Translate in your Language

Showing posts with label ಚಿಂತಕರು. Show all posts
Showing posts with label ಚಿಂತಕರು. Show all posts

Monday, April 23, 2018

ಬೀchi (ರಾಯಸಂ ಭೀಮಸೇನ ರಾವ್)


ಬೀchi  ಯವರ 105ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !!
ಬೀchi (ರಾಯಸಂ ಭೀಮಸೇನ ರಾವ್) 
(Born: ಏಪ್ರಿಲ್ 23, 1913 - Died: ಡಿಸೆಂಬರ್ 7, 1980) 
ಬೀchi ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ".
                    (- ಅಂದನಾ ತಿಂಮ)

ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು.

Wednesday, May 11, 2016

ಜಿಡ್ಡು ಕೃಷ್ಣಮೂರ್ತಿ ಅವರ 122ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಜಿಡ್ಡು ಕೃಷ್ಣಮೂರ್ತಿ:(1885-1986)
ಜೆ ಕೃಷ್ಣಮೂರ್ತಿ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 11ನೇ ಮೇ 1895ರಲ್ಲಿ ಜನಿಸಿದರು.  1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು.
 ಹಿಂದೂ ಧರ್ಮ ಮತ್ತು ಬೌದ್ಧ ತತ್ವಗಳಿಗೆ ಪಾಶ್ಚಾತ್ಯ ಸ್ವರೂಪಗಳ ಮಿಶ್ರಣವನ್ನು ನೀಡಿದ ಥಿಯೋಸೋಫಿಕಲ್ ಸೊಸೈಟಿಯ ಅಧ್ಯಕ್ಷರಾದ ಸ್ವಯಂ ಅನ್ನಿ ಬೆಸೆಂಟ್ ಅವರೇ ಈ ಪ್ರಚಾರವನ್ನು ನೀಡಿದ್ದರು.  ಕೃಷ್ಣಮೂರ್ತಿಯವರಿಗೆ ಈ ವಿಶ್ವಗುರು ಪಟ್ಟಕ್ಕೆ ಸಕಲ ತರಬೇತಿಗಳನ್ನೂ ಅನ್ನಿ ಬೆಸೆಂಟ್ ಮತ್ತವರ ಸಂಗಡಿಗರು ನೀಡಿದ್ದರಾದರೂ, ಇಪ್ಪತ್ತು ವರ್ಷಗಳ ನಂತರದಲ್ಲಿ ಅಂದರೆ 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರಾಗಿಬಿಟ್ಟರು.  ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿಬಿಟ್ಟರು. ಅಲ್ಲಿಂದ ಮುಂದೆ ಏಕಾಂಗಿಯಾಗಿ ನಡೆದ ಜೆ. ಕೃಷ್ಣಮೂರ್ತಿಯವರು, ತಮ್ಮ  ಮುಂದಿನ ಅರವತ್ತು ವರ್ಷಗಳ ಜೀವಿತಾವಧಿಯಲ್ಲಿ  ವಿಶ್ವದಾದ್ಯಂತ ಸಂಚರಿಸಿ, ಮಾನವ ಸಮಾಜದಲ್ಲಿ ಸ್ವಯಂದಾರ್ಶನಿಕ ಬದಲಾವಣೆಯನ್ನು ತರಲು ಅಪಾರವಾದ ಕೆಲಸ ಮಾಡಿದರು. 

Tuesday, June 16, 2015

ಡಾ. ಹೆಚ್.ನರಸಿಂಹಯ್ಯಅವರ 95ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

H. Narasimhaiah (ಡಾ. ಹೆಚ್.ನರಸಿಂಹಯ್ಯ) physicist, educator, freedom fighter and rationalist
Born in Hossur on 6th June 1921 (೬ನೆ ಜೂನ್ ೧೯೨೧ ) , a village near Gauribidanur in Karnataka, India. His parents were poor, illiterate and belonged to a disadvantaged caste. Upon completion of elementary education, he left for Bangalore where he joined the National High School, Basavanagudi, in 1935. He received his B.Sc.(Honors) and Master's degree in Physics with first class from Central College of Bangalore (1946). The same year Narasimhaiah started his academic career as a lecturer in National College, Bangalore.

He taught from 1946 until 1957 when he proceeded to Columbus, Ohio to get his PhD degree in Nuclear physics from Ohio State University(1960).  ನರಸಿಂಹಯ್ಯ ,ಅಮೇರಿಕಾದಲ್ಲಿ ಇದ್ದ ನಾಲ್ಕೂ ವರ್ಷಗಳು ಪ್ರತಿನಿತ್ಯ ಬೆಳಗ್ಗೆ, ಮಧ್ಯಾನ ತಿಂದದ್ದು ಬರಿ ಉಪ್ಪಿಟ್ಟು. ಒಂದೆಡೆ  ಆವರೆ  ಹೇಳುವಂತೆ ಪ್ರಪಂಚದಲ್ಲಿಯೇ ವಿಶ್ವ ದಾಖಲೆ ಮಾಡಿದ್ದೇನೆ ಎಂದು ಆವರೆ ಹೇಳುತ್ತಾರೆ .