Translate in your Language

Friday, August 15, 2014

ಜ್ಞಾನಪೀಠ ಪ್ರಶಸ್ತಿ


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೧೧ ಲಕ್ಷ ರುಪಾಯಿ ಚೆಕ್ ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಜ್ಞಾನಪೀಠದ ಹಿನ್ನೆಲೆ
ಈ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಒಂಬತ್ತು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.

೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಕನ್ನಡ: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ

ಹಿಂದಿ: ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಸಚ್ಚಿದಾನಂದ ವಾತ್ಸಾಯನ | ಮಹಾದೇವಿ ವರ್ಮ | ನರೇಶ್ ಮೆಹ್ತಾ | ನಿರ್ಮಲಾ ವರ್ಮ | ಕುವಂರ ನಾರಾಯಣ | ಅಮರ ಕಾಂತ | ಶ್ರೀ ಲಾಲ್ ಶುಕ್ಲ

ಬೆಂಗಾಲಿ: ತಾರಾಶಂಕರ ಬಂದೋಪಾಧ್ಯಾಯ | ಬಿಷ್ಣು ಡೆ | ಆಶಾಪೂರ್ಣ ದೇವಿ | ಸುಭಾಷ್ ಮುಖ್ಯೋಪಾಧ್ಯಾಯ | ಮಹಾಶ್ವೇತಾದೇವಿ

ಮಲಯಾಳಂ: ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್ | ಎಸ್.ಕೆ.ಪೊಟ್ಟೆಕ್ಕಾಟ್ | ಟಿ. ಶಿವಶಂಕರ ಪಿಳ್ಳೈ

ಗುಜರಾತಿ: ಉಮಾಶಂಕರ್ ಜೋಶಿ | ಪನ್ನಾಲಾಲ್ ಪಟೇಲ್ | ರಾಜೇಂದ್ರ ಕೇಶವ್‌ಲಾಲ್ ಷಾ

ಒರಿಯಾ: ಗೋಪಿನಾಥ್ ಮೊಹಾಂತಿ | ಎಸ್. ರೌತ್ ರಾಯ್ | ಸೀತಾಕಾಂತ್ ಮಹಾಪಾತ್ರ|ಪ್ರತಿಭಾ ರೇ

ಉರ್ದು: ಫಿರಾಕ್ ಗೋರಕ್ ಪುರಿ | ಕುರ್ರಾತುಲೈನ್ ಹೈದರ್ | ಅಲಿ ಸರ್ದಾರ್ ಜಾಫ್ರಿ

ತೆಲುಗು: ವಿಶ್ವನಾಥ ಸತ್ಯನಾರಾಯಣ | ಸಿ. ನಾರಾಯಣ ರೆಡ್ಡಿ | ರಾವುರಿ ಭಾರದ್ವಾಜ

ತಮಿಳು: ಪಿ.ವಿ. ಅಕಿಲಾಂಡಮ್ | ಡಿ. ಜಯಕಾಂತನ್

ಪಂಜಾಬಿ: ಅಮೃತ ಪ್ರೀತಮ್ | ಗುರ್ದಿಯಲ್ ಸಿಂಘ್

ಅಸ್ಸಾಮೀಸ್ ಬಿ.ಕೆ. ಭಟ್ಟಾಚಾರ್ಯ | ಇಂದಿರಾ ಗೋಸ್ವಾಮಿ

ಮರಾಠಿ: ವಿಷ್ಣು ಸಖಾರಾಮ್ ಖಾಂಡೇಕರ್ | ವಿಂದಾ ಕರಂದೀಕರ್ | ಕುಸುಮಾಗ್ರಜ್

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ

ವರ್ಷಭಾಷೆಲೇಖಕಕೃತಿ
೧೯೬೫ಮಲೆಯಾಳಂಜಿ. ಶಂಕರ ಕುರುಪ್ಓಡಕ್ಕುಳಲ್
೧೯೬೬ಬಂಗಾಳಿತಾರಾಶಂಕರ ಬಂದೋಪಾಧ್ಯಾಯಗಣದೇವತಾ
೧೯೬೭ಗುಜರಾತಿಉಮಾಶಂಕರ ಜೋಷಿನಿಶಿತಾ
೧೯೬೭ಕನ್ನಡಕುವೆಂಪು (ಕೆ.ವಿ.ಪುಟ್ಟಪ್ಪ)ಶ್ರೀ ರಾಮಾಯಣ ದರ್ಶನಂ
೧೯೬೮ಹಿಂದಿಸುಮಿತ್ರನಂದನ ಪಂತ್ಚಿದಂಬರ
೧೯೬೯ಉರ್ದುಫಿರಾಕ್ ಗೋರಕ್ ಪುರಿಗುಲ್-ಎ-ನಗ್ಮಾ
೧೯೭೦ತೆಲುಗುವಿಶ್ವನಾಥ ಸತ್ಯನಾರಾಯಣರಾಮಾಯಣ ಕಲ್ಪವೃಕ್ಷಮು
೧೯೭೧ಬಂಗಾಳಿಭಿಷ್ಣು ಡೇಸ್ಮೃತಿ ಸತ್ತ ಭವಿಷ್ಯತ್
೧೯೭೨ಹಿಂದಿರಾಮಧಾರಿಸಿಂಗ್ ದಿನಕರಊರ್ವಶಿ
೧೯೭೩ಕನ್ನಡಅಂಬಿಕಾತನಯದತ್ತ (ದ.ರಾ.ಬೇಂದ್ರೆ)ನಾಕುತಂತಿ
೧೯೭೩ಓರಿಯಗೋಪಿನಾಥ ಮೊಹಂತಿಮತ್ತಿಮತಾಲ್
೧೯೭೪ಮರಾಠಿವಿಷ್ಣು ಸಖಾರಾಮ್ ಖಾಂಡೇಕರ್ಯಯಾತಿ
೧೯೭೫ತಮಿಳುಪಿ.ವಿ.ಅಕಿಲಂದಂಚಿತ್ತ್ರಪ್ಪಾವೈ
೧೯೭೬ಬಂಗಾಳಿಆಶಾಪೂರ್ಣದೇವಿಪ್ರಥಮ್ ಪ್ರತಿಸೃತಿ
೧೯೭೭ಕನ್ನಡಕೋಟ ಶಿವರಾಮ ಕಾರಂತಮೂಕಜ್ಜಿಯ ಕನಸುಗಳು
೧೯೭೮ಹಿಂದಿಎಸ್.ಎಚ್.ವಿ ಆಜ್ಞೇಯಕಿತ್ನಿ ನಾವೊಃ ಮೆಃ ಕಿತ್ನಿ ಬಾರ್
೧೯೭೯ಅಸ್ಸಾಮಿಬಿರೇಂದ್ರ ಕುಮಾರ ಭಟ್ಟಾಚಾರ್ಯಮೃತ್ಯುಂಜಯ್
೧೯೮೦ಮಲೆಯಾಳಂಎಸ್.ಕೆ.ಪೊಟ್ಟೆಕಾಟ್ಟ್ಒರು ದೇಶತ್ತಿಂಡೆ ಕಥಾ
೧೯೮೧ಪಂಜಾಬಿಅಮೃತಾ ಪ್ರೀತಮ್ಕಾಗಜ್ ಕೆ ಕನ್ವಾಸ್
೧೯೮೨ಹಿಂದಿಮಹಾದೇವಿ ವರ್ಮ
೧೯೮೩ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಚಿಕವೀರರಾಜೇಂದ್ರ
೧೯೮೪ಮಲೆಯಾಳಂತಕಳಿ ಶಿವಶಂಕರ ಪಿಳ್ಳೈ
೧೯೮೫ಗುಜರಾತಿಪನ್ನಾಲಾಲ್ ಪಟೇಲ್
೧೯೮೬ಓರಿಯಸಚ್ಚಿದಾನಂದ ರಾವುತ ರಾಯ್
೧೯೮೭ಮರಾಠಿವಿಷ್ಣು ವಾಮನ ಶಿರ್ವಾಡ್ಕರ್ ಕುಸುಮಾಗ್ರಜ
೧೯೮೮ತೆಲುಗುಡಾ.ಸಿ.ನಾರಾಯಣನ್ ರೆಡ್ಡಿ
೧೯೮೯ಉರ್ದುಖುರ್ರತುಲೈನ್ ಹೈದರ್
೧೯೯೦ಕನ್ನಡವಿನಾಯಕ ಕೃಷ್ಣ ಗೋಕಾಕ್ಭಾರತದ ಸಿಂಧುರಶ್ಮಿ
೧೯೯೧ಬಂಗಾಳಿಸುಭಾಷ್ ಮುಖೋಪಾಧ್ಯಾಯ
೧೯೯೨ಹಿಂದಿನರೇಶ್ ಮೆಹತಾ
೧೯೯೩ಓರಿಯಸೀತಾಕಾಂತ ಮಹಾಪಾತ್ರ
೧೯೯೪ಕನ್ನಡಯು. ಆರ್. ಅನಂತಮೂರ್ತಿಸಮಗ್ರ ಸಾಹಿತ್ಯ
೧೯೯೫ಮಲೆಯಾಳಂಎಮ್. ಟಿ ವಾಸುದೇವನ್ ನಾಯರ್
೧೯೯೬ಬಂಗಾಳಿಮಹಾಶ್ವೇತಾದೇವಿ
೧೯೯೭ಊರ್ದುಅಲಿ ಸರ್ದಾರ್ ಜಾಫ್ರಿ
೧೯೯೮ಕನ್ನಡಗಿರೀಶ್ ಕಾರ್ನಾಡ್ಸಮಗ್ರ ಸಾಹಿತ್ಯ
೧೯೯೯ಹಿಂದಿನಿರ್ಮಲ್ ವರ್ಮ
೧೯೯೯ಪಂಜಾಬಿಗುರುದಯಾಳ್ ಸಿಂಗ್
೨೦೦೦ಅಸ್ಸಾಮಿಇಂದಿರಾ ಗೋಸ್ವಾಮಿ
೨೦೦೧ಗುಜರಾತಿರಾಜೇಂದ್ರ ಕೇಶವಲಾಲ್ ಷಾ
೨೦೦೨ತಮಿಳುಡಿ.ಜಯಕಾಂತನ್
೨೦೦೩ಮರಾಠಿವಿಂದಾ ಕರಂದೀಕರ್
೨೦೦೪ಕಾಶ್ಮೀರಿರಹಮಾನ್ ರಾಹಿ
೨೦೦೫ಹಿಂದಿಕುಂವರ್ ನಾರಾಯಣ್
೨೦೦೬ಕೊಂಕಣಿರವೀಂದ್ರ ಕೇಳೆಕರ್
೨೦೦೭ಮಲಯಾಳಂಓ. ಎನ್. ವಿ. ಕುರುಪ್
೨೦೦೮ಉರ್ದುಅಖಲಾಖ್ ಮೊಹಮ್ಮದ್ ಖಾನ್
೨೦೦೯ಹಿಂದೀಅಮರ್ ಕಾಂತ್ ಮತ್ತು ಶ್ರೀಲಾಲ್ ಶುಕ್ಲ
೨೦೧೦ಕನ್ನಡಚಂದ್ರಶೇಖರ_ಕಂಬಾರಸಮಗ್ರ ಸಾಹಿತ್ಯ
೨೦೧೧ಒಡಿಯಾಪ್ರತಿಭಾ ರೇ
೨೦೧೨ತೆಲುಗುರಾವೂರಿ ಭರದ್ವಾಜ
೨೦೧೩ಹಿಂದೀಕೇದಾರನಾಥ್ ಸಿಂಗ್

No comments:

Post a Comment