Translate in your Language

Saturday, October 10, 2015

ಶಿವರಾಮ ಕಾರಂತ ಅವರ 114 ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ


ಕಾರಂತರು ಹುಟ್ಟಿದ್ದು ೧೯೦೨ ರ ಅಕ್ಟೋಬರ್ ೧೦ನೇ ತಾರೀಖಿನಂದು ಸಾಲಿಗ್ರಾಮದಲ್ಲಿ ಜನಿಸಿದರು

ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗುಪಡುವಂತಾಗುತ್ತದೆ.  ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,.  “....ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ ಹೇಳಿದವನಲ್ಲ.  ಪ್ರತಿದಿನ ರಾತ್ರಿ ನಾನು ಒಂಭತ್ತು ತಾಸುಗಳ ನಿದ್ದೆ ಸಾಲದೆ ಹಗಲು ಸಹ ಒಂದು ತಾಸು ನಿದ್ದೆ ಮಾಡುತ್ತೇನೆ.  ಅಥವಾ ಮನಸ್ಸು ಬಂದರೆ ಇನ್ನೂ ತುಸು ಹೆಚ್ಚಾಗಿ ನಿದ್ದೆ ಮಾಡುವಷ್ಟು ಅವಕಾಶವಿದೆ ಎಂದು ತಿಳಿದಿದ್ದೇನೆ.  ಸಮಯ ಸಾಲದೆಯೆ ನನ್ನ ಯಾವ ಕೆಲಸವೂ ಈ ತನಕ ಕೆಟ್ಟದ್ದು ಕಾಣಿಸುವುದಿಲ್ಲ.  ನನಗಿರುವ ಕಷ್ಟ – ಕೈಯಲ್ಲಿ ಒಂದಲ್ಲ ಒಂದು ಕೆಲಸವಿಲ್ಲದಿದ್ದರೆ ಸಮಯ ಕಳೆಯುವುದು ಹೇಗೆ ಎಂಬ ಚಿಂತೆ!  ಇಂಥದೇ ನಿಶ್ಚಿತ ಕೆಲಸವನ್ನು ಮಾಡಬೇಕು ಎಂದು ಮನಸ್ಸಿಗೆ ಹೊಳೆಯದೆ ಹೋಯಿತಾದರೆ ಒಂದಲ್ಲ ಒಂದು ಪುಸ್ತಕವನ್ನು ತೆರೆದು ಓದಲು ಎತ್ತಿಕೊಳ್ಳುತ್ತೇನೆ.  ಅದಕ್ಕಾಗಿ ಆಗಾಗ ಒಳ್ಳೆಯ ಪುಸ್ತಕ ತರಿಸಿಕೊಳ್ಳುತ್ತೇನೆ.  ಅದಕ್ಕೆ ವಿಷಯಗಳ ಗೊತ್ತು ಗುರಿಯಿಲ್ಲ.  ಹಾಗೆ ತರಿಸಿಕೊಂಡು ಓದಿದ ಪುಸ್ತಕಗಳಲ್ಲಿ ಕೆಲವು ರುಚಿಸುತ್ತವೆ.  ಕೆಲವು ರುಚಿಸುವುದಿಲ್ಲ.  ಒಳ್ಳೆಯ ಪುಸ್ತಕಗಳು ಕೈಗೆ ಸಿಕ್ಕಿದರೆ – ಆಗ ಬೇರೊಂದೇ ಚಿಂತನೆ ಮೂಡುತ್ತದೆ. 

Friday, September 18, 2015

ವಿಷ್ಣುವರ್ಧನ್ ಅವರ 67ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಸಂಪಿಗೆ ಮೂಗಿನ ಸ್ಪುರದ್ರೂಪಿ ನಟ  ವಿಷ್ಣುವರ್ಧನ್ ನಮ್ಮ ಕಾಲಮಾನದ ಯುವಕ ಯುವತಿಯರಿಗೆ ಮೋಡಿ ಮಾಡಿದ ನಾಯಕನಟ.    ಸೆಪ್ಟೆಂಬರ್ 18, 1950,
ಅವರು ಹುಟ್ಟಿದ ದಿನ.  
ಚಿತ್ರರಂಗದಲ್ಲಿ  ತಮ್ಮ ಸೌಂಧರ್ಯ,  ಕೆಲವೊಂದು ವಿಶಿಷ್ಟ ಪಾತ್ರಗಳು ಮತ್ತು ಶಿಸ್ತಿನ ಕಾರ್ಯನಿರ್ವಹಣೆಗೆ ಅವರು ಹೆಸರಾಗಿದ್ದವರು.  ಚಿತ್ರರಂಗವೆಂಬ ಬಹುದೊಡ್ಡ ಸಾಗರದಲ್ಲಿ ಅನೇಕ ಜನ ತಮ್ಮ ಪ್ರತಿಭೆ ಮತ್ತು ಇನ್ನಿತರ ಸಾಮರ್ಥ್ಯಗಳಿಂದ ಹೆಸರು ಮಾಡಿದ್ದಾರೆ.  ಆದರೆ ಕೆಲವೊಂದು ಕಲಾವಿದರು ಯಾವುದೇ ರೀತಿಯ ಪ್ರಮುಖ ಪಾತ್ರಕ್ಕೂ ಹೊಂದಬಲ್ಲ  ವರ್ಚಸ್ಸನ್ನು ತಮಗೆ ಸ್ವಾಭಾವಿಕವೋ ಎಂಬಂತೆ  ಹೊತ್ತು ತಂದಂತಿರುತ್ತಾರೆ.    ಇಂತಹ ಕೆಲವೊಂದು ಅಪರೂಪದ ವರ್ಚಸ್ವಿ ಕಲಾವಿದರಲ್ಲಿ ವಿಷ್ಣುವರ್ಧನ್ ಒಬ್ಬರು. 

Tuesday, September 8, 2015

ಕೆ.ಪಿ.ಪೂರ್ಣಚಂದ್ರ ತೇಜಸ್ವಿಅವರ 77ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು 1938 ಸೆಪ್ಟೆಂಬರ್ 8 ರಂದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ಕೆ.ವಿ.ಪುಟ್ಟಪ್ಪ(ಕುವೆಂಪು), ತಾಯಿ ಹೇಮಾವತಿ. ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಇವರ ಪೂರ್ಣ ಹೆಸರು. ಶಿವಮೊಗ್ಗ ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಎ. (ಅನರ‍್ಸ) ಹಾಘೂ ಎಂ.ಎ. ಪದವಿಗಳನ್ನು ಪಡೆದರು. ೧೯೬೬ ನವೆಂಬರ್ ೨೭ ರಂದು ರಾಜೇಶ್ವರಿ ಎಂಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತೇಜಸ್ವಿಯವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿದ್ದರು. ಇವರು ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿಕೊಂಡು ಬಂದಿದ್ದರು. 


Friday, September 4, 2015

ಅನಂತನಾಗ್ ಅವರಿಗೆ 68ನೇ ಹುಟ್ಟು ಹಬ್ಬದ ಶುಭಾಶಯಗಳು

ಸ್ಪುರದ್ರೂಪಿ ಸದಾ ಹಸನ್ಮುಖಿಯಾಗಿರುವ ಅನಂತನಾಗ್ ಅವರ 68ನೇ (ಜನನ: 4ನೇ ಸೆಪ್ಟೆಂಬರ್ 1948) ಹುಟ್ಟು ಹಬ್ಬದ ಶುಭಾಶಯಗಳು
ಈಗಿನ ಪೈಪೋಟಿ ಯುಗದಲ್ಲಿಯೂ ಯಾವ ಪಾತ್ರವಾದರೂ ಲೀಲಾಜಾಲವಾಗಿ ನಿಭಾಯಿಸುತ್ತ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಲ್ಲುವ ಸುಂದರ ನಟ ಅನಂತನಾಗರಕಟ್ಟೆ,  

Saturday, August 15, 2015

ಸುಹಾಸಿನಿ ಅವರ 54ನೇ ಹುಟ್ಟುಹಬ್ಬದ ಶುಭಾಶಯಗಳು

Suhasini
ಸುಹಾಸಿನಿ ಅವರ ಹುಟ್ಟಿದ್ದು  ಆಗಸ್ಟ್ 15,1961 ರಂದು.  ಸುಹಾಸಿನಿ ಎಂದರೆ ಅಲ್ಲೊಂದು ಮಂದಹಾಸ.  ಸುಹಾಸಿನಿ ಎಂದರೆ  ಸಹಜತೆ.  ಸರಳತೆ.  ಚಿತ್ರರಂಗದಂತಹ ತಳುಕಿನ ಲೋಕದಲ್ಲಿ ಪೂರ್ಣ ವಿಭಿನ್ನವಾಗಿದ್ದೂ ವಿಶಿಷ್ಟರೆಂದರೆ ಸುಹಾಸಿನಿ.  ಅವರು ಸಿನಿಮಾ ಕ್ಷೇತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಅಂತ ಬಂದರೆ ಸಿನಿಮಾದ ಜನ ಅವರನ್ನು ಕ್ಯಾಮರಾ ಮುಂದೆ ತಂದು ನಿಲ್ಲಿಸಿದರು.  ಅಂದು ‘ನೆಂಜತ್ತೆ ಕಿಳ್ಳಾದೆ’ ಚಿತ್ರದಲ್ಲಿ ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಬಂದ ಸುಹಾಸಿನಿ ಇಂದು ಮಹಾನ್ ತಾರೆಯಾಗಿ, ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲೂ ಜನಸಾಗರಗಳ  ಮನವನ್ನು ಗೆದ್ದು, ನಟನೆ, ನಿರ್ದೇಶನ, ನಿರ್ಮಾಣ, ಹೀಗೆ ಹೋದಲ್ಲೆಲ್ಲಾ ತಮ್ಮ ಪ್ರತಿಭೆಯ ಸುಗಂಧವನ್ನು ಪಸರಿಸಿದವರು.

Thursday, August 13, 2015

ಶ್ರೀದೇವಿ ಅವರ ೫೨ನೇ ಹುಟ್ಟು ಹಬ್ಬದ ಶುಭಾಶಯಗಳು

Sridevi

ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲೊಬ್ಬರು.  ಅವರು ಆಗಸ್ಟ್ 13, 1963ರ ವರ್ಷದಲ್ಲಿ ಜನಿಸಿದರು.  ಇನ್ನೂ ನಾಲ್ಕು ವರ್ಷವಿದ್ದಾಗಲೇ ಅವರು ಚಿತ್ರರಂಗದಲ್ಲಿ ಬಾಲನಟಿಯಾಗಿ ಹೊರಹೊಮ್ಮಿದ್ದರು.  1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದೀ ಚಲನಚಿತ್ರ ‘ಜೂಲಿ’ಯಲ್ಲಿಯೂ ಅವರು ಬಾಲನಟಿಯಾಗಿ ಅಭಿನಯಿಸಿದ್ದರು.  ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು.  ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ  ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.

Monday, August 3, 2015

ಯಶವಂತ ಚಿತ್ತಾಲ ಅವರ 87ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

Yashvanth Chittaala
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿ ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲ.  ಅವರು ಹುಟ್ಟಿದ ದಿನ ಆಗಸ್ಟ್ 3, 1928. ಯಶವಂತ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲ. ಅಣ್ಣ ಕವಿಯಾದರೆ ತಮ್ಮ ಯಶವಂತ ನಮ್ಮ ಒಬ್ಬ ಶ್ರೇಷ್ಠ ಕಥೆಗಾರ, ಕಾದಂಬರಿಕಾರ.