Translate in your Language

Monday, January 25, 2016

ಕೆ.ಎಸ್.ನರಸಿಂಹಸ್ವಾಮಿ ಅವರ 101ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕೆ.ಎಸ್. ನರಸಿಂಹಸ್ವಾಮಿ

ಕೆ.ಎಸ್. ನರಸಿಂಹಸ್ವಾಮಿಯವರು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನವರಿ 25ರಂದು ಜನಿಸಿದರು. ತಂದೆ ಸುಬ್ಬರಾಯ. ತಾಯಿ ನಾಗಮ್ಮ, ನರಸಿಂಹಸ್ವಾಮಿಯವರ ವಿದ್ಯಾಭ್ಯಾಸ ಮೈಸೂರಿನ ಮಹಾರಾಜ ಪ್ರೌಢಶಾಲೆ, ಇಂಟರ್‌ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಆಯಿತು. ಇವರ ಕಾಲೇಜು ಅಭ್ಯಾಸ ಆರ್ಥಿಕ ಸಂಕಷ್ಟದಿಂದಾಗಿ ಮೊಟಕಾಯಿತು. ಪದವಿ ವ್ಯಾಸಂಗ ಅಪೂರ್ಣಗೊಂಡಿತು. ತಮ್ಮ ಓದಿನ ವಿಷಯ ಕನ್ನಡವಲ್ಲದಿದ್ದರೂ ಕನ್ನಡ ತರಗತಿಗಳಿಗೆ ಹಾಜರಾಗಿ ಆಲಿಸುತ್ತಿದ್ದರು. ಗಣಿತ, ಭೌತವಿಜ್ಞಾನ, ಇಂಜಿನಿಯರಿಂಗ್ ಇವರ ಪಠ್ಯ ವಿಷಯಗಳಾಗಿದ್ದವು. ೧೯ನೇ ವಯಸ್ಸಿಗೆ ವಿದ್ಯಾಭ್ಯಾಸ ನಿಂತುಹೋಯಿತು. ತಮ್ಮ ೨೨ನೇ ವಯಸ್ಸಿಗೆ ಕೆಲಸಕ್ಕೆ ಸೇರಿದರು. ಶಿವಮೊಗ್ಗದ ವೆಂಕಮ್ಮ ಎಂಬುವವರೊಡನೆ ವಿವಾಹವಾದರು. ಇವರ ಪ್ರೇಮಮಯ ಜೀವನ ಗೀತೆ ರಚನೆಗೆ ಪುಷ್ಠಿ ನೀಡಿತು. 

Wednesday, January 6, 2016

ಎ. ಆರ್. ರಹಮಾನ್ ಅವರಿ 51ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಗಳು


ನಮ್ಮ ದೇಶದ ಸಂಗೀತ ಮಾಂತ್ರಿಕ ಎಂದೇ ವಿಶ್ವಮಾನ್ಯರಾಗಿರುವ ಎ. ಆರ್. ರಹಮಾನ್ ಅವರ ಮೂಲ ಹೆಸರು ಎ.ಎಸ್.ದಿಲೀಪ್ ಕುಮಾರ್

ಬಹಳಷ್ಟು ವೇಳೆ ಪ್ರಶಸ್ತಿ ಬಂದ ನಂತರವಷ್ಟೇ  ಬಹಳಷ್ಟು ಜನರು ಪ್ರಸಿದ್ಧಿಗೆ ಬರುತ್ತಾರೆ.  ಆದರೆ  ಹಲವರಿಗೆ ಪ್ರಶಸ್ತಿ ಬಂದಾಗ ಆ ಪ್ರಶಸ್ತಿಗೇ ಮೌಲ್ಯ ಬರುತ್ತದೆ.  ಅಂತಹವರು ಪ್ರಶಸ್ತಿಯನ್ನು ಪ್ರೀತಿ ಗೌರವಗಳ ನೆಲೆಯಲ್ಲಿ ಒಪ್ಪುತ್ತಾರಾದರೂ ಅದರ ಬಗ್ಗೆ ಯಾವುದೇ ಮೋಹಿತರಾಗಿರುವುದಿಲ್ಲ.  ಇಂಥಹ ಅಮೂಲ್ಯ ವ್ಯಕ್ತಿತ್ವದವರು ಎ ಆರ್ ರಹಮಾನ್.  ಇಂದು ಅವರು ಹುಟ್ಟಿದ ದಿನ.  ಜನವರಿ 6, 1966 ರಲ್ಲಿ ಜನಿಸಿದ ಎ ಆರ್ ರಹಮಾನ್ ಇಂದು ವಿಶ್ವಾದ್ಯಂತ ಚಿರಪರಿಚಿತರು.

ಅವರಿಗೆ ಆಸ್ಕರ್, ಬಾಫ್ಟಾ, ಗೋಲ್ದನ್ ಗ್ಲೋಬ್ ಇತ್ಯಾದಿ ಸಕಲ ಪ್ರಶಸ್ತಿ ಗೌರವಗಳು ಹುಡುಕಿಕೊಂಡು ಬಂದಿದ್ದು ಇತ್ತೀಚಿನ ವರ್ಷಗಳಲ್ಲಾದರೂ,  ಭಾರತೀಯರು ತಮ್ಮ ಹೃದಯಾಳದಲ್ಲಿ ಎಂದೋ ಈ ಹುಡುಗನನ್ನು ಪ್ರತಿಷ್ಟಾಪಿಸಿಕೊಂಡು ಬಿಟ್ಟಿದ್ದರು.  ತಂದೆ ಶೇಖರ್ ಮಲಯಾಳಂ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು.  ಅವರನ್ನು ಕಳೆದುಕೊಂಡಾಗ ಮನೆಯಲ್ಲಿದ್ದ ವಾದ್ಯಗಳನ್ನು ಬಾಡಿಗೆಗೆ ನೀಡಿ ಜೀವನ ಕಳೆದವರು.   ಹಾಗೆ ಉಂಟಾದ ಸಂಪರ್ಕದಲ್ಲಿ ವಾದ್ಯಗಾರನಾಗಿ, ಮುಂದೆ ಸಂಗೀತ ಪದವಿಯನ್ನೂ ಪಡೆದವನಾಗಿ ರಹಮಾನ್ ಅತಿ ಚಿಕ್ಕ ವಯಸ್ಸಿನಲ್ಲೇ ತೋರಿದ ಪ್ರತಿಭೆ, ಶ್ರದ್ಧೆ, ಹೊಸತನ್ನು ಮೂಡಿಸಬೇಕೆಂಬ ಛಲ, ಹಿಂದಿನದನ್ನು – ಹಿರಿಯರನ್ನು – ಹಿರಿದಾದನ್ನು ಗೌರವಿಸಬೇಕೆಂಬ ಹೃದ್ಭಾವ, ಇಡೀ ವಿಶ್ವದಲ್ಲಿ ಎಲ್ಲ ಎಲ್ಲವನ್ನೂ ತನ್ನ ತೆಕ್ಕೆಗೆ ಸೇರಿಸಿಕೊಂಡು ಅದರಲ್ಲೇ ತನ್ನನ್ನೂ, ತನ್ನ ಕಲೆಯನ್ನೂ ಅರಳಿಸಿ, ಹೆಮ್ಮರವಾದರೂ ಒಂದಿಷ್ಟೂ ಅಹಂನ ಸುಳಿಯನ್ನೂ ನೀಡದಿರುವಂತಹ ಈ ರೆಹಮಾನರ ಬಗ್ಗೆ ಏನು ತಾನೇ ಹೇಳೋಣ.

ರೋಜಾದಿಂದ ಲಗಾನ್ ವರೆಗೆ, ಮುಂದೆ ಸ್ಲಂ ಡಾಗ್ ಮಿಲ್ಲಿಯನೇರ್ ವರೆಗೆ, ಚಯ್ಯ ಚಯ್ಯ ಅಂತಹ ಹಾಡಿನಿಂದ, ಜನಪದ ದಾಟಿಯ ಹಾಡುಗಳ ವರೆಗೆ, ದಕ್ಷಿಣ ಭಾರತೀಯ, ಹಿಂದೂಸ್ಥಾನಿ, ಪಾಕಿಸ್ಥಾನಿ, ಪೌರಾತ್ಯ, ಪಾಶ್ಚಾತ್ಯದ ಏನೆಲ್ಲಾ ಸಂಗೀತ ಇವೆಯೋ ಅವೆಲ್ಲಾ ಈತನ ಸಂಗೀತ ಮೋಡಿಯಲ್ಲಿ ನಿರಂತರ ಗಂಗೆಯಾಗಿ ಹರಿಯುತ್ತಲೇ ಇದೆ.  ಅಂದು ಕೇವಲ ಭಾರತೀಯರು ಈತನ ಹಾಡುಗಳಿಗೆ ಕಾಯುತ್ತಿದ್ದರೆ ಈಗ ವಿಶ್ವದ ಮೂಲೆ ಮೂಲೆಯ ಜನ ಈತನ ಹಾಡುಗಳಿಗೆ ಕಾಯುತ್ತಾರೆ.  ಈತನ ಸಂಗೀತದ ಧ್ವನಿಮುದ್ರಿಕೆಗಳು ನೂರೈವತ್ತು ಮಿಲಿಯನ್ನಿಗೂ ಮೀರಿ, ಕ್ಯಾಸೆಟ್ಟುಗಳು ಇನ್ನೂರು ಮಿಲ್ಲಿಯನ್ನುಗಳಿಗೂ ಮೀರಿ ವಿತರಣೆ ಆಗಿವೆ ಎಂಬ ಮಾತಿದೆ.  ಇದು ಎಂದೂ ಯಾರಿಗೂ ನಿರ್ಮಿಸಲಾಗಿಲ್ಲವಾದ ದಾಖಲೆ.  ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಉತ್ತಮ ತಂತ್ರಜ್ಞಾನ ಬರಲು ಸಾಧ್ಯವಿಲ್ಲ ಎನ್ನುತ್ತಿದ್ದವರಿಗೆ ಏಷ್ಯಾದಲ್ಲಿ ಅತ್ಯುತ್ತಮ ಮಟ್ಟದ ರೆಕಾರ್ಡಿಂಗ್ ಸ್ಟುಡಿಯೋ ಎಂದು ಶ್ಲಾಘಿತವಾಗಿರುವ ಉತ್ತಮ ವ್ಯವಸ್ಥೆಯನ್ನು ರಹಮಾನ್ ನಿರ್ಮಿಸಿದ್ದಾರೆ.  ಸಿನಿಮಾ ಇರಲಿ, ದೇಶಭಕ್ತಿಗೀತೆಗಳಿರಲಿ, ಆಧುನಿಕ ರಂಗಪ್ರದರ್ಶನ ಗೀತೆಗಳಿರಲಿ ವಿಶ್ವದ ಯಾವುದೇ ಮಾದರಿಯ ಶೈಲಿ ಇರಲಿ ಅವೆಲ್ಲದರಲ್ಲೂ ರಹಮಾನರ ಹರಹು ವಿಶಾಲವಾಗಿ ಹರಡಿಕೊಂಡಿದೆ.

ಒಂದೆರಡು ವರ್ಷದ ಹಿಂದೆ ಕನ್ನಡದ ಗಾಡ್ ಫಾದರ್ ಎಂಬ ಚಿತ್ರಕ್ಕೆ ಸಹಾ ಸಂಗೀತ ನೀಡಿದ ಎ. ಆರ್. ರಹಮಾನ್, ಇಲ್ಲಿಗೆ ಬಂದಾಗ ತಾವು ಪ್ರವರ್ಧಮಾನರಾಗಿದ್ದ ದಿನಗಳಲ್ಲಿ ಸಂಗೀತ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ದ್ವಾರಕೀಶ್ ಮುಂತಾದವರು  ತಮ್ಮನ್ನು ‘ನೀ ಬರೆದ ಕಾದಂಬರಿ’  ಚಿತ್ರದಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸುವಾಗ ಪ್ರೀತಿಯಿಂದ ಕಂಡಿದ್ದನ್ನು ಆತ್ಮೀಯವಾಗಿ ಸ್ಮರಿಸಿದ್ದರು.  ಇದು  ಆತ ತನ್ನ ಬೆಳೆದು ಬಂದ ದಾರಿಯನ್ನು ಮರೆತಿಲ್ಲದಿರುವುದಕ್ಕೆ ಒಂದು ನಿದರ್ಶನ.   2012ರ ವರ್ಷದ ಮೇ ತಿಂಗಳಿನಲ್ಲಿ ಅವರಿಗೆ ಅಮೆರಿಕದ ಮಿಯಾಮಿ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದಾಗ ಅಮೆರಿಕದ ಅಧ್ಯಕ್ಷರಿಂದ ವೈಟ್ ಹೌಸ್ ಆತಿಥ್ಯವನ್ನು ಸಹಾ ಪಡೆದ ಈ ಹಿರಿವಂತನ ವಿನಯ ಸರಿಸಾಟಿಯಿಲ್ಲದ್ದು.


ಆತನಿಗೆ ಸಂದ ಗೌರವಗಳು ಎಷ್ಟು ಎಷ್ಟೋ! ಅದನ್ನು ದಾಖಲೆ ಇಡುವುದು ಕೂಡಾ ಕಷ್ಟ.  ಇತ್ತೀಚಿಗೆ ಪತ್ರಕರ್ತರೊಡನೆ "ನನ್ನ ಆಸ್ಕರ್ ಪ್ರಶಸ್ತಿ ಯಾವ ಮೂಲೆಯಲ್ಲಿದೆಯೋ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ" ಎಂದು ಆತ ಹೇಳಿದ ಮಾತು ಉತ್ಪ್ರೇಕ್ಷೆಯಂತೆ ಕಂಡರೂ, ಈ  ಕರ್ಮ ಯೋಗಿಗೆ ಅಂತಹ ಪ್ರಶಸ್ತಿಗಳ ಬಗ್ಗೆ ಯಾವುದೇ ಮಮಕಾರ ಕೂಡ ಸೀಮಿತವಾದದ್ದು ಎಂದು ಕೂಡ ಇಡೀ ಪ್ರಪಂಚಕ್ಕೆ ತಿಳಿದಿರುವ ವಿಚಾರ.  ಭಾರತೀಯ ಸಂಗೀತ ಶತ ಶತಮಾನಗಳಿಂದ ಈ ದೇಶದ ಜನರನ್ನು ಪ್ರಭಾವಿಸುತ್ತ ಬಂದಿದೆ.  ಆ ಸಂಗೀತಕ್ಕೆ ಹೊಸ ಹೊಸ ದನಿಗಳನ್ನೂ, ಹಿನ್ನಲೆಯನ್ನೂ, ವ್ಯಾಪ್ತಿಯನ್ನೂ, ಸಹಯೋಗವನ್ನೂ, ವಿಸ್ತರಣೆಯನ್ನೂ ನೀಡುತ್ತಿರುವ ಈ ತ್ರಿವಿಕ್ರಮನಿಗೆ ಸಾಧಿಸಬೇಕಿರುವುದು ತಾನೇ ಏನುಳಿದಿದೆ.  ತಾನೇ ಕೃತಿಯಾಗುವುದಷ್ಟೇ ಶ್ರೇಷ್ಠ ಕಲೆಗಾರನ ಶ್ರೇಯಸ್ಸು.  ರಹಮಾನ್ ತಾನೇ ಸಂಗೀತವಾಗುವತ್ತ ಹೋಗುತ್ತಿರುತ್ತಾನೆ.  ಅದರಲ್ಲಿ ಮೀಯುವುದು ಈ ಲೋಕದ ಹಾಗೂ ಈ ಲೋಕದ ಭಾಗವಾಗಿರುವ ನಮ್ಮ  ಸೌಭಾಗ್ಯ.

Tuesday, January 5, 2016

ದೀಪಿಕಾ ಪಡುಕೋಣೆ ಅವರ 31ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಸತತ ಏಳು ಬಾರಿ ಬ್ಯಾಡ್ಮಿಂಟನ್ ವಿಶ್ವ-ಚಾಂಪಿಯನ್ ಆಟಗಾರ ರಾದ ನಮ್ಮ ಪ್ರಕಾಶ್ ಪಡುಕೋಣೆ ಅವರ ನೆಚ್ಚಿನ ಮಗಳು, ಕನ್ನಡದ ನೆಲದ ಹುಡುಗಿ ಇಂದಿನ ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ ದೀಪಿಕಾ ಪಡುಕೋಣೆ ಹುಟ್ಟಿದ್ದು ಜನವರಿ 5, 1986 ರಲ್ಲಿ. 


ಕನ್ನಡದ ಸಿನಿಮಾಗಳಲ್ಲಿ  ಅಂದಿನ ಪ್ರಸಿದ್ಧ ಅಭಿನೇತ್ರಿಯರಾದ ಪಂಡರೀಬಾಯಿ, ಲೀಲಾವತಿ, ಬಿ. ಸರೋಜಾದೇವಿ, ಭಾರತಿ, ಜಯಂತಿ ಅಂತಹ ಪ್ರತಿಭೆಗಳು ಕನ್ನಡದಲ್ಲಿ ಪ್ರಖ್ಯಾತರಾಗಿದ್ದಷ್ಟೇ ಇತರ ಭಾಷೆಗಳಲ್ಲಿ ಕೂಡಾ ನಟಿಸಿ ಅಲ್ಲಿಯೂ ಪ್ರಖ್ಯಾತಿ ಪಡೆದಿದ್ದವರು.  

Tuesday, December 22, 2015

ಶ್ರೀನಿವಾಸ ರಾಮಾನುಜನ್ ಅವರ 129ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ


ಭಾರತದ ಮಹಾನ್ ಮೇಧಾವಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಜನಿಸಿದ ದಿನ ಡಿಸೆಂಬರ್ 22, 1887.   ಈ ಮಹಾನ್ ಗಣಿತಜ್ಞರು ಜನಿಸಿದ ದಿನವನ್ನು ಭಾರತದ ರಾಷ್ಟ್ರೀಯ ಗಣಿತದ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಒಮ್ಮೆ ಆಸ್ಪತ್ರೆಯಲ್ಲಿದ್ದ ಒಬ್ಬ ಗೆಳೆಯನನ್ನು ನೋಡಲು ಒಬ್ಬ ಆಗಂತುಕ ಆಗಮಿಸಿದ.  “ನೀನು ಹೇಗಿದ್ದೀಯ?”  ಎಂದು ಆಗಂತುಕ ಆತುರ ಮತ್ತು ಒಲವಿನ ದನಿಯಲ್ಲಿ ಕೇಳಿದ.

“ಪರವಾಗಿಲ್ಲ, ನಿಮಗೆ ಧನ್ಯವಾದ”  ಹಾಸಿಗೆಯಲ್ಲಿ ಮಲಗಿದ್ದ ರೋಗಿ ಉತ್ತರಿಸಿದ. 

ಆದರೆ ಆತನಿಗೆ ಇದರಿಂದ ತೃಪ್ತಿಯಾಗಲಿಲ್ಲ.  ರೋಗಿಯ ಮುಖ ಮಾರಕ ವ್ಯಾಧಿಯ ವಿರುದ್ಧ ಆತನ ಬಲವಾದ ಹೋರಾಟವನ್ನು ಸೂಚಿಸುತ್ತಿತ್ತು.  ಕೆಲವು ಕ್ಷಣಗಳ ಬಳಿಕ ಆತ ಮತ್ತೆ ಮುಂದುವರೆಸಿದ:

Saturday, December 19, 2015

ರಾಜಕೀಯದಲ್ಲೊಬ್ಬ ಮಹಾಸಾಧಕ ನಜೀರ್ ಸಾಬ್-ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ

ನೀರ್ ಸಾಬ್ ಎಂದೆ ಕನ್ನಡ ಜನಮನಕ್ಕೆ ಪರಿಚಿತರಾದ ಅಬ್ದುಲ್ನಜೀರ್ ಸಾಬ್ ಹುಟ್ಟಿದ್ದು (ದಿನಾಂಕ 19ನೇ ಡಿಸೆಂಬರ್ 1934) ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ 
 25 ವರುಷಗಳ ಹಿಂದೆ ಅಂದರೆ ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು.  ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳಲು ಬಂದಿದ್ದರು.  ಪುಪ್ಪುಸ ಕ್ಯಾನ್ಸರಿನ ಉಲ್ಬಣಾವಸ್ಥೆಯಲ್ಲಿ ಬಾಯಿಗೆ ಆಕ್ಸಿಜನ್ ಮಾಸ್ ಧರಿಸಿ ಉಸಿರಾಡುವುದಕ್ಕೂ ಅಪಾರ ಯಾತನೆ ಅನುಭವಿಸುತ್ತ ಕುರ್ಚಿಯ ಮೇಲೆ ಕೂತಿದ್ದ ಆ ಗಣ್ಯ ರೋಗಿ ಇನ್ನಾರೂ ಅಲ್ಲ. ಇಡೀ ದೇಶಕ್ಕೇ ಮಾದರಿಯಾದ ಕರ್ನಾಟಕದ ಪಂಚಾಯತ್‌ರಾಜ್ ವ್ಯವಸ್ಥೆಯ ರೂವಾರಿಯೆನಿಸಿದ್ದ ನೀರ್ ಸಾಬ್ ಎಂದೇ ಸಾರ್ವಜನಿಕರ ಮನೆಮತಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್...

Saturday, December 12, 2015

ರಜನೀಕಾಂತ್ ಅವರಿಗೆ 68ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಡಿಸೆಂಬರ್ 12, 1949 ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು.  ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು.  ಮಗು ಐದನೆಯ ವಯಸ್ಸಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತವಾಯಿತು.  ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿ ಹುಡುಗ ಒಂದಷ್ಟು ಕೂಲಿ ಕೆಲಸ ಮಾಡಿ ಬದುಕನ್ನು ಬಂದಷ್ಟೇ ಭಾಗ್ಯ ಎಂದುಕೊಂಡು ನಡೆಸತೊಡಗಿದ. 1968ರಿಂದ 1973ರ ಅವಧಿಯಲ್ಲಿ  ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಒಂದು ನೆಲೆ ಸಿಕ್ಕಿತು ಅಂದುಕೊಂಡ.  ಸಿನಿಮಾ ಹುಚ್ಚು.  ಈತನ ವರಸೆಗಳನ್ನು ನೋಡಿದ ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಹುರುದುಂಬಿಸಿ ಆತನಿಗೆ ಎರಡು ವರ್ಷ ಬೆಂಗಾವಲಾಗಿ ನಿಂತ.  ಮುಂದೆ ನಡೆದದ್ದು ಇತಿಹಾಸ ಎನ್ನುತ್ತೀರ.  ಉಹುಂ!

Saturday, December 5, 2015

ಜಿ.ಪಿ.ರಾಜರತ್ನಂ ಅವರ 108ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ

ಜಿ.ಪಿ.ರಾಜರತ್ನಂ
ಜಿ.ಪಿ.ರಾಜರತ್ನಂರವರು 1908ರ ಡಿಸೆಂಬರ್ 5 ರಂದು ರಾಮನಗರದಲ್ಲಿ ಜನಿಸಿದರು. ತಂದೆ ಜಿ.ಕೆ. ಗೋಪಾಲಕೃಷ್ಣ ಅಯ್ಯಂಗಾರ್. ೧೯೨೮ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ; ೧೯೩೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ ಪಡೆದರು. ಮಹಾರಾಜ ಕಾಲೇಜಿನಲ್ಲಿ ಕೆಲವು ಕಾಲ ಅಧ್ಯಾಪಕರಾಗಿದ್ದರು. ಆರಂಭದಲ್ಲಿ ಇವರು ಶಿಶುವಿಹಾರ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡಿದರು. ಅನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಇಲಾಖೆಯಲ್ಲಿ ಇವರಿಗೊಂದು ಪಂಡಿತ ಹುದ್ದೆ ದೊರೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ಮುಂದೆ ಕನ್ನಡ ಉಪಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ೧೯೬೪ರಲ್ಲಿ ನಿವೃತ್ತರಾದರು.