Translate in your Language

Showing posts with label ತತ್ವಜ್ಞಾನಿಗಳು. Show all posts
Showing posts with label ತತ್ವಜ್ಞಾನಿಗಳು. Show all posts

Monday, April 23, 2018

ಬೀchi (ರಾಯಸಂ ಭೀಮಸೇನ ರಾವ್)


ಬೀchi  ಯವರ 105ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !!
ಬೀchi (ರಾಯಸಂ ಭೀಮಸೇನ ರಾವ್) 
(Born: ಏಪ್ರಿಲ್ 23, 1913 - Died: ಡಿಸೆಂಬರ್ 7, 1980) 
ಬೀchi ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ".
                    (- ಅಂದನಾ ತಿಂಮ)

ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು.

Sunday, April 23, 2017

ಹಾಸ್ಯ ಚಕ್ರವರ್ತಿ: ಬೀchi !


ಬೀchi  ಯವರ 104ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !!

ಹುಟ್ಟಿದ ತಕ್ಷಣವೇ ತಂದೆಯನ್ನು ತಿಂದುಕೊಂಡಿತು ಎಂದು ಆ ಮಗುವನ್ನು ಮೂರು ದಿನಗಳ ಕಾಲ ಹಗಲು ಇರುಳು ಹೊರಗೆ ಇಟ್ಟಿದ್ದರಂತೆ. ತಂದೆಯನ್ನು ತಿಂದ ಮಗುವಿಗೆ ಬದುಕಲು ಅರ್ಹತೆ ಇಲ್ಲವೆಂದು. ಆದರೆ ಆ ಮಗು ಸಾಯದೇ ಬದುಕುಳಿಯಿತು. ಒಂದು ವೇಳೆ ಆ ಮಗುವೇನಾದರೂ ಉಳಿಯದೇ ಹೋಗಿದ್ದರೆ ಕನ್ನಡ ಸಾಹಿತ್ಯ ಖಂಡಿತವಾಗಿಯೂ ಬಡವಾಗುತ್ತಿತ್ತು ಎನ್ನುವುದು ನಿರ್ವಿವಾದ.  ಆ ಕಂದ ಬೆಳೆದು ದೊಡ್ಡವನಾದ ಮೇಲೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿತು. 'ಹಾಸ್ಯಬ್ರಹ್ಮ', ‘ಕನ್ನಡ ಸಾಹಿತ್ಯದ ಬರ್ನಾರ್ಡ್ ಶಾ’ ಎಂದೆಲ್ಲ ಕರೆಸಿಕೊಂಡಿತು. ಬೀಚಿಯವರು ತಮ್ಮ ಆತ್ಮಕಥೆ ‘ನನ್ನ ಭಯಾಗ್ರಫಿ’ಯಲ್ಲಿ ಇದನ್ನು ಹೇಳಿಕೊಂಡಿದ್ದಾರೆ.

Sunday, June 26, 2016

ಕುಲ-ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು !

ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಮೊದಲು ಸಂಸಾರಿಯಾಗಿದ್ದ ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಕನಕದಾಸರು ಹದಿನೈದು – ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರಾಗಿದ್ದು  ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು.

ಕನಕದಾಸರು ಜನಿಸಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬಲ್ಲಿ.  ನಂತರ ಕಾಗಿನೆಲೆಯಲ್ಲಿ ನೆಲೆಸಿದಂತೆ ತೋರುತ್ತದೆ.  ಅದು ಈಗ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ.  ಕನಕದಾಸರ ಕೀರ್ತನೆಗಳೆಲ್ಲವೂ ಕಾಗಿನೆಲೆಯ ಆದಿಕೇಶವನ ಅಡಿದಾವಾರೆಗಳಿಗೇ ಅರ್ಪಿತ.  ಅವರು ತಮಗೆ ದೊರೆತ ನಿಧಿಯಿಂದ ಕಾಗಿನೆಲೆಯ ನರಸಿಂಹ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು.  ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಟಾಪನೆ ಮಾಡಿದರೆಂದು ತಿಳಿದು ಬರುತ್ತದೆ.  ಈ ರೀತಿ ತಿಮ್ಮಪ್ಪ ನಾಯಕನಾಗಿದ್ದವರು ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು.  ಕನಕರು  ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು.   ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರೂ ಹೌದು. 

Wednesday, May 11, 2016

ಜಿಡ್ಡು ಕೃಷ್ಣಮೂರ್ತಿ ಅವರ 122ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಜಿಡ್ಡು ಕೃಷ್ಣಮೂರ್ತಿ:(1885-1986)
ಜೆ ಕೃಷ್ಣಮೂರ್ತಿ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 11ನೇ ಮೇ 1895ರಲ್ಲಿ ಜನಿಸಿದರು.  1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು.
 ಹಿಂದೂ ಧರ್ಮ ಮತ್ತು ಬೌದ್ಧ ತತ್ವಗಳಿಗೆ ಪಾಶ್ಚಾತ್ಯ ಸ್ವರೂಪಗಳ ಮಿಶ್ರಣವನ್ನು ನೀಡಿದ ಥಿಯೋಸೋಫಿಕಲ್ ಸೊಸೈಟಿಯ ಅಧ್ಯಕ್ಷರಾದ ಸ್ವಯಂ ಅನ್ನಿ ಬೆಸೆಂಟ್ ಅವರೇ ಈ ಪ್ರಚಾರವನ್ನು ನೀಡಿದ್ದರು.  ಕೃಷ್ಣಮೂರ್ತಿಯವರಿಗೆ ಈ ವಿಶ್ವಗುರು ಪಟ್ಟಕ್ಕೆ ಸಕಲ ತರಬೇತಿಗಳನ್ನೂ ಅನ್ನಿ ಬೆಸೆಂಟ್ ಮತ್ತವರ ಸಂಗಡಿಗರು ನೀಡಿದ್ದರಾದರೂ, ಇಪ್ಪತ್ತು ವರ್ಷಗಳ ನಂತರದಲ್ಲಿ ಅಂದರೆ 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರಾಗಿಬಿಟ್ಟರು.  ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿಬಿಟ್ಟರು. ಅಲ್ಲಿಂದ ಮುಂದೆ ಏಕಾಂಗಿಯಾಗಿ ನಡೆದ ಜೆ. ಕೃಷ್ಣಮೂರ್ತಿಯವರು, ತಮ್ಮ  ಮುಂದಿನ ಅರವತ್ತು ವರ್ಷಗಳ ಜೀವಿತಾವಧಿಯಲ್ಲಿ  ವಿಶ್ವದಾದ್ಯಂತ ಸಂಚರಿಸಿ, ಮಾನವ ಸಮಾಜದಲ್ಲಿ ಸ್ವಯಂದಾರ್ಶನಿಕ ಬದಲಾವಣೆಯನ್ನು ತರಲು ಅಪಾರವಾದ ಕೆಲಸ ಮಾಡಿದರು.