನಾಟಕ ಕಂಡ ನಿಷ್ಟಾವಂತ ಐ.ಎ.ಎಸ್ ಅಧಿಕಾರಿ. ಅಲ್ಪಾವಧಿಯಲ್ಲಿಏ ರಾಜ್ಯದ ಸರಿ ಸುಮಾರು ಎಲ್ಲಾ ಜಿಲ್ಲೆ-ತಾಲೂಕು-ಗ್ರಾಮಗಳಲ್ಲಿಯ ಅಷ್ಟೇ ಏಕೆ ದೇಶದಾದ್ಯಂತ ಸಂಚಲನ ಮೂಡಿಸಿದ ಅದ್ಯಮ್ಮ್ಯ ಚೇತನ ಡಿ ಕೆ ರವಿ.
ಇಂದು ಅವರು ಬದುಕಿದ್ದಿದ್ದರೆ ರಾಜ್ಯಾದಂತ ಕನ್ನಡಿಗರು ಡಿ ಕೆ ರವಿ ಅವರ  36ನೇ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು ! 

ಈ ನಾಡಿನ ಪಾಪಿಗಳು-ಬ್ರಷ್ಟರು-ಧನಪಿಶಾಚಿಗಳು ಅವರ ನಿಷ್ಟಾವಂತ ಸೇವೆಯಿಂದ ಎಲ್ಲಿ ತಮ್ಮ ಬುಡಕ್ಕೆ ಬೆಂಕಿ ಬೀಳುತ್ತದೋ ಎಂದು ಅವರನ್ನು ನಿಗೂಡವಾಗಿ ಮಾರ್ಚ್ ೧೬, ೨೦೧೫ ರಂದು ಸಾಯಿಸಿದರು.ನಮ್ಮ ರಾಜ್ಯ ಸರ್ಕಾರವೂ ಕೊಲೆಗಾರರ ಬೆಂಬಲಕ್ಕೆ ನಿಂತಂತೆ ಸಾಕ್ಷಿ ನಾಶ ವಾಗುವವರೆಗೂ ಸುಮ್ಮನಿದ್ದು ನಂತರ ರಾಜ್ಯದ ಜನತೆಯ ಒತ್ತಡಕ್ಕೆ ಮಣಿದು ಅವರ ಸಾವಿನ ತನಿಕೆಯನ್ನು ಸಿ.ಬಿ.ಐ ಗೆ ಒಪ್ಪಿಸಿರುವುದು ಅನುಮಾನಾಸ್ಪದ ವಿಷಯ ! 
ಸಿ.ಬಿ.ಐ ನ  ಪ್ರಾಮಾಣಿಕ ತನಿಕೆ ಯಾಗಲಿ,  ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ನಾಡಿನ ಪ್ರಜೆಗಳೆಲ್ಲರ ಕಳಕಳಿ !

ಡಿ ಕೆ ರವಿ ಕುರಿತ ಇತರ ಲೇಖನಗಳು