Translate in your Language

Monday, August 20, 2012

ಎಸ್.ಎಲ್. ಭೈರಪ್ಪನವರಿಗೆ ಜ್ಞಾನಪೀಠಕ್ಕೆ ಸಮಾನಾಂತರ ಸಮ್ಮಾನ

ಕನ್ನಡದ ಜನಪ್ರಿಯ ಕಾದಂಬರಿಕಾರ ಡಾ. ಎಸ್‌.ಎಲ್‌.ಭೈರಪ್ಪ ಅವರಿಗೆ 2010ನೇ ಸಾಲಿನ 'ಸರಸ್ವತಿ ಸಮ್ಮಾನ್‌' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಪ್ರಥಮ ಬಾರಿಗೆ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ದೊರೆಕಿಸಿಕೊಟ್ಟ ಕೀರ್ತಿ ಈ ಮೇರು ಲೇಖಕರಿಗೆ ಸಲ್ಲುತ್ತದೆ.

ಭೈರಪ್ಪ ಅವರು 2002ರಲ್ಲಿ ಬರೆದ 'ಮಂದ್ರ' ಕಾದಂಬರಿಯನ್ನು ಸುಪ್ರೀಂಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಜಿಬಿ ಪಟ್ನಾಯಕ್ ನೇತೃತ್ವದ ಸಮಿತಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಿ ಕೆಕೆ ಬಿರ್ಲಾ ಫೌಂಡೇಶನ್‌ ಗೆ ಶಿಫಾರಸ್ಸು ಮಾಡಲಾಗಿತ್ತು.

ರಾಜ್ಯಸಭೆ ಸದಸ್ಯ ಕರಣ್‌ ಸಿಂಗ್‌ ಮತ್ತು ಕೆ.ಕೆ.ಬಿರ್ಲಾ ಪ್ರತಿಷ್ಠಾನದ ಅಧ್ಯಕ್ಷೆ ಶೋಭನಾ ಭಾರ್ತಿಯಾ ಅವರು ಭೈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Wednesday, July 4, 2012

ಬ್ರಿಟಿಷ್ ಪಾರ್ಲಿಮೆಂಟಿನ ಎದಿರು ಜಗಜ್ಯೋತಿ ಬಸವೇಶ್ವರ !!

ಬ್ರಿಟಿಷ್ ಪಾರ್ಲಿಮೆಂಟಿನ ಎದಿರು, ಥೇಮ್ಸ್ ನದಿಯ ದಡದಲ್ಲಿ ಐತಿಹಾಸಿಕ ಅಲ್ಬರ್ಟ್ ಎಂಬ್ಯಾಂಕ್ಮೆಂಟ್ ಮೇಲೆ ಸ್ಥಾಪನೆಯಾಗಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ 'ನಡೆದಾಡುವ ದೇವರು' ಎಂದೇ ಖ್ಯಾತಿ ಗಳಿಸಿರುವ ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಮನ ಸಲ್ಲಿಸಿದ್ದಾರೆ ಮತ್ತು ಪ್ರತಿಮೆ ಪ್ರತಿಷ್ಠಾಪನೆಗೆ ಶುಭಾಶಯ ಹೇಳಿದ್ದಾರೆ. ಹನ್ನೆರಡನೇ ಶತಮಾನದ ಕ್ರಾಂತಿಕಾರಿ ರಾಜಕಾರಣಿ ಅಣ್ಣ ಬಸವಣ್ಣನವರ ಮೂರು ಅಡಿ ಎತ್ತರದ ಕಪ್ಪು ಕಂಚಿನ ಸುಂದರ ಮೂರ್ತಿಯ ಪ್ರತಿಷ್ಠಾಪನೆಯ ಜವಾಬ್ದಾರಿ ಹೊತ್ತಿರುವ ಡಾ. ನೀರಜ್ ಪಾಟೀಲ್ ಅವರು, 22ನೇ ಏಪ್ರಿಲ್ ದಿನಾಂಕದಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ 107 ವರ್ಷ ವಯಸ್ಸಿನ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಭೇಟಿ ಪ್ರತಿಷ್ಠಾಪನೆಯಾಗಬೇಕಾಗಿರುವ ಪ್ರತಿಮೆಯನ್ನು ಶ್ರೀಗಳಿಗೆ ತೋರಿಸಿದರು.

ವಿದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆಯಾಗುತ್ತಿದೆ. ಪುತ್ಥಳಿಯ ಗ್ರಾನೈಟ್ ಅಡಿಪೀಠ ನಿರ್ಮಿಸಲು ಲಂಡನ್ ಬರೋ ಆಫ್ ಲ್ಯಾಂಬೆತ್ ಪುರಸಭೆ 2012ರ ಏಪ್ರಿಲ್ 2ರಂದು ಅನುಮತಿ ನೀಡಿತ್ತು. ಗುಲಬರ್ಗ ಮೂಲದ ವೈದ್ಯ ಡಾ. ನೀರಜ್ ಪಾಟೀಲ್ ಅವರು ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮೇಯರ್ ಆಗಿದ್ದರು. [ಬ್ರಿಟನ್ನಿನಿಂದ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಒಪ್ಪಿಗೆ] ಕಂಚಿನಿಂದ ತಯಾರಿಸಲಾಗಿರುವ ಬಸವಣ್ಣನ ಬೃಹತ್ ಪುತ್ಥಳಿಯನ್ನು ಸ್ಥಾಪಿಸಲು ಬ್ರಿಟನ್ನಿನ ಸಂಸ್ಕೃತಿ ಮಾಧ್ಯಮ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ಕೂಡ 2012ರ ಜುಲೈ ತಿಂಗಳಲ್ಲಿ ಅನುಮತಿ ನೀಡಿದ್ದಾರೆ. ಈ ಪ್ರತಿಮೆ ಸ್ಥಾಪನೆಗೆ ಬ್ರಿಟನ್ನಿನ ಎಲ್ಲ ಮತಬಾಂಧವರು ಸಹಕಾರ ತೋರಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಠದ ಅಧಿಕಾರಿ ವಿಶ್ವನಾಥ್, ಕಿರಿ ಸ್ವಾಮೀಜಿ ಸಿದ್ದಲಿಂಗ ಸ್ವಾಮೀಜಿ, ನೀಲಕಾಂತ್ ಕಲ್ಕಿ ಮತ್ತು ಬಿಎಸ್ ಪರಮಶಿವಯ್ಯ ಮುಂತಾದವರು ಉಪಸ್ಥಿತರಿದ್ದರು. ಲಂಡನ್ನಿನಲ್ಲಿ ಪ್ರತಿಮೆ ಸ್ಥಾಪನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವ ಹೊಂದಿರುವ ಯುನೈಟೆಡ್ ಕಿಂಗಡಂನಲ್ಲಿ ಪ್ರಜಾಪ್ರಭುತ್ವದ ಕಲ್ಪನೆ ಹುಟ್ಟಿಕೊಳ್ಳುವ ಮೊದಲೇ 12ನೇ ಶತಮಾನದಲ್ಲಿ ತತ್ತ್ವಜ್ಞಾನಿ, ಕನ್ನಡ ಕವಿ ಬಸವೇಶ್ವರ ಅವರು ಪ್ರಜಾಪ್ರಭುತ್ವ, ಮಾನವ ಹಕ್ಕು, ಲಿಂಗ ಸಮಾನತೆಯನ್ನು ಬೆಂಬಲಿಸಿ ಕ್ರಾಂತಿ ಉಂಟುಮಾಡಿದ್ದರು ಎಂದು ಪಾರ್ಲಿಮೆಂಟಿನ ಸ್ಪೀಕರ್ ಜಾನ್ ಬರ್ಕೌ ಅವರು ಬಸವಣ್ಣನನ್ನು ಶ್ಲಾಘನೆ ಮಾಡಿದ್ದರು. 2012ರ ಜೂನ್ ತಿಂಗಳಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಲ್ಯಾಂಬೆತ್‌ಗೆ ಭೇಟಿ ನೀಡಿ, ಬಸವೇಶ್ವರನ ಮೂರ್ತಿ ಸ್ಥಾಪನೆಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಲಂಡನ್ನಿನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಲು ಇಲ್ಲಿನ ಕನ್ನಡಿಗರು ಶ್ರಮಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು.
ಕೊನೆಗೂ ಬಸವಣ್ಣ ನವರ ಈ ಪ್ರತಿಮೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದಲೇ ದಿನಾಂಕ ೧೪ನೇ ನವೆಂಬರ್ ೨೦೧೪ರಂದು ಪ್ರತಿಷ್ಠಾಪನೆಯಾಗುವುದರಲ್ಲಿ ಸಂಪನ್ನವಾಯಿತು

Monday, November 28, 2011

ನಾನು ಕಂಡಂತೆ ಕಂಬಾರ !

ಚಂದ್ರಶೇಖರ  ಕಂಬಾರ
ನನ್ನ ತಕ್ಷಣದ  ಪ್ರತಿಕ್ರಿಯೆಯಾಗಿ ನಾನು ಹೇಳಿದ್ದು : ಕಂಬಾರ ಕನ್ನಡದ ಒಬ್ಬ ನೈಜ ,ಸಹಜ  ಬರಹಗಾರ .ಕನ್ನಡ  ನುಡಿಯ ಎಲ್ಲ  ಸೂಕ್ಷ್ಮಲಯಗಳನ್ನು ಹಿಡಿದು ಕಾವ್ಯ  ಬರೆಯಬಲ್ಲ  ಒಬ್ ಪ್ರತಿಭಾನ್ವಿತ .ಕಾವ್ಯದಲ್ಲಿ ಸಿಕ್ಕ  ಯಶಸ್ಸು  ಅವರಿಗೆ  ನಾಟಕದಲ್ಲಿ ಸಿಕ್ಕಿಲ್ಲ  ಎಂದು  ನನ್ನ  ಅನಿಸಿಕೆ  ಈ ಪ್ರಶಸ್ತಿಗೆ ಎಲ್ಲ ಬಗೆಯಿಂದಲೂ ಅವರು ಅರ್ಹರು ."
 ಮುಂಭಾರ, ಹಿಂಭಾರ  ಅಲ್ಲ -ಇವನು ಕಂಬಾರ


ನಾನು ಕಂಡಂತೆ  ನನಗೆ ಕಂಡಷ್ಟು -ಚಂದ್ರಶೇಖರ ಪಾಟೀಲ
ಕನ್ನಡಕ್ಕೆ ಎಂಟನೆಯ  ಜ್ಞಾನಪೀಠ ಪ್ರಶಸ್ತಿ ಗೆಳೆಯ ಚಂದ್ರಶೇಖರ  ಕಂಬಾರರಿಗೆ  ಲಭಿಸಿದ  ಸುದ್ಧಿ ನನಗೆ  ತಿಳಿದದ್ದು  ಪತ್ರಕರ್ತ ಮಿತ್ರರಿಂದ.  "ಇದಕ್ಕೆ  ನಿಮ್ಮ ತಕ್ಷಣದ ಪ್ರತಿಕ್ರಿಯೆ  ಏನು?"- ಅಂತ ಅವುರ ಕೇಳಿದಾಗ  ನನಗೆ  ತಕ್ಷಣದ  ಪ್ರತಿಕ್ರಿಯೆ  ಏನು?"-ಅಂತ  ಅವರು ಕೇಳಿದಾಗ  ನನಗೆ  ತಕ್ಷಣ ನೆನಪಾದದ್ದು  :ಕೆಲವು  ವರ್ಷಗಳಹಿಂದೆ ಇದೇ ಪ್ರಶಸ್ತಿ ಯು.ಆರ್.ಅನಂತಮೂರ್ತಿಯವರಿಗೆ  ಬಂದದ್ದು  ಟಿ.ವಿ. ಮೊಲಕ "ಬ್ರೇಕಿಂಗ್ ನ್ಯೂಸ್ "ಆಗಿ  ನನಗೆ ಅಪ್ಪಳಿಸಿದ  ಆ ಸಂಜೆ

Saturday, September 18, 2010

ಮುಗಿಲು ಮುಟ್ಟಿದ ಪುಟ್ಟಜ್ಜಯ್ಯ ಶಿಷ್ಯರ ಆಕ್ರಂದನ

ಗದಗ, ಸೆ. 18, 2010 : ಅಂಧರ ಬಾಳಿನ ಬೆಳಕಾಗಿದ್ದ, ಅನಾಥರ ಪಾಲಿನ ಆಶ್ರಯದಾತನಾಗಿದ್ದ ಎಲ್ಲರ ಮೆಚ್ಚಿನ 'ಪುಟ್ಟಜ್ಜಯ್ಯ' ಪಂಡಿತ ಪುಟ್ಟರಾಜ ಗವಾಯಿ (1914-2010) ಅವರ ಪಾರ್ಥೀವ ಶರೀರದ ಮೆರವಣಿಗೆ ಗದಗ ನಗರದಲ್ಲಿ ಆರಂಭವಾಗಿದೆ. ಇಂದು ಸಂಜೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಗವಾಯಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ. ಜಿಲ್ಲಾ ಕ್ರೀಡಾಂಗಣದಿಂದ ಬೆಳಿಗ್ಗೆ 11.30ಕ್ಕೆ ಆರಂಭವಾಗಿರುವ ಮೆರವಣಿಗೆ ಊರಿನ ಬೀದಿಬೀದಿ ಸಂಚರಿಸಿ ಸಂಜೆಯ ಹೊತ್ತಿಗೆ ಪುಣ್ಯಾಶ್ರಮ ತಲುಪಲಿದೆ. ದಾರಿಯುದ್ದಕ್ಕೂ ಲಕ್ಷಾಂತರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ನೆರೆದಿರುವುದು ಮತ್ತು ಶೋಕ ಸಾಗರದಂತಾಗಿರುವುದು ಪ್ರೀತಿಯ ಅಜ್ಜನ ಗೌರಿಶಿಖರದೆತ್ತರದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಗವಾಯಿಗಳ ಶಿಷ್ಯಕೋಟಿ ಮಾತ್ರವಲ್ಲ, ಅವರನ್ನು ಬಲ್ಲ ಎಲ್ಲರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. 

ಭಕ್ತಾದಿಗಳ ಆಕ್ರಂದನವಂತೂ ಮುಗಿಲು ಮುಟ್ಟಿದೆ. ಹುಯಿಲಗೋಳ ವೃತ್ತ, ಗಾಂಧಿ ವೃತ್ತ, ಜಿಲ್ಲಾ ನ್ಯಾಯಾಲಯ ಮುಖಾಂತರ ಮೆರವಣಿಗೆ ಸಾಗಿ ಪುಣ್ಯಾಶ್ರಮ ತಲುಪಲಿದೆ.