Translate in your Language

Friday, June 24, 2016

ಭಾರತೀಯ ತಂಡಕ್ಕೆ ಅನಿಲ್ ಕುಂಭ್ಳೆ ಕೋಚ್

ಭಾರತೀಯ ತಂಡಕ್ಕೆ ನಮ್ಮ  ಅನಿಲ್ ಕುಂಭ್ಳೆ ಕೋಚ್ ಆಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರ ಸಂತೋಷವನ್ನು ಹೆಚ್ಚಿಸಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಕನ್ನಡಿಗನೊಬ್ಬ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರು ಮೊದಲ ಕನ್ನಡಿಗ. ಸ್ಪಿನ್ನರ್ ಮಾಂತ್ರಿಕ ಅನಿಲ್ ಕುಂಭ್ಳೆ  ಭಾರತೀಯ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬುವ ಎಲ್ಲಾ ಗುಣಗಳನ್ನು ಹೊಂದಿರುವ ಶ್ರೇಷ್ಟ ವ್ಯಕ್ತಿ ಅವರಿಗೆ ನಮ್ಮ ಪರವಾಗಿ ಹಾರ್ಧಿಕ ಅಭಿನಂದನೆಗಳು .

ಸ್ವಾಮಿ ವಿವೇಕಾನಂದರ ಅಮರವಾಣಿ !!

ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ‘ಸ್ವಾಮಿ ವಿವೇಕಾನಂದ’ರು ಜನವರಿ 12, 1863 ರಲ್ಲಿ, ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿ - ಭರತಭೂಮಿಯಲ್ಲಿ ಜನಿಸಿದರು.   ನಮ್ಮ ಭರತ ಭೂಮಿಯಲ್ಲಿ ಅಂತದ್ದೇನಿದೆ ಎಂಬುದನ್ನು  ಸ್ವಾಮಿ ವಿವೇಕಾನಂದರ ಮಾತುಗಳಲ್ಲೇ ಅರಿಯುವುದು ಶ್ರೇಷ್ಠವಾದುದು.  ಅವರು ನುಡಿಯುತ್ತಾರೆ “ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ, ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿಯೊಬ್ಬ ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರೈಸುವುದಕ್ಕೆ ಒಂದು ಕರ್ಮಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯ ಮಾಧುರ್ಯ, ಔದಾರ್ಯ, ಪಾವಿತ್ರ್ಯ, ಶಾಂತಿ – ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದ್ದರೆ ಅದು ಭರತಖಂಡವೇ ಆಗಿದೆ.”  ಇಂಥಹ ಅದಮ್ಯ ನಂಬಿಕೆಯನ್ನು ತಮ್ಮಲ್ಲಿ ತುಂಬಿಕೊಂಡಿದ್ದ ಸ್ವಾಮೀಜಿಯವರು ತಮ್ಮ ಬದುಕಿನ ಮೂಲಕ ಅದನ್ನು ವಿಶ್ವಕ್ಕೆಲ್ಲಾ ಸಾಬೀತು ಮಾಡಿಕೊಟ್ಟರು. 

Thursday, June 23, 2016

ಕನ್ನಡ ಚಿತ್ರಸಂಗೀತದ ಮೈಲಿಗಲ್ಲು:ಹಂಸಲೇಖ


‘ಹಂಸಲೇಖ’ರು ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ.  ಹಂಸಲೇಖ ಅವರು  ಜೂನ್ 23, 1951ರ ವರ್ಷದಲ್ಲಿ ಗೋವಿಂದರಾಜು ಗಂಗರಾಜುವಾಗಿ ಮೈಸೂರಿನಲ್ಲಿ  ಜನಿಸಿದರು. 

‘ತ್ರಿವೇಣಿ’ ಚಿತ್ರದಲ್ಲಿ ಬರವಣಿಗೆಯ ಮೂಲಕ ಚಿತ್ರರಂಗಕ್ಕೆ ಬಂದ ಹಂಸಲೇಖರು ಮುಂದೆ ಒಂದೆರಡು ಪುಟ್ಟ ಕೆಲಸಗಳನ್ನು ಅಲ್ಲಿ ಇಲ್ಲಿ ಮಾಡಿದ್ದರೂ ಅವರು ಪ್ರಖ್ಯಾತರಾದದ್ದು ‘ಪ್ರೇಮಲೋಕ’ ಚಿತ್ರದಲ್ಲಿ. 'ನೀನಾ ಭಗವಂತ, ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ' ಎಂಬಂತಹ ಸಾಹಿತ್ಯದಿಂದ ಅಲ್ಲಲ್ಲಿ ಮಿಂಚಿದ್ದವರು.  ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಎನ್. ವೀರಸ್ವಾಮಿಯವರ ಪುತ್ರ ಚಿನಕುರಳಿ ವ್ಯಕ್ತಿತ್ವದ ರವಿಚಂದ್ರನ್ ಆಗ ತಾನೇ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದರು.  ಇಂತಹ ಪ್ರಯತ್ನದಲ್ಲಿ ಅವರಿಗೆ ‘ಗ್ರೀಸ್ 2’ ಪ್ರೇರಣೆಯಿಂದ  ಕನ್ನಡದಲ್ಲೊಂದು ಹಾಡುಗಳ ಮೂಲಕ ನಡೆಯುವ ಪ್ರೇಮಕತೆಯನ್ನು ಹೇಳುವ ಆಶಯದಲ್ಲಿದ್ದಾಗ ‘ಹಂಸಲೇಖ’ರು ಅವರಿಗೆ ಜೊತೆಯಾದರು.  'ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೆ' ಎಂಬ ಹಾಡಿನ ಧ್ವನಿಮುದ್ರಣದ ಸಮಯದಲ್ಲಿ ಅಲ್ಲಿದ್ದ ಹಂಸಲೇಖರು ಆ ಹಾಡಿನ ವಿಸ್ತರಣೆಯಾದ 'ಯಾರೇ, ಯಾರೇ..' ಎಂಬ ಸಲಹೆ ಕೊಟ್ಟಾಗ ಅವರು ರವಿಚಂದ್ರನ್ ಅವರಿಗೆ ಪ್ರಿಯರಾಗಿಬಿಟ್ಟರು.

Thursday, June 16, 2016

ಎ.ಎನ್. ಮೂರ್ತಿರಾವ್ ಅವರ 117ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಎ.ಎನ್. ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹರಾವ್ ಮೂರ್ತಿರಾವ್ ಇವರ ಪೂರ್ಣ ಹೆಸರು. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಹೆಬ್ಬಾಳುವಿನಲ್ಲಿ 1900 ಜೂನ್ 16 ರಂದು ಜನಿಸಿದರು. ತಂದೆ ಸುಬ್ಬರಾಯ ತಾಯಿ ಪುಟ್ಟಮ್ಮ. ಮಾಧ್ಯಮಿಕ ಹಂತದವರೆಗೆ ಅಕ್ಕಿಹೆಬ್ಬಾಳುವಿನಲ್ಲಿ ಅಭ್ಯಾಸ ಮಾಡಿದರು. ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಎಸ್. ರಾಧಾಕೃಷ್ಣನ್ ಅವರು ಇವರಿಗೆ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಬಿ.ಎಂ. ಶ್ರೀಕಂಠಯ್ಯನವರು ಇವರ ಗುರುಗಳಾಗಿದ್ದರು. ೧೯೨೪ರಲ್ಲಿ ಮೂರ್ತಿರಾಯರು ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಟ್ಯೂಟರ್ ಆಗಿ ಕೆಲಕಾಲ ಸೇವೆ ಸಲ್ಲಿಸಿ ೧೯೨೫ರಲ್ಲಿ ಮೈಸೂರು ಮಹಾರಾಜ ಹೈಸ್ಕೂಲಿನ ಅಧ್ಯಾಪಕರಾದರು. ೧೯೨೭ರಲ್ಲಿ ಕಾಲೇಜು ಅಧ್ಯಾಪಕರಾಗಿದ್ದರು. ೧೯೪೦ರಲ್ಲಿ ಉಪ ಪ್ರಾಧ್ಯಾಪಕರಾದರು.

Monday, June 6, 2016

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 126ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶಂಕರ್ನಾಗ್ ಅವರ ಮೊದಲ ಕನ್ನಡ ಚಿತ್ರ ಒಂದಾನೊಂದು ಕಾಲದಲ್ಲಿಯ "ನೇಸರ ನೋಡು.. ನೇಸರ ನೋಡೂ.." ಹಾಗು
ಬಾ ಸವಿತಾ ...ಬಾ ಸವಿತಾ ...(ಭಾವಗೀತೆ)
ಒಂದು ದಿನ ಕರಿಹೈದ-(ಚಿತ್ರ: ಕಾಕನ ಕೋಟೆ)
ಬೆಟ್ಟದ ತುದಿಯಲ್ಲಿ.. ಕಾಡುಗಳ ಎದೆಯಲ್ಲಿ...(ಚಿತ್ರ: ಕಾಕನ ಕೋಟೆ)
ಎಂಥ ಸುಂದರ ಹಾಡುಗಳು ಈ ಹಾಡುಗಳನ್ನು ರಚಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶ್ರೀನಿವಾಸ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರರು 1891ರ ಜೂನ್ 6ರಂದು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಶಿವಾರಪಟ್ಟಣ, ಮಳವಳ್ಳಿ, ಕೃಷ್ಣರಾಜ ಪೇಟೆಗಳಲ್ಲೂ, ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿಯೂ ನಡೆಯಿತು. ಅನಂತರ ಮೈಸೂರಿನ ಮಹಾರಾಜ ಕಾಲೇಜು ಸೇರಿ ಎಫ್.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ತದನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ೧೯೧೨ರಲ್ಲಿ ಬಿ.ಎ. ಪದವಿ ಪಡೆದರು. ಅನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯವನ್ನು ಮುಖ್ಯ ವಿಷಯವನ್ನಾಗಿ ಅಭ್ಯಾಸ ಮಾಡಿ ಎಂ.ಎ. ಪದವಿ ಪಡೆದುಕೊಂಡರು. ೧೯೧೩ರಲ್ಲಿ ಮೈಸೂರಿನ ಸಿವಿಲ್ ಸರ್ವಿಸ್ ಪರೀಕ್ಷೆ ಉತ್ತೀರ್ಣರಾದರು. ಕೆಲಕಾಲ ಬೆಂಗಳೂರು ಮತ್ತು ಮದ್ರಾಸುಗಳಲ್ಲಿ ಉಪನ್ಯಾಸಕರಾಗಿ ದುಡಿದರು.

Thursday, June 2, 2016

ಸಂಗೀತ ಮಾಂತ್ರಿಕ ಇಳಯರಾಜಾ

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ ಮತ್ತು ಗೀತರಚನೆಗಳಲ್ಲೂ ಪ್ರಸಿದ್ಧರು.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.

ಇಳಯರಾಜಾ ಅವರಿಗೆ ೭೪ನೇ ಹುಟ್ಟುಹಬ್ಬದ ಶುಭಾಶಯಗಳು

ಇಳಯರಾಜಾ
ಕೇಳದೆ ನಿಮಗೀಗ ದೂರದಲ್ಲಿ ಯಾರೋ......(ಗೀತಾ)
ಯಾವ ಶಿಲ್ಪಿ ಕಂಡ ಕನಸು ನೀನು..(ಪಲ್ಲವಿ-ಅನು ಪಲ್ಲವಿ)
ನಮ್ಮೂರಮಂದಾರ ಹೂವೆ, 
ಸಿಹಿ ಗಾಳಿ..ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ
ಆ ದಿನಗಳು, ಜನ್ಮ ಜನ್ಮದ ಅನುಬಂಧ ......ಇಂಥಾ ಚಿತ್ರಗಳ ಹಾಡುಗಳನ್ನು ಕನ್ನಡಿಗರು ಮರೆಯಲಾದೀತೆ ?

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ ಮತ್ತು ಗೀತರಚನೆಗಳಲ್ಲೂ ಪ್ರಸಿದ್ಧರು.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.