Translate in your Language

Thursday, July 24, 2014

ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: 24 ಜುಲೈ, 1923 – ನಿಧನ:11 ಜುಲೈ, 1979
ಅಭಿನಯ ಹಾಸ್ಯದ ಮೂಲಕವೇ ಕನ್ನಡಚಿತ್ರ ರಸಿಕರನ್ನು ನಕ್ಕುನಗಿಸಿದ ಧೀಮಂತ ನಟ ನರಸಿಂಹರಾಜು. ಕನ್ನಡಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನರಸಿಂಹರಾಜು ಅವರು ಪ್ರಮುಖರು. 1926ರಿಂದ 1979ರವರೆಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನರಸಿಂಹರಾಜು ಹಾಸ್ಯನಟರಾಗಿ ಎಷ್ಟರ ಮಟ್ಟಿಗೆ ಬೆಳೆದರೆಂದರೆ, ರಾಜ್ ಕುಮಾರ್ ನಾಯಕ ನಟರಾದರೆ, ಅವರ ಗೆಳೆಯನ ಪಾತ್ರಕ್ಕೆ ನರಸಿಂಹರಾಜು ಆಯ್ಕೆಯಾಗುತ್ತಿದ್ದರು. ನಾಯಕನ ಗೆಳೆಯ, ಸಹೋದ್ಯೋಗಿ, ಸಹಾಯಕ ಹೀಗೆ ಯಾವುದಾದರೂ ಒಂದು ಪಾತ್ರ ಸೃಷ್ಟಿಸಿ ನರಸಿಂಹ ರಾಜು ಅವರಿಗೆ ಅವಕಾಶ ನೀಡಲಾಗುತ್ತಿತ್ತು.

ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ.  ಚಿಕ್ಕಪ್ಪನ ಪ್ರೋತ್ಸಾಹದಿಂದ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಬಾಲನಟನಾಗಿ ಖ್ಯಾತಿ ಪಡೆದರು. 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನರಸಿಂಹ ರಾಜು ನಟಿಸಿದ ಮೊದಲ ಚಿತ್ರ ಬೇಡರಕಣ್ಣಪ್ಪ. ರಾಜ್ ಕುಮಾರ್ ನಾಯಕ ನಟರಾದ ಮೊದಲ ಚಿತ್ರವೂ ಆದ ಬೇಡರ ಕಣ್ಣಪ್ಪದಲ್ಲಿ  ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹ ರಾಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

Narasimha raru, kannada film actor, ಹಾಸ್ಯನಟ ನರಸಿಂಹರಾಜು
ಮಕ್ಕಳರಾಜ್ಯ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿ ಮಿಂಚಿದ ಅವರು, ಸತ್ಯಹರಿಶ್ಚಂದ್ರ ಚಿತ್ರದಲ್ಲಿ ನಕ್ಷತ್ರಿಕರಾಗಿ ಮಾಡಿದ ಪಾತ್ರ ಮರೆಯುವಂತೆಯೇ ಇಲ್ಲ. ನಂತರ ನೂರಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ವಿಜೃಂಭಿಸಿದರು. ಪ್ರೊಫೆಸರ್ ಹುಚ್ಚೂರಾಯ ಚಿತ್ರದ ಮೂಲಕ ನಾಯಕ ನಟರಾಗಿಯೂ ಅಭಿನಯಿಸಿದರು. ಹಲವು ಚಿತ್ರಗಳಲ್ಲಿ ದ್ವಿಪಾತ್ರ, ತ್ರಿಪಾತ್ರಗಳಲ್ಲೂ ಮನಸೂರೆಗೊಂಡರು.


ಭಕ್ತ ಮಲ್ಲಿಕಾರ್ಜುನ,  ಭಕ್ತ ಮಾರ್ಕಂಡೇಯ,  ಅಣ್ಣ ತಂಗಿ,  ರಣಧೀರ ಕಂಠೀರವ,  ದಶಾವತಾರ,  ಜೇನುಗೂಡು,ಅಮರಶಿಲ್ಪಿ ಜಕಣಾಚಾರಿ ಮೊದಲಾದ ಚಿತ್ರಗಳಲ್ಲಿ ತಮ್ಮ ಅಪ್ರತಿಮ ನಟನಾ ಕೌಶಲ್ಯ,  ಮುಖಭಂಗಿಸಂಭಾಷಣೆ,ಮಾತಿನಧಾಟಿಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ನರಸಿಂಹರಾಜು ಇಂದು ನಮ್ಮೊಂದಿಗಿಲ್ಲ ಆದರೆ ಅವರ ನೆನಪು ಸದಾ ಹಸಿರು.

No comments:

Post a Comment