Translate in your Language

Monday, June 6, 2016

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 126ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶಂಕರ್ನಾಗ್ ಅವರ ಮೊದಲ ಕನ್ನಡ ಚಿತ್ರ ಒಂದಾನೊಂದು ಕಾಲದಲ್ಲಿಯ "ನೇಸರ ನೋಡು.. ನೇಸರ ನೋಡೂ.." ಹಾಗು
ಬಾ ಸವಿತಾ ...ಬಾ ಸವಿತಾ ...(ಭಾವಗೀತೆ)
ಒಂದು ದಿನ ಕರಿಹೈದ-(ಚಿತ್ರ: ಕಾಕನ ಕೋಟೆ)
ಬೆಟ್ಟದ ತುದಿಯಲ್ಲಿ.. ಕಾಡುಗಳ ಎದೆಯಲ್ಲಿ...(ಚಿತ್ರ: ಕಾಕನ ಕೋಟೆ)
ಎಂಥ ಸುಂದರ ಹಾಡುಗಳು ಈ ಹಾಡುಗಳನ್ನು ರಚಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶ್ರೀನಿವಾಸ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರರು 1891ರ ಜೂನ್ 6ರಂದು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಶಿವಾರಪಟ್ಟಣ, ಮಳವಳ್ಳಿ, ಕೃಷ್ಣರಾಜ ಪೇಟೆಗಳಲ್ಲೂ, ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿಯೂ ನಡೆಯಿತು. ಅನಂತರ ಮೈಸೂರಿನ ಮಹಾರಾಜ ಕಾಲೇಜು ಸೇರಿ ಎಫ್.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ತದನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ೧೯೧೨ರಲ್ಲಿ ಬಿ.ಎ. ಪದವಿ ಪಡೆದರು. ಅನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯವನ್ನು ಮುಖ್ಯ ವಿಷಯವನ್ನಾಗಿ ಅಭ್ಯಾಸ ಮಾಡಿ ಎಂ.ಎ. ಪದವಿ ಪಡೆದುಕೊಂಡರು. ೧೯೧೩ರಲ್ಲಿ ಮೈಸೂರಿನ ಸಿವಿಲ್ ಸರ್ವಿಸ್ ಪರೀಕ್ಷೆ ಉತ್ತೀರ್ಣರಾದರು. ಕೆಲಕಾಲ ಬೆಂಗಳೂರು ಮತ್ತು ಮದ್ರಾಸುಗಳಲ್ಲಿ ಉಪನ್ಯಾಸಕರಾಗಿ ದುಡಿದರು.
೧೯೧೪ರಲ್ಲಿ ಮೈಸೂರು ಸರ್ಕಾರದಲ್ಲಿ ಕೆಲಸಕ್ಕೆ ಸೇರಿದರು. ಅಸಿಸ್ಟೆಂಟ್ ಕಮಿಷನರ್, ಅಸಿಸ್ಟೆಂಟ್ ಸೆಕ್ರೆಟರಿ, ಸಬ್ ಡಿವಿಜನ್ ಆಫಿಸರ್, ಮ್ಯಾಜಿಸ್ಟ್ರೇಟ್, ಸೀನಿಯರ್ ಅಸಿಸ್ಟೆಂಟ್ ಕಮಿಷನರ್, ಸೆನ್ಸಸ್ ಕಮಿಷನರ್, ಡೆಪ್ಯೂಟಿ ಕಮಿಷನರ್, ಕಂಟ್ರೋಲರ್, ಎಕ್ಸೈಜ್ ಕಮಿಷನರ್ ಇಂತಹ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಮಾಸ್ತಿಯವರು ಜನಮನ್ನಣೆ ಗಳಿಸಿಕೊಂಡರು. ೧೯೪೪ರಲ್ಲಿ ಸ್ವಿಚ್ಛೆಯಿಂದ ನಿವೃತ್ತರಾದರು. ಮಾಸ್ತಿಯವರು ಇಂಗ್ಲಿಷ್ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ಅಭ್ಯಸಿಸಿ ಉನ್ನತ ವ್ಯಾಸಂಗ ಪಡೆದರೂ ಕನ್ನಡ ಸಾಹಿತ್ಯ ಸೇವೆಗೆ ನೀಡಿರುವ ಕೊಡುಗೆ ಅವಿಸ್ಮರಣೀಯ ಜನ್ ಇವರನ್ನು ಮಾಸ್ತಿ ಕನ್ನಡದ ಆಸ್ತಿ, ಸಣ್ಣ ಕತೆಗಳ ಬ್ರಹ್ಮ ಎಂಬ ಹಿರಿಮೆಗೆ ಪಾತ್ರರನ್ನಾಗಿಸಿದ್ದಾರೆ. ಇವರು 1986ರ ಜೂನ್ 6 ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.

ಕೃತಿಗಳು:
ಸಣ್ಣ ಕತೆಗಳು ೧೧ ಸಂಪುಟಗಳು, (ಈಗ ಐದು ಸಂಪುಟದಲ್ಲಿವೆ) ಸುಬ್ಬಣ್ಣ ಬಿನ್ನಹ ಮನವಿ, ಅರುಣ ತಾವರೆ, ಚೆಲುವು, ಸುನೀತಾ, ಗೌಡರ ಮಲ್ಲಿ, ರಾಮನವಮಿ, ಶ್ರೀರಾಮ ಪಟ್ಟಾಭಿಷೇಕ, ನವರಾತ್ರಿ, ಚೆನ್ನ ಬಸವನಾಯಕ, ಚಿಕ್ಕವೀರ ರಾಜೇಂದ್ರ ಶೇಷಮ್ಮ, ಶಾಂತಾ, ಸಾವಿತ್ರಿ, ಉಷಾ, ತಾಳಿಕೋಟೆ, ಮಂಜುಳಾ, ಶಿವಛತ್ರಪತಿ, ಯಶೋಧರಾ, ತಿರುಪಾಣಿ, ಕಾಕನಕೋಟೆ, ಮಾಸತಿ, ಅನಾರ್ಕಲಿ, ಪುರಂದರದಾಸ, ಕನಕಣ್ಣ, ಭಟ್ಟರ ಮಗಳು, ಆದಿಕವಿ ವಾಲ್ಮೀಕಿ, ಭಾರತ ತೀರ್ಥ, ನಮ್ಮ ನುಡಿ, ಲಿಯರ್ ಮಹಾರಾಜ, ಚಂಡಮಾರುತ, ದ್ವಾದಶ ರಾತ್ರಿ, ಹ್ಯಾಮ್ಲೆಟ್, ಚಿತ್ರಾಂಗದ, ಬಿಜ್ಜಳರಾಯ ಚರಿತ್ರೆ, ಕರ್ಣಾಟ ಭಾರತ ಕಥಾಮಂಜರಿ (ಕುವೆಂಪು ಮತ್ತು ಮಾಸ್ತಿ ) ಇವರ ಆತ್ಮಕಥನ ಭಾವ ಮೂರು ಭಾಗಗಳಲ್ಲಿದೆ. ಮಾತುಗಾರ ರಾಮಣ್ಣ, ಸರ್ ಎಂ.ವಿಶ್ವೇಶ್ವರಯ್ಯ, ಷೇಕ್ಸ್‌ಪಿಯರ್ ದೃಶ್ಯಗಳು ಭಾಗ ೧, ಭಾಗ ೨ ಮತ್ತು ಭಾಗ ೩ ಮುಂತಾದವು. 


ಗೌರವ, ಪ್ರಶಸ್ತಿ-ಪುರಸ್ಕಾರಗಳು:
೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ೧೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. 
೧೯೪೨ರಲ್ಲಿ ರಾಜ ಸೇವಾಸಕ್ತ ಬಿರುದು
೧೯೪೬ರಲ್ಲಿ ಮದ್ರಾಸಿನಲ್ಲಿ ನಡೆದ ದಕ್ಷಿಣ ಭಾರತೀಯ ಭಾಷೆಗಳ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
೧೯೬೧ರಲ್ಲಿ ಅಖಿಲ ಭಾರತ ಬರಹಗಾರರ ಸಮ್ಮೇಳನಾಧ್ಯಕ್ಷರಾಗಿದ್ದರು. 
೧೯೫೬ರಲಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿದೆ.
೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿದೆ.
೧೯೬೮ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ.
೧೯೮೪ರಲ್ಲಿ ಚಿಕ್ಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. 
೧೯೪೩ ರಿಂದ ೧೯೪೭ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಧ್ಯಕ್ಷರಾಗಿ ಸೇವೆ ಸಲ್ಲಿಕೆ
೧೯೫೩ ರಿಂದ ೧೯೫೪ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡು ನುಡಿಯ ಸೇವೆ ಸಲ್ಲಿಸಿದರು. 
೧೯೪೪ ರಿಂ ೬೫ ರವರೆಗೆ ಜೀವನ ಪತ್ರಿಕೆಯ ಸಂಪಾದಕರಾಗಿದ್ದರು.
೧೯೭೨ರಲ್ಲಿ ಶ್ರೀನಿವಾಸ ಎಂಬ ಸಂಭಾವನಾ ಗ್ರಂಥ ಅರ್ಪಿಸಲಾಯಿತು.

No comments:

Post a Comment