Translate in your Language

Tuesday, June 9, 2015

ಹೊಟ್ಟೆಗೆ ಏನು ತಿನ್ನುತ್ತಾರೆ...?

ಹೀಗೊಂದು ಪ್ರಶ್ನೆ ಕಟ್ಟ ಕಡೆಗೆ ಉಳಿಯುತ್ತದೆ, ಡಿ ಕೆ ರವಿಯವರ ಪ್ರಕರಣದಲ್ಲಿ ಇನ್ನಿಲ್ಲದ ಸುಳ್ಳು ಬರೆದ ಪ್ರಜಾವಾಣಿ, ಕರ್ನಾಟಕದ ಜನತೆಯ ಸಂಪೂರ್ಣ ವಿಶ್ವಾಸ ಕಳೆದುಕೊಂಡಿತು...!
೪೪ ಬಾರಿ ಡಿ ಕೆ ರವಿಯವರು ಒಬ್ಬ ಮಹಿಳಾ ಅಧಿಕಾರಿಗೆ ಕರೆ ಮಾಡಿದ್ದರಂತೆ...! ಹೀಗೆ ಹೇಳಿತ್ತು ಪ್ರಜಾವಾಣಿ....! ಯಾವಾಗ ಸಿ ಬಿ ಐ ಸತ್ಯ ಹೊರಹಾಕಲು ಶುರುವಿಟ್ಟುಕೊಂಡಿತೋ ,ಇವರ ಹಣೆಬರಹ ಒಂದೋಂದಾಗೆ ಬರಲು ಶುರುವಾಗಿದೆ.
ಈಗ ರಾ.ಮಠದ ಶ್ರೀಗಳ ವಿರುದ್ದ ವರದಿಯ ಸರದಿ.
ನೀರಿಗೆ ಇಳಿದ ಮೇಲೆ ಛಳಿಯೇನು ಮಳೆಯೇನು..? ವಿಶ್ವಾಸಾರ್ಹತೆ ಮಣ್ಣುಪಾಲಾದ ಮೇಲೆ ಗೌರವದ ಹಂಗೆನು...? ಹಾಗೊಂದು ಮನಸ್ತಿತಿಗೆ ಪ್ರಜಾವಾಣಿ ಬಂದು ನಿಂತಿದೆ...! ಇನ್ನಿಲ್ಲದ ಅಪಸವ್ಯಗಳ ಬರೆಯುತ್ತಿದೆ, ಸತ್ಯದ ತಲೆ ಮೇಲೆಯೇ ಪ್ರಹಾರ...!
ನಡೆದಿದ್ದು ಇಷ್ಟು ...
ರಾಮಚಂದ್ರಾಪುರ ಮಠದ ಶ್ರೀಗಳು , ಕೊಲ್ಲೂರಿನ ಮೂಕಾಂಬಿಕೆಗೆ ಸಲ್ಲಿಸುವ ಪೂಜೆಗೆ ತಡೆ ಒಡ್ಡುವಂತೆ ಶೃಂಗೇರಿ ಸ್ವಾಮಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು, ಸಂವಿಧಾನದ ಆಶಯದಂತೆ ನೆಡೆಯಬೇಕಾದ ಸರ್ಕಾರ ,ಎಲ್ಲಾ ಕಾನೂನಾತ್ಮಕ ಅಂಶಗಳ ಬದಿಗೊತ್ತಿ, ತಡೆ ನೀಡಿತ್ತು, ಆದರೆ ಇದನ್ನು ಪ್ರಶ್ನಿಸಿ ಕೊಲ್ಲೂರಿನ ಅರ್ಚಕ ಉಡುಪಿ ನ್ಯಾಯಲಯದಲ್ಲಿ, ಸರ್ಕಾರಿ ಆಜ್ನೆಗೆ ತಡೆ ತಂದರೆ, ಅದೇ ಸಮಯದಲ್ಲಿ ಕಾಂತರಾಜ್ ಎಂಬುವವರು ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ, ಮಠದ ಅಧಿಕೃತ ವ್ಯಕ್ತಿ ಅಲ್ಲ ಎಂಬ ಕಾರಣಕ್ಕೆ ವಜಾಗೊಂಡಿತು. ಸ್ವತಃ ಸ್ವಾಮೀಜಿಯವರು, ಅಥವಾ ಅಧಿಕೃತ ವ್ಯಕ್ತಿಗಳು ಅರ್ಜಿ ಸಲ್ಲಿಸಿದರೆ ಪರಿಶೀಲಿಸಬಹುದು ಎಂದು ಹೇಳಿತು.
ಆದರೇ ಇವನ್ನೆಲ್ಲಾ ಮುಚ್ಚಿಟ್ಟು ಪ್ರಜಾವಾಣಿ ತನ್ನದೇ ಹೊಸಕತೆ ಬರೆದಿದೆ....! ಡಿ ಕೆ ರವಿಯವರ ಬಗ್ಗೆ ಬರದಂತೆ....!
ಅರ್ಧ ಶತಮಾನ ಇತಿಹಾಸ ಇರುವ ಪತ್ರಿಕೆಯ ಗೌರವವನ್ನು ನಾಮಾರ್ಧಗೊಳಿಸಿದ್ದಾರೆ...!
-ಪ್ರಶಾಂತ್ ಹೆಗಡೆ

ರಾಜಧರ್ಮ ಪಾಲಿಸಿ !

ಹೀಗೊಂದು ಮಾತು ಹೇಳಿದ್ದು ಮಾಜಿ ಪ್ರಧಾನಿ, ಭಾರತದ ಅಸಲಿ ಭಾರತರತ್ನ ವಾಜಪೇಯಿಯವರು.

ಗೋಧ್ರಾ ಹತ್ಯಾಕಾಂಡ ನೆಡೆಯುತ್ತಿರುತ್ತದೆ ಬೇಕಾದರೆ, ಅಂದಿನ ಸಿ ಎಂ ಮೋದಿಯವರಿಗೆ ಹೇಳಿದ ಮಾತು, ಅವರ ಮಾತನ್ನು ಅಕ್ಷರಶಃ ಪಾಲಿಸಿದ್ದಕ್ಕೆ, ಇಂದು ಮೊದಿಯವರು ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದಾರೆ ಎಂದರೆ, ಉತ್ಪ್ರೇಕ್ಷೆ ಅಲ್ಲ .
*********************
ಸಿದ್ದರಾಮಯ್ಯ ಸರ್ಕಾರ ಎತ್ತಸಾಗುತ್ತಿದೆ....?
ಮೊದಲು ಎಡವಿದ್ದು ಸಚಿವ ಸಂಪುಟ ರಚನೆ ಆಗಬೇಕಾದರೇ...! ಮೊದಲು ಶುರುವಾಗಿದ್ದು ಆಂತರಿಕ ಎದುರಾಳಿಗಳ ಬಗ್ಗು ಬಡಿಯುವ ಯತ್ನದಿಂದ, ಕಾಗೋಡು ತಿಮ್ಮಪ್ಪರಂತಃ ಶುದ್ದ ಚಾರಿತ್ರ್ಯದ ೮೩ರ ಯುವ ಉತ್ಸಾಹದ ಹಿರಿಯರ ಕಡಗಣನೆಯಿಂದ ಶುರುವಾದರೆ, ಪರಮೇಶ್ವರ್ ಪರಿಸ್ತಿತಿ, ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬತಾಯಿತು, ಒಟ್ಟಿನಲ್ಲಿ ಕರ್ನಾಟಕದ ಅಭಿವೃದ್ಧಯೊಂದಿಗೆ ,ಸಿದ್ಧರಾಮಯ್ಯರ ವರ್ಚಸ್ಸು ಕೂಡ ಅಧೋಗತಿಗೆ ಹೊಗಿದೆ ಎಂದು ಹೇಳಲು ಯಾವ ರಾಜಕೀಯ ಪಂಡಿತರ ಅವಶ್ಯವಿಲ್ಲ.
ಬೇಕೆ ತುಷ್ಟೀಕರಣ ನೀತಿ...?
ಪ್ರಾಯಶಃ ಸಿದ್ದರಾಮಯ್ಯರ ರಾಜಕೀಯ ಸಲಹೆಗಾರರ ಯಡವಟ್ಟುತನಗಳೇ , ಇಂದು ಕಾಂಗ್ರೆಸ್ ಕಾರ್ಯಕರ್ತರು ಮುಖಮುಚ್ಚಿಕೊಂಡು ಓಡಾಡುವಂತೆ ಮಾಡುತ್ತಿದೆ, ಅಲ್ಪಸಂಖ್ಯಾತರ ಓಟುಗಳೇ ನಮಗೆ ಆಧಾರ, ಎಂಬ ಶುದ್ದ ಮೂರ್ಖತನದ ಆಲೋಚನೆಯೆ , ಇಂದು ಪಿ ಎಫ್ ಐ ,ಕೆ ಎಫ್ ಡಿ ಎಂಬಂತಹ ಸಂಘಟನೆಗಳ ವಿರುದ್ಧ ಇರುವ ಪ್ರಕರಣಗಳ ಹಿಂತೆಗತಕ್ಕೆ ಕಾರಣ, ಇದರ ಪರಿಣಾಮವೇನಾಗುತ್ತದೆ ಎಂಬುದರ ಕಲ್ಪನೆಯೂ ಇಲ್ಲ, ಇದರಿಂದ ಆಗುವುದಿಷ್ಟೇ, ಬಹುಸಂಖ್ಯಾತರ ಏಕೀಕರಣವಾಗುತ್ತದೆ, ಕಾಂಗ್ರೆಸ್ ಎಂಬುದು ಹಿಂದೂ ವಿರೋಧಿ ಪಕ್ಷ ಎಂಬ ಭಾವ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಮೂರು ಓಟು ಸೇರಿದರೆ,ಆರು ಓಟು ಕಳೆದಿರುತ್ತದೆ.
ಇನ್ನು ಡಿ ಕೆ ರವಿಯಂತಃ ದಕ್ಷ ಅಧಿಕಾರಿಗಳಿಗಳಿಗೆ ಒಂದೋ ಸಾಯುವ ಆಯ್ಕೆ ಇಲ್ಲವೇ ಅಮಾನತಿನ, ಅವಮಾನದ ಆಯ್ಕೆ , ಈಪರಿಯ ಹಿಂಸೆ ದಕ್ಷ ಅಧಿಕಾರಿಗಳು ತಮ್ಮ ಜೀವಮಾನವಿಡೀ ಕಂಡಿರಲಿಲ್ಲ ಸಾಧ್ಯವಿಲ್ಲ. ಅಂತಃ ಕೆಟ್ಟ ವ್ಯವಸ್ಥೆ
ಆಢಳಿತ ಹೀಗೆ ಮುಂದುವರೆದರೆ, ಸಿದ್ದರಾಮಯ್ಯ ಮುಂದಿನ "ಪಪ್ಪು " ಆಗುವುದರಲ್ಲಿ ಆಶ್ಚರ್ಯವಿಲ್ಲ. ದನಕಾಯಲು ಉಪಯೋಗವಿಲ್ಲದವರ ಬಳಿ ರಾಜಕೀಯ ಸಲಹೆ ತೆಗೆದುಕೊಂಡರೆ , ಇದಕ್ಕಿಂತ ಒಳ್ಳೆಯ ಆಢಳಿತ ನೀಡಲು ಸಾಧ್ಯವೇ...?
-ಪ್ರಶಾಂತ್ ಹೆಗಡೆ

ಜನರ ನೆನಪಿನ ಶಕ್ತಿ ತಾತ್ಕಾಲಿಕ ಎಂಬ ಅಸಡ್ಡೆಯೇ...?

ಇತ್ತೀಚೆಗೆ ಫಲದ ಎಂಬ ಎಂಬ ಕಂಪನಿಯ ಮೇಲೆ ಸಿ ಐ ಡಿ ಯ ಅಧಿಕಾರಿಗಳು ದಾಳಿ ನೆಡೆಸಿ ಅಮಾಯಕ ೩೪ ಮಕ್ಕಳನ್ನು ರಕ್ಷಿಸಿದ್ದರು, ಈ ಪ್ರಕರಣ ಈಗ ಬಹುತೇಕ ತಣ್ಣಗಾಗಿ ಹೋಗಿದೆ.
ಬಹಳ ನೋವಾಗುತ್ತದೆ, ಯಾವುದೋ ಅನಕ್ಷರಸ್ತ ಬಡ ಗ್ಯಾರೆಜ್ನವನು ಬಾಲ ಕಾರ್ಮಿಕರ ಕಾನೂನು ತಿಳಿಯದೇ ಬಾಲ ಕಾರ್ಮಿಕರ ಇಟ್ಟುಕೊಂಡಿದ್ದರೆ, ಆತನ ಇಡೀ ಸಂಸಾರವೇ ಬೀದಿಗೆ ಬರುವಂತೆ ಮಾಡುತ್ತದೆ ನಮ್ಮ ವ್ಯವಸ್ಥೆ, ಆದರೆ ಎಲ್ಲಾ ಕಾನೂನು ತಿಳಿದಿರುವ ಸೋ ಕಾಲ್ಡರ್ ಗಣ್ಯರು ಎನ್ನಿಸಿಕೊಂಡಿರುವವರು ಕಾನೂನಿಗೆ ಸವಾಲು ಎಸೆಯುವಂತೆ, ಬಾಲ ಕಾರ್ಮಿಕರ ನಿಯಮಿಸಿಕೊಂಡಿದ್ದರೆ , ಯಾವ ಸಂಘಟನೆಗಳಾಗಲಿ, ಮಕ್ಕಳ ಇಲಾಖೆಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಏಕೆ ಈ ತಾರತಮ್ಯ....? ಬಡಮಕ್ಖಳ ಜೀವನವೆಂದರೆ ಏಕೆ ಇಷ್ಟು ಅಸಡ್ಡೆ ..? ನ್ಯಾಯಕ್ಕಾಗಿ ಈ ಸಂಘಟನೆಗಳು ಹೋರಾಟ ಮಾಡಬೇಕೆಂದಿದ್ದರೆ ಮಾಧ್ಯಮಗಳಲ್ಲಿ "ಘಟನೆ" ವಿಜೃಂಭಿಸಲೇ ಬೇಕೆ...? ಇಲ್ಲದಿದ್ದರೆ ಇವರುಗಳ ಆತ್ಮ ,ಹೃದಯ ಕಲುಕುವುದೇ ಇಲ್ಲವೇ...?
ಪ್ರಾಯಶಃ ಈ ಕೇಸ್ ಮುಚ್ಚಿ ಹಾಕುವ ಹುನ್ನಾರ ನೆಡೆಯುತ್ತಿದೆ, ಬಲಿಷ್ಠರಿಗೆ ಕಾನೂನು ಅನ್ವಯವಾಗದು ಎಂಬ ಇರಾದೆ ಇರಬೇಕು, ಮೇಲಾಗಿ ಕೇಸ್ ಮುಚ್ಚಿಹಾಕಲು ಕೇಂದ್ರ ಸಚಿವರೊಬ್ವರ ಒತ್ತಡವಿದೆ ಎಂಬಂತಹ ಮಾತುಗಳು ತೆರೆಮರೆಯಲ್ಲಿ ಕಾಣಿಸಿಕೊಳ್ಳುತಿದೆ.
ಅದೇನೆ ಆಗಲಿ ,ಅದೆಂತಹ ವ್ಯಕ್ತಿಗಳ ಒತ್ತಡಗಳು ಜನ ಸಾಮಾನ್ಯರ ಹೋರಾಟದ ಇದಿರು ನಿಲ್ಲಲಾರದು, ಹಾಗಾಗಿ ಫೇಸ್ ಬುಕ್ ಅಂಗಳವನ್ನು "ಬಾಲ ಕಾರ್ಮಿಕರ " ರಕ್ಷಣೆಗಾಗಿ ಬಳಸೋಣ, ನಮ್ಮ ಕೂಗು ಕೇಂದ್ರದ ನಾಯಕರ ಕಿವಿ ಮುಟ್ಟಿಸೋಣ, ಇದಕ್ಕೆ ನಿಮ್ಮಲ್ಲರ ಸಹಾಕಾರ ಇದ್ದೆ ಇರುತ್ತದೆ ಎಂಬುದು ನನ್ನ ಅಚಲ ನಂಬಿಕೆ.
ಈ ಪ್ರಕರಣವನ್ನು ,ಮಾನ್ಯ ಪ್ರಧಾನಿಗಳ ಗಮನಕ್ಕೆ ತರುವುದಕ್ಕಾಗಿ, ನಮ್ಮ ಟೀಮ್ ಪಿಟಿಷನ್ ಒಂದನ್ನು ತಯಾರು ಮಾಡುತ್ತಿದ್ದಾರೆ , ಅದಕ್ಕೆ ತಾವೆಲ್ಲರೂ ಸಹಿ ಮಾಡುವ ಮೂಲಕ ಹಾಗೂ ಶೇರ್ ಮಾಡುವ ಮೂಲಕ ಬಾಲ ಕಾರ್ಮಿಕ ಮುಕ್ತ ಕರ್ನಾಟಕ್ಕೆ ಸಂಕಲ್ಪಿಸಿ.
ಇಂತಿ
ಪ್ರಶಾಂತ್ ಹೆಗಡೆ
ಆವಿನಹಳ್ಳಿ

Thursday, April 30, 2015

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ 54ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು:


ಕ್ರೇಜಿಸ್ಟಾರ್‌ ರವಿಚಂದ್ರನ್‌ (ಜನನ: ಮೇ 30, 1961)

"ಪ್ರೇಮಲೋಕ"ದ ಮೂಲಕ ಕನ್ನಡ ಚಿತ್ರರಂಗದಲ್ಲಿಯೇ ಹೊಸತನದ ಸೃಷ್ಟಿಸಿ ಭಾರತೀಯ ಚಿತ್ರರಂಗವೇ ಕನ್ನಡದತ್ತ ಹುಭ್ಭೇರಿಸಿ ನೋಡುವಂತೆ ಮಾಡಿದ ಕೀರ್ತಿ  ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರದು.ಇದಕ್ಕೂ ಮುನ್ನವೇ ನಾಯಕ ನಟನಾಗಿ ಫ್ರಳಯಾಂತಕ, ನಾನೆ ರಾಜ, ನಾನು ನನ್ನ ಹೆಂಡತಿ ಮುಂತಾದ ಚಿತ್ರಗಳಲ್ಲಿ ಮಿಂಚಿ ಕನ್ನಡ ಚಿತ್ರರಸಿಕರ ಮನದಲ್ಲಿ ನೆಲೆಯೂರಿದ ಕ್ರೇಜಿಸ್ಟಾರ್‌ ರವಿಚಂದ್ರನ್‌  ಅವರಿಗೆ ೫೪ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಎಲ್ಲಾ ಚಿತ್ರಗಳಲ್ಲಿ ಇಷ್ಟ್ವಾಗೋ ಗೀತೆಗಳು, ಝಗಮಗಿಸುವ ಅದ್ದೂರಿ ಸೆಟ್ಗಳಲ್ಲಿಯ ದೃಶ್ಯಗಳು ಸದಾ ಪ್ರೇಕ್ಷಕರ ಮನದಲ್ಲಿ ನೆಲೆಯೂರಿಬಿಡುತ್ತಿದ್ದವು.  ಪ್ರಳಯಾಂತಕ ಚಿತ್ರದ "ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..." ಆ ಕಾಲದ ಪಡ್ಡೆ ಹುಡುಗರೆಲ್ಲರ ಬಾಯಲ್ಲಿ ನಲಿದಾಡುತಿತ್ತು

ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಇದೊಂದು ಹಬ್ಬ. "ಪ್ರೇಮಲೋಕ'ದ ದೊರೆಗೆ ಶುಭಕೋರಲು ಅವರ ಮನೆಮುಂದೆ ಅಭಿಮಾನಿಗಳು ಸೇರುವುದೇನು ಹೊಸದಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರವಿಚಂದ್ರನ್‌, ತಮ್ಮ ಸಿನಿಮಾ ಕೆಲಸಗಳಲ್ಲೇ ಬಿಝಿಯಾಗುತ್ತಾರೆ. ಅದೇನೇ ಆದರೂ ಅವರ ಅಭಿಮಾನಿಗಳು ಮಾತ್ರ ಕೇಕ್‌ ಹಿಡಿದು ಕ್ರೇಜಿಸ್ಟಾರ್‌ ಮನೆಗೆ ಹೋಗಿ ವಿಶ್‌ ಮಾಡದೇ ಬರುವುದಿಲ್ಲ.

Friday, April 24, 2015

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 86 ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ 24, 1929 - ಮರಣ: ಏಪ್ರಿಲ್ 12, 2006) 
ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. Read more

Thursday, April 16, 2015

ಜಗತ್ತಿನ ಹಾಸ್ಯ ಚಕ್ರವರ್ತಿ ಚಾಪ್ಲಿನ್ ಅವರ 126ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ !

ನಮ್ಮ ದೇಶದ ಖ್ಯಾತ ನಟರಾದ ರಾಜಕಪೂರ್, ಕಮಲಹಾಸನ್, ರಜನಿಕಾಂತ, ಆಮಿರಖಾನ್,  ಅಷ್ಟೇ ಏಕೆ  ಜಗತ್ತಿನ ಅದ್ವಿತೀಯ ನಟರಿಗೆಲ್ಲಾ ಮೆಚ್ಚುವ ಜಗತ್ತಿನ ಏಕೈಕ ನಟ/ನಿರ್ದೇಶಕ/ನಿರ್ಮಾಪಕ  "ಚಾರ್ಲಿ ಚಾಪ್ಲಿನ್" ಈ ಶತಮಾನ ಕಂಡ ಜಗತ್ತಿನ  ಅತ್ಯಂತ ಶ್ರೇಷ್ಟ ಹಾಸ್ಯ ಚಕ್ರವರ್ತಿ. 

ಅದ್ಭುತ ನಟನೆ, ವಿಚಿತ್ರ ಮ್ಯಾನರಿಸಂ ಮತ್ತು ಹಾವಭಾವಗಳಿಂದ ಇಡೀ ಜಗತ್ತನ್ನು ನಕ್ಕು ನಲಿಸಿದ ಹಾಸ್ಯ ಚಕ್ರವರ್ತಿ (ಸರ್ ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್) ಚಾರ್ಲಿ ಚಾಂಪ್ಲಿನ್ ಹುಟ್ಟಿ ಏಪ್ರಿಲ್ 16ಕ್ಕೆ ಭರ್ತಿ 126 ವರ್ಷ. ಚಾಪ್ಲಿನ್ ಜನಿಸಿದ್ದು 1889ರ ಏಪ್ರಿಲ್ 16ರಂದು ಲಂಡನ್ ನಲ್ಲಿ. ಚಾಪ್ಲಿನ್ ಇಂದಿಗೂ ಜೀವಂತ. ಎಂದಿಗೂ ನಕ್ಕುನಗಿಸುತ್ತಲೇ ಇರುತ್ತಾರೆ ಅವರ ಚಿತ್ರಗಳ ಮುಖಾಂತರ.  ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೂ ಹಾಸ್ಯ ನಟ ಮತ್ತು ಚಿತ್ರ ನಿರ್ದೇಶಕನಾಗಿ ಬೆಳೆದ ಪರಿ ಅಮೋಘ. ಅವನು ಸಂಗೀತ ನಿರ್ದೇಶಕ ಕೂಡ ಆಗಿದ್ದ. ಮನದೊಳಗೆ ನೋವಿನ ಸಾವಿರ ಕಂತೆಗಳನ್ನಿಟ್ಟುಕೊಂಡರೂ ಜನಮಾನಸದಲ್ಲಿ ನಗುವಿನ ಹಣತೆಯನ್ನು ಮೂಡಿಸಿದ ಅವನಿಗೆ ಇಡೀ ಜಗತ್ತೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದೆ. ಸೀರಿಯಸ್ ಟ್ರಾಂಪ್ ಚಾರ್ಲಿಗೆ ಶುಭಾಶಯ ಹೇಳುತ್ತಿರುವ ನಮ್ಮ ಜತೆ ನೀವೂ ಸೇರಿಕೊಳ್ಳಿರಿ. ಪುಟ್ಟಮಕ್ಕಳಿಂದ ಹಿಡಿದು ಮುದುಕರವರೆಗೂ ಚಾಪ್ಲಿನ್ ನನ್ನು ಇಷ್ಟಪಡದವರು ಇರಲಿಕ್ಕಿಲ್ಲ. ಸಮಾಜದ ಅಂಕುಡೊಂಕುಗಳನ್ನು, ಯಾಂತ್ರಿಕ ಬದುಕನ್ನು, ಮುಖವಾಡಗಳನ್ನು ಬೆತ್ತಲೆಗೊಳಿಸುವುದರಲ್ಲಿ ಚಾರ್ಲಿ ನಿಸ್ಸೀಮ. ದಿ ಸರ್ಕಸ್ ಎಂಬ ಸಿನಿಮಾದಲ್ಲಿ ಸಿಂಹದ ಬೋನಿನೊಳಗೆ ಸಿಕ್ಕಿ ಅನುಭವಿಸಿದ ಪರಿಪಾಟಲು, ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ ಹಿಟ್ಲರ್ ನ ಬಗ್ಗೆ ಒಂದು ಬಲೂನ್ ಮೂಲಕ ಮಾಡಿದ ವಿಡಂಬನೆ, ಸರ್ಕಸ್ ಸಿನಿಮಾದಲ್ಲಿನ ಅತ್ಯದ್ಬುತ ನಟನೆ ನಾವಂತೂ ಮರೆಯುವುದಿಲ್ಲ. ಚಾಪ್ಲಿನ್ ಪ್ರಮುಖ ಚಿತ್ರಗಳೆಂದರೆ ದಿ ಕಿಡ್(1920), ಗೋಲ್ಡ್ ರಷ್(1924), ದಿ ಸರ್ಕಸ್(1928), ಸಿಟಿ ಲೈಟ್ಸ್(1931), ಮಾಡರ್ನ್ ಟೈಮ್ಸ್(1936), ದಿ ಗ್ರೇಟ್ ಡೈರೆಕ್ಟರ್(1940) ಲಥಮ್ ಲೈಟ್(1952). ಇವರು 1940ರವರೆಗೆ ಕೇವಲ ಮೂಕಿ ಚಿತ್ರದಲ್ಲೇ ಜಗತ್ತನ್ನು ನಗಿಸಿದರು. "ನಮ್ಮ ಸಮಸ್ಯೆಯಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ", "ಬದುಕಿನಲ್ಲಿ ನಗದ ದಿನ ವ್ಯರ್ಥ" ಮತ್ತು "ನನಗೆ ಮಳೆಯಲ್ಲಿ ನಡೆಯಲು ಇಷ್ಟ, ಯಾಕೆಂದರೆ ನಾನು ಅಳುವುದು ಯಾರಿಗೂ ಕಾಣದು" ಎಂಬುದು ಆತ ಉದುರಿಸಿದ ಕೆಲವು ಅಣಿಮುತ್ತುಗಳು.